HOME » NEWS » Trend » WE CAN MAKE DHABA STYLE ROTI AT HOME USING COOKER KVD

Smart Cooking: ಕುಕ್ಕರ್ ಬಳಸಿ ಡಾಬಾ ಶೈಲಿಯ ರೋಟಿಯನ್ನು ಮನೆಯಲ್ಲೇ ಮಾಡಬಹುದು.. ವಿಧಾನ ಇಲ್ಲಿದೆ!

ಕುಕ್ಕರ್ ಒಳಗೆ 2ರಿಂದ 3 ರೋಟಿಗಳನ್ನು ಒಮ್ಮೆ ಅಂಟಿಸಿ ಬೇಯಿಸಬಹುದು. ಉರಿ ಬೇಕಾದ ಕಡೆ ಕುಕ್ಕರ್​ನ ತಿರುಗಿಸಬಹುದು.

Kavya V | news18-kannada
Updated:June 14, 2021, 4:05 PM IST
Smart Cooking: ಕುಕ್ಕರ್ ಬಳಸಿ ಡಾಬಾ ಶೈಲಿಯ ರೋಟಿಯನ್ನು ಮನೆಯಲ್ಲೇ ಮಾಡಬಹುದು.. ವಿಧಾನ ಇಲ್ಲಿದೆ!
ಕುಕ್ಕರ್​ನಲ್ಲಿ ರೋಟಿ ಮಾಡುವ ವಿಧಾನ
  • Share this:
ಕೊರೊನಾ ಲಾಕ್​ಡೌನ್​ನಿಂದ ಮನೆಯಲ್ಲೇ ಜನರೆಲ್ಲಾ ಬಂಧಿಯಾಗಿದ್ದಾರೆ. ಹೊರಗಿನ ಊಟ-ತಿಂಡಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ವಿಧಾನಗತಿಯಲ್ಲಿ ಅನ್​ಲಾಕ್​​​ ಆಗುತ್ತಿದೆಯಾದರೂ ಸೋಂಕಿನ ಭಯದಲ್ಲಿ ಆಚೆ ಊಟ ಮಾಡಲು ಹೆದರಿಕೆಯಾಗುತ್ತಿದೆ. ಮನೆಯಲ್ಲೇ ರೆಸ್ಟೋರೆಂಟ್​​ ಶೈಲಿಯಲ್ಲಿ ಅಡುಗೆ ಮಾಡೋದೇ ಜಾಣತನ. ಆದರೆ ಕೆಲವೊಂದು ಅಡುಗೆಗಳು ಮನೆಯಲ್ಲಿ ಮಾಡಿದರೆ ಹೊರಗಿನ ಶೈಲಿಯಲ್ಲಿ ಇರೋಲ್ಲ, ಹೋಟೆಲ್​​ ಊಟದಷ್ಟು ರುಚಿನೂ ಬರಲ್ಲ. ಅದರಲ್ಲೂ ಡಾಬಾಗಳಲ್ಲಿ ಮಾಡುವ ನಾರ್ತ್​​ ಇಂಡಿಯನ್​​ ರೋಟಿ, ರೆಸ್ಟೋರೆಂಟ್​ಗಳಲ್ಲಿ ಸಿಗುವ ರೋಟಿಯ ರುಚಿ ಮನೆಯಲ್ಲೇ ಮಾಡಿದರೆ ಸಿಗಲ್ಲ. ಅದಕ್ಕಾಗಿ ಒಂದು ಸ್ಮಾರ್ಟ್​​ ವಿಧಾನ ಅನುಸರಿಸಿ ನೋಡಿ..

ಮನೆಯಲ್ಲೇ ಕುಕ್ಕರ್​ ಬಳಸಿ ಡಾಬಾ ಸ್ಟೈಲ್​​ ರೋಟಿಯನ್ನು ಸುಲಭವಾಗಿ ಮಾಡಬಹುದು. ಸದ್ಯ ಈ ವಿಧಾನ ಸಖತ್​ ವೈರಲ್​ ಸಹ ಆಗ್ತಿದೆ. ಡಾಬಾಗಳಲ್ಲಿ ರೋಟಿ ಮಾಡಲೆಂದೇ ಪ್ರತ್ಯೇಕವಾದ ಹೊಲೆ ಇರುತ್ತದೆ. ಕೆಳಗೆ ಬೆಂಕಿ ಅಥವಾ ಕೆಂಡವಿದ್ದರೆ ಕಣಜದಾಕಾರ ಇರುವ ಹೊಲೆಗೆ ರೋಟಿಗಳನ್ನು ಅಂಟಿಸಿ ಬೇಯಿಸಲಾಗುತ್ತವೆ. ಹವನ್​​ ಮಾದರಿಯಲ್ಲಿ ರೋಟಿ ಸುಟ್ಟು ಒಳ್ಳೆಯ ರುಚಿ ಸಿಗುತ್ತೆ. ಇದೇ ಮಾದರಿಯಲ್ಲಿ ಗ್ಯಾಸ್​​ ಸ್ಟವ್​, ಕುಕ್ಕರ್​ ಮೂಲಕವೂ ಮಾಡಬಹುದು.

ಕುಕ್ಕರನ್ನು ತಳಭಾಗದ ಬದಲು ಪಕ್ಕಕ್ಕೆ ಮುಖ ಬರುವಂತೆ ಸ್ಟವ್​ ಮೇಲೆ ಇಡಬೇಕು. ಡಾಬಾದಲ್ಲಿ ರೋಟಿಗಳನ್ನು ಅಂಟಿಸುವಂತೆ ಕುಕ್ಕರ್​ ಹೊಳಗೆ ರೋಟಿಗಳನ್ನು ಅಂಟಿಸಬೇಕು. ಕುಕ್ಕರ್​ ಪಾತ್ರೆ ದಪ್ಪ ಇರುವುದರಿಂದ ಸರಿಯಾದ ಪ್ರಮಾಣದ ಶಾಖ ಸಿಗುತ್ತದೆ. ಇದರಿಂದ ರೋಟಿ ಸುಟ್ಟಂತೆ ಬೇಯುತ್ತದೆ. ಕುಕ್ಕರ್ ಒಳಗೆ 2ರಿಂದ 3 ರೋಟಿಗಳನ್ನು ಒಮ್ಮೆ ಅಂಟಿಸಿ ಬೇಯಿಸಬಹುದು. ಉರಿ ಬೇಕಾದ ಕಡೆ ಕುಕ್ಕರ್​ನ ತಿರುಗಿಸಬಹುದು.






ಹೀಗೆ ಸ್ಮಾರ್ಟ್​​ ಆಗಿ ಮನೆಯಲ್ಲೇ ಕುಕ್ಕರ್​ ಮೂಲಕ ಡಾಬಾ ಮಾದರಿಯ ರೋಟಿ ಮಾಡಿಕೊಳ್ಳಬಹುದು. ತರಹೇವಾರಿ ರೋಟಿಗಳ ಜೊತೆ ಬಿಸಿಬಿಸಿ ನಾತ್​ ಇಂಡಿಯನ್​ ಕರಿ ತಿನ್ನುತ್ತಿದ್ದರೆ ಈ ಚಳಿಯಾದ ವಾತಾವರಣದಲ್ಲಿ ಅದರ ಮಜಾನೇ ಬೇರೆ. ಇನ್ನೇಕೆ ತಡ ಈ ಕುಕ್ಕರ್​ ಮಾದರಿಯ ರೋಟಿಯನ್ನು ನಿಮ್ಮ ಮನೆಯಲ್ಲೂ ಮಾಡಿ.

ಇದನ್ನೂ ಓದಿ: Explained: ಯಾರು 2ನೇ ಡೋಸ್ ಪಡೆಯಬಾರದು? ವ್ಯಾಕ್ಸಿನ್ ಕುರಿತ ಎಲ್ಲಾ ಪ್ರಶ್ನೆಗಳಿಗೂ ವೈದ್ಯರ ಉತ್ತರ ಇಲ್ಲಿದೆ

ಇನ್ನು ದೇಶದಲ್ಲಿ ಕೊರೊನಾ 2ನೇ ಅಲೆ ತಗ್ಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 70,421 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 2,95,10,410ಕ್ಕೆ ಏರಿಕೆಯಾಗಿದೆ. ಒಂದೇ ದಿನ ಸೋಂಕಿನಿಂದ 3, 921 ಜನ ಮೃತಪಟ್ಟಿದ್ದಾರೆ. ಈವರೆಗೆ ಕೊರೊನಾದಿಂದ ಸತ್ತವರು 3,74,305ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ ಸೋಂಕಿನಿಂದ 1,19,501 ಜನ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 2,81,62,947ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಸದ್ಯ 9,73,158 ಆಕ್ಟೀವ್​ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 14, 2021, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories