ಜಗತ್ತಿನಲ್ಲಿ (World) ಪ್ರಾಣಿ ಪ್ರಿಯರಿಗೆ ಕೊರತೆಯಿಲ್ಲ. ಆದ್ದರಿಂದ ಪ್ರಾಣಿಗಳನ್ನು ತಮ್ಮ ಮನೆಗಳಲ್ಲಿ ಸಾಕುವ ಅನೇಕ ಜನರನ್ನು ನೀವು ಕಾಣಬಹುದು. ಈ ಪ್ರಾಣಿಗಳಲ್ಲಿ ಬೆಕ್ಕುಗಳು, ನಾಯಿಗಳು, ಹಸುಗಳು, ಆಡುಗಳು, ಕುರಿಗಳು ಮುಂತಾದ ಅನೇಕ ಪ್ರಾಣಿಗಳು (Animal) ಸೇರಿವೆ. ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ಈ ನಾಯಿಗಳನ್ನು ಸಾಕುತ್ತಾರೆ. ಈ ನಾಯಿಗಳು ಮನೆ ಕಾವಲು ಕಾಯುವುದಕ್ಕಿಂತ ಹೆಚ್ಚಾಗಿ, ಮನೆಯ ಒಳಗೇ ಚೆನ್ನಾಗಿ ನಿದ್ರೆಯನ್ನು ಮಾಡುತ್ತಾ ಇರುತ್ತದೆ. ಹೀಗಾಗಿ ಎಷ್ಟೇ ದೊಡ್ಡ ಬ್ರೀಡ್ ನಾಯಿಯನ್ನು (Dog) ತಂದ್ರೂ ಕೂಡ ಅವುಗಳು ಮನೆಯ ಒಳಗೆ ಬೆಚ್ಚಗೆ ನಿದ್ರೆ ಮಾಡುತ್ತಾ ಇರುತ್ತವೆ. ಆದರೆ ಇಲ್ಲೊಂದು ಭಯಾನಕವಾದ ಘಟನೆಯೊಂದು ನಡೆದಿದೆ. ಏನು ಅಂಯ ಕೇಳ್ತೀರಾ? ಮುಂದೆ ಓದಿ
ನಾಯಿಯನ್ನು ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಹೇಳಲಾಗುತ್ತದೆ ಮತ್ತು ಮನುಷ್ಯರಂತೆ ಭಾವನೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅದು ತನ್ನ ಮಾಲೀಕರನ್ನು ತುಂಬಾ ಪ್ರೀತಿಸುತ್ತದೆ ಮತ್ತು ನಾಯಿಯೊಂದು ತನ್ನ ಮಾಲೀಕರ ಜೀವವನ್ನು ಉಳಿಸುವ ಬಗ್ಗೆ ನೀವು ಕೇಳಿರಬಹುದು. ಆದರೆ ಇದೀಗ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಾಯಿಯೊಂದು ತನ್ನ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಹೌದು ನಿಜ, ನಾಯಿಯನ್ನು ಸಾಕಲು ಮಾಲೀಕರು ಹತಾಶರಾಗಿದ್ದಾರೆ. ವಾಸ್ತವವಾಗಿ, ಈ ಘಟನೆಯು ಅರ್ಜೆಂಟೇನಾದ ಸಾಂಟಾ ರೋಸಾ ನಗರದಲ್ಲಿದೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ಮಹಿಳೆಯ ಹೆಸರು ಅನಾ ಇನೆಸ್ ಡಿ ಮರೋಟೆ. ಮಹಿಳೆಯ ಮನೆ ನಗರದ ವಿಮಾನ ನಿಲ್ದಾಣದ ಸಮೀಪದಲ್ಲಿದೆ.
ಪ್ರೀತಿಯಿಂದ ಸಾಕಿದ ನಾಯಿಯಿಂದ ಕಾದಿತ್ತು ಆಕೆಗೆ ಮರಣ!. ಈ ನಡುವೆ ಮಹಿಳೆಯನ್ನು ಎಷ್ಟೋ ಜನ ನೋಡಿಲ್ಲ, ಮನೆಯಿಂದ ಹೊರಗೆ ಕಾಲಿಡಲೂ ಇಲ್ಲ. ಒಂದು ವಾರದ ನಂತರ, ಆಕೆಯ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಮಾತ್ರ ಜನರು ಅನುಮಾನಗೊಂಡರು. ಸ್ವಲ್ಪ ಸಮಯದ ನಂತರ ಈ ದುರ್ವಾಸನೆ ದೂರವಾಗುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಕೊನೆಗೆ ದುರ್ನಾತ ಹೆಚ್ಚಾಗಲು ಆರಂಭವಾಯಿತು.
ಅಂತಿಮವಾಗಿ ಜನರು ಪೊಲೀಸರನ್ನು ಕರೆಯಲು ನಿರ್ಧರಿಸಿದರು. ಪೊಲೀಸರಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದರು. ಬಳಿಕ ತನಿಖೆಗೆ ಬಂದಾಗ ಮಹಿಳೆಯ ಮನೆಯಲ್ಲಿ ದುರ್ವಾಸನೆ ಬರುತ್ತಿರುವುದು ಪತ್ತೆಯಾಗಿದೆ. ಮಹಿಳೆಯ ಮನೆಯು ದೊಡ್ಡದಾಗಿದ್ದು, ಪೊಲೀಸರು ಬಾಗಿಲು ತೆರೆದಾಗ ಆಕೆಯ ಮುದ್ದಿನ ನಾಯಿ ಎದುರಿಗೆ ಕಂಡಿದೆ.
ಇದನ್ನೂ ಓದಿ: ರಜೆಯಲ್ಲಿದ್ದ ಉದ್ಯೋಗಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ; ಕಾಲ್ ಮಾಡಿದ್ರೆ 1 ಲಕ್ಷ ರೂಪಾಯಿ ದಂಡ!
ಇನ್ನು ಸ್ವಲ್ಪ ದೂರದಲ್ಲಿ ಅರ್ಧ ತಿಂದಿದ್ದ ಮಹಿಳೆಯ ಮೃತದೇಹ ಪೊಲೀಸರಿಗೆ ಸಿಕ್ಕಿದೆ. ನಂತರ ಪೊಲೀಸರು ನಾಯಿಯೊಂದಿಗೆ ಇತರ ನಾಲ್ಕು ನಾಯಿಗಳು ಬಂದಿರುವುದನ್ನು ಕೂಡ ಕಂಡುಹಿಡಿದರು, ಅವೆಲ್ಲವೂ ಮಹಿಳೆಯನ್ನು ತಮ್ಮ ಬೇಟೆಯನ್ನಾಗಿ ಮಾಡಿಕೊಂಡಿವೆ. ಆಕೆ ಸಾವನ್ನಪ್ಪಿದ್ದಾಳೆ. ಇದನ್ನು ಪೊಲೀಸ್ ನೋಡಿದ ಕೂಡಲೇ ತಕ್ಷಣವೇ ಕಾರ್ಯಾಚರಣೆಯನ್ನು ಆರಂಭ ಮಾಡಿದ್ದಾರೆ.
ಪೊಲೀಸರು ನಾಯಿಯನ್ನು ಹಿಡಿದಿದ್ದು, ಸಂಪೂರ್ಣ ಪ್ರಕರಣದ ತನಿಖೆ ನಡೆಯುತ್ತಿದೆ. ಮಹಿಳೆಯ ಸಂಬಂಧಿಕರನ್ನು ಸಹ ವಿಚಾರಣೆ ನಡೆಸಲಾಗುತ್ತಿದ್ದು, ಈ ಬಗ್ಗೆ ನೆರೆಹೊರೆಯವರನ್ನೂ ಕೇಳಲಾಗಿದೆ.
ಅಬ್ಬಬ್ಬಾ! ನಾಯಿ ತನ್ನ ಪ್ರೀತಿಯ ಮಾಲೀಕರನ್ನೇ ತಿಂದಿದೆ ಅಂದ್ರೆ ಬೆಚ್ಚಿ ಬೀಳುವುದು ಪಕ್ಕಾ ಅಲ್ವಾ? ನಿಮ್ಮ ಮನೆಯಲ್ಲಿ ನಾಯಿ ಇದ್ಯಾ ಹಾಗಾದ್ರೆ ಎಚ್ಚರವಾಗಿರಿ ದಯವಿಟ್ಟು. ನಾಯಿಗೆ ನಿಯತ್ತು ಅಂತ ಹೇಳಲಾಗುತ್ತೆ. ಆದ್ರೆ ಅನ್ನ ಹಾಕಿದ ಮನೆಗೇ ಕನ್ನ ಹಾಕಿದ ಈ ಡಾಗ್ಗೆ ಏನು ಹೇಳಬೇಕು ಅಂತ ನೇವೇ ಹೇಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ