• Home
  • »
  • News
  • »
  • trend
  • »
  • IAS Exam: ಇಂತಹ ಫನ್ನಿ, ಸಿಲ್ಲಿ ಪ್ರಶ್ನೆಗಳನ್ನೂ IAS ಪರೀಕ್ಷೆಯಲ್ಲಿ ಕೇಳ್ತಾರಾ? ಇವುಗಳಿಗೆ ಯೋಚಿಸಿ ಉತ್ತರಿಸಿ

IAS Exam: ಇಂತಹ ಫನ್ನಿ, ಸಿಲ್ಲಿ ಪ್ರಶ್ನೆಗಳನ್ನೂ IAS ಪರೀಕ್ಷೆಯಲ್ಲಿ ಕೇಳ್ತಾರಾ? ಇವುಗಳಿಗೆ ಯೋಚಿಸಿ ಉತ್ತರಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಐಎಎಸ್, ಐಪಿಎಸ್, ಯುಪಿಎಸ್ಸಿ ಪರೀಕ್ಷೆಗಳು ಒಬ್ಬರು ಆಯ್ಕೆ ಮಾಡಬಹುದಾದ ಅತೀ ಕಷ್ಟಕರವಾದ ಪರೀಕ್ಷೆಗಳು ಎಂಬುವುದು ನಮಗೆಲ್ಲಾ ತಿಳಿದಿರುವ ವಿಚಾರ. ಅದಕ್ಕಾಗಿ ಹಗಲು, ರಾತ್ರಿ ಎನ್ನದೇ ಅಭ್ಯರ್ಥಿಗಳು ಸಿದ್ಧತೆ ನಡೆಸುತ್ತಾರೆ. ಆ ಪರೀಕ್ಷೆಯ ಚೌಕಟ್ಟಿನಲ್ಲಿ ಬರುವ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತಾರೆ. ಆದರೆ ಇಂತಹ ಕಠಿಣ ಪರೀಕ್ಷೆಯಲ್ಲೂ ಔಟ್ ಆಫ್ ದಿ ಬಾಕ್ಸ್ ಎಂಬುವಂತೆ ವಿಷಯ ಸಾಮಗ್ರಿಯ ಹೊರತಾಗಿ ಸಿಲ್ಲಿ, ಫನ್ನಿ, ಟ್ರಿಕ್ಕಿ, ವಿಲಕ್ಷಣದಂತಹ ಪ್ರಶ್ನೆಗಳನ್ನು ಕೇಳಲಾಗುವುದು ಸಾಮಾನ್ಯ.

ಮುಂದೆ ಓದಿ ...
  • Share this:

    ಐಎಎಸ್, ಐಪಿಎಸ್, ಯುಪಿಎಸ್ಸಿ ಪರೀಕ್ಷೆಗಳು (Exam) ಒಬ್ಬರು ಆಯ್ಕೆ ಮಾಡಬಹುದಾದ ಅತೀ ಕಷ್ಟಕರವಾದ ಪರೀಕ್ಷೆಗಳು ಎಂಬುವುದು ನಮಗೆಲ್ಲಾ ತಿಳಿದಿರುವ ವಿಚಾರ. ಅದಕ್ಕಾಗಿ ಹಗಲು, ರಾತ್ರಿ ಎನ್ನದೇ ಅಭ್ಯರ್ಥಿಗಳು (Candidate) ಸಿದ್ಧತೆ ನಡೆಸುತ್ತಾರೆ. ಆ ಪರೀಕ್ಷೆಯ ಚೌಕಟ್ಟಿನಲ್ಲಿ ಬರುವ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಅಧ್ಯಯನ (Study) ಮಾಡುತ್ತಾರೆ. ಆದರೆ ಇಂತಹ ಕಠಿಣ ಪರೀಕ್ಷೆಯಲ್ಲೂ ಔಟ್ ಆಫ್ ದಿ ಬಾಕ್ಸ್ ಎಂಬುವಂತೆ ವಿಷಯ ಸಾಮಗ್ರಿಯ ಹೊರತಾಗಿ ಸಿಲ್ಲಿ, ಫನ್ನಿ, ಟ್ರಿಕ್ಕಿ, ವಿಲಕ್ಷಣದಂತಹ ಪ್ರಶ್ನೆಗಳನ್ನು (Question) ಕೇಳಲಾಗುವುದು ಸಾಮಾನ್ಯ. ನಿರೀಕ್ಷಿತ ಅಭ್ಯರ್ಥಿಯ ಮನಸ್ಸು ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ಕಂಡುಹಿಡಿಯಲು ನಾಗರಿಕ ಸೇವೆಗಳ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.


    ಅಭ್ಯರ್ಥಿಗಳ ಬುದ್ಧಿ ಮಟ್ಟವನ್ನು ಪರೀಕ್ಷಿಸಲು ಈ ಪರೀಕ್ಷೆಗಳಲ್ಲಿ ಕೆಲವು ಟ್ರಿಕ್ಕಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆಲವೊಮ್ಮೆ ಸಂದರ್ಶನದ ಸುತ್ತಿನಲ್ಲಿ ಕೆಲವು ಪ್ರಶ್ನೆಗಳು ವಿಚಿತ್ರವಾಗಿರಬಹುದು, ಆದರೆ ಅವುಗಳ ಉತ್ತರಗಳು ಸರಳವಾಗಿರುತ್ತವೆ.


    ಗೊಂದಲಕ್ಕೀಡು ಮಾಡುವ ಪ್ರಶ್ನೆಗಳು
    ಹೌದು, ಈ ಮೇಲೆ ಹೇಳಿರುವ ಹುದ್ದೆಯ ಲಿಖಿತ ಪರೀಕ್ಷೆಯ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಪರೀಕ್ಷೆ ಜೊತೆಗೆ ಸಂದರ್ಶನದಲ್ಲೂ ಇಂತಹ ಕೆಲವು ಟ್ರಿಕ್ಕಿ ಆಗಿರುವ ಮತ್ತು ನಿಮ್ಮನ್ನು ಗೊಂದಲಕ್ಕೀಡು ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಆ್ಯಕ್ಟೀವ್ ಆಗಿ ಉತ್ತರಿಸುತ್ತೀರಾ, ಹೇಗೆ ತಾಳ್ಮೆಯಿಂದ ನಿಭಾಯಿಸುತ್ತೀರಾ, ನಿಮ್ಮ ಮೆದುಳಿಗೆ ಎಷ್ಟು ಕೆಲಸ ಕೊಡುತ್ತಿದ್ದೀರಾ ಎಂದು ಪರೀಕ್ಷಿಸಲು ಇಂತಹ ಪ್ರಶ್ನೆಗಳನ್ನ ಕೇಳಲಾಗುತ್ತದೆ.


    ಇದನ್ನೂ ಓದಿ: Kyra: ಈಕೆಯ ಸೌಂದರ್ಯಕ್ಕೆ ಸೋತು, ಇನ್​ಸ್ಟಾದಲ್ಲಿ ಫಾಲೋ ಮಾಡೋ ಹುಡುಗರೇ ಕೇಳಿ! ರಿಯಲ್ ಕಥೆ ಬೇರೇಯೇ ಇದೆ


    ಕೆಲವು ಪ್ರಶ್ನೆಗಳು ಹೇಗೆ ಇರುತ್ತವೆ ಎಂದರೆ ಅವುಗಳನ್ನು ಕೇಳಲು ಸಹ ಅಸಹ್ಯ ಎನಿಸಬಹುದು. ಆದರೆ ಪ್ರಶ್ನೆಗಳ ಮೇಲೆ ಯಾವುದೇ ರೀತಿ ಸಿಟ್ಟಾಗದೇ ನಿಮ್ಮ ಬುದ್ಧಿ ಶಕ್ತಿ, ತಾಳ್ಮೆಯನ್ನು ಬಳಸಿಕೊಂಡು ಉತ್ತರ ನೀಡಬೇಕು. ಇಂದು ನಾವು ನಿಮ್ಮೊಂದಿಗೆ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಕೆಲವು ಟ್ರಿಕ್ಕಿ ಪ್ರಶ್ನೆಗಳನ್ನು ಹಂಚಿಕೊಳ್ಳಲಿದ್ದೇವೆ. ಮನಸ್ಸಿಗೆ ಮುದ ನೀಡುವ ಈ ಪ್ರಶ್ನೆಗಳಿಗೆ ಉತ್ತರಗಳು ತುಂಬಾ ಸುಲಭ. ಆದರೆ ನೀವು ಅದರ ಬಗ್ಗೆ ಸ್ವಲ್ಪ ಯೋಚಿಸಬೇಕು. ಹಾಗಾದರೆ ಐಎಎಸ್ ಪರೀಕ್ಷೆಗಳ ಕೆಲವು ವಿಲಕ್ಷಣ ಪ್ರಶ್ನೆಗಳು ಇಲ್ಲಿವೆ.


    ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು


    ಪ್ರಶ್ನೆ 1: ಒಬ್ಬ ವ್ಯಕ್ತಿಯು ನೋಡುವ ಆದರೆ ಓದದ ಹಿಂದಿ ಭಾಷೆಯ ಪದ ಯಾವುದು?
    ಉತ್ತರ: ಇಲ್ಲ


    ಪ್ರಶ್ನೆ 2: ನೀರು ಕುಡಿದ ನಂತರ ಸಾಯುವ ವಸ್ತು ಯಾವುದು?
    ಉತ್ತರ: ಬಾಯಾರಿಕೆ


    ಪ್ರಶ್ನೆ 3: ಯಾವ ಜೀವಿ ಹಾಲು ಮತ್ತು ಮೊಟ್ಟೆ ಎರಡನ್ನೂ ನೀಡುತ್ತದೆ?
    ಉತ್ತರ: ಪ್ಲಾಟಿಪಸ್


    ಪ್ರಶ್ನೆ 4: ಮಹಿಳೆಯರು ಪ್ರದರ್ಶಿಸುವ ಮತ್ತು ಪುರುಷರು ಮರೆಮಾಡುವ ವಿಷಯ ಯಾವುದು?
    ಉತ್ತರ: ಪರ್ಸ್


    ಪ್ರಶ್ನೆ 5: ಮದುವೆಯ ನಂತರ, ಯಾವ ಹುಡುಗನ ವಿಷಯವು ಶಾಶ್ವತವಾಗಿ ಹುಡುಗಿಯದ್ದಾಗುತ್ತದೆ?
    ಉತ್ತರ: ಉಪನಾಮ ( ಸರ್ ನೇಮ್)


    ಪ್ರಶ್ನೆ 6: ಪುರುಷರು ಒಮ್ಮೆ ಮತ್ತು ಮಹಿಳೆಯರು ಮತ್ತೆ ಮತ್ತೆ ಮಾಡುವ ಕೆಲಸ ಯಾವುದು?
    ಉತ್ತರ: ಹಣೆಗೆ ಸಿಂಧೂರ ಇಡುವುದು


    ಪ್ರಶ್ನೆ 7: ಎರಡು ಕಾಲುಗಳ ನಡುವೆ ಇರುವ ವಸ್ತು ಯಾವುದು?
    ಉತ್ತರ: ಮೊಣಕಾಲು


    ಪ್ರಶ್ನೆ 8: ಪ್ರತಿಯೊಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮಾತ್ರ ಮಾಡಬಹುದಾದ ಆ ಕೆಲಸ ಯಾವುದು?
    ಉತ್ತರ: ಊಟ


    ಪ್ರಶ್ನೆ 9: ಕಾಂಕ್ರೀಟ್ ನೆಲದ ಮೇಲೆ ಮೊಟ್ಟೆಯನ್ನು ಬಿರುಕುಗೊಳಿಸದೆ ಬಿಡುವುದು ಹೇಗೆ?
    ಉತ್ತರ: ಕಾಂಕ್ರೇಟ್ ನೆಲವನ್ನು ಒಡೆಯುವುದು ತುಂಬಾ ಕಷ್ಟ.


    ಪ್ರಶ್ನೆ 10: ಅರ್ಧ ಕತ್ತರಿಸಿದ ಸೇಬು ಯಾವ ತರಹ ಕಾಣುತ್ತದೆ ?
    ಉತ್ತರ: ಅರ್ಧ ಕತ್ತರಿಸಿದ ಸೇಬು ಇನ್ನರ್ಧ ಸೇಬಿನ ತರಹ ಕಾಣುತ್ತದೆ


    ಇದನ್ನೂ ಓದಿ: Viral Video: ಈ ಆಮೆಗಳ ವಿಡಿಯೋ 8 ಮಿಲಿಯನ್ ಜನ ನೋಡಿದ್ದಾರೆ! ನೀವಿನ್ನೂ ನೋಡಿಲ್ವಾ?


    ಇಲ್ಲಿ ಇಲ್ಲದನ್ನು ಯೋಚಿಸಬಾರರು. ಈ ರೀತಿಯ ಪ್ರಶ್ನೆಗಳಿಗೆ ವಿಶಿಷ್ಟ ರೀತಿಯಲ್ಲಿ ಯೋಚಿಸಿ ಉತ್ತರಿಸಬೇಕು. ಅಭ್ಯರ್ಥಿಗಳ ಬುದ್ಧಿಮತ್ತೆಯ ಮಟ್ಟವನ್ನು ಪರೀಕ್ಷಿಸಲು ಐಎಎಸ್ ಪರೀಕ್ಷೆಯಲ್ಲಿ ಕೇಳಲಾದ ಕೆಲವು ಪ್ರಶ್ನೆಗಳು ಇವು. ಇವುಗಳಿಗೆ ನಾಜೂಕಾಗಿ ಉತ್ತರಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ.

    Published by:Ashwini Prabhu
    First published: