ಪಶ್ಚಿಮ ಬಂಗಾಳದ ಬಿರ್ಭಮ್ನಲ್ಲಿರುವ ಚಿನ್ಪೈ ಗ್ರಾಮವು ತನ್ನ ನೆಚ್ಚಿನ ಸಾಕು ನಾಯಿ "ಟಾಮಿ" ಯನ್ನು ಜೂನ್ 28 ರಂದು ಕಳೆದುಕೊಂಡಿತು. 9 ವರ್ಷದ ಟಾಮಿ ಟ್ರಕ್ಗೆ ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಈ ಹಿಂದೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಟಾಮಿಯ ದೃಷ್ಟಿ ಮಂಜಾಗಿತ್ತು. ಇದರಿಂದ ಟಾಮಿಗೆ ಸಾಮಾನ್ಯವಾಗಿ ತನ್ನ ಸುತ್ತಮುತ್ತಿನ ಪರಿಸರವನ್ನು ನೋಡಲು ಸಾಧ್ಯವಾಗುತ್ತಿರಲ್ಲಿ. ಈ ಕಾರಣದಿಂದ ಟಾಮಿ ಹಳ್ಳಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ವಾಸವಾಗಿತ್ತು ಮತ್ತು ಆದು ಎಲ್ಲರಿಗೂ ಅಚ್ಚುಮೆಚ್ಚು ಅದು ಕೂಡ ಎಲ್ಲರನ್ನು ಸಮಾನವಾಗಿ ಪ್ರೀತಿಸುತ್ತಿತ್ತು. ಟಾಮಿಯನ್ನು ಕಳೆದುಕೊಂಡ ಗ್ರಾಮದ ಜನರು ತಮ್ಮ ದುಖವನ್ನು ವ್ಯಕ್ತಪಡಿಸಿದ್ದಾರೆ.
ಈಗ, ಅದರ ದುಃಖಿತ ‘ಪೋಷಕರು’ ಟಾಮಿ ನೆನಪಿಗಾಗಿ ಒಂದು ಔತಣ ಕೂಟವನ್ನು ಆಯೋಜಿಸಿದ್ದಾರೆ. ಅವರು 50 ಜನರನ್ನು ಆಹ್ವಾನಿಸಿ ಎಲ್ಲರೊಂದಿಗೂ ಟಾಮಿಯೊಂದಿಗಿನ ತಮ್ಮ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕ್ರೌಡ್ಫಂಡಿಂಗ್ ಮೂಲಕ ಸ್ಮಾರಕ ಭೋಜನವನ್ನು ಏರ್ಪಡಿಸಲಾಗಿದ್ದು. ಆಹ್ವಾನಿತರ ಪಟ್ಟಿಯಲ್ಲಿ ಹತ್ತಿರದ ಘೋಷ್ ಪ್ಯಾರಾದ ಕೆಲವು ಕುಟುಂಬಗಳು, ಚಿನ್ಪೈ ಗ್ರಾಮದ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಿದ್ದಾರೆ.ಆಹಾರದ ಮೆನುವಿನಲ್ಲಿ ಮಸೂರ, ಫ್ರೈಸ್, ಗಸಗಸೆ ಬೀಜದೊಂದಿಗೆ ಮಾಡಿದ ಆಲೂಗಡ್ಡೆ, ಮಾಂಸ ಮತ್ತು ಚಟ್ನಿಯಂತಹ ವಿವಿಧ ಆಹಾರಗಳನ್ನು ನೀವು ನೋಡಬಹುದು.
ಒಂಬತ್ತು ವರ್ಷಗಳ ಹಿಂದೆ ಕೆಲವು ಬೀದಿ ನಾಯಿಗಳು ಟಾಮಿ ಮೇಲೆ ಹಲ್ಲೆ ನಡೆಸಿದ ಕಾರಣ ಗಾಯಗೊಂಡ ಟಾಮಿಯನ್ನು ನೋಡಿದ ಚಿನ್ಪೈನ ಟಿಎಂಸಿ ಪಕ್ಷದ ಕಚೇರಿಯ ಮೇಲ್ವಿಚಾರಕರು ಟಾಮಿಗೆ ಕಚೇರಿಯಲ್ಲಿ ಉಳಿದುಕೊಳ್ಳಲು ಆಶ್ರಯವನ್ನು ನೀಡಿದರು ಎಂದು ವರದಿಗಳ ಮೂಲಕ ತಿಳಿದುಬಂದಿದೆ.ಅಂದಿನಿಂದ, ಟಾಮಿ ಕಚೇರಿಯ ಎಲ್ಲ ಜನರ ಅಚ್ಚುಮೆಚ್ಚು ಹಾಗೂ ಕಚೇರಿಯ ಜನರು ಎಲ್ಲಾ ಸೇರಿಕೊಂಡು ಟಾಮಿ ಎಂದು ಆ ನಾಯಿಗೆ ಹೆಸರನ್ನಿಟ್ಟರು. ಟಾಮಿಯ ಊಟ ತಿಂಡಿ ಹಾಗೂ ಬಹುತೇಕ ಸಮಯವನ್ನು ಟಾಮಿ ಕಚೇರಿಯಲ್ಲಿ ಕಳೆಯುತ್ತಿತ್ತು.
ಈ ಕೋವಿಡ್ ಸಮಯದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಜನರು ಇರುವುದನ್ನು ನಿಷೇಧಿಸಲಾಗಿರುವ ಕಾರಣ ಸರ್ಕಾರದ ನಿರ್ದೇಶನದಂತೆ, ಆಹ್ವಾನಿತರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದ್ದು.ಆಹ್ವಾನಿತರೆಲ್ಲರೂ ಟಾಮಿಯನ್ನು ಪ್ರೀತಿಸುತ್ತಿದ್ದರು ಮತ್ತು ಅದರ ಅಕಾಲಿಕ ನಿಧನದ ಬಗ್ಗೆ ದುಃಖಿತರಾಗಿದ್ದರು. ಅದೇ ದಿನ, ಟಾಮಿಗಾಗಿ ಒಂದು ಸಣ್ಣ ಸ್ಮಾರಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು, ಅಲ್ಲಿ ಟಾಮಿ ನೆಚ್ಚಿನ ಬಿಸ್ಕತ್ತುಗಳ ಪ್ಯಾಕೆಟ್ ಅನ್ನು ಅದರ ಗೋರಿ ಮುಂದೆ ಇಡಲಾಗಿತ್ತು. ದುಬ್ರಾಜ್ಪುರ ಪಂಚಾಯತ್ ಸಮಿತಿ ಕೃಷಿ ಮುಖ್ಯಸ್ಥ ರಫಿಯುಲ್ ಖಾನ್, “ನಾನು ಟಾಮಿಯನ್ನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವೆ ಟಾಮಿಯ ಸಾವಿನ ಸುದ್ದಿ ನನಗೆ ದುಃಖ ತಂದಿದೆ. ಅಗಲಿದ ಚಿಕ್ಕ ಟಾಮಿಯ ಆತ್ಮಕ್ಕೆ ಶಾಂತಿಗಾಗಿ ಈ ಕಾರ್ಯಕ್ರಮವೆಂದು ಬಿರುದಾಸ್ ಎಂಬ ಉದ್ಯಮಿ ಹೇಳಿದ್ದಾರೆ. ಈ ಸುದ್ದಿ ಸಮಾಜ ತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ನಾವೆಲ್ಲೂರು ಟಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ