Viral Video: ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ ಈ ಅತಿಥಿಗಳು..! ಇಲ್ಲಿದೆ ವೈರಲ್ ವಿಡಿಯೋ

Viral News: ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಮಹಾರಾಷ್ಟ್ರದ ಮದುವೆ ಸಭಾಂಗಣದ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ರಾತ್ರಿ 10 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಎಚ್ಚರಿಕೆ ಪಡೆದ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿದ ನಂತರ ರಾತ್ರಿ 11 ಗಂಟೆಯ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ತಿಳಿಸಿದೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ನಮ್ಮಲ್ಲಿ ಅನೇಕರು ಈ ಮದುವೆ(Wedding) ಸಮಾರಂಭಗಳನ್ನು ನೋಡುವುದಕ್ಕಿಂತಲೂ ಹೆಚ್ಚಾಗಿ ಈ ಮದುವೆ ಸಮಾರಂಭಗಳಲ್ಲಿ ಮಾಡಿದಂತಹ ಊಟದ(Food) ರುಚಿ ಸವಿಯಲು ಹೋಗುವುದುಂಟು. ಇದರಲ್ಲೇನೂ ತಪ್ಪಿಲ್ಲ ಬಿಡಿ ಅವರವರ ಇಷ್ಟಾರ್ಥಗಳು ಅವರವರಿಗೆ ಬಿಟ್ಟಿದ್ದು ಅಲ್ಲವೇ? ಈ ವಿಚಾರ ನಾವು ಈಗೇಕೆ ಮಾತಾಡುತ್ತಿದ್ದೇವೆ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು. ಈ ಮದುವೆಗಳ ಸೀಸನ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಾವು  ಮದುವೆಯ ಸಮಾರಂಭಗಳಲ್ಲಿ ಮಾಡುವಂತಹ ವಿವಿಧ ಭಕ್ಷ್ಯಬೋಜ್ಯಗಳ ವಿಡಿಯೋ ಮತ್ತು ಫೋಟೋಗಳನ್ನು ನೋಡುತ್ತಲೇ ಇರುತ್ತೇವೆ. ಜನರು ಮದುವೆ ಸಮಾರಂಭದಲ್ಲಿ ಏನೇ ಆದರೂ ತಲೆ ಕೆಡೆಸಿಕೊಳ್ಳದೆ ಸ್ವಾದಿಷ್ಟವಾದ ಆಹಾರ ಸವಿಯುತ್ತಾರೆ ಎಂದು ಹೇಳುವುದಕ್ಕೆ ಇಲ್ಲಿ ನಡೆದಿರುವ ಈ ಘಟನೆಯೊಂದೇ ಸಾಕು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ನಾವು ಮದುವೆಯ ಸಮಾರಂಭದಲ್ಲಿ ಅತಿಥಿಗಳು ಭೋಜನ ಆನಂದಿಸುತ್ತಿದ್ದರೆ, ಹಿನ್ನೆಲೆಯಲ್ಲಿ ಭಾರಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದದ್ದನ್ನು ನೋಡಬಹುದು. ಹೌದು ಮುಂಬೈ ಖಬರ್9 ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ 24 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಥಾಣೆಯ ಭಿವಾಂಡಿಯ ಅನ್ಸಾರಿ ಮ್ಯಾರೇಜ್ ಹಾಲ್‌ನಲ್ಲಿ ಭಾನುವಾರ ಸಂಜೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು.ಆದರೆ ತಮಾಷೆಯೆಂದರೆ ಬೆಂಕಿ ಹತ್ತಿದ ತಕ್ಷಣ ಜನರು ಅದನ್ನು ಆರಿಸಲು ಓಡಿ ಹೋಗುತ್ತಾರೆ ಅಥವಾ ಅದರಿಂದ ಪಾರಾಗಲು ತಪ್ಪಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಬಂದಿರುವ ಅತಿಥಿಗಳು ಬೆಂಕಿಯನ್ನು ಗಮನಿಸಿದ ನಂತರವೂ, ತಮ್ಮ ಸಂಭಾಷಣೆಗಳನ್ನು ಮುಂದುವರಿಸುತ್ತಾ ಆಹಾರ ಆನಂದಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಈಗಾಗಲೇ 2,500ಕ್ಕೂ ಹೆಚ್ಚು ಜನರು ನೋಡಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲಿ ಉಗಮವಾಯಿತು ಮತ್ತೊಂದು ಸ್ವತಂತ್ರ ರಾಷ್ಟ್ರ : ದಾಸ್ಯದ ಸಂಕೋಲೆ ಕಳಚಿಕೊಂಡ ಬಾರ್ಬಡೋಸ್

ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಮಹಾರಾಷ್ಟ್ರದ ಮದುವೆ ಸಭಾಂಗಣದ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ರಾತ್ರಿ 10 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಎಚ್ಚರಿಕೆ ಪಡೆದ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿದ ನಂತರ ರಾತ್ರಿ 11 ಗಂಟೆಯ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ತಿಳಿಸಿದೆ.

ಬೆಂಕಿಗೆ ಆಹುತಿಯಾದ ಕೋಣೆಯಲ್ಲಿ ಮದುವೆ ಸಮಾರಂಭಗಳ ಅಲಂಕಾರಕ್ಕಾಗಿ ಬಳಸಿದ ವಸ್ತುಗಳನ್ನು ಮತ್ತು ಕಾರ್ಯಕ್ರಮಗಳಿಗೆ ಬೇಕಾಗುವ ಕುರ್ಚಿಗಳನ್ನು ಸಂಗ್ರಹಿಸಿಡಲಾಗುತ್ತಿದ್ದು ಅವುಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಬೆಂಕಿಯ ನಿಖರ ಕಾರಣವು ದೃಢಪಟ್ಟಿಲ್ಲವಾದರೂ, ಮದುವೆಯ ಸಮಯದಲ್ಲಿ ಪಟಾಕಿಗಳು ಸಿಡಿಸಿರುವುದರಿಂದ ಈ ಅವಘಡ ಸಂಭವಿಸಿರಬಹುದೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಚೀನಿ ಆಹಾರದ ಹುಡುಕಾಟದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಿರುವ ಭೂಪ..!

ಇದನ್ನೂ ಓದಿ: ಅಧಿಕೃತ ಚೀನಿ ಆಹಾರದ ಹುಡುಕಾಟದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಿರುವ ಭೂಪ..!

ಹೀಗೆ ಮದುವೆ ಸಮಾರಂಭಗಳಲ್ಲಿ ಅಗ್ನಿ ಅವಘಡಗಳು ತುಂಬಾನೇ ಆಗುತ್ತಿದ್ದು, ಇದೇನು ಮೊದಲ ಘಟನೆಯೇನೂ ಅಲ್ಲ. ಮತ್ತೊಂದು ವಿಲಕ್ಷಣ ಘಟನೆಯಲ್ಲಿ, ಉತ್ತರ ಪ್ರದೇಶದ  ಔರಿಯಾದಲ್ಲಿ, ವರನು ತನ್ನ ಕನ್ನಡಕ ಇಲ್ಲದೆಯೇ ಪತ್ರಿಕೆ ಓದಲು ಸಾಧ್ಯವಾಗದ ಕಾರಣ ಕೊನೆಯ ಕ್ಷಣದಲ್ಲಿ ಮದುವೆಯನ್ನು ನಿಲ್ಲಿಸಲಾಯಿತು. ವರ ಮತ್ತು ಅವನ ಸಂಬಂಧಿಕರ ದುರ್ಬಲ ದೃಷ್ಟಿಯನ್ನು ಮರೆಮಾಚಿದ್ದಕ್ಕಾಗಿ ವಧುವಿನ ಕುಟುಂಬವು ಅವನ ವಿರುದ್ಧ ಪೊಲೀಸ್ ಪ್ರಕರಣವನ್ನು ಸಹ ದಾಖಲಿಸಿದೆ.
Published by:Sandhya M
First published: