ಸಾಮಾಜಿಕ ಜಾಲತಾಣ (social media) ಈಗ ಎಲ್ಲರ ತುದಿ ಬೆರಳಲ್ಲಾಡುವ ವಿಷಯವಾಗಿದೆ. ಹಾಸ್ಯ,(Funny) ಮನರಂಜನೆ (entertainment), ಕ್ರೀಡೆ, ಮಾನವೀಯತೆ ಮೆರೆದದ್ದು, ಸಹಾಯ ಮಾಡಿದ್ದು ಹೀಗೆ ಸಾವಿರಾರು ಸಂಗತಿಗಳು, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈಗ ಮದುವೆಯೊಂದರ (wedding) ಫೋಟೋ ಶೂಟ್ (Photoshoot) ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗಿದ್ದು, ಕೆಲವರನ್ನು ನಗಿಸಿದರೆ, ಇನ್ನು ಕೆಲವರನ್ನು ದಂಗಾಗುವಂತೆ ಮಾಡಿದೆ.
ಈಗ ಮದುವೆಯ ಸೀಸನ್. ಇಂಥ ಸಮಯದಲ್ಲಿ ಫೋಟೋ ತೆಗೆಯುವುದು, ವಿಡಿಯೋ ಮಾಡುವ ಭರಾಟೆ ಹೆಚ್ಚು. ಮದುವೆ ಸೀಸನ್ ಅಂದ್ರೆ ಕೇಳಬೇಕಾ..? ಹೆಂಗಳೆಯರ ಅಲಂಕಾರ, ಫೋಟೋಶೂಟ್, ಮದುಮಗಳ ಸೀರೆ, ಒಡವೆ ಹೀಗೆ ಸಾಕಷ್ಟು ವಿಷಯಗಳದ್ದೇ ಚರ್ಚೆ. ಮದುವೆ ಮಂಟಪದ ಅಲಂಕಾರ, ವಿನ್ಯಾಸ ಕೂಡ ಚೆಂದವಾಗಿರುವಂತೆ ಮಾಡಲಾಗುತ್ತದೆ.
ಮದುವೆಯಲ್ಲಿ ತೆಗೆದ ತರ ತರಹದ ವಿಡಿಯೋಗಳಲ್ಲಿ ಮದುಮಗಳ ರಾಯಲ್ ಎಂಟ್ರಿ, ಸಂಬಂಧಿಕರ ಡಾನ್ಸ್, ತವರುಮನೆಯಿಂದ ವಿದಾಯ ಹೇಳುವಾಗ ಭಾವುಕರಾಗುವುದು, ಫ್ರ್ಯಾಂಕ್ ವಿಡಿಯೋಗಳು ವಿವಿಧ ಕಾರಣಗಳಿಂದ ವೈರಲ್ ಆಗುತ್ತಲೇ ಇರುತ್ತವೆ. ವರ-ವಧುವಿಗೆ ಮಾಲೆ ಹಾಕುವಾಗ ಕಾಡಿಸುವುದು ಹೀಗೆ ಸಾಕಷ್ಟು ವಿಡಿಯೋಗಳನ್ನ ನಾವು ನೋಡಿದ್ದೀವಿ. ಆದ್ರೆ.. ಈಗ ವೈರಲ್ ಆಗಿರುವ ವಿಡಿಯೋ ಡಾನ್ಸ್ ನಿಂದಲ್ಲ, ಫ್ರ್ಯಾಂಕ್ ನಿಂದಲೂ ಅಲ್ಲ.. ಇದರಲ್ಲಿ ಎಂಟ್ರಿಯಂತೂ ಇದೆ.. ಆದ್ರೆ ಮದುಮಗಳದ್ದಲ್ಲ. ಎಂಟ್ರಿಯಾಗಿರೋದನ್ನ ನೀವು ನೋಡಿದ್ರೆ ನಿಜಕ್ಕೂ ಬಿದ್ದು ಬಿದ್ದೂ ನಗ್ತೀರಾ…
ಇದನ್ನೂ ಓದಿ: ಮೃಗಾಲಯದಲ್ಲಿ ಮಗುವನ್ನು ಕರಡಿ ಬಳಿಗೆ ಎಸೆದ ತಾಯಿ! ಮುಂದೆ ಆಗಿದ್ದೇನು?
ವಿಡಿಯೋದಲ್ಲಿ ಏನಿದೆ..?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ಮಂಟಪವಿದೆ. ಮಂಟಪದಲ್ಲಿ ಮದುಮಗಳು ಮತ್ತು ಮದುಮಗ ಜೊತೆಯಾಗಿ ನಿಂತು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಫೋಟೋಗ್ರಾಫರ್ ವಿವಿಧ ಪೋಸ್ ಗಳಲ್ಲಿ ನಿಲ್ಲಿಸಿ ನವಜೋಡಿಯ ಫೋಟೋ ತೆಗೆಯುತ್ತಿದ್ದ.
ಬ್ಯಾಗ್ರೌಂಡ್ ನಲ್ಲಿ ಡಿಜೆ ಸಾಂಗ್ ಕೂಡ ಕೇಳಿ ಬರುತ್ತಿತ್ತು. ಮದುವೆಯ ಮಂಟಪದ ಅಕ್ಕ-ಪಕ್ಕದಲ್ಲಿ ನಿಂತಿದ್ದ ಸಂಬಂಧಿಕರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಹಿಂದಿಯಲ್ಲಿ ‘ಅಬ್ ರಾಸ್ತಾ ಮಿಲ್ ಗಯಾ ಹೈ’ ಎಂದು ಹಾಡು ಬರುತ್ತಿದ್ದಂತೆ ಸ್ಟೇಜ್ ಮೇಲಿದ್ದ ನವಜೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಉಳಿದವರು ಒಂದು ಕ್ಷಣ ಶಾಕ್ ಆಗಿ ನಿಂತು ಬಿಟ್ಟಿದ್ದಾರೆ.
ಫೋಟೋಶೂಟ್ ಗೆ ಅಡಚಣೆ:
ಮದುವೆ ಮಂಟಪದಲ್ಲಿ ನವಜೋಡಿ ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಮಗ್ನರಾಗಿತ್ತು. ಮದುಮಕ್ಕಳು ನಿಂತಿದ್ದ ಜಾಗದ ಹಿಂದೆಯೇ ಡಿಜೆ ಸ್ಪೀಕರ್ ನ್ನು ಇಡಲಾಗಿತ್ತು. ಫೋಟೋ ತೆಗೆಸಿಕೊಳ್ಳುತ್ತಿದ್ದ ನವಜೋಡಿಯ ಮೇಲೆ ದೊಪ್ಪನೆ ಡಿಜೆ ಸ್ಪೀಕರ್ ಹಾರಿ ಬಂದು ಬೀಳುತ್ತದೆ. ಇದರಿಂದಾಗಿ ನವಜೋಡಿಯ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಡಿಜೆ ಬೀಳುತ್ತಿದ್ದಂತೆ ನವಜೋಡಿ ಸೈಡಿಗೆ ಹೋಗುತ್ತಾರೆ. ಹೀಗಾಗಿ ನವಜೋಡಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಚಿಕ್ಕಪುಟ್ಟ ಗಾಯಗಳಾಗಿವೆ.
ಎಂಟು ಲಕ್ಷಕ್ಕಿಂತ ಹೆಚ್ಚು ವೀವ್ಸ್:
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನವಜೋಡಿಯನ್ನು ಹಾಗೂ ಮದುವೆಗೆ ಬಂದಿದ್ದ ಸಂಬಂಧಿಗಳನ್ನು ದಂಗುಬಿಡಿಸಿದ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ 8 ಲಕ್ಷ ವೀವ್ಸ್ ಪಡೆದುಕೊಂಡಿದೆ. ಇನ್ನು ವಿಡಿಯೋ ನೋಡಿದ ಕೆಲವರು ನಗುವಿನಲ್ಲಿ ತೇಲಾಡಿದರೆ, ಇನ್ನು ಕೆಲವರು ಅಯ್ಯೋ ಎಂದು ಒಂದು ಕ್ಷಣ ದಂಗಾಗಿದ್ದಾರೆ. ವಿಡಿಯೋ ವೀಕ್ಷಿಸಿದವರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಜನ ವಿಡಿಯೋವನ್ನ ಶೇರ್ ಕೂಡ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ...100 ಮಿಲಿಯನ್ ಬಣ್ಣಗಳನ್ನು ಗುರುತಿಸುವ ಶಕ್ತಿ ಈಕೆಯ ಕಣ್ಣಿಗಿದೆ!
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಸಾಕಷ್ಟು ವೀವ್ಸ್ ಪಡೆದುಕೊಳ್ಳುತ್ತವೆ. ಅದರಲ್ಲೂ ಮದುವೆ, ಸಮಾರಂಭ, ಪ್ರಾಣಿಗಳ ತುಂಟಾಟದ ವಿಡಿಯೋಗಳು ಭಾರೀ ಲೈಕ್ ಪಡೆದುಕೊಳ್ಳುತ್ತವೆ. ಫ್ರ್ಯಾಂಕ್, ಹಾಸ್ಯ ಭರಿತ ವಿಡಿಯೋಗಳು ಜನರನ್ನು ಆಕರ್ಷಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ