Viral Tree: ಇಲ್ಲೊಂದು ಕಾರಂಜಿ ಮರ! ಈ ಮರದೊಳಗಿಂದ ಚಿಮ್ಮುತ್ತಲೇ ಇರುತ್ತೆ ನೀರು, ಏನಿದರ ರಹಸ್ಯ?

ಈ ಮಲ್ಬೇರಿ ಮರದಿಂದ ಒಂದೇ ಸಮನೆ ನೀರು ಹೊರ ಬರುತ್ತಿರುವ ವೀಡಿಯೋ ನೋಡಿರುವುದು ಇದೇ ಮೊದಲ ಬಾರಿಗೆ ಎಂದು ಅನ್ನಿಸುತ್ತದೆ. ಇತ್ತೀಚಿನ ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದಾಗಿನಿಂದಲೂ ಅನೇಕ ನೆಟ್ಟಿಗರು ಇದನ್ನು ನೋಡಿ ಅಚ್ಚರಿಗೊಂಡಿದ್ದಾರೆ ಎಂದು ಹೇಳಬಹುದು.

ಫೌಂಟೈನ್ ಮರ

ಫೌಂಟೈನ್ ಮರ

  • Share this:
ಈಗಂತೂ ಪ್ರತಿದಿನ ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಚಿತ್ರ ವಿಚಿತ್ರವಾದ ವೀಡಿಯೋಗಳನ್ನು (Video) ಮತ್ತು ಫೋಟೋಗಳನ್ನು ನೋಡುತ್ತಿರುತ್ತೇವೆ. ಕೆಲವು ವೀಡಿಯೋಗಳು ನಮ್ಮನ್ನು ಭಾವುಕರನ್ನಾಗಿ ಮಾಡಿದರೆ, ಇನ್ನೂ ಕೆಲವು ವೀಡಿಯೋಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಲ್ಲಿ ಕೆಲವು ವೀಡಿಯೋಗಳು ಎಷ್ಟೊಂದು ಅಚ್ಚರಿ ಮೂಡಿಸುವ ಹಾಗೆ ಇರುತ್ತವೆ ಎಂದರೆ, ಅದನ್ನು ಯಾರಾದರೂ ಬಂದು ಹಾಗೆ ಹೇಳಿದರೆ ನಮಗೆ ನಂಬಲು ಸಾಧ್ಯವೇ ಆಗುವುದಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವೀಡಿಯೋ ಮತ್ತು ಫೋಟೋಗಳನ್ನು ನೋಡಿದರೆ ನಮಗೆ ನಿಜಕ್ಕೂ ಇಂತಹ ಘಟನೆಗಳು ನಡೆಯುತ್ತವೆಯೇ ಎಂದು ಅಚ್ಚರಿ ಆಗುವುದಂತೂ ಗ್ಯಾರಂಟಿ.

ನಾವು ನೂರಾರು ವರ್ಷ ಹಳೆಯ ಮರಗಳನ್ನು (Trees) ನೋಡಿರುತ್ತೇವೆ ಮತ್ತು ತುಂಬಾನೇ ಒಂದು ದೊಡ್ಡ ಜಾಗದಲ್ಲಿ ಒಂದು ಮರ ದೈತ್ಯವಾಗಿ ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಮರದಿಂದ ನಲ್ಲಿಯಲ್ಲಿ ಹೇಗೆ ನೀರು
(Water) ಜೋರಾಗಿ ಬರುತ್ತದೆಯೋ, ಹಾಗೆ ನೀರು ಹರಿಯುತ್ತಲೇ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮಲ್ಬೇರಿ ಮರದಿಂದ ಒಂದೇ ಸಮನೆ ನೀರು ಹೊರ ಬರುತ್ತಿರುವ ವೀಡಿಯೋ

ಇಂಟರ್ನೆಟ್ ನಲ್ಲಿ ಅದ್ಭುತ ಮರಗಳು ಮತ್ತು ಕಾಡುಗಳ ಫೋಟೋಗಳು ಮತ್ತು ವೀಡಿಯೋಗಳು ತುಂಬಾನೇ ನೋಡಲು ಸಿಗುತ್ತವೆ. ಆದರೆ ಈ ಮಲ್ಬೇರಿ ಮರದಿಂದ ಒಂದೇ ಸಮನೆ ನೀರು ಹೊರ ಬರುತ್ತಿರುವ ವೀಡಿಯೋ ನೋಡಿರುವುದು ಇದೇ ಮೊದಲ ಬಾರಿಗೆ ಎಂದು ಅನ್ನಿಸುತ್ತದೆ. ಇತ್ತೀಚಿನ ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದಾಗಿನಿಂದಲೂ ಅನೇಕ ನೆಟ್ಟಿಗರು ಇದನ್ನು ನೋಡಿ ಅಚ್ಚರಿಗೊಂಡಿದ್ದಾರೆ ಎಂದು ಹೇಳಬಹುದು.

ಕಾರಂಜಿ ಮರವಿದು

ಈ ವೀಡಿಯೋವನ್ನು ಏಪ್ರಿಲ್ 3 ರಂದು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿ ಕೊಳ್ಳಲಾಗಿದ್ದು, ಅಲ್ಲಿ ಎಲೆಗಳಿಲ್ಲದೆ ಮಲ್ಬೇರಿ ಮರದ ಕಾಂಡದಿಂದ ನೀರು ಹೊರ ಬರುತ್ತಿರುವುದನ್ನು ನೋಡಬಹುದು. ಒಬ್ಬ ವ್ಯಕ್ತಿಯು ಆ ಮರದ ಕಾಂಡದಿಂದ ಹೊರಗೆ ಹರಿಯುತ್ತಿರುವ ನೀರನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಆ ನೀರಿನಿಂದ ತನ್ನ ಮುಖವನ್ನು ತೊಳೆಯುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದು.

100 ವರ್ಷಗಳಷ್ಟು ಹಳೆಯದಾದ ಮರ

ಮೂಲತಃ ಬೋಸ್ನಿಯನ್ ಭಾಷೆಯಲ್ಲಿ ಪೋಸ್ಟ್ ಮಾಡಲಾದ ಶೀರ್ಷಿಕೆಯ ಅನುವಾದದ ಪ್ರಕಾರ "ಡಿನೋಸಾದಲ್ಲಿ ಪವಾಡ ಸದೃಶ್ಯ ಎಂಬಂತೆ ಈ ಮಲ್ಬೇರಿ ಮರವು ವಸಂತ ಕಾಲದಂತೆ ಕೆಲಸ ಮಾಡುತ್ತಿದೆ" ಎಂಬ ಅರ್ಥವನ್ನು ನೀಡುತ್ತದೆ. ಸುದ್ದಿ ಮಾಧ್ಯಮದ ಪ್ರಕಾರ 100 ವರ್ಷಗಳಷ್ಟು ಹಳೆಯದಾದ ಮತ್ತು ದಕ್ಷಿಣ ಯುರೋಪಿನ ಮಾಂಟೆನೆಗ್ರೋದಲ್ಲಿರುವ ಮರದ ಫೋಟೋಗಳನ್ನು ಇತರ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.










View this post on Instagram






A post shared by @lokalnihodaci






ವರದಿಯೊಂದು ಇದು ವರ್ಷಕ್ಕೊಮ್ಮೆ ಸಂಭವಿಸುವ ಘಟನೆಯಾಗಿದ್ದು, ಇದು ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ. ನಂತರ ಮತ್ತೆ ಇದು ಸಹಜ ಪರಿಸ್ಥಿತಿಗೆ ಮರಳುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು

ಈ ವಿದ್ಯಮಾನವು ಭೂಮಿಯಲ್ಲಿರುವ ಬುಗ್ಗೆಗಳಿಂದಾಗಿ ಸಂಭವಿಸುತ್ತದೆ, ಇದು ಭಾರಿ ಮಳೆಯ ಸಮಯದಲ್ಲಿ ಉಕ್ಕಿ ಹೊರಕ್ಕೆ ಹರಿಯುತ್ತದೆ, ಇದು ಹೆಚ್ಚಿನ ಒತ್ತಡವನ್ನು ಸೃಷ್ಟಿಸುತ್ತದೆ, ಇದು ಮರದ ಕಾಂಡದಿಂದ ನೀರನ್ನು ಹೊರಹಾಕಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

"ಫೌಂಟೆನ್ ಮರ.. ಈ ಪ್ರದೇಶದಲ್ಲಿ ಸಿಜೆವಾ ನದಿಯು ಇದ್ದು, ಈ ಮರ ಸಹ ಅಲ್ಲಿಯೇ ಹತ್ತಿರದಲ್ಲಿಯೇ ಬೆಳೆದಿದೆ, ಹಾಗಾಗಿ ಈ ಮರವು ನೀರನ್ನು ಹೊರ ಹಾಕುತ್ತಿರಬಹುದು" ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. ಒಟ್ಟಿನಲ್ಲಿ ಈ ಮರದಿಂದ ನೀರು ಹರಿಯುತ್ತಿರುವ ವೀಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು.

ಇದನ್ನೂ ಓದಿ: Sleep In Office: ಆಫೀಸ್​ಗೆ ಬಂದು ಅರ್ಧ ಗಂಟೆ ಮಲಗಿದ್ದಕ್ಕೂ ಸಂಬಳ ಕೊಡುತ್ತೆ ಈ ಕಂಪನಿ!

"ಬ್ರಾವೋ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ 1,000 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು 29,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
Published by:Divya D
First published: