• Home
  • »
  • News
  • »
  • trend
  • »
  • Viral Video: ಈ ರೀತಿಯ ಸುಂದರ ಕಾಮನಬಿಲ್ಲು ನೀವು ಎಂದಾದರೂ ನೋಡಿದ್ದೀರಾ? ವೈರಲ್ ವಿಡಿಯೋ ನೋಡಿ

Viral Video: ಈ ರೀತಿಯ ಸುಂದರ ಕಾಮನಬಿಲ್ಲು ನೀವು ಎಂದಾದರೂ ನೋಡಿದ್ದೀರಾ? ವೈರಲ್ ವಿಡಿಯೋ ನೋಡಿ

ಕಾಮನಬಿಲ್ಲು

ಕಾಮನಬಿಲ್ಲು

ಕಾಮನ ಬಿಲ್ಲು ಪ್ರಕೃತಿಯ ಆಕರ್ಷಕ ಮತ್ತು ಅದ್ಭುತಗಳಲ್ಲಿ ಒಂದೆನಿಸಿದೆ. ಇದು ಕೇವಲ ಮಂತ್ರಮುಗ್ಧರನ್ನಾಗಿಸುವುದಲ್ಲದೆ, ಬೇರೆ ಯಾವ ಮಾಧ್ಯಮಕ್ಕೂ ಸರಿಸಾಟಿಯಾಗದ ರೀತಿಯಲ್ಲಿ ಮನಸೆಳೆಯುತ್ತದೆ. ಆದರೆ ಗಾಳಿಯಲ್ಲಿ ಮಳೆಬಿಲ್ಲು ಹೇಗೆ ಕಾಣುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

  • Share this:

ಸೂರ್ಯನ ಬೆಳಕು ಹಾಗೂ ವಾತಾವರಣದ ಪರಿಸ್ಥಿತಿಗಳಿಂದ ನಿರ್ಮಾಣಗೊಳ್ಳುವ ಕಾಮನಬಿಲ್ಲಿನ (Rainbow) ಅಂದವನ್ನು ಕಣ್ತುಂಬಿಕೊಳ್ಳದವರು ಯಾರಿಲ್ಲ ಹೇಳಿ..ಬೆಳಕು ನೀರಿನ ಹನಿಯನ್ನು ಪ್ರವೇಶಿಸಿದಾಗ ನಿಧಾನವಾಗಿ ಬಾಗುತ್ತದೆ ಹಾಗೂ ಗಾಳಿಯಿಂದ ದಪ್ಪನೆಯ ನೀರಿನೊಳಕ್ಕೆ ಹೋಗುವಾಗ ಬಾಗುತ್ತದೆ. ಹನಿಯ ಒಳಭಾಗದಿಂದ ಬೆಳಕು ಪ್ರತಿಫಲಗೊಳ್ಳುತ್ತದೆ ಅದರ ಘಟಕ ತರಂಗಾಂತರಗಳು ಅಥವಾ ಬಣ್ಣಗಳಾಗಿ (Colors) ಪ್ರತ್ಯೇಕಿಸುತ್ತದೆ. ಬೆಳಕು ಹನಿಯಿಂದ ನಿರ್ಗಮಿಸಿದಾಗ ಇದು ಕಾಮನಬಿಲ್ಲನ್ನು ಉಂಟುಮಾಡುತ್ತದೆ. ಕಾಮನ ಬಿಲ್ಲು ಪ್ರಕೃತಿಯ ಆಕರ್ಷಕ (Attractive) ಮತ್ತು ಅದ್ಭುತಗಳಲ್ಲಿ ಒಂದೆನಿಸಿದೆ. ಇದು ಕೇವಲ ಮಂತ್ರಮುಗ್ಧರನ್ನಾಗಿಸುವುದಲ್ಲದೆ, ಬೇರೆ ಯಾವ ಮಾಧ್ಯಮಕ್ಕೂ ಸರಿಸಾಟಿಯಾಗದ ರೀತಿಯಲ್ಲಿ ಮನಸೆಳೆಯುತ್ತದೆ. ಆದರೆ ಗಾಳಿಯಲ್ಲಿ (Air) ಮಳೆಬಿಲ್ಲು ಹೇಗೆ ಕಾಣುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?


ವೈರಲ್ ಆದ ಕಾಮನಬಿಲ್ಲಿನ ವಿಡಿಯೋ
ಪ್ರಕೃತಿಯ ಅತ್ಯದ್ಭುತ ಕೊಡುಗೆಯಾದ ಕಾಮನಬಿಲ್ಲನ್ನು ಎಲ್ಲರೂ ಇಷ್ಟಪಡುತ್ತಾರೆ. ಆಕಾಶದಿಂದ ಮಳೆಬಿಲ್ಲು ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಡೇವಿಡ್ ಬ್ರೈಂಟ್ರೀ ಎಂಬ ಹೆಸರಿನ ರೆಡ್ಡಿಟ್ ಬಳಕೆದಾರರು 10 ಸೆಕೆಂಡ್‌ನ ಈ ವಿಡಿಯೋವನ್ನು ಹಂಚಿಕೊಂಡಿದ್ದು ಮಳೆಬಿಲ್ಲಿನ ಅದ್ಭುತ ನೋಟವನ್ನು ಒದಗಿಸಿದೆ.


ಕಾಮನಬಿಲ್ಲಿನ ಬಣ್ಣಗಳ ದೃಶ್ಯೀಕರಣ
ವರ್ತುಲಾಕಾರದ ಕಾಮನಬಿಲ್ಲು ಹೊರಭಾಗದಲ್ಲಿ ಕೆಂಪು ಹಾಗೂ ಒಳಭಾಗದಲ್ಲಿ ನೇರಳೆ ಬಣ್ಣವನ್ನು ಪ್ರದರ್ಶಿಸಿದ್ದು ಮಳೆಬಿಲ್ಲಿನಲ್ಲಿ ವರ್ಣಪಟಲದ ಬಣ್ಣಗಳ ಸಾಮಾನ್ಯ ರೀತಿಯಾಗಿದೆ. ನಿಸ್ಸಂದೇಹವಾಗಿ ಕಾಮನಬಿಲ್ಲು ಅತ್ಯಂತ ಮನೋಹರ ದೃಶ್ಯವಾಗಿದೆ.


ಕಾಮನ ಬಿಲ್ಲಿನ ನೋಟಕ್ಕೆ ಫಿದಾ ಆದ ನೆಟ್ಟಿಗರು
ಮಹಿಳೆಯೊಬ್ಬರು ಸ್ಕೈಡೈವಿಂಗ್ ಮಾಡುತ್ತಿದ್ದಾಗ ತಮ್ಮ ಕ್ಯಾಮೆರಾದಿಂದ ಕಾಮನಬಿಲ್ಲನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. 12 ಗಂಟೆಗಳ ಹಿಂದೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ಇದು 114 ಕಾಮೆಂಟ್ ಹಾಗೂ 99,000 ಅಪ್‌ವೋಟ್‌ಗಳನ್ನು ಪಡೆದುಕೊಂಡಿದೆ.


ಇದನ್ನೂ ಓದಿ: Meat: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್


ನೆಟ್ಟಿಗರ ಕಾಮೆಂಟ್‌ಗಳೇನು?
ಪೂರ್ಣ ಕಾಮನಬಿಲ್ಲಿನ ಸೌಂದರ್ಯವನ್ನು ನೋಡಿ ಇಂಟರ್ನೆಟ್ ದಿಗ್ಭ್ರಮೆಗೊಂಡಿದೆ. ಬಳಕೆದಾರರೊಬ್ಬರು ಇದೊಂದು ಅದ್ಭುತ ದೃಶ್ಯ ಎಂದು ಬರೆದಿದ್ದಾರೆ ಹಾಗೆಯೇ ಇನ್ನೊಬ್ಬರು ಬಳಕೆದಾರರು ಕಾಮನಬಿಲ್ಲು ದೈತ್ಯ ಮಸೂರಗಳ ಜ್ವಾಲೆ ಎಂದು ಉಲ್ಲೇಖಿಸಿದ್ದಾರೆ.


ಕಾಮನಬಿಲ್ಲು ಎಂದಿಗೂ ಕೊನೆಯಾಗುವುದಿಲ್ಲ ಹಾಗಿದ್ದರೆ ಇದೊಂದು ಚಿನ್ನದ ಮಡಿಕೆಯಂತೆಯೇ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದೊಂದು ಪೂರ್ಣ ಸಮಯದ ವೃತ್ತವಾಗಿದೆ. ಕಾಮನಬಿಲ್ಲಿನ ತುದಿಯಲ್ಲಿರುವ ನಿಧಿ ನೀನೇ ಎಂದು ಮತ್ತೊಬ್ಬ ಬಳಕೆದಾರರು ಕಾವ್ಯಾತ್ಮಕವಾಗಿ ವರ್ಣಿಸಿದ್ದಾರೆ.


ವಿಡಿಯೋ ಏನನ್ನು ಹೇಳುತ್ತದೆ?
ಈ ವಿಡಿಯೋ ಕ್ಲಿಪ್ ರೆಡ್ಡಿಟ್‌ನಲ್ಲಿ 2017 ರಲ್ಲಿ ಇಂಟರ್ನೆಟ್‌ನಲ್ಲಿ ಹೊರಹೊಮ್ಮಿದ ವಿಡಿಯೋ ತುಣುಕಾಗಿದೆ. ಪೂರ್ಣ ಕಾಮನಬಿಲ್ಲಿನ ಸೃಷ್ಟಿಯನ್ನು ವಿಡಿಯೋ ತೋರಿಸುತ್ತದೆ ಹಾಗೂ ಕಾಮನಬಿಲ್ಲು ಎತ್ತರದ ಸ್ಥಳದಿಂದ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುತ್ತದೆ.


[embed]https://youtu.be/yj-Y1AUDSZk[/embed]


ಕಾಮನಬಿಲ್ಲಿನ ರಚನೆ ಹೇಗಿದೆ?
ಕಾಮನಬಿಲ್ಲುಗಳು ಆಪ್ಟಿಕಲ್ ವಿಜ್ಞಾನದಲ್ಲಿ ವಕ್ರೀಭವನ ಎಂಬ ಪರಿಕಲ್ಪನೆಯ ಫಲಿತಾಂಶವಾಗಿದೆ. ಮತ್ತು ನಿಜವಾಗಿ ಹೇಳಬೇಕೆಂದರೆ, ಮಳೆಬಿಲ್ಲುಗಳು ಯಾವಾಗಲೂ ಪೂರ್ಣ ವೃತ್ತವಾಗಿರುತ್ತವೆ ಆದರೆ ಸಂಪೂರ್ಣ ವಿದ್ಯಮಾನವು ನೆಲ ಮತ್ತು ದಿಗಂತದಿಂದ ಅಡ್ಡಿಗೊಳಗಾಗುವುದರಿಂದ ಅವು ಕಮಾನಿನಂತೆ ಕಂಡುಬರುತ್ತವೆ.


ಚೀನಾದ ಹೈಕೌ ನಗರದ ಕಾಮನಬಿಲ್ಲು
ಚೀನಾದ ಹೈಕೌ ನಗರದಲ್ಲಿ ಸೆರೆಹಿಡಿದ ಅಪರೂಪದ ಕಾಮನ ಬಿಲ್ಲಿನ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬಣ್ಣದ ಸ್ಕಾರ್ಫ್ ನಗರವನ್ನು ಸುತ್ತುವರೆದಂತೆ ಈ ಕಾಮನಬಿಲ್ಲಿನ ನೋಟ ದೃಶ್ಯೀಕರಿಸಿದೆ.


ಇದನ್ನೂ ಓದಿ: Neelakurinji Blooming: ಪ್ರವಾಸಿಗರ ಸೆಳೆಯುತ್ತಿದೆ ಮುಳ್ಳಯ್ಯನಗಿರಿ ನೀಲಕುರಂಜಿ; ಸಾಮಾಜಿಕ ಜಾಲತಾಣದಲ್ಲೂ ಇದರದ್ದೇ ಸೊಬಗು


ವಿಶ್ವ ಹವಾಮಾನ ಸಂಸ್ಥೆ (WMO) ಪ್ರಕಾರ, ಪೈಲಿಯಸ್ ಮೋಡವು ಸಣ್ಣ ಸಮತಲ ವ್ಯಾಪ್ತಿಯ ಒಂದು ಅನುಬಂಧಕ ಮೋಡವಾಗಿದೆ, ಮೇಲ್ಭಾಗದಲ್ಲಿ ಕ್ಯಾಪ್ ಅಥವಾ ಹುಡ್ ರೂಪದಲ್ಲಿ ಅಥವಾ ಕ್ಯುಮ್ಯುಲಿಫಾರ್ಮ್‌ನಂತೆ ಮೋಡದ ಮೇಲಿನ ಭಾಗಕ್ಕೆ ಅಂಟಿಸಿದಂತಿದ್ದು, ಅದು ಆಗಾಗ್ಗೆ ಅದನ್ನು ಭೇದಿಸುತ್ತದೆ.

Published by:Ashwini Prabhu
First published: