Viral Video: ಮದುವೆಗೆ ಬಂದ ಅತಿಥಿ ಮದುಮಗಳಿಗೇ ಮುತ್ತು ಕೊಡೋದಾ? ಏನಾಗಿದೆ ಈ ಯುವಕನಿಗೆ? ಗಂಡನ ಕತೆ ಏನಾಗ್ಬೇಡ...

Viral Video: ಮದುಮಗಳಿಗೆ ಒಂದು ಕ್ಷಣ ಅಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗಿಲ್ಲ. ಪಕ್ಕದಲ್ಲಿದ ವರನ ಪರಿಸ್ಥಿತಿ ಹೇಳಿ.. ಅಲ್ಲಿ ಇದ್ದವರೆಲ್ಲಾ ಏನಾಗ್ತಿದೆ, ಏನು ಮಾಡಬೇಕು ಅಂತ ಯೋಚಿಸುವಷ್ಟರಲ್ಲಿ ಈ ಯುವಕ ವಧುವಿನ ಮೇಲೆ ಮುತ್ತಿನ ಮಳೆಗರೆದಿದ್ದ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Viral Video: ಮದುವೆಗೆ ಬಂದವರು ಏನು ಮಾಡ್ಬೇಕು ಹೇಳಿ? ಶಿಸ್ತಾಗಿ ಡ್ರೆಸ್ ಮಾಡ್ಕೊಂಡು ಮದುವೆ ಮನೆಗೆ ಹೋಗಬೇಕು, ಮದುಮಕ್ಕಳನ್ನು ಹಾರೈಸಬೇಕು, ಅಲ್ಲಿರುವ ಬಂಧು ಬಳಗ ಗೆಳೆಯರ ಜೊತೆ ಹರಟಿ ಒಂದಷ್ಟು ಒಳ್ಳೆ ಸಮಯ ಕಳೆಯಬೇಕು, ಭರ್ಜರಿ ಊಟ ಮಾಡಿ ತಾಂಬೂಲ ಪಡೆದು ಮರಳಬೇಕು. ಇದಿಷ್ಟೇ ಆದ್ರೆ ಯಾರಿಗೂ ಏನೂ ಸಮಸ್ಯೆ ಇಲ್ಲ, ಎಲ್ಲವೂ ಸರಾಗವಾಗುತ್ತದೆ. ಅದು ಬಿಟ್ಟು ಮತ್ತೇನೋ ಚೇಷ್ಟೆ ಮಾಡೋಕೆ ಹೋದ್ರೆ ಏನಾಗುತ್ತೆ ? ವಿಡಿಯೋ ವೈರಲ್ ಆಗುತ್ತೆ ಅಷ್ಟೇ..ಈಗ ಆಗಿರೋದು ಅದೇ.. ಇದು ಎಲ್ಲಿಯ ಮದುವೆಮನೆ ಗೊತ್ತಿಲ್ಲ. ಬಹುಶಃ ಉತ್ತರ ಭಾರತದ್ದು ಇರಬೇಕು ಎನ್ನಲಾಗುತ್ತಿದೆ. ಆದ್ರೆ ಮದುವೆಯ ಈ ವಿಡಿಯೋ ಮಾತ್ರ ಭಾರೀ ಸುದ್ದಿಯಲ್ಲಿದೆ.

ಅಲ್ಲಿ ಆಗಿದ್ದಿಷ್ಟು. ಮದುವೆ ಶಾಸ್ತ್ರಗಳು ಮುಗಿದ ನಂತರ ಮದುಮಕ್ಕಳು ವೇದಿಕೆ ಮೇಲೆ ಕುಳಿತಿದ್ದಾರೆ. ಒಬ್ಬೊಬ್ಬರಾಗಿ ಬಂಧು ಬಳಗ ಗೆಳೆಯರು ಎಲ್ಲರೂ ವೇದಿಕೆಗೆ ಬಂದು ಹಾರೈಸಿ ಹೋಗುತ್ತಿದ್ದಾರೆ. ಆಗ ಬಂದನಪ್ಪ ಆತ. ಬಹುಶಃ ದೂರದ ನೆಂಟನಿರಬೇಕು. ಮದುಮಕ್ಕಳ ನಡುವೆ ನಿಂತು ಫೋಟೋಗೆ ಪೋಸ್ ಕೊಟ್ಟ. ಅರೆಕ್ಷಣದಲ್ಲಿ ಅದೇನಾಯ್ತೋ ಸೀದಾ ಮದುಮಗಳನ್ನು ಚುಂಬಿಸೋಕೆ ಶುರು ಮಾಡಿಬಿಡೋದಾ?


ಮದುಮಗಳಿಗೆ ಒಂದು ಕ್ಷಣ ಅಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗಿಲ್ಲ. ಪಕ್ಕದಲ್ಲಿದ ವರನ ಪರಿಸ್ಥಿತಿ ಹೇಳಿ.. ಅಲ್ಲಿ ಇದ್ದವರೆಲ್ಲಾ ಏನಾಗ್ತಿದೆ, ಏನು ಮಾಡಬೇಕು ಅಂತ ಯೋಚಿಸುವಷ್ಟರಲ್ಲಿ ಈ ಯುವಕ ವಧುವಿನ ಮೇಲೆ ಮುತ್ತಿನ ಮಳೆಗರೆದಿದ್ದ.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಇದು ಬೆತ್ತಲೆ ಕಾಡು, ಮಹಿಳೆಯರಿಗೆ ಮಾತ್ರ ಪ್ರವೇಶ.. ಅಪ್ಪಿತಪ್ಪಿ ಪುರುಷರು ಪ್ರವೇಶಿಸಿದರೆ ಕತೆ ಅಷ್ಟೇ!

ಮದುವೆ ಸೀಸನ್ ಶುರುವಾಗಿರೋದ್ರಿಂದ ಇಂಥಾ ಮದುವೆಮನೆ ಯಡವಟ್ಟುಗಳ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಇತ್ತೀಚೆಗಷ್ಟೇ ವಧುವಿನ ತಂಗಿ ತನ್ನ ಭಾವನಿಗೆ ಅಂದ್ರೆ ಮದುಮಗನಿಗೆ ವೇದಿಕೆಯ ಮೇಲೇ ಮುತ್ತಿನ ಸುರಿಮಳೆ ಸುರಿಸಿದ್ದಳು, ಅದು ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಇಂಥಾ ಸಂದರ್ಭಗಳಲ್ಲಿ ನಂತರ ಏನಾಗುತ್ತದೆ ಎನ್ನುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಈಗಿನ ಪ್ರಕರಣವನ್ನೇ ನೋಡುವುದಾದರೆ ಆ ಯುವಕನನ್ನು ಮದುಮಗಳ ಕಡೆಯವರೋ ಅಥವಾ ಹುಡುಗನ ಮನೆಯವರೋ ಏನು ಮಾಡಿದ್ರು? ಆತ ಯಾರು? ಯಾಕೆ ಹಾಗೆ ಮಾಡಿದ? ಅವನೇನಾದರೂ ಹಳೇ ಪ್ರೇಮಿಯಾ ಎನ್ನುವ ಯಾವ ವಿವರಗಳೂ ಲಭ್ಯವಿಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: