Spidergirl | ಸರಸರನೆ ಗೋಡೆ ಹತ್ತುವ ಈ ಪುಟಾಣಿ ಸ್ಪೈಡರ್ ಗರ್ಲ್ ನೋಡಿದ್ದೀರಾ... ಇಲ್ಲಿದೆ ವಿಡಿಯೋ

Viral Video: ಐದು ವರ್ಷದ ಬಾಲಕಿ ಯಾವುದೇ ಭಯವಿಲ್ಲದೇ, ಹಿಂಜರಿಕೆಯಿಲ್ಲದೇ ಆರಾಮದಾಯಕವಾಗಿ ಕೆಲವೇ ನಿಮಿಷಗಳಲ್ಲಿ ಯಾರ ಸಹಾಯವನ್ನು ಕೇಳದೆ ಗೋಡೆಯನ್ನು ಹತ್ತುಬಿಟ್ಟಿದ್ದಾಳೆ. ವಿಡಿಯೋದಲ್ಲಿ ಆಕೆ ಕೈ ಮತ್ತು ಕಾಲುಗಳ ಸಹಾಯದಿಂದ ಮಾತ್ರ ಗೋಡೆ ಹತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

(Photo: Twitter)

(Photo: Twitter)

  • Share this:

ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವ, ಗಗನ ಚುಂಬಿ ಕಟ್ಟಡಗಳನ್ನು ಸರಾಗವಾಗಿ ಏರುವ ಮಕ್ಕಳ ಪ್ರಿಯನಾಗಿರುವ ಸ್ಪೈಡರ್ ಮ್ಯಾನ್ ಎಲ್ಲರಿಗೂ ಗೊತ್ತೇ ಇದೆ. ಆತ ಧರಿಸುವ ಬಟ್ಟೆ, ಸಾಹಸ ಈಗಲೂ ಜನರ ನೆನಪಿನಲ್ಲಿ ಇದೆ. ಕಾಲ್ಪನಿಕ ಕಥೆಯ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಕುರಿತು ಸಿನಿಮಾ, ಗೇಮ್ ಎಲ್ಲವೂ ಬಂದಿವೆ. ಚಿಕ್ಕ ಮಕ್ಕಳು ಏನೇ ಕಂಡರೂ ಅದನ್ನು ಮೊದಲು ಅನುಸರಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ಮಕ್ಕಳ ವಿಚಾರದಲ್ಲಿ ತಂದೆ ತಾಯಿಯಂದಿರು ನಿಗಾವಹಿಸಲೇ ಬೇಕು. ಇಲ್ಲೊಬ್ಬ ಬಾಲಕಿ ಸ್ಪೈಡರ್ ಮ್ಯಾನ್ ನೋಡಿ ಕಲಿತಳೋ ಹೇಗೋ ಏನೋ ಗೊತ್ತಿಲ್ಲ. ಆದರೆ ಈಕೆ ಮನೆಯೊಳಗಿನ ಗೋಡೆಯನ್ನು ಯಾರ ಸಹಾಯವೂ ಇಲ್ಲದೇ ಕೇವಲ ಕೈ ಕಾಲುಗಳ ಸಹಾಯದೊಂದಿಗೆ ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸರಸರನೇ ಹತ್ತೇ ಬಿಡುತ್ತಾಳೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮತ್ತು ಇದನ್ನು ನೋಡಿದ ನೆಟಿಜನ್‍ಗಳು ಅಚ್ಚರಿಗೊಳಗಾಗಿದ್ದಾರೆ.


ಹೌದು. ಐದು ವರ್ಷದ ಬಾಲಕಿ ಯಾವುದೇ ಭಯವಿಲ್ಲದೇ, ಹಿಂಜರಿಕೆಯಿಲ್ಲದೇ ಆರಾಮದಾಯಕವಾಗಿ ಕೆಲವೇ ನಿಮಿಷಗಳಲ್ಲಿ ಯಾರ ಸಹಾಯವನ್ನು ಕೇಳದೆ ಗೋಡೆಯನ್ನು ಹತ್ತುಬಿಟ್ಟಿದ್ದಾಳೆ. ವಿಡಿಯೋದಲ್ಲಿ ಆಕೆ ಕೈ ಮತ್ತು ಕಾಲುಗಳ ಸಹಾಯದಿಂದ ಮಾತ್ರ ಗೋಡೆ ಹತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.


ಮೊದಲು ಅವಳು ಕೋಣೆಯ ಮೂಲೆಯಲ್ಲಿ ನಿಂತಿರುತ್ತಾಳೆ. ನಂತರ ಅವಳು ಶೂ ಧರಿಸದೇ, ಗ್ಲೌಸನ್ನು ಬಳಸದೇ ಬರಿದಾದ ಕೈ ಕಾಲುಗಳನ್ನು ಗೋಡೆ ಮೇಲೆ ಇರಿಸಿದಳು. ನಂತರ ನಿಧಾನವಾಗಿ ಕೈ ಕಾಲನ್ನು ಮುಂದೆ ಮುಂದೆ ಸರಿಸುತ್ತಾ ಗೋಡೆಯನ್ನು ಏರುತ್ತಾಳೆ. ನಗುಮೊಗದಿಂದಲೇ, ಯಾವುದೇ ಆತಂಕವಿಲ್ಲದೇ ಅಲ್ಲೇ ಕೆಲವು ಸ್ಟಂಟ್‍ಗಳನ್ನು ಕೂಡ ಮಾಡುತ್ತಾಳೆ. ಬಳಿಕ ನಿಧಾನವಾಗಿ ಗೋಡೆಯನ್ನು ಇಳಿಯುತ್ತಾಳೆ.


ಈ ವಿಡಿಯೋವನ್ನು ಕುಟುಂಬದವರೊಬ್ಬರು ರೆಕಾರ್ಡ್ ಮಾಡಿದ್ದು ತಮ್ಮ ಟ್ವಿಟರ್ ಖಾತೆಯಾದ ಎಫ್‍ಎಫ್‍ಎಸ್ ಒಎಮ್‍ಜಿ ವಿಡ್ಸ್ ಎಂಬ ಹೆಸರಿನವನ್ನು ಸ್ಪೈಡರ್ ಗಲ್ ಎಂಬ ಅಡಿಬರಹದಡಿ ಹರಿಯಬಿಟ್ಟಿದ್ದಾರೆ. ಈಕೆಯ ಈ ಸಾಹಸದ ವಿಡಿಯೋವನ್ನು 720 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಮುರು ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. 600 ಮಂದಿ ಮಗುವಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕೆಲವರು ಕಮೆಂಟ್ ಮಾಡಿ ಆಕೆಯ ಸಾಹಸವನ್ನು ಮೆಚ್ಚಿದ್ದಾರೆ.





ಒಬ್ಬರು ಕಮೆಂಟ್ ಮಾಡಿ, ಇದು ಏಕೆ ನನ್ನನ್ನು ಹೆಸರಿಸಿತು ಎಂದು ಕೇಳಿದ್ದಾರೆ. ಗೋಡೆಯ ಬಣ್ಣಕ್ಕಾಗಿ ನಿಮ್ಮ ಪೋಷಕರು ಎಷ್ಟು ಖರ್ಚು ಮಾಡಿದ್ದಾರೆ ಎಂದು ನಾನು ಊಹಿಸಬಲ್ಲೆ ಎಂದಿದ್ದಾರೆ. ಬಾಲ್ಯದಲ್ಲಿ ಈ ರೀತಿಯಾಗಿ ಮೂಲೆಗಳು, ಬಾಲಗಿಲುಗಳು, ಪೀಟೋಪಕರಣಗಳ ಮೇಲೆ ಹತ್ತಿ ಇಳಿಯಲು ನಾನು ನನ್ನ ಸಹೋದರರು ಇಷ್ಟಪಡುತ್ತಿದ್ದೆವು. ಆದರೆ ಈಗ ಇದು ಸಾಧ್ಯವಿಲ್ಲ. ಏಕೆಂದರೆ ನನಗೆ ಈಗ ಮಕ್ಕಳಿವೆ ಎಂದು ಹೇಳಿದ್ದಾರೆ. ಸತ್ಯ ಹೇಳಬೇಕೆಂದರೆ ಚಿಕ್ಕ ಮಕ್ಕಳ ಕೈ ಕಾಲುಗಳು ಚಿಕ್ಕ ವಯಸ್ಸಿನಲ್ಲಿ ಗಮ್ ರೀತಿಯಲ್ಲಿ ಇರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.


First published: