• Home
  • »
  • News
  • »
  • trend
  • »
  • Wedding Cake: ದುಬಾರಿ ಬೆಲೆಗೆ ಹರಾಜಾಯ್ತು 41 ವರ್ಷ ಹಳೆಯ ಕೇಕ್, ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

Wedding Cake: ದುಬಾರಿ ಬೆಲೆಗೆ ಹರಾಜಾಯ್ತು 41 ವರ್ಷ ಹಳೆಯ ಕೇಕ್, ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

ಪ್ರಿನ್ಸೆಸ್ ಡಯಾನಾ ಹಾಗೂ ಪ್ರಿನ್ಸ್ ಚಾರ್ಲ್ಸ್ ವಿವಾಹದ ಕೇಕ್

ಪ್ರಿನ್ಸೆಸ್ ಡಯಾನಾ ಹಾಗೂ ಪ್ರಿನ್ಸ್ ಚಾರ್ಲ್ಸ್ ವಿವಾಹದ ಕೇಕ್

Wedding Cake: 41 ವರ್ಷ ಹಳೆಯ ರಾಜಮನೆತನದ ವಿವಾಹದ ಕೇಕ್ ತುಂಡನ್ನು ನಿಗೆಲ್ ಸಂರಕ್ಷಿಸಿರುವುದು ಕೂತೂಹಲಕರ ಸಂಗತಿ.

  • Share this:

ಪ್ರಿನ್ಸೆಸ್ ಡಯಾನಾ ಹಾಗೂ ಪ್ರಿನ್ಸ್ ಚಾರ್ಲ್ಸ್ ವಿವಾಹದ ಕೇಕ್‌ನ (Wedding Cake) ತುಂಡಿನ ಮೇಲೆ ಹರಾಜು ನಡೆದಿದೆ. 1981 ರಲ್ಲಿ ನಡೆದ ರಾಜಮನೆತನದ (Royal Family)  ವಿವಾಹಕ್ಕೆ 3,000 ಕ್ಕೂ ಹೆಚ್ಚಿನ ಅತಿಥಿಗಳು (Gest) ಆಗಮಿಸಿದ್ದರು ಹಾಗೂ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ನಿಗೆಲ್ ರಿಕೆಟ್ಸ್ ಎಂಬ ಅತಿಥಿ ಕಳೆದ ವರ್ಷ ನಿಧನರಾದರು (Died) ಎಂಬುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.


ಡಯಾನಾ-ಚಾರ್ಲ್ಸ್ ವಿವಾಹದ ಕೇಕ್ ತುಂಡು ಇದೀಗ ಹರಾಜಿಗೆ


41 ವರ್ಷ ಹಳೆಯ ರಾಜಮನೆತನದ ವಿವಾಹದ ಕೇಕ್ ತುಂಡನ್ನು ನಿಗೆಲ್ ಸಂರಕ್ಷಿಸಿರುವುದು ಸುದ್ದಿಮಾಧ್ಯಮ ಗಮನ ಸೆಳೆದಿತ್ತು. ಇದೀಗ ಕೇಕ್ ಅನ್ನು ಇಂಗ್ಲೆಂಡ್‌ನಲ್ಲಿ ಡೋರ್ ಮತ್ತು ರೀಸ್ ಹರಾಜುಗಳ ಮೂಲಕ ಹರಾಜು ಹಾಕಲಾಗುತ್ತದೆ ಎಂಬುದು ವರದಿಯಾಗಿದೆ. ಈ ಕೇಕ್‌ನ ತುಂಡಿನ ಬೆಲೆ GBP 300 ರ ಹಿಂದಿನ ಮಾರಾಟ ಅಂದಾಜು ಬೆಲೆಯನ್ನು ಹೊಂದಿದ್ದು, ಇದು ರೂ 27,000 ಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ ಎಂಬುದು ತಿಳಿದು ಬಂದಿದೆ.


ಕೇಕ್ ಅನ್ನು ಅದರ ಮೂಲ ಬಾಕ್ಸ್‌ನಲ್ಲಿಯೇ ಪ್ಯಾಕ್ ಮಾಡಲಾಗಿದ್ದು ಇನ್ನೂ ಹೆಚ್ಚಿನ ಬೆಲೆಗೆ ಕೇಕ್ ತುಂಡನ್ನು ಮಾರಾಟ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ತಿಳಿಸಿರುವಂತೆ, ವಿವಾಹ ಸಮಾರಂಭಕ್ಕಾಗಿ ಸುಮಾರು 23 ಅಧಿಕೃತ ಕೇಕ್‌ಗಳನ್ನು ತಯಾರಿಸಲಾಗಿದ್ದರೂ ಕೇಕ್ ತುಂಡನ್ನು ಗಮನಿಸುವಾಗ ಐದು ಅಡಿ ಎತ್ತರದ ಹಣ್ಣಿನ ಕೇಕ್‌ನ ಮಧ್ಯಭಾಗದ ತುಂಡು ಇದಾಗಿದೆ ಎಂದು ತೋರುತ್ತದೆ ಎಂದು ತಿಳಿಸಿದೆ.


ಭಾರೀ ಬೆಲೆಗೆ ಹರಾಜಾಗಿದ್ದ ಕೇಕ್ ತುಂಡು


ಇದೇ ಕೇಕ್‌ನ ತುಂಡೊಂದನ್ನು 2014 ರಲ್ಲಿ GBP 1,375 ಕ್ಕೆ ಹರಾಜು ಮಾಡಲಾಗಿತ್ತು ಇದು 1,27,000 ಪ್ರಸ್ತುತ ದರಕ್ಕಿಂತಲೂ ಹೆಚ್ಚಿನ ಮೌಲ್ಯಕ್ಕೆ ಸಮನಾದುದು ಎಂಬುದು ವರದಿಯಾಗಿದೆ. ರಿಕೆಟ್ಸ್ ಹಾಗೂ ರಾಜಮನೆತನದ ಇತರ ಸದಸ್ಯರು ಚಾರ್ಲ್ಸ್ ಹಾಗೂ ಡಯಾನಾರ ವಿವಾಹ ಉಡುಗೊರೆಯಾಗಿ ಬರೆಯುವ ಮೇಜನ್ನು ಖರೀದಿಸಲು ಜೊತೆಯಾಗಿ ಹಣ ಸಂಗ್ರಹಿಸಿದ್ದರು ಹಾಗೂ ಈ ಪ್ರಸ್ತಾವನೆ ರಾಜಕುಮಾರ ಚಾರ್ಲ್ಸ್‌ಗೆ ಖುಷಿನೀಡಿತ್ತು ಎಂದು ಕೂಡ ಸುದ್ದಿಪತ್ರಿಕೆ ವರದಿ ಮಾಡಿದೆ.


ಡೋರ್ ಹಾಗೂ ರೀಸ್ ವೆಬ್‌ಸೈಟ್ ಚಾರ್ಲ್ಸ್ ದಂಪತಿಗಳ ಕೈಬರಹದ ಧನ್ಯವಾದ ಸಮರ್ಪಿಸುವ ಟಿಪ್ಪಣಿಯನ್ನು ಕೂಡ ಒಳಗೊಂಡಿದೆ. ಡಯಾನಾ ಹಾಗೂ ನಾನು (ಚಾರ್ಲ್ಸ್) ನಮಗೆ ತುಂಬಾ ಉಪಯುಕ್ತವಾಗಿರುವ ಉಡುಗೊರೆಯನ್ನು ನೀಡಿದ್ದು ಇದರ ಹುಡುಕಾಟಕ್ಕಾಗಿ ತುಂಬಾ ಶ್ರಮವಹಿಸಿದ್ದೀರಿ ಎಂಬುದಂತೂ ನಿಜ. ನಾವಿಬ್ಬರೂ ನಿಮಗೆ ಆಶ್ವಾಸನೆ ನೀಡುವುದೇನೆಂದರೆ ಇದು ಶಿಥಿಲಗೊಂಡರೂ ನಾವು ಅದನ್ನು ಪಳೆಯುಳಿಕೆಯ ನಿಧಿಯಾಗಿ ಸಂಗ್ರಹಿಸಿಡುತ್ತೇವೆ ಎಂದು ಟಿಪ್ಪಣಿ ಉಲ್ಲೇಖಿಸಿದೆ.


ಇದನ್ನೂ ಓದಿ: ದೀಪಾವಳಿಗೆ ಹಿಂಗೆಲ್ಲಾ ಮನೆ ಕ್ಲೀನ್‌ ಮಾಡ್ತಾರಾ! ಸ್ವಲ್ಪ ಮಿಸ್‌ ಆದ್ರೂ ಕಥೆ ಅಷ್ಟೇ


ಶತಮಾನದ ವಿವಾಹ


ರಾಜಕುಮಾರಿ ಡಯಾನಾ ಹಾಗೂ ಕಿಂಗ್ ಚಾರ್ಲ್ಸ್ III ಜುಲೈ 29, 1981 ರಂದು ವಿವಾಹವಾದರು. ಈ ವಿವಾಹ ಸಮಾರಂಭವನ್ನು ಲಕ್ಷಾಂತರ ಜನರು ಟಿವಿಯಲ್ಲಿ ವೀಕ್ಷಿಸಿ ಕಣ್ತುಂಬಿಕೊಂಡರು. ಈ ವಿವಾಹವನ್ನು ಶತಮಾನದ ವಿವಾಹ ಎಂದು ಕೂಡ ಬಣ್ಣಿಸಲಾಯಿತು. ಅದಾಗ್ಯೂ ಡಯಾನಾ ಹಾಗೂ ಚಾರ್ಲ್ಸ್ ದಾಂಪತ್ಯದಲ್ಲಿ ಅನೇಕ ಸಮಸ್ಯೆಗಳಿದ್ದವು ಅಂತೆಯೇ ಪರಸ್ಪರ ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯುವ ಮೊದಲೇ ನಾಲ್ಕು ವರ್ಷಗಳ ಮುನ್ನ 1992 ರಲ್ಲಿ ದಂಪತಿಗಳು ಬೇರ್ಪಟ್ಟರು.


ಡಯಾನಾ ಹಾಗೂ ಚಾರ್ಲ್ಸ್ ಅವರ ವಿವಾಹ ಮತ್ತು ಅನುರಾಗದ ಸನ್ನಿವೇಶಗಳು ರಾಜಮನೆತನದ ಇತರ ಜೋಡಿಗಳಂತೆಯೇ ಆಕರ್ಷಕವಾಗಿದ್ದರೂ ಇವರ ವಿವಾಹ ಕೊನೆಯವರೆಗೆ ಉಳಿಯಲಿಲ್ಲ.


ಇದನ್ನೂ ಓದಿ: ದೀಪಾವಳಿಗೆ ಚಿನ್ನವೇ ಖರೀದಿಸಬೇಕು ಅಂತೇನಿಲ್ಲ, ಕಡಿಮೆ ಬೆಲೆಗೆ ಬೆಳ್ಳಿಯನ್ನೂ ಖರೀದಿಸಬಹುದು!


ಪ್ರಿನ್ಸ್ ಚಾರ್ಲ್ಸ್ ಪ್ರಿನ್ಸೆನ್ ಡಯಾನಾ ಅವರನ್ನು ಡಯಾನಾರ ಕುಟುಂಬದ ಮನೆಯಲ್ಲಿ ಭೇಟಿಯಾಗಿದ್ದರು. ಆ ಸಮಯದಲ್ಲಿ ಡಯಾನಾ 16 ರ ಸುಂದರಿಯಾಗಿದ್ದರೆ ಕಿಂಗ್ ಚಾರ್ಲ್ಸ್ 28 ರ ಯುವಕನಾಗಿದ್ದರು.


ತಮ್ಮ ನಿಶ್ಚಿತಾರ್ಥದ ನಾಲ್ಕು ವರ್ಷಗಳ ತರುವಾಯ ನೀಡಿದ ಸಂದರ್ಶನವೊಂದರಲ್ಲಿ ಕಿಂಗ್ ಚಾರ್ಲ್ಸ್ ಡಯಾನಾರ ಸೌಂದರ್ಯವನ್ನು ಹೊಗಳಿದ್ದಾರೆ. ಡಯಾನಾ 16 ರ ಹರೆಯದಲ್ಲೂ ತುಂಬಾ ಚೆಲುವೆಯಾಗಿದ್ದರು ಹಾಗೂ ಮನರಂಜನೀಯ ವ್ಯಕ್ತಿತ್ವ ಹೊಂದಿದ್ದರು ಮತ್ತು ಹಾಸ್ಯ ಪ್ರವೃತ್ತಿಯವರಾಗಿದ್ದರು ಎಂದು ಬಣ್ಣಿಸಿದ್ದಾರೆ.

First published: