"ಹೊಸದಾಗಿ ಮದುವೆಯಾದವರಿಗೆ ಸಾವಿನ ಅರಿವು": ದುರ್ಘಟನೆಯ ವಿಡಿಯೋ ವೈರಲ್​


Updated:July 10, 2018, 12:29 PM IST

Updated: July 10, 2018, 12:29 PM IST
ನ್ಯೂಸ್​ 18 ಕನ್ನಡ

ಮದುವೆ ಸಂಭ್ರಮದ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ವೆಡ್ಡಿಂಗ್​ ಪೋಟೋಶೂಟ್​ ಕೂಡಾ ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ನವದಂಪತಿಗೆ ಬಂದೊದಗಿದ ಪರಿಸ್ಥಿತಿ ನೋಡಿದರೆ ನಿಜಕ್ಕೂ ಬೆಚ್ಚಿ ಬೀಳುವಂತಿದೆ. Freddy Hernandez Photography & Media ತನ್ನ ಫೇಸ್​ಬುಕ್​ ಪೇಜ್​ನಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, ಇದರಲ್ಲಿ ಆಗಷ್ಟೇ ಮದುವೆಯಾದ ಹುಡುಗ- ಹುಡುಗಿ ಇಬ್ಬರೂ ದುರ್ಘಟನೆಯೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗುವುದರನ್ನು ಗಮನಿಸಬಹುದಾಗಿದೆ.

ಈ ವಿಡಿಯೋವನ್ನು ಶೇರ್​ ಮಾಡುತ್ತಾ "ಹೊಸದಾಗಿ ಮದುವೆಯಾದವರಿಗೆ ಸಾವಿನ ಅರಿವು" ಎಂದು ತಲೆಬರಹ ನೀಡಿದ್ದಾರೆ. ವಿಡಿಯೋದಲ್ಲಿ ವಧು ವರರು ತಮ್ಮ ಲವ್​ ಸ್ಟೋರಿ ಶೇರ್​ ಮಾಡುತ್ತಿದ್ದ ವೇಳೆ, ಮರದ ಕೊಂಬೆ ಯಾವ ರೀತಿ ಮುರಿದು ಬೀಳುತ್ತದೆ ಎಂಬುವುದನ್ನು ನೋಡಬಹುದು. ಆದರೆ ಇದರ ಮುನ್ಸೂಚನೆ ಪಡೆದ ನವ ದಂಪತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ