Wedding Dance: ವಧುವಿನ ಹೊಸ ಡ್ಯಾನ್ಸ್ ಸ್ಟೆಪ್ ವಿಡಿಯೋ ವೈರಲ್- ಆವಾರ್ಡ್ ಕೊಡಿ ಎಂದು ಕಿಚಾಯಿಸಿದ ನೆಟ್ಟಿಗರು

Viral Video: ಡಾನ್ಸ್‌, ಮ್ಯೂಸಿಕ್ ಇವೆಲ್ಲ ಇತ್ತೀಚಿನ ಮದುವೆಯ ಒಂದು ಭಾಗವಾಗಿದೆ. ವಧುವರರು ಒಬ್ಬರನೊಬ್ಬರು ಹಿಡಿದು ಡ್ಯಾನ್ಸ್ ಮಾಡುತ್ತಾರೆ. ಹಾಗೆಯೆ ಈ ವಿಡಿಯೋದಲ್ಲಿ ಜೋಡಿಯೊಂದು ರಸ್ತೆಯಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿ ಸಂತೋಷಪಟ್ಟಿದ್ದಾರೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ಸಾಮಾಜಿಕ ಜಾಲಾತಾಣ(Social Media)ದಲ್ಲಿ ಯಾವುದೂ ಸಿಗುವುದಿಲ್ಲ ಎಂಬುದಿಲ್ಲ. ಪ್ರತಿಯೊಂದು ಸಿಗುತ್ತದೆ. ಸಣ್ಣ ಸಣ್ಣ ವಿಚಾರಗಳು ವೈರಲ್ ಆಗುತ್ತದೆ. ಕೆಲವೊಂದು ವೈರಲ್ ವಿಡಿಯೋಗಳು (Viral Video)ಬೇಸರದಲ್ಲಿದ್ದಾಗ ನಗು ಮೂಡಿಸುತ್ತದೆ. ಇನ್ನೂ ಕೆಲವು ವಿಡಿಯೋಗಳನ್ನು ಎಚ್ಚರಿಕೆ ಗಂಟೆ ಎಂದು ಪರಿಗಣಿಸಬಹುದು.  ಇನ್ನು ಮದುವೆ ಮನೆ ಅಂದ್ರೆ ಹಲವಾರು ಘಟನೆಗಳು ನಡೆಯುತ್ತವೆ. ಜಗಳ, ಹಾಡು ಹೀಗೆ ಎಲ್ಲವೂ ಮಿಶ್ರಿತವಾಗಿರುತ್ತದೆ. ಇನ್ನು ವಧು ವರರಿಗೆ ಅದು ಸುಂದರ ಘಳಿಗೆ.    ಮದುವೆ ಅನ್ನೋದು ಪ್ರತಿಯೊಬ್ಬರ  ಬದುಕಿನ ಅಪೂರ್ವ ಕ್ಷಣ. ಇಂತಹ ಕ್ಷಣವನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಬೇಕು ಎನ್ನುವುದು ಎಲ್ಲರ ಬಯಕೆ. ಇದಕ್ಕೆ ವಾರಗಳ ಮೊದಲು ತಯಾರಿ ಮಾಡುತ್ತಾರೆ,. ಮದುವೆಯಲ್ಲಿ ವಧುವರರ ಡ್ಯಾನ್ಸ್(Wedding Dance) ಮಾಮೂಲಿ.

ನೀವು ಇತ್ತೀಚಿನ ಒಂದು ವೈರಲ್ ವಿಡಿಯೋ ನೋಡಿರಬಹುದು ಯುವತಿಯೊಬ್ಬಳು ತನ್ನಿಷ್ಟದ ಹಾಡನ್ನು ಹಾಕಿಲ್ಲ ಎಂದು ಮಂಟಪವನ್ನು ಪ್ರವೇಶಿಸಲು ನಿರಾಕರಿಸಿದ್ದಳು, ಇನ್ನೊಬ್ಬ ವಧು ತನ್ನ ಅದ್ಭುತ ಡ್ಯಾನ್ಸ್ ಮೂಲಕ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಳು. ಹಾಗೆಯೇ ಮದುವೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದ್ದು , ಎಲ್ಲರಿ ಮೆಚ್ಚುಗೆಗೆ ಪಾತ್ರವಾಗಿದೆ.  ಮದುವೆಯ ಕೆಲ ದೃಶ್ಯಗಳಂತು ಈಗೀಗ ಬಹುಬೇಗ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತದೆ. ಈ ವಿಡಿಯೋ  ವಧು ವರರು ಖುಷಿಯಿಂದ ಕುಣಿಯುವ ದೃಶ್ಯ.

ಇದನ್ನೂ ಓದಿ: ಬಿಕಿನಿ ತೊಟ್ಟು ಫ್ಲೈಟ್ ಹತ್ತೋಕೆ ಬಂದ ಮಹಿಳೆ, ಬಟ್ಟೆ ಕಡಿಮೆಯಾದ್ರೂ ಮಾಸ್ಕ್ ತಪ್ಪದೇ ಧರಿಸಿದ್ಲು!

ಡಾನ್ಸ್‌, ಮ್ಯೂಸಿಕ್ ಇವೆಲ್ಲ ಇತ್ತೀಚಿನ ಮದುವೆಯ ಒಂದು ಭಾಗವಾಗಿದೆ. ವಧುವರರು ಒಬ್ಬರನೊಬ್ಬರು ಹಿಡಿದು ಡ್ಯಾನ್ಸ್ ಮಾಡುತ್ತಾರೆ. ಹಾಗೆಯೆ ಈ ವಿಡಿಯೋದಲ್ಲಿ ಜೋಡಿಯೊಂದು ರಸ್ತೆಯಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿ ಸಂತೋಷಪಟ್ಟಿದ್ದಾರೆ. ಆದರೆ ಈ ವಿಡಿಯೋ ವಿಶೇಷ ಎಂದರೆ ಆ ಡ್ಯಾನ್ಸ್ ಸ್ಟೆಪ್.  ಸುಮಾರು 50 ಸೆಕೆಂಡ್​ಗಳಷ್ಟಿರುವ ಈ ವಿಡಿಯೋದಲ್ಲಿ ಮೊದಲು ವರ ಡ್ಯಾನ್ಸ್  ಮಾಡುತ್ತಾನೆ ನಂತರ ವಧು ಕೂಡ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ.  ವರನ ಸ್ಟೆಪ್ ಒಂದು ರೀತಿಯಲ್ಲಿ ವಿಭಿನ್ನವಾಗಿದ್ದರೆ, ಇನ್ನೊಂದು ಕಡೆ ವಧುವಿನ ಸ್ಟೆಪ್ ಎಲ್ಲರನ್ನು ಬೆರಗುಗೊಳಿಸಿದೆ.




ನಿರಂಜನ್ ಎನ್ನುವವರು ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಹಲವಾರು ಜನರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಈಗಾಗಲೇ ಲಕ್ಷಗಟ್ಟಲೆ ಲೈಕ್ ಪಡೆದಿದ್ದು ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ.  ಇನ್ನು ವಿಡಿಯೋ ಶೇರ್ ಮಾಡಿರುವ ನಿರಂಜನ್ , ವಧುವಿನ ಡ್ಯಾನ್ಸ್ ಮಿಸ್ ಮಾಡದೆ ನೋಡಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಇನ್ಸ್ಟಾಗ್ರಾಂ ಬಳಕೆದಾರರು ಇದು ಯಾವ ಸ್ಟೆಪ್ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಈ ಡ್ಯಾನ್ಸ್​ಗೆ ಆವಾರ್ಡ್ ಕೊಡಬೇಕು ಎಂದು ತಮಾಷೆ ಮಾಡಿದ್ದಾರೆ.  ಇಬ್ಬರಿಬ್ಬರ ಖುಷಿಯ ನೃತ್ಯವನ್ನು ಸಂಬಂಧಿಕರು ಕೂಡಾ  ಬಹಳ ಸಂತೋಷದಿಂದ ನೋಡಿ ಎಂಜಾಯ್ ಮಾಡುತ್ತಿರುವುದು ಕೂಡಾ ಈ ದೃಶ್ಯದಲ್ಲಿ ನೋಡಬಹುದು. ಸಂಬಂಧಿಕರಿಗೂ ಈ ನೃತ್ಯ ಖುಷಿಕೊಟ್ಟಿತ್ತು. ಹೀಗಾಗಿ, ಅಲ್ಲಿದ್ದವರು ಕೂಡ ನವಜೋಡಿಯನ್ನು ಹುರಿದುಂಬಿಸುತ್ತಿದ್ದರು. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದ್ದು, ಎಲ್ಲರ ಮನಸೋರೆಗೊಂಡಿದೆ.
Published by:Sandhya M
First published: