Viral Video: ಬರೀ ಮನುಷ್ಯರಷ್ಟೇ ಅಲ್ಲ ಮಂಗಗಳಿಗೂ ಸೋಶಿಯಲ್ ಮೀಡಿಯಾ ಕ್ರೇಜ್, ಇದೆಂಥಾ ಕಾಲ ಬಂದ್ಬಿಡ್ತು!

ಮಾನವರು ಮತ್ತು ಕೋತಿಗಳ ನಡುವೆ ಅನೇಕ ಹೋಲಿಕೆಗಳಿವೆ ಅಂತ ಹೇಳುವುದನ್ನು ನಾವು ಅನೇಕ ಸಾರಿ ಕೇಳಿರುತ್ತೇವೆ. ಇಂದಿನ ಜಗತ್ತಿನಲ್ಲಿ, ಮಾನವರು ಕ್ರಮೇಣ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿರುವಾಗ, ಕೋತಿಗಳು ಸಹ ಅದೇ ಪ್ರವೃತ್ತಿಗಳನ್ನು ಅನುಸರಿಸಲು ಪ್ರಯತ್ನಿಸುತ್ತಿವೆ ಎಂದು ಈ ವಿಡಿಯೋದಿಂದ ತಿಳಿದುಕೊಳ್ಳಬಹುದು. ಈ ವಿಡಿಯೋದಲ್ಲಿ ಮೂರು ಕೋತಿಗಳು ಒಟ್ಟಿಗೆ ಕುಳಿತುಕೊಂಡು ಮೊಬೈಲ್ ಫೋನ್ ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ತುಂಬಾನೇ ಕುತೂಹಲದಿಂದ ನೋಡುತ್ತಿವೆ ನೋಡಿ.

ಮೊಬೈಲ್ ನೋಡುತ್ತಿರುವ ಮಂಗಗಳು

ಮೊಬೈಲ್ ನೋಡುತ್ತಿರುವ ಮಂಗಗಳು

  • Share this:
ಈಗಂತೂ ಶಾಲೆಗೆ (School) ಹೋಗುವ ಚಿಕ್ಕಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲರೂ ಮೊಬೈಲ್ ಫೋನ್ ಅನ್ನು (Mobile Phone) ಬಳಸುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಕಾಲೇಜಿಗೆ ಹೋಗುವ ಹುಡುಗರು ಮತ್ತು ಹುಡುಗಿಯರಿಂದ ಹಿಡಿದು ವೃದ್ಧರವರೆಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಬಿಟ್ಟು ಬಿಡದೆ ಗಂಟೆಗಟ್ಟಲೆ ಮುಳುಗಿರುವುದನ್ನು ನಾವು ಈಗ ನೋಡುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳು ಜನರನ್ನು ಎಷ್ಟರ ಮಟ್ಟಿಗೆ ಹಿಡಿದಿಟ್ಟುಕೊಂಡಿವೆ ಎಂದರೆ ಪಕ್ಕದಲ್ಲಿ ಕೂತಿರುವ ಮನೆಯವರನ್ನು (Home) ಸಹ ನಾವು ಎಷ್ಟೋ ಬಾರಿ ಲೆಕ್ಕಿಸುವುದಿಲ್ಲ. ಎಷ್ಟೋ ಹೊಸ ಹೊಸ ವಿಚಾರಗಳು ಮತ್ತು ವಿಶ್ವಾದ್ಯಂತ ನಡೆಯುತ್ತಿರುವ ಅನೇಕ ಚಿತ್ರ-ವಿಚಿತ್ರ ಸಂಗತಿಗಳನ್ನು ಸಾಮಾಜಿಕ ಮಾಧ್ಯಮಗಳಿಂದ ನಾವು ತಿಳಿದುಕೊಳ್ಳಬಹುದು.

ಕೋತಿಗಳು ಒಟ್ಟಿಗೆ ಕುಳಿತುಕೊಂಡು ಮೊಬೈಲ್ ಫೋನ್ ನೋಡುವ ದೃಶ್ಯ 
ಮಾನವರು ಮತ್ತು ಕೋತಿಗಳ ನಡುವೆ ಅನೇಕ ಹೋಲಿಕೆಗಳಿವೆ ಅಂತ ಹೇಳುವುದನ್ನು ನಾವು ಅನೇಕ ಸಾರಿ ಕೇಳಿರುತ್ತೇವೆ. ಇಂದಿನ ಜಗತ್ತಿನಲ್ಲಿ, ಮಾನವರು ಕ್ರಮೇಣ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿರುವಾಗ, ಕೋತಿಗಳು ಸಹ ಅದೇ ಪ್ರವೃತ್ತಿಗಳನ್ನು ಅನುಸರಿಸಲು ಪ್ರಯತ್ನಿಸುತ್ತಿವೆ ಎಂದು ಈ ವಿಡಿಯೋದಿಂದ ತಿಳಿದುಕೊಳ್ಳಬಹುದು. ಈ ವಿಡಿಯೋದಲ್ಲಿ ಮೂರು ಕೋತಿಗಳು ಒಟ್ಟಿಗೆ ಕುಳಿತುಕೊಂಡು ಮೊಬೈಲ್ ಫೋನ್ ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ತುಂಬಾನೇ ಕುತೂಹಲದಿಂದ ನೋಡುತ್ತಿವೆ ನೋಡಿ.

ಇದನ್ನೂ ಓದಿ: Viral Video: ಒಂದು ಜೀವಿಯ ಪ್ರಾಣ ಉಳಿಸಲು ಎಷ್ಟೊಂದು ಜನ; ವಿಡಿಯೋ ನೋಡಿ ಭೇಷ್ ಎಂದ ನೆಟ್ಟಿಗರು

ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ ಕೋತಿಗಳ ವಿಡಿಯೋ
ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ, ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿಗಳು ಸ್ಮಾರ್ಟ್‌ಫೋನ್ ಪರದೆಯನ್ನು ನೋಡುವುದನ್ನು ಮತ್ತು ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಸ್ಕ್ರಾಲ್ ಮಾಡುವುದನ್ನು ತೋರಿಸುತ್ತದೆ. ಕಳೆದ ವರ್ಷ ಈ ವಿಡಿಯೋವನ್ನು ಹಂಚಿಕೊಳ್ಳಲಾಯಿತು, ಆದಾಗ್ಯೂ, ಇದು ಈಗ ಮತ್ತೆ ಕಾಣಿಸಿಕೊಂಡಿದೆ ನೋಡಿ. ಈ ಕ್ಲಿಪ್ 1,79,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು 4,100ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ವಿಡಿಯೋದಲ್ಲಿ ಇರುವುದೇನು 
ವಿಡಿಯೋದಲ್ಲಿ ನಾವು ಒಬ್ಬ ವ್ಯಕ್ತಿಯು ಫೋನ್ ಅನ್ನು ಕೋತಿಗಳ ಮುಂದೆ ಹಿಡಿದಿರುವುದನ್ನು ನೋಡಬಹುದು, ಆದರೆ ಎರಡು ಕೋತಿಗಳು ಅದನ್ನು ತುಂಬಾನೇ ಮಗ್ನವಾಗಿ ನೋಡುತ್ತಿರುವುದನ್ನು ನಾವಿಲ್ಲಿ ನೋಡಬಹುದು. ಹಾಗೆಯೇ ಈ ಎರಡು ಕೋತಿಗಳು ಫೋನ್ ನೋಡುತ್ತಿರುವಾಗ ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ಇನ್ನೊಂದು ಕೋತಿ ಸಹ ಓಡಿ ಬಂದು ಆ ಗುಂಪನ್ನು ಸೇರಿಕೊಳ್ಳುತ್ತದೆ.



ಕೆಲವು ಕ್ಷಣಗಳ ನಂತರ, ಆ ಕೋತಿಗಳಲ್ಲಿ ಒಂದು ಕೋತಿ ಆ ಮೊಬೈಲ್ ಫೋನ್ ಅನ್ನು ಹಿಡಿದು ಮೊಬೈಲ್ ಸ್ಕ್ರೀನ್ ಅನ್ನು ಆಸಕ್ತಿದಾಯಕ ರೀತಿಯಲ್ಲಿ ಸ್ಕ್ರಾಲ್ ಮಾಡಲು ಪ್ರಾರಂಭಿಸುತ್ತದೆ. ಮತ್ತೊಂದು ಸಣ್ಣ ಕೋತಿ ತನ್ನ ಗಮನವನ್ನು ಸೆಳೆಯಲು ಮತ್ತು ಗ್ಯಾಜೆಟ್ ನಿಂದ ಅದನ್ನು ಬೇರೆಡೆಗೆ ತಿರುಗಿಸಲು ವಯಸ್ಸಾದ ಕೋತಿಯನ್ನು ಸಹ ತನ್ನೆಡೆಗೆ ಎಳೆಯುವುದನ್ನು ಸಹ ಈ ವಿಡಿಯೋದಲ್ಲಿ ನಾವು ನೋಡಬಹುದು.

ವಿಡಿಯೋ ನೋಡಿ ವೀಕ್ಷಕರು ಹೇಳಿದ್ದು ಹೀಗೆ 
ಈ ವಿಡಿಯೋಗೆ "ಸಾಮಾಜಿಕ ಮಾಧ್ಯಮದ ಕ್ರೇಜ್" ಎಂದು ಸೂಕ್ತವಾಗಿ ಶೀರ್ಷಿಕೆ ನೀಡಲಾಗಿದೆ. ಇದು ಇಂಟರ್ನೆಟ್ ನಲ್ಲಿ ತುಂಬಾನೇ ಹರಿದಾಡುತ್ತಿದೆ. ಕೆಲವು ಬಳಕೆದಾರರು ಈ ವಿಡಿಯೋ ನೋಡಿ "ಕ್ಯೂಟ್" ಎಂದು ಕರೆದರೆ, ಇತರರು ‘ಕೋತಿಗಳು ಸಹ ಸ್ಮಾರ್ಟ್‌ಫೋನ್ ಗಳಿಗೆ ವ್ಯಸನಿಗಳಾಗಿವೆ’ ಎಂದು ಹೇಳಿದರು.

ಇನ್ನೊಬ್ಬ ಬಳಕೆದಾರರು "ನಾವು ಹಾಳಾದ ಮನುಷ್ಯರು, ನಾವು ಪ್ರಾಣಿಗಳನ್ನು ಸಹ ಹಾಳು ಮಾಡುತ್ತಿದ್ದೇವೆ" ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯವರು ತಮಾಷೆಯಾಗಿ "ಸಾಮಾಜಿಕ ಮಾಧ್ಯಮದ ಪರಿಣಾಮ ಪ್ರಾಣಿಗಳಿಗೂ ತಲುಪಿತು. ಕೋತಿಗಳು ಎಷ್ಟು ಗಂಭೀರವಾಗಿ ಹರಟೆ ಹೊಡೆಯುತ್ತಿವೆ ನೋಡಿ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಉಕ್ಕಿ ಹರಿಯುತ್ತಿರುವ ನದಿ ದಾಟಿದ ಜಾಣ ಆಡುಗಳು! ನೋಡಿ ಕಲೀರಪ್ಪಾ ಎಂದ ನೆಟ್ಟಿಗರು

ಏತನ್ಮಧ್ಯೆ, ಅಂತಹ ಮತ್ತೊಂದು ಮುದ್ದಾದ ವಿಡಿಯೋ ಈ ವರ್ಷದ ಆರಂಭದಲ್ಲಿ ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈ ಕ್ಲಿಪ್ ನಲ್ಲಿ ನಾಯಿಯೊಂದು ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡುತ್ತಿರುವುದನ್ನು ನೋಡಿದ್ದೆವು. ಈ ಎರಡು ಪ್ರಾಣಿಗಳ ನಡುವಿನ ಸ್ನೇಹವನ್ನು ನೋಡಿದ ನಂತರ ಇಂಟರ್ನೆಟ್ ಬಳಕೆದಾರರು ದಿಗ್ಭ್ರಮೆಗೊಂಡಿದ್ದರು.
Published by:Ashwini Prabhu
First published: