Viral Video: ಈ ಪುಟ್ಟ ಅಳಿಲು ಎಷ್ಟು ಮುದ್ದಾಗಿ ಆಹಾರ ತಿನ್ನುತ್ತಿದೆ ನೋಡಿ!

ಅಳಿಲು

ಅಳಿಲು

ವೈರಲ್ ಆದ 16 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ, ಪುಟ್ಟ ಅಳಿಲು ಒಂದು ಸ್ಟೂಲ್ ಮೇಲೆ ಹತ್ತಿ ಕುಳಿತು ಅದರ ಮುಂದೆ ಇರಿಸಲಾಗಿರುವ ಸಣ್ಣ ತಟ್ಟೆಯಿಂದ ಒಂದರ ನಂತರ ಒಂದರಂತೆ ಕಂದು ಬಣ್ಣದ ನಟ್ಸ್‌ಗಳನ್ನು ವೇಗವಾಗಿ ತಿನ್ನುತ್ತಿರುವುದನ್ನು ನಾವು ಕಾಣಬಹುದಾಗಿದೆ.

  • Share this:

ಆಕಾರದಲ್ಲಿ ತುಂಬಾ ಚಿಕ್ಕದು, ಆದರೆ ಅದರಷ್ಟು ವೇಗವಾಗಿ ಸರಸರನೆ ಓಡಾಡುವುದಕ್ಕೆ ಮತ್ತು ತ್ವರಿತವಾಗಿ ಮರ ಹತ್ತಿ, ಮರದ ಕೊಂಬೆಗಳ ಮೇಲೆ ಸರಾಗವಾಗಿ ಓಡಾಡುವಂತಹ ಅಳಿಲು ಸಾಮಾನ್ಯವಾಗಿ ಉದ್ಯಾನವನದಲ್ಲಿ ನಮ್ಮ ನಿಮ್ಮೆಲ್ಲರ ಕಣ್ಣಿಗೂ ಬಿದ್ದಿರುತ್ತದೆ. ಅಬ್ಬಾ.. ಎಷ್ಟೊಂದು ತ್ವರಿತವಾಗಿ ಓಡಾಡುತ್ತೆ. ಇದು ಏನಾದರೂ ಆಹಾರ ಸಿಕ್ಕರೆ ಎಷ್ಟು ಮುದ್ದಾಗಿ ಅದರ ಹಿಂಬದಿಯ ಕಾಲುಗಳ ಮೇಲೆ ಕುಳಿತು ಮುಂದಿನ ಎರಡು ಕಾಲುಗಳನ್ನು ಸಹ ಕೈಗಳಂತೆ ಉಪಯೋಗಿಸಿಕೊಂಡು ಆಹಾರ ಹಿಡಿದುಕೊಂಡು ಸ್ವಲ್ಪ ಸ್ವಲ್ಪ ಕಚ್ಚಿ ತಿನ್ನುತ್ತ ಅತ್ತಿತ್ತ ತನ್ನ ಪುಟ್ಟ ಕಣ್ಣುಗಳನ್ನು ಹೊರಳಾಡಿಸುತ್ತಾ ನೋಡುವುದು ನಿಜಕ್ಕೂ ಕಣ್ಣಿಗೆ ಹಬ್ಬ ಅಂತಾನೆ ಹೇಳಬಹುದು. ಈಗೇಕೆ ನಾವು ಅಳಿಲಿನ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನೀವು ಹುಬ್ಬೇರಿಸಿ ಸಂಶಯ ಪಡುವ ಮುಂಚೆಯೇ ನಾವೇ ಅದನ್ನು ಹೇಳುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಒಂದು ಅಳಿಲಿನ ವಿಡಿಯೋ ವೈರಲ್ ಆಗಿದೆ.


ವೈರಲ್ ಆದ 16 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ, ಪುಟ್ಟ ಅಳಿಲು ಒಂದು ಸ್ಟೂಲ್ ಮೇಲೆ ಹತ್ತಿ ಕುಳಿತು ಅದರ ಮುಂದೆ ಇರಿಸಲಾಗಿರುವ ಸಣ್ಣ ತಟ್ಟೆಯಿಂದ ಒಂದರ ನಂತರ ಒಂದರಂತೆ ಕಂದು ಬಣ್ಣದ ನಟ್ಸ್‌ಗಳನ್ನು ವೇಗವಾಗಿ ತಿನ್ನುತ್ತಿರುವುದನ್ನು ನಾವು ಕಾಣಬಹುದಾಗಿದೆ.


ಈ ವಿಡಿಯೋವನ್ನು ಟ್ವಿಟ್ಟರ್‌ ಖಾತೆಯಲ್ಲಿನ 'ಬ್ಯುಟೆಂಜೆಬೈಡೆನ್' ಎನ್ನುವ ಪುಟದಲ್ಲಿ ಇದನ್ನು ಹಂಚಿಕೊಂಡಿದ್ದು, ಚಿಕ್ಕ ಅಳಿಲಿಗಾಗಿಯೇ ಒಂದು ಪುಟ್ಟ ವನಭೋಜನದ ರೀತಿಯಲ್ಲಿ ಸೆಟಪ್ ಮಾಡಿದಂತೆ ತೋರುತ್ತದೆ. "ಒಳ್ಳೆಯ ಸಮಯ" ಎಂದು ಶೀರ್ಷಿಕೆಯನ್ನು ಸಹ ವಿಡಿಯೋದ ಮೇಲೆ ಬರೆಯಲಾಗಿದೆ.


ಈ ವಿಡಿಯೋವನ್ನು ಈಗಾಗಲೇ ಸುಮಾರು 52,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 4200 ಜನರು ಇದನ್ನು ಇಷ್ಟಪಟ್ಟಿದ್ದು, ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳನ್ನೂ ಈ ವಿಡಿಯೋ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು "ಅಳಿಲು ಊಟವನ್ನು ನಿಧಾನವಾಗಿ ಆನಂದಿಸಬಹುದು, ಆದರೆ ವೇಗವಾಗಿ ತಿನ್ನುತ್ತಿರುವುದನ್ನು ನೋಡಿದರೆ ಅದರ ಪ್ರತಿಸ್ಪರ್ಧಿಗಳು ಇನ್ನೇನು ಬಂದೆ ಬಿಡುತ್ತವೆ ಎಂಬಂತಿದೆ" ಎಂದು ಬರೆದಿದ್ದಾರೆ.


ಇನ್ನೊಬ್ಬ ಬಳಕೆದಾರರು, "ಅಳಿಲು ತುಂಬಾ ಚಾಣಾಕ್ಷವಾಗಿದ್ದು, ಆಹಾರಗಳ ನಡುವಿನ ವ್ಯತ್ಯಾಸವನ್ನು ತಿಳಿದಿದೆ, ಏಕೆಂದರೆ ಮೇಜಿನ ಮೇಲೆ ಇರಿಸಲಾಗಿರುವ ಕೆಲವು ಪದಾರ್ಥಗಳನ್ನು ಅದು ತಿನ್ನುತ್ತಿಲ್ಲ”, ಎಂದು ಬರೆದಿದ್ದಾರೆ.


ಇದೊಂದೇ ವಿಡಿಯೋ ಅಲ್ಲದೆ, 'ಎ ಪೇಜ್ ಟು ಮೇಕ್ ಯು ಸ್ಮೈಲ್’ ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಇನ್ನೊಂದು ಪುಟ್ಟ ಅಳಿಲಿನ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಅಳಿಲು ಮತ್ತು ಒಂದು ಪಕ್ಷಿ ಚಿಕ್ಕ ಉದ್ಯಾನವನದ ಬೆಂಚಿನ ಮೇಲೆ ಕುಳಿತು ಹಣ್ಣನ್ನು ತಿನ್ನುತ್ತಿರುವುದನ್ನು ಕಾಣಬಹುದಾಗಿದೆ.





"ಸ್ನೇಹಿತರೊಂದಿಗೆ ಪಿಕ್ನಿಕ್" ಎಂದು ಶೀರ್ಷಿಕೆ ಸಹ ಇದಕ್ಕೆ ನೀಡಲಾಗಿದ್ದು, ತುಂಬಾ ಜನರನ್ನು ತನ್ನೆಡೆಗೆ ಆಕರ್ಷಿಸಿದೆ. ಇಂತಹ ಒಂದು ಅಪರೂಪದ ದೃಶ್ಯವು ಹೆಚ್ಚಾಗಿ ನೋಡಲು ಸಿಗುವುದಿಲ್ಲ. ಅಳಿಲುಗಳು ಸಾಮಾನ್ಯವಾಗಿ ಎಲ್ಲವನ್ನೂ ಎಂದರೆ ಹಣ್ಣು, ಬೀಜಗಳು ಮತ್ತು ಮಾಂಸ ತಿನ್ನುತ್ತವೆ. ಅವುಗಳಿಗೆ ಬಾದಾಮಿ ಎಂದರೆ ತುಂಬಾ ಅಚ್ಚು ಮೆಚ್ಚು.


First published: