ಹಿಂದೆಂದೂ ಕಾಣದ ನೋ ಬಾಲ್​ ವಿಡಿಯೋ ನೋಡಿ!


Updated:August 2, 2018, 12:25 PM IST
ಹಿಂದೆಂದೂ ಕಾಣದ ನೋ ಬಾಲ್​ ವಿಡಿಯೋ ನೋಡಿ!

Updated: August 2, 2018, 12:25 PM IST
ವೆಸ್ಟ್​ ಇಂಡೀಸ್​ ಮತ್ತು ಬಾಂಗ್ಲಾದೇಶದ ಬುಧವಾರದ ನಡುವಣ ಪಂದ್ಯ ವಿಶೇಷ ಘಟನೆ ಸಾಕ್ಷಿಯಾಗಿದ್ದು, ನೋ ಬಾಲ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಾರ್ನರ್​ಪಾರ್ಕ್​ನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಶೆಲ್ಡಣ್​ ಕೊಟ್ರೆಲ್​ ಎಸೆದ ಚೆಂಡು ನೇರವಾಗಿ ಆ್ಯಶ್ಲೆ ನರ್ಸ್​​ ಕೈಗೆ ತಲುಪಿದೆ. ಕೊಟ್ರೆಲ್​ರವರ ಈ ಎಸೆತ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಎಸತ ಎಂದು ಹೇಳಲಾಗಿದೆ. ಇವರು ಆ್ಯಂಡ್ರೆ ರಸೆಲ್ ಬದಲಿಗೆ ವಿಂಡಿಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ಕೊಟ್ರಲ್​ ಎಸತ ಕಂಡು ಎರಡನೇ ಸ್ಲಿಪ್​ನಲ್ಲಿದ್ದ ಅಂಪೈರ್ ನೋಬಾಲ್ ನೀಡಿದರು. ಈ ಅವಿಸ್ಮರಣೀಯ ಕ್ಷಣದ ವಿಡಿಯೋ ಇಲ್ಲಿದೆ ನೊಡಿಈ ಘಟನೆ ಬಳಿಕ ಕೊಟ್ರೆಲ್​ ಕ್ಷಮೆಯಾಚಿಸಿದ್ದು, ಈ ವಿಡಿಯೋವನ್ನು ಆಸ್ಟ್ರೇಲಿಯಾದ ಫಾಕ್ಸ್​ ಸ್ಮೋರ್ಟ್ಸ್​ ಚಾನೆಲ್​ ತನ್ನ ಫೇಸ್​ಬುಕ್​ ಪೇಜ್​ನಲ್ಲಿಶೇರ್​ ಮಾಡಿಕೊಂಡಿದ್ದು, ಈಗಾಗಲೇ 3 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

ಕೊಟ್ರೆಲ್​ ಒಟ್ಟು ಒಂಭತ್ತು ಓವರ್​ಗಳನ್ನು ಪೂರೈಸಿದ್ದು, ಒಂದು ವಿಕೆಟ್​ ಕಬಳಿಸಿ 59 ರನ್​ ನೀಡಿದ್ದಾರೆ. ಆದರೂ ಈ ಪಂದ್ಯದಲ್ಲಿ 18 ರನ್​ಗಳನಷ್ಟಕ್ಕೆ ವೆಸ್ಟ್​​ ಇಂಡೀಸ್​ ಬಾಂಗ್ಲಾದೇಶಕ್ಕೆ ಶರಣಾಗಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...