ತಂದೆಯೇ (Father) ಹುಡುಗಿಗೆ ಮೊದಲ ಹೀರೋ. ಆಕೆಯ ಎಲ್ಲಾ ಭಾವನೆಗಳಿಗೆ ಬೆಲೆಯನ್ನು ತಂದೆಯಾದವನ್ನು ನೀಡುತ್ತಾನೆ. ತಾಯಿ 9 ತಿಂಗಳಗಳ ಕಾಲ ಹೊತ್ತು ಹೆತ್ತು ಸಾಕಿ ಸಲಹಿದರೆ ತಂದೆಯಾದವನು ಎಂದಿಗೂ ನೆರಳಾಗಿ ತನ್ನ ಮಕ್ಕಳಿಗೆ ಇರುತ್ತಾನೆ. ಆತ ಒಂದು ಶಕ್ತಿ (Power) ಇದ್ದ ಹಾಗೆ. ತಂದೆಗೆ ಸಂಬಂಧ ಪಟ್ಟಂತಹ ಅದೆಷ್ಟೋ ಹಾಡುಗಳನ್ನು ನಾವು ಸಿನಿಮಾಗಳಲ್ಲಿ ಕೇಳಿರುತ್ತೇವೆ. ಹಾಗೆಯೇ ಅದೇನೋ ಒಂದು ರೀತಿಯ ಅವಿನಾಭಾವ ಸಂಬಂಧ (Relationship) ಅಂತ ಹೇಳಿದ್ರೂ ತಪ್ಪಾಗೋದಿಲ್ಲ ಬಿಡಿ. ಇದೀಗ ಇಂತಹ ತಂದೆಯ ಜೊತೆಗೆ ಮಗಳು ಮಾಡ್ತಾ ಇದ್ದಾಳೆ ಅಂದ್ರೆ ತಲೆ ತಗ್ಗಿಸುವಂತ ಸಂಗತಿ ಅಂತಲೇ ಹೇಳಬಹುದು.
ಹೌದು, ನಿಮಗೆ ಈ ವಿಷಯ ಕೇಳುತ್ತಲೇ ಅಯ್ಯಯ್ಯೋ ಇನ್ನು ಈ ಸಮಾಜದಲ್ಲಿ ಏನೇಲ್ಲಾ ಆಗೋದುಂಟೋ ಅಂತ ತಲೆಬಿಸಿ, ಪ್ರಶ್ನೆಗಳು ಮೂಡಬಹುದು ಅಲ್ವಾ? ನಿಮಗೆ ಅಯ್ಯಯ್ಯೋ ಅಂತ ಅನಿಸಿದರೂ ಇದು ಸತ್ಯವಾದ ಸಂಗತಿ ಅಂತಲೇ ಹೇಳಬಹುದು.
ತಾಯಿಗೆ ತಕ್ಕ ಮಗ ಇದ್ದ ಹಾಗೆಯೇ ತಂದೆಗೆ ತಕ್ಕ ಮಗಳು ಎಂಬ ಮಾತುಗಳನ್ನು ಕೇಳಿರುತ್ತೇವೆ. ಆಕೆಯನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು, ಊಟ ಮಾಡೋದಿಲ್ಲ ಎಂದು ಹಠ ಮಾಡವಾಗ ಒತ್ತಾಯ ಮಾಡಿ, ಕಥೆಗಳನ್ನು ಹೇಳಿ ತಂದೆ ಯಾವ ರೀತಿಯಾಗಿ ಮಗುವನ್ನು ನೋಡಿಕೊಳ್ಳುತ್ತಾನೆ ಅಂತ ನಾವು ನೋಡಬಹುದು.
ಇತ್ತೀಚೆಗೆ, ಅಮೇರಿಕಾದ ಲಾಸ್ ವೇಗಾಸ್‌ನಲ್ಲಿ ಈ ವಿಚಿತ್ರ ವಿವಾಹವನ್ನು ಮಾಡಿಕೊಂಡ ವಧು ಕ್ರಿಸ್ಟಿ #MarryYourMomsEx ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ತಾನು ತನ್ನ ಮಲತಂದೆಯನ್ನು ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು.
ಫ್ಲೋರಿಡಾದ ಟ್ಯಾಂಪಾ ನಿವಾಸಿ ಕ್ರಿಸ್ಟಿ ಇಬ್ಬರು ಮಕ್ಕಳ ತಾಯಿ. ಈಕೆ ತನ್ನ ವೈರಲ್ ಕ್ಲಿಪ್‌ನಲ್ಲಿ ತನ್ನ ಮಲತಂದೆಯನ್ನು ಮದುವೆಯಾಗುವುದು ಅವಳು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿದೆ ಎಂದು ಹೇಳಿದ್ದಾಳೆ. ಅವಳು ತನ್ನ ಮದುವೆಯನ್ನು ಆಚರಿಸುವಾಗ ತನ್ನ ಮಲತಂದೆಗೆ ಮುತ್ತಿಡುವ ಫೋಟೋ ಕೂಡಾ ಶೇರ್ ಮಾಡಿದ್ದಾಳೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಮೈಸೂರಿನ ಹುಡುಗ, ಅಂಗಾಗ ದಾನದ ಮೂಲಕ ಐವರ ಬಾಳಿಗೆ ಬೆಳಕು!
ಕ್ರಿಸ್ಟಿ ಅವರ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 20 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ಬಳಕೆದಾರರು ಈ ವೀಡಿಯೋ ವೀಕ್ಷಿಸಿದ ನಂತರ ಅನೇಕ ಜನ ಅನೇಕ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಕ್ರಿಸ್ಟಿ ತನ್ನ ಫಾಲೋವರ್ಸ್‌ಗಳಿಗೆ ಮತ್ತೊಂದು ವಿಡ ಹಂಚಿಕೊಂಡಿದ್ದಾರೆ, ಈಕೆ ತನ್ನ ಮಲತಂದೆಯ ಜೊತೆಯ ಸಂತೋಷದ ಫೋಟೋಗಳನ್ನು ಅವಳ ತಾಯಿಯೇ ಕ್ಲಿಕ್ ಮಾಡಿದ್ದಾಗಿ ಬರೆದುಕೊಂಡಿದ್ದಾಳೆ. ಜನರು ತನ್ನ ತಾಯಿಯ ಭಾವನೆಗಳನ್ನು ಮಾತ್ರ ಮೆಚ್ಚುತ್ತಿದ್ದಾರೆ ಎಂದು ಮಹಿಳೆ ಬರೆದಿದ್ದು, ಅವಳಿಗೆ ತನ್ನದೇ ಆದ ಕೆಲವು ಭಾವನೆಗಳಿವೆ ಎಂದು ಹೇಳಿದ್ದಾಳೆ. ಆದರೆ ಕ್ರಿಸ್ಟಿ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಮಲತಂದೆಯನ್ನು ಮದುವೆಯಾದ ಸಂಭ್ರಮದಲ್ಲಿದ್ದಾಳೆ.
ಇವುಗಳನ್ನೆಲ್ಲಾ ನೋಡ್ತಾ ಇದ್ರೆ ನಿಮಗೆ ಏನ್ ಅನಿಸುತ್ತೆ? ತಂದೆಯನ್ನು ಮಗಳು ಮದುವೆ ಆಗಿದ್ದಾಳೆ ಅಂದ್ರೆ ಒಂಥರಾ ವಿಚಿತ್ರನೇ ಅಲ್ವಾ? ಈ ಪ್ರಪಂಚದಲ್ಲಿ ಇನ್ನು ಏನೆಲ್ಲಾ ನಡೆಯುತ್ತೋ ಗೊತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ