• Home
  • »
  • News
  • »
  • trend
  • »
  • Viral Video: ಮದ್ವೆಯಲ್ಲಿ ಉಂಡು, ತಿಂದು ಹೊಡೆದಾಡಿದ್ರು! ಈ Marriage ಗಲಾಟೆ ಹೇಗಿತ್ತು ನೋಡಿ

Viral Video: ಮದ್ವೆಯಲ್ಲಿ ಉಂಡು, ತಿಂದು ಹೊಡೆದಾಡಿದ್ರು! ಈ Marriage ಗಲಾಟೆ ಹೇಗಿತ್ತು ನೋಡಿ

ಗಲಾಟೆಯ ದೃಶ್ಯ

ಗಲಾಟೆಯ ದೃಶ್ಯ

ಅಬ್ಬಬ್ಬಬ್ಬಾ, ಮದ್ವೆಗೆ ಬಂದ್ರಾ, ಉಂಡ್ರಾ, ತಿಂದ್ರಾ ಅಂತಲ್ಲ ಇವ್ರದ್ದು, ಕೈಕೈ ಮಿಲಾಯಿಸಿ ಹೊಡೆದಾಡೇ ಬಿಟ್ರು! ತಿಂದಿದ್ದು ಕರಗಿಸೋಕೆ ಎಂಬಂತೆ ಬಡಿದಾಡಿಕೊಂಡ ಈ ಅತಿಥಿಗಳು ಈಗ ಆಸ್ಪತ್ರೆ ಸೇರಿದ್ದಾರೆ. ಈ ಗಲಾಟೆ ಮದುವೆಯ ವಿಡಿಯೋ ಇಲ್ಲಿದೆ ನೋಡಿ...

  • Share this:

    ಮದುವೆಗೆ (Marriage) ಬಂದ ಅತಿಥಿಗಳು (Guest) ಹಾದಿ ಬೀದಿ ರಂಪ ಮಾಡಿದ್ದಾರೆ. ಬೀದಿಯಲ್ಲಿ ಗುಂಪೊಂದು (Group) ಒಬ್ಬರಿಗೊಬ್ಬರು ತಳ್ಳಾಡಿ, ನೂಕಾಡಿ ಹೊಡೆದಾಡಿಕೊಂಡಿದ್ದಾರೆ. ಮದುವೆಗೆ ತಯಾರಾಗಿ ಬಂದ ಸೂಟ್ ಮತ್ತು ಡ್ರೆಸ್‌ ಧರಿಸಿದ ವ್ಯಕ್ತಿಗಳು ದಾರಿಯಲ್ಲಿಯೇ ಬಡಿದಾಡಿಕೊಂಡಿದ್ದು, ಗಂಭೀರ ಗಾಯಗಳಾಗಿವೆ. ಸದ್ಯ ಈ ವಿಡಿಯೊ (Video) ಆಸ್ಟ್ರೇಲಿಯಾದಲ್ಲಿ(Australia)  ವೈರಲ್ (Viral) ಆಗಿದೆ. ಮದುವೆಗೆ ಬಂದ ಅತಿಥಿಗಳು ಎನ್ನಲಾಗಿರುವ ಕೆಲವು ವ್ಯಕ್ತಿಗಳ ಗುಂಪು ಗಲಾಟೆ ಮಾಡಿಕೊಂಡ ಘಟನೆ ಆಸ್ಟ್ರೇಲಿಯಾದ ಮಾಸ್ಮನ್‌ನಲ್ಲಿರುವ ದಿ ಸ್ಪಿಟ್‌ನಲ್ಲಿ ನಡೆದಿದೆ. ಗಂಡಸರು, ಹೆಂಗಸರನ್ನು ಒಳಗೊಂಡ ಗುಂಪಿನ ಗಲಾಟೆ ಅತಿರೇಖಕ್ಕೆ ಹೋಗಿದ್ದು, ಸ್ಥಳದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಪೋಲಿಸರು ಬರುವಷ್ಟರಲ್ಲಿ ಗಲಾಟೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಗುಂಪು ಸ್ಥಳದಿಂದ ಕಾಲ್ಕಿತ್ತಿದ್ದರು. ಸುಮಾರು ಹದಿನೈದರಿಂದ ಇಪ್ಪತ್ತು ಜನರು ಪರಸ್ಪರ ಹಲ್ಲೆ ಮಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.


    ಸೂಟು-ಬೂಟು ಧರಿಸಿ ಬಿಗ್ ಫೈಟ್


    ಗಲಾಟೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಪುರುಷರು, ಮಹಿಳೆಯರು ಶಿಸ್ತಾಗಿ ಉಡುಪು ಧರಿಸಿಕೊಂಡಿದ್ದರು. ಪುರುಷರು ಕಪ್ಪು, ಬಿಳಿ ಸೂಟ್ ಹಾಕಿಕೊಂಡಿದ್ದರೆ ಮಹಿಳೆಯರು ಸಹ ಚೆಂದವಾಗಿ ಡ್ರೆಸ್ ಮಾಡಿಕೊಂಡಿದ್ದರು.


    ಮದುವೆಗೆ ಬಂದವರು ಪೊಲೀಸರ ಅತಿಥಿಯಾದ್ರು!


    ಮದುವೆಯ ಆರತಕ್ಷತೆಗೆ ಬಂದ ಅತಿಥಿಗಳು ಯಾಕೆ ಈ ರೀತಿಯಾಗಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಕಾರಣ ತಿಳಿದು ಬಂದಿಲ್ಲ. ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಚೆಂದವಾಗಿ ಡ್ರೆಸ್ ಮಾಡಿಕೊಂಡ ಅತಿಥಿಗಳು ಅಸಹ್ಯಕರವಾಗಿ ಬೀದಿಯಲ್ಲಿ ಜಗಳ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದು ಗಲಾಟೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಹುಡುಕಾಟ ನಡೆಸಿದ್ದಾರೆ.


    ಇದನ್ನೂ ಓದಿ: Eunice ಚಂಡಮಾರುತದ ಅಬ್ಬರಕ್ಕೆ ಹಾರಿ ಹೋದ ತಲೆಯ ವಿಗ್: ವಿಡಿಯೋ ವೈರಲ್..!


    35 ಸೆಕೆಂಡ್‌ಗಳ ಇರುವ ಈ ವಿಡಿಯೋ ಕ್ಲಿಪ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ವಿಡಿಯೋದಲ್ಲಿ ಪುರುಷರು ಮತ್ತು ಮಹಿಳೆಯರು ಪರಸ್ಪರ ಹಲ್ಲೆ ನಡೆಸಿದ್ದಾರೆ, ಒಬ್ಬ ವ್ಯಕ್ತಿ ಹುಡುಗಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಒಬ್ಬ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಹ ಕಾಣಬಹುದು.


    ಸ್ನೇಹಿತರು ಬೀದಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಪರೀಕ್ಷಿಸುತ್ತಿರುವಾಗ, ಇದೇ ವೇಳೆ ಶರ್ಟ್‌ ಹಾಕದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಮತ್ತೊಬ್ಬನ ಮೇಲೆ ದೌರ್ಜನ್ಯ ನಡೆಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಂಡು ಬಂದಿದೆ.


    ವಿಡಿಯೋ ನೋಡಿ: 


    ಬೀದಿಯಲ್ಲಿ ಗುಂಪೊಂದು ಹೀಗೆ ಗಲಾಟೆ ಮಾಡಿಕೊಳ್ಳುತ್ತಿರುವಾಗ ಇಲ್ಲಿನ ವಾಹನ ಸಂಚಾರರಿಗೆ ಅಡಚಣೆಯಾಯಿತು. ಸಾರ್ವಜನಿಕರು ಸಹ ಈ ಗಲಾಟೆಯನ್ನು ದಿಗ್ಭಮ್ರೆಗೊಂಡು ನೋಡುತ್ತಿದ್ದರು. ಗಲಾಟೆ ಸ್ಥಳದಲ್ಲಿ ಉಂಟಾದ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಒಬ್ಬ ವ್ಯಕ್ತಿಯು ವಿಡಿಯೋದಲ್ಲಿ ಪ್ರಯತ್ನಿಸುತ್ತಿರುವುದನ್ನು ಕಾಣ ಬಹುದು.


    News.com.au ನ ವರದಿಯ ಪ್ರಕಾರ, ಈ ಘಟನೆಯು ಶ್ರೀಮಂತ ನಗರ ಎಂದು ಪ್ರಸಿದ್ಧವಾಗಿರುವ ಮಾಸ್ಮನ್‌ನಲ್ಲಿರುವ ದಿ ಸ್ಪಿಟ್‌ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರಿಗೆ ತಡವಾಗಿ ವಿಚಾರ ತಿಳಿದಿದೆ, ಸುದ್ದಿ ತಿಳಿದು ರಾತ್ರಿ 11:45 ರ ಸುಮಾರಿಗೆ ಪೊಲೀಸರು ಬರುವಷ್ಟರಲ್ಲಿ ಗಲಾಟೆಯಲ್ಲಿ ತೊಡಗಿದ್ದ ಬಹುತೇಕರು ಅಲ್ಲಿಂದ ತೆರಳಿದ್ದರು ಎಂದು NSW ಪೊಲೀಸ್ ವಕ್ತಾರರು ತಿಳಿಸಿದರು.


    ಘಟನೆಯಲ್ಲಿ ಭಾಗಿಯಾಗಿದ್ದ 26 ವರ್ಷದ ಯುವಕನನ್ನು ಪೋಲಿಸರು ವಿಚಾರಣೆ ನಡೆಸಿದ್ದಾರೆ. ಗಲಾಟೆ ಬಗ್ಗೆ ದೂರು ನೀಡುವ ಉದ್ದೇಶ ಯಾರಿಗೂ ಇರಲಿಲ್ಲ ಎಂದು ಆತ ಹೇಳಿದ್ದಾನೆ.


    ಇದನ್ನೂ ಓದಿ: Viral Video: ಏನಪ್ಪಾ ಇವ್ನು, 6 ಭಾಷೆಯಲ್ಲಿ ಸುದ್ದಿ ಕೊಡ್ತಾನೆ! 'ಜೇಮ್ಸ್ ಬಾಂಡ್' ಅಂತಿದ್ದಾರೆ ನೆಟ್ಟಿಗರು


    ಗಲಾಟೆಯಲ್ಲಿ ಹಲವರಿಗೆ ಗಾಯ


    ಗಲಾಟೆಯಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, ಕೆಲವರಿಗೆ ಮುಖ, ಪಕ್ಕೆಲುಬುಗಳಿಗೆ ಗಾಯಗಳಾಗಿವೆ. ಕೆಲವು ವ್ಯಕ್ತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.


    ವರದಿಯ ಪ್ರಕಾರ ಘಟನೆ ಬಗ್ಗೆ ಪೊಲೀಸರಿಂದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಮತ್ತು ಗಲಾಟೆ ಮಾಡಿರುವ ವ್ಯಕ್ತಿಗಳನ್ನು ಗುರುತು ಹಚ್ಚುವ ಬಗ್ಗೆ ವಿಚಾರಣೆಗಳು ಮುಂದುವರೆಯುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಾಟೆ ಕಾರಣ ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.

    Published by:Annappa Achari
    First published: