Viral Video: ಮುದ್ದು ಕಂದನ ಕಂಡು ಮಗುವಾದ ವೃದ್ಧರು! ವಿಡಿಯೋ ನೋಡಿ ನಿಮ್ಮ ಕಣ್ಣಲ್ಲೂ ನಗು ಮಿನುಗಲಿ

ಈ ವಿಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಇದು ಅತ್ಯಂತ ದಯಾಪರ ಸನ್ನೆಗಳಲ್ಲಿ ಒಂದಾಗಿದೆ. ಮುದ್ದಾದ ಮಗುವನ್ನು ಸ್ಪರ್ಶಿಸುವುದೇ ವಿಶೇಷ ಉಡುಗೊರೆಯಾಗಿದೆ. ಆ ನಗುಗಳೆಲ್ಲವೂ ನಿಜವಾಗಿಯೂ ಸಂತೋಷದಾಯಕವಾಗಿವೆ" ಎಂದು ಬರೆದಿದ್ದಾರೆ.

ವಿಡಿಯೋ ದೃಶ್ಯ

ವಿಡಿಯೋ ದೃಶ್ಯ

  • Share this:
ಮಕ್ಕಳು ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ..? ಅದರಲ್ಲೂ ಆಗ ತಾನೇ ಹುಟ್ಟಿದ ಮಗುವನ್ನು (Children) ನೋಡಿದರಂತೂ ತುಂಬಾನೇ ಮುದ್ದು ಮಾಡಬೇಕೆಂದು ಅನ್ನಿಸುತ್ತದೆ. ಮನೆಯಲ್ಲಿ ಮಕ್ಕಳಿದ್ದರೆ ಈ ವಯಸ್ಸಾದ ಅಜ್ಜಿ ತಾತಂದಿರಿಗೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಈ ಹಸುಗೂಸುಗಳನ್ನು (New Born Baby)  ನೋಡುವುದು ಮತ್ತು ಅವುಗಳನ್ನು ತಮ್ಮ ಎರಡು ಕೈಗಳಲ್ಲಿ ಎತ್ತಿಕೊಂಡು ಮುದ್ದು ಮಾಡುವುದು ಎಂದರೆ ಈ ಅಜ್ಜಿ ತಾತಂದಿರಿಗೂ (Grand Fathers-Grand Mothers) ತುಂಬಾನೇ ಪ್ರೀತಿ (Love) ಎಂದು ಹೇಳಬಹುದು. ಈ ರೀತಿಯ ವಿಡಿಯೋಗಳು ಈಗಂತೂ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ಹರಿದಾಡುತ್ತಿರುತ್ತವೆ (Viral Video) ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಚಿಕ್ಕ ಮಕ್ಕಳ ಮುದ್ದಾದ ಮುಖವನ್ನು ನೋಡುವುದರಿಂದ ಮತ್ತು ಅವುಗಳ ಜೊತೆಯಲ್ಲಿ ಎಲ್ಲವನ್ನೂ ಮರೆತು ಸ್ವಲ್ಪ ಸಮಯದವರೆಗೆ ಆಟವಾಡಿದರೆ ನಮಗಿರುವ ಮಾನಸಿಕ ಒತ್ತಡವು ಕಡಿಮೆ ಆಗುತ್ತದೆ ಎಂದು ಸಹ ಅನೇಕರು ಹೇಳುತ್ತಾರೆ. ಆದ್ದರಿಂದ ಅನೇಕರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ವೈರಲ್ ವಿಡಿಯೋದಲ್ಲಿ ಏನಿದೆ?
ಇಲ್ಲಿಯೂ ಸಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಒಬ್ಬ ನರ್ಸ್ ತನ್ನ ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಅಲ್ಲೇ ಇರುವಂತಹ ವಯಸ್ಸಾದ ಅಜ್ಜಿಯರ ಬಳಿ ಹೋಗಿ ಅವರಿಗೆ ಈ ಮಗುವನ್ನು ತೋರಿಸುತ್ತಾಳೆ. ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಪುಟವು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಈ ಒಂದು ವಿಡಿಯೋ ನಿಮ್ಮನ್ನು ಭಾವುಕರನ್ನಾಗಿ ಮಾಡದೇ ಬಿಡದು ಎಂದು ಹೇಳಬಹುದು.
ಹಿರಿಯರನ್ನು ಆರೈಕೆ ಮಾಡುವಂತಹ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ನರ್ಸ್ ಅಲ್ಲಿ ಇರುವಂತಹ ಆ ವೃದ್ಧ ಮಹಿಳೆಯರ ಮುಖದಲ್ಲಿ ಒಂದು ನಗುವನ್ನು ತರುವುದಕ್ಕೆ ಏನಾದರೂ ಮಾಡಲೇಬೇಕು ಅಂತ ನಿರ್ಧರಿಸಿದಳು. ಈ ವಿಡಿಯೋ ಶುರುವಾದ ನಂತರ ಅದರಲ್ಲಿ ನಾವು ಈ ನರ್ಸ್ ತನ್ನ ಎರಡು ಕೈಗಳಲ್ಲಿ ನವಜಾತ ಶಿಶುವನ್ನು ಎತ್ತಿಕೊಂಡು ಹೋಗಿ ಅವರ ಬಳಿ ನೀಡಿ ಅವರಿಗೆ ಸಂತೋಷ ಪಡಿಸಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ.

ಭಾವುಕ ಕ್ಷಣಕ್ಕೆ ಸಾಕ್ಷಿ!
ಆ ಮುದ್ದಾದ ಪುಟ್ಟ ನವಜಾತ ಶಿಶುವನ್ನು ನೋಡಿದ ಆ ಅಜ್ಜಿಯಂದಿರು ಭಾವುಕರಾದರು ಮತ್ತು ಅತ್ಯಂತ ಸಂತೋಷ ಪಟ್ಟರು ಎಂದು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: ಕಂಪನಿಯ ಕಷ್ಟಕಾಲದಲ್ಲಿ ದುಡಿದ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್!

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅಪ್ಲೋಡ್ ಮಾಡಲಾಗಿದ್ದು, "ಹಿರಿಯ ಆರೈಕೆ ಸೌಲಭ್ಯದಲ್ಲಿರುವ ನರ್ಸ್ ತನ್ನ ನವಜಾತ ಶಿಶು ಸಾರಾವನ್ನು ಅಲ್ಲಿನ ಎಲ್ಲಾ ನಿವಾಸಿಗಳಿಗೆ ಭೇಟಿ ಮಾಡಿಸಲು ಕರೆ ತರುತ್ತಾಳೆ. ಅವರ ಪ್ರತಿಕ್ರಿಯೆಗಳು ಅಮೂಲ್ಯವಾಗಿವೆ". ಈ ಮಗುವನ್ನು ನೋಡಿ ಕೆಲವರಿಗೆ ಸಂತೋಷವಾಗಿ ಕಣ್ಣೀರು ಸುರಿಸುತ್ತಾರೆ ಮತ್ತು ಕೆಲವರು ಸರಳ ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಆಯ್ತು ಫುಲ್ ವೈರಲ್!
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ ಮತ್ತು ಆಗಿನಿಂದ ಆ ನರ್ಸ್ ಅವರ ಕಡೆಯಿಂದ ಬಂದ ಆ ಸಿಹಿಯಾದ ಹಾವಭಾವವನ್ನು ನೋಡಿ ಹೊಗಳುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್‌ಗಳು ಬಂದಿವೆ ಮತ್ತು ಇದು ಇಲ್ಲಿಯವರೆಗೆ 4,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಹ ಪಡೆದಿದೆ ಎಂದು ಹೇಳಬಹುದು.

ಈ ವಿಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಇದು ಅತ್ಯಂತ ದಯಾಪರ ಸನ್ನೆಗಳಲ್ಲಿ ಒಂದಾಗಿದೆ. ಮುದ್ದಾದ ಮಗುವನ್ನು ಸ್ಪರ್ಶಿಸುವುದೇ ವಿಶೇಷ ಉಡುಗೊರೆಯಾಗಿದೆ. ಆ ನಗುಗಳೆಲ್ಲವೂ ನಿಜವಾಗಿಯೂ ಸಂತೋಷದಾಯಕವಾಗಿವೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: Mili Sarkar: ಸೀರೆ ಧರಿಸಿ ಬ್ಯಾಕ್‌ಫ್ಲಿಪ್ ಮಾಡಿದ ಯುವತಿ, ನೆಟ್ಟಿಗರಂತೂ ಫುಲ್ ಫಿದಾ..!

"ಈ ನರ್ಸ್ ಅಲ್ಲಿರುವ ಮಹಿಳೆಯರಿಗೆ ಹೊಸ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ. ಮುಗ್ಧ ನವಜಾತ ಶಿಶುವಿನ ಪ್ರೀತಿಯ ಶಕ್ತಿ ಅವರಿಗೆ ತಿಳಿದಿದೆ. ಹಿರಿಯ ಆರೈಕೆ ಸೌಲಭ್ಯದ ನಿವಾಸಿಗಳಿಗೆ ತನ್ನ ಸ್ವಂತ ಮಗುವನ್ನು ನೀಡಿ ಸಂತೋಷ ಪಡಿಸಿದ್ದಾರೆ. ಇದು ಎಂತಹ ಸುಂದರವಾದ ಮತ್ತು ಪ್ರೀತಿಯ ಸನ್ನೆ. ಇದನ್ನು ಯಾರೇ ನೋಡಿದರೂ ಆ ವ್ಯಕ್ತಿಯ ಹೃದಯಕ್ಕೆ ನೇರವಾಗಿ ಹೋಗಿ ತಲುಪುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:guruganesh bhat
First published: