Viral News: ₹2 ಚಿಲ್ಲರೆಗಾಗಿ ಹೋರಾಡಿ ಗೆದ್ದ ವ್ಯಕ್ತಿ, ಬಸ್ ಕಂಡಕ್ಟರ್​ಗೆ ಇನ್ಮೇಲೆ ಖಂಡಿತಾ ಹೀಗೆ ಮಾಡಲ್ಲ ಬಿಡಿ

Bengal Bus: ಸುಭ್ರನಿಲ್ ಗುಪ್ತಾ ಎಂಬುವವರು ಹುಡ್ಕೋ ಕ್ರಾಸಿಂಗ್ ನಿಂದ ಮಿಂಟೋ ಪಾರ್ಕ್ ವರೆಗೆ 18 ರೂಪಾಯಿ ಕೊಟ್ಟು ಪ್ರಯಾಣ ಬೆಳೆಸಿದ್ದರು.. ಅದೇ ಬಸ್ಸಿನಲ್ಲಿ ಮಿಂಟೋ ಪಾರ್ಕ್‌ನಿಂದ ಹುಡ್ಕೊಗೆ ಹಿಂತಿರುಗುವಾಗ ಕಂಡಕ್ಟರ್ ಸುಭ್ರನಿಲ್ ಗುಪ್ತಾ ಅವರಿಗೆ 20 ರೂಪಾಯಿ ಶುಲ್ಕ ವಿಧಿಸಿದ್ದಾನೆ.

ಬಸ್

ಬಸ್

 • Share this:
  ಸಾಮಾನ್ಯವಾಗಿ ಎಲ್ಲರೂ ಬರುವುದಕ್ಕಿಂತ ಮುಂಚೆ ಮೊದಲು ಚಿಲ್ಲರೆ ಇದ್ಯಾ ಅಂತ ಪರೀಕ್ಷೆ ಮಾಡಿಕೊಳ್ಳುತ್ತಾರೆ.. ಒಮ್ಮೆ ಬಸ್(Bus) ಹತ್ತಿದ ಮೇಲೆ ಇಲ್ಲವೇ ಇಲ್ಲಾ ಎನ್ನುವ ಉತ್ತರ ಸದಾ ಕಂಡಕ್ಟರ್(Conductor) ಬಾಯಲ್ಲಿ ಸಿದ್ಧವಾಗಿರುತ್ತದೆ.. ಆಗಿ ಬಹುತೇಕರು ಕಂಡಕ್ಟರ್ ಬಳಿ ಚಿಲ್ಲರೆ ವಿಷಯಕ್ಕೆ ಜಗಳ(War) ಆಡುವ ಬದಲು ಚಿಲ್ಲರೆ ತೆಗೆದುಕೊಂಡು ಬಸ್ ಹತ್ತುವುದು ಸೂಕ್ತ ಎಂದು ನಿರ್ಧಾರ ಮಾಡಿ ಬಸ್ ಹತ್ತುತ್ತಾರೆ.. ಆದರೆ ಯಾರು ಚಿಲ್ಲರೆ ಇಲ್ಲದೆ ಬಸ್ ಹತ್ತುತ್ತಾರೆ ಅಂತವರಿಗೆ ಚಿಲ್ಲರೆ ಸಿಗುವುದು ತುಂಬಾ ಕಡಿಮೆ.. ಕಂಡಕ್ಟರ್ ಚಿಲ್ಲರೆ ಇಲ್ಲ ಎಂದು ಟಿಕೆಟ್ನ(Ticket) ಹಿಂಭಾಗ ಚಿಲ್ಲರೆ ಬರೆದುಕೊಟ್ಟರೆ, ಇಳಿಯುವ ವೇಳೆಗಾಗಲೇ ಚಿಲ್ಲರೆ ಪಡೆಯಬೇಕು ಎಂಬುದು ಬಹುತೇಕರಿಗೆ ಮರೆತೇ ಹೋಗಿರುತ್ತದೆ.. ಆದರೆ ಕೆಲವರು ಜಗಳವಾಡಿ ಆದರೂ ಸರಿ ಕಂಡಕ್ಟರ್ ನಿಂದ ಚಿಲ್ಲರೆ ಪಡೆಯುತ್ತಾರೆ..ಇನ್ನು ಕೆಲವು ಸಂದರ್ಭದಲ್ಲಿ ಕಂಡಕ್ಟರ್ ಚಿಲ್ಲರೆ ಕೊಟ್ಟಿಲ್ಲ ಅಂತ ಪೊಲೀಸ್ ಠಾಣೆ(Police Station) ಮೆಟ್ಟಿಲೇರಿದ ಪ್ರಕರಣಗಳಿವೆ.. ಆದರೆ ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಈವರೆಗೂ ಸಿಕ್ಕಿಲ್ಲ.. ಆದರೆ ವಿಶೇಷ ಎನ್ನುವಂತೆ ಕಂಡಕ್ಟರ್ ಚಿಲ್ಲರೆ ನೀಡಿಲ್ಲ ಎಂದು ದೂರು ನೀಡಿದ್ದ ವ್ಯಕ್ತಿಗೆ ಇದೇ ಮೊದಲ ಬಾರಿಗೆ 2 ರೂಪಾಯಿ ಪರಿಹಾರ ಸಿಕ್ಕಿದೆ..

  ಚಿಲ್ಲರೆ ವಿಷಯದಲ್ಲಿ 2ರೂ ಪರಿಹಾರ..

  ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಸಂಚಾರ ಮಾಡುವ ಬಸ್ಗಳಲ್ಲಿ ಸರಿಯಾಗಿ ಚಿಲ್ಲರೆ ನೀಡುತ್ತಿಲ್ಲ ಎಂಬ ದೂರುಗಳು ಇತ್ತೀಚೆಗೆ ಕೇಳಿಬಂದಿದ್ದವು..ಖಾಸಗಿ ಒಡೆತನದ STA ಪರ್ಮಿಟ್ ಬಸ್ ಬೆಳಗಾವಿಯಲ್ಲಿ ಸಾಕಷ್ಟು ದೂರುಗಳು ಬಂದ ನಂತರ, ನಂತರ ಈ ಬಗ್ಗೆ ಪಶ್ಚಿಮಬಂಗಾಳ ಸಾರಿಗೆ ಇಲಾಖೆ ಸಾಕಷ್ಟು ಎಚ್ಚೆತ್ತುಕೊಂಡು ಪ್ರಯಾಣಿಕನಿಗೆ ಹೆಚ್ಚುವರಿಯಾಗಿ ಎರಡು ರೂಪಾಯಿ ಪಾವತಿಸಲು ಕೇಳಿದ್ದ ಸಾರಿಗೆ ಬಸ್ಸಿನಿಂದ ಪ್ರಯಾಣಿಕರಿಗೆ ಎರಡು ರೂಪಾಯಿ ಪರಿಹಾರ ನೀಡಿದೆ..

  ಇದನ್ನೂ ಓದಿ: ಕಳ್ಳತನ ಮಾಡೋಕೆ ಬಂದವರು ಮನೆಯನ್ನೆಲ್ಲಾ ಅಲಂಕರಿಸಿ, ಹೊಸಾ ಬೀಗ ಹಾಕಿ ಹೋಗ್ಬಿಟ್ರು, ಇವರೆಂಥಾ ಕಳ್ಳರು !

  ಏನಿದು ಘಟನೆ..?

  ಕೊಲ್ಕತ್ತಾ ಬಸ್-ಒ-ಪೀಡಿಯಾ ಎಂಬ ಫೇಸ್‌ಬುಕ್ ಪುಟದ ಸದಸ್ಯ ಸುಭ್ರನಿಲ್ ಗುಪ್ತಾ ಎಂಬುವವರು ಹುಡ್ಕೋ ಕ್ರಾಸಿಂಗ್ ನಿಂದ ಮಿಂಟೋ ಪಾರ್ಕ್ ವರೆಗೆ ಕಂಡಕ್ಟರ್ 18 ರೂಪಾಯಿ ಕೊಟ್ಟು ಪ್ರಯಾಣ ಬೆಳೆಸಿದ್ದರು.. ಅದೇ ಬಸ್ಸಿನಲ್ಲಿ ಮಿಂಟೋ ಪಾರ್ಕ್‌ನಿಂದ ಹುಡ್ಕೊಗೆ ಹಿಂತಿರುಗುವಾಗ ಕಂಡಕ್ಟರ್ ಸುಭ್ರನಿಲ್ ಗುಪ್ತಾ ಅವರಿಗೆ 20 ರೂಪಾಯಿ ಶುಲ್ಕ ವಿಧಿಸಿದ್ದಾನೆ. ಇದಕ್ಕೆ ಸುಭ್ರನಿಲ್ ಕಳೆದ ಬಾರಿ ಕೇವಲ ಹದಿನೆಂಟು ರೂಪಾಯಿ ಕೊಟ್ಟು ಇಲ್ಲಿಗೆ ಪ್ರಯಾಣಸಿದ್ದೇನೆ ಈಗ ಎರಡು ರೂಪಾಯಿ ಹೆಚ್ಚುವರಿ ಯಾಕೆ ಎಂದು ಪ್ರಶ್ನಿಸಿದ್ದಾರೆ.. ಕೊನೆಗೆ ಕಂಡಕ್ಟರ್ ಚಿಲ್ಲರೆ ವಾಪಸ್ ನೀಡದೆ ಸುಭ್ರನಿಲ್ ಬಸ್ಸಿನಿಂದ ಕೆಳಗೆ ಇಳಿಸಿದ್ದಾನೆ.. ಈ ವಿಷಯವನ್ನ ಸುಭ್ರನಿಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ ಸಾಕಷ್ಟು ಜನರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.. ಕೊನೆಗೆ ಈ ವಿಷಯ STA ಪರ್ಮಿಟ್ ಬಸ್ ಮಾಲೀಕರಿಗೆ ತಿಳಿದು ಸುಭ್ರನಿಲ್ ಅವರಿಗೆ ₹2 ಪರಿಹಾರವನ್ನು ನೀಡಲಾಗಿದೆ.

  ಇದನ್ನೂ ಓದಿ: ಮದುವೆಯಾದ ಮೊದಲ ರಾತ್ರಿಯೇ ಹೆಂಡತಿಗೆ ಶಾಕ್ ನೀಡಿದ ಪತಿರಾಯ..!

  ಇನ್ನು ಸುಶಾಂತ ಮೊಂಡಲ್ ಕೂಡ ಎಂಬ ಪ್ರಯಾಣಿಕ ಕೂಡ ತನಗಾದ ಅನುಭವವನ್ನು ಹಂಚಿಕೊಂಡಿದ್ದು ಬರಾಸತ್-ಬೊಟಾನಿಕ್ ಗಾರ್ಡನ್ ಮಾರ್ಗದಿಂದ,ನ್ಯೂ ಟೌನ್‌ಗೆ ಹೋಗುವಾಗ 15 ರೂ ಇದ್ದು, ಬರುವಾಗ 18 ರೂ ಇತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಸೂನ್ ಘೋಷ್ ಎಂಬುವವರು ಬಸ್ ಮಾಲೀಕ ನನ್ನ ಸಂಪರ್ಕಿಸಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.. ಅದೇ ಈ ರೀತಿ ನಡೆದುಕೊಂಡ ಬಸ್ ಕಂಡಕ್ಟರ್ ನನ್ನ ಕಪ್ಪುಪಟ್ಟಿಗೆ ಸೇರಿಸುವುದಾಗಿ ಹೇಳಿಕೆ ನೀಡಿದ್ದಾರೆ.. ಅಲ್ಲದೆ ಮುಂದೆ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ..

  ಘಟನೆ ಬಳಿಕ ಬಸ್ ದರ ನಿಗದಿಗೆ ಮುಂದಾದ ಖಾಸಗಿ ಯೂನಿಯನ್..

  ₹2 ಪರಿಹಾರದ ಘಟನೆ ನಡೆದ ಬಳಿಕ ಪಶ್ಚಿಮ ಬಂಗಾಳ ಬಸ್ ಖಾಸಗಿ ಯೂನಿಯನ್ ಎಲ್ಲಾ ಕಡೆಗಳಲ್ಲಿ ಏಕರೂಪ ಮಾದರಿಯ ಶುಲ್ಕ ವಸೂಲಿ ಮಾಡಲು ನಿರ್ಧಾರ ಮಾಡಿದೆ.. ಹೀಗಾಗಿ ಖಾಸಗಿ ಯೂನಿಯನ್ನ ಸ್ವಪನ್ ಘೋಷ್ ಅವರ ಸಮಿತಿಯೊಂದಿಗೆ ಸಭೆ ನಡೆಸಿ ಪಶ್ಚಿಮ ಬಂಗಾಳದಲ್ಲಿ ಸಂಚರಿಸುವ r52 ಮಾರ್ಗಗಳ ಹಸುಗಳಲ್ಲಿ ಏಕರೂಪ ದರ ವಸೂಲಿ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
  Published by:ranjumbkgowda1 ranjumbkgowda1
  First published: