Viral Video: ತಾಯಿ ಬೆಕ್ಕು ಮರಿಗಳಿಗೆ ತರಬೇತಿ ನೀಡುವ ಮುದ್ದಾದ ವಿಡಿಯೋಗೆ ಮನಸೋತ ನೆಟ್ಟಿಗರು

Cat Viral Video: ಗುರುವಾರದಂದು ಬ್ಯುಟೆಂಜೆಬೈಡನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ 29 ಸೆಕೆಂಡುಗಳ ಮುದ್ದಾದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಇದುವರೆಗೆ 84,000 ಜನರು ವೀಕ್ಷಿಸಿರುವುದರಿಂದ ವಿಡಿಯೋ ವೈರಲ್ ಆಗಿದೆ.

ವೈರಲ್​ ವಿಡಿಯೋ

ವೈರಲ್​ ವಿಡಿಯೋ

  • Share this:

ಸಾಕು ಪ್ರಾಣಿಗಳು ಎಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ, ಅದರಲ್ಲೂ ನಾಯಿ, ಬೆಕ್ಕು ಎಂದರೆ ಅಪಾರವಾದ ಪ್ರೀತಿ. ಬೆಕ್ಕು ಅಂದರೆ ವಿಶೇಷವಾದ ಕಾಳಜಿ ಮತ್ತು ತಾಯಿ ಬೆಕ್ಕು ಮರಿ ಹಾಕಿದಾಗ ಆ ಬೆಕ್ಕಿನ ಪುಟ್ಟ ಪುಟ್ಟ ಮುದ್ದಾದ ಮರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ. ಸಾಕು ನಾಯಿಯ ಮತ್ತು ಸಾಕು ಬೆಕ್ಕಿನ ಮುದ್ದಾದ ವೀಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಹರಿದಾಡುತ್ತಲೇ ಇರುತ್ತವೆ. ಇತ್ತೀಚೆಗೆ ಒಂದು ನಾಯಿಯ ಮುಂದೆ ಮೂರು ಬೆಕ್ಕಿನ ಮರಿಗಳು ರಾಜಾರೋಷವಾಗಿ ಆಟ ಆಡುತ್ತಿರುವ ವೈರಲ್ ವಿಡಿಯೋದಲ್ಲಿ ನೋಡಿದ್ದೆವು. ಈಗ ಮತ್ತೊಂದು ಮುದ್ದಾದ ಬೆಕ್ಕಿನ ಮರಿಗಳ ವೀಡಿಯೋ ವೈರಲ್ ಆಗಿರುವುದು ವಿಶೇಷವಾಗಿದೆ. ಗುರುವಾರದಂದು ಬ್ಯುಟೆಂಜೆಬೈಡನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ 29 ಸೆಕೆಂಡುಗಳ ಮುದ್ದಾದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಇದುವರೆಗೆ 84,000 ಜನರು ವೀಕ್ಷಿಸಿರುವುದರಿಂದ ವಿಡಿಯೋ ವೈರಲ್ ಆಗಿದೆ.


ಈ ವಿಡಿಯೋ ತುಣುಕು ಇಷ್ಟೊಂದು ವೈರಲ್ ಆಗಿರುವುದಕ್ಕೆ ಕಾರಣ ಕೂಡ ಇದೆ. ತಾಯಿ ಬೆಕ್ಕು ತನ್ನ ಮರಿಗಳಿಗೆ ಮೆಟ್ಟಿಲುಗಳನ್ನು ಹೇಗೆ ಹತ್ತಬೇಕು ಎಂಬುದನ್ನು ವಿಡಿಯೋವು ಒಳಗೊಂಡಿದೆ. ಪ್ರಾಣಿಗಳೇ ಇರಲಿ ಮನುಷ್ಯರೇ ಇರಲಿ ಅಮ್ಮನೇ ಅಮ್ಮನೇ ಸಾಟಿ ಎಂಬುದನ್ನು ನಾವಿಲ್ಲಿ ಅರಿತುಕೊಳ್ಳಬಹುದು. ಅಮ್ಮ ಹೇಗೆ ತನ್ನ ಮಕ್ಕಳಿಗೆ ನಡೆದಾಡಲು, ಊಟ ಮಾಡಲು, ಬರೆಯಲು, ಬಟ್ಟೆ ತೊಡಲು ಹೇಗೆ ಕಲಿಸಿಕೊಡುತ್ತಾರೆಯೋ ಹಾಗೆ ಪ್ರಾಣಿಗಳು ಕೂಡ ತನ್ನ ಕಂದಮ್ಮಗಳಿಗೆ ಉತ್ತಮ ತರಬೇತಿಯನ್ನು ನೀಡುತ್ತವೆ. ನೀರಿನಲ್ಲಿ ಈಜಲು, ಆಹಾರದ ಬೇಟೆಯಾಡಲು, ಸ್ವಯಂ ರಕ್ಷಣೆ ಮಾಡಿಕೊಳ್ಳಲು ಆಕಾಶದಲ್ಲಿ ಹಾರಲು ಹೀಗೆ ಪ್ರಾಣಿಗಳಲ್ಲಿ ಕೂಡ ಅಮ್ಮ ತನ್ನ ಮರಿಗಳಿಗೆ ನಿರಂತರವಾಗಿ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತದೆ.

ಈ ವಿಡಿಯೋದಲ್ಲಿ ನಾವು ಕಾಣುವ ಅಂಶ ಕೂಡ ಅಮ್ಮನ ಪ್ರೀತಿಯ ದ್ಯೋತಕವಾಗಿದೆ. ಮೊದಲಿಗೆ ತಾಯಿ ಬೆಕ್ಕು ಮೆಟ್ಟಿಲುಗಳನ್ನು ಹತ್ತಿ ಮರಿಗಳಿಗೆ ಹೇಗೆ ಹತ್ತಬೇಕು ಎಂಬುದನ್ನು ತಿಳಿಸಿಕೊಡುತ್ತಿದೆ. ಹೀಗೆ ಮರಿಗಳು ಕೂಡ ಅಮ್ಮನ ಅನುಕರಣೆಯನ್ನು ಮಾಡುತ್ತಿವೆ. ಈ ವಿಡಿಯೋದಲ್ಲಿರುವ ಅಂಶ ಸರಳವಾದರೂ ಅದರಲ್ಲಿ ತಾಯಿ ವಾತ್ಸಲ್ಯದ ಮಮತೆ ಪ್ರೀತಿ ಎದ್ದುಕಾಣುತ್ತದೆ. ಇದರಿಂದಾಗಿಯೇ ಈ ವಿಡಿಯೋ ಇಷ್ಟೊಂದು ವೈರಲ್ ಆಗಿ ಪ್ರಸಿದ್ಧಿ ಪಡೆದಿದೆ. ಹೀಗೆ ಮೆಚ್ಚುಗೆ ಪಡೆದ ವಿಡಿಯೋ ನೆಟ್ಟಿಗರ ಮನಸ್ಸನ್ನು ಕೂಡ ಗೆದ್ದಿದ್ದು ತಮ್ಮ ಕಾಮೆಂಟ್‌ಗಳ ಮೂಲಕವೇ ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಪ್ರೀತಿ ಉಕ್ಕಿ ಹರಿಯುತ್ತದೆ ಎಂದು ಒಬ್ಬರು ಬರೆದುಕೊಂಡಿದ್ದರೆ ಮತ್ತೊಬ್ಬರು ಎಷ್ಟು ಒಳ್ಳೆಯ ತಾಯಿ ಎಂದು ಹೊಗಳಿದ್ದಾರೆ. ಇಂತಹ ಅದ್ಭುತ ವಿಡಿಯೋ ಶೇರ್ ಮಾಡಿರುವವರಿಗೆ ಧನ್ಯವಾದಗಳು. ಇದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ಮತ್ತೊಬ್ಬ ನೆಟ್ಟಿಗರು ಭಾವನಾತ್ಮಕ ಕಾಮೆಂಟ್ ಅನ್ನು ಬರೆದುಕೊಂಡಿದ್ದಾರೆ. ಹೀಗೆ ಪ್ರಾಣಿಗಳಾಗಲಿ ಮನುಷ್ಯರೇ ಆಗಲಿ ಅಮ್ಮನ ಪ್ರೀತಿಗೆ ಅವರ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು ಎಂಬುದು ಈ ವಿಡಿಯೋದಿಂದ ಮನದಟ್ಟಾಗುವುದಂತೂ ನಿಜ. ಜೀವನದಲ್ಲಿ ಎಂತಹದ್ದೇ ಕಷ್ಟಗಳಿರಲಿ ನಮ್ಮ ಅಮ್ಮ ನಮ್ಮೊಂದಿಗೆ ಜೊತೆಯಾಗಿ ಇರುತ್ತಾರೆ ಎಂಬುದು ಇದರಿಂದ ಅರಿವಾಗುತ್ತದೆ.

First published: