news18-kannada Updated:March 1, 2021, 5:53 PM IST
ನಾಯಿಮರಿಯೊಂದಿಗೆ ಆಡುತ್ತಿರುವ ಪುಟ್ಟ ಮಗು
ನಾಯಿ ಮರಿಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ… ಪ್ರತಿಯೊಬ್ಬರೂ ಮುದ್ದು ಮುದ್ದಾದ ಶ್ವಾನಗಳನ್ನು ಇಷ್ಟಪಡುತ್ತಾರೆ. ಸಣ್ಣವರಿಂದ ಹಿಡಿದು ದೊಡ್ಡವರ ತನಕ ಅವುಗಳ ಜೊತೆ ಆಡವಾಡಬೇಕೆಂದು ಬಯಸುತ್ತಾರೆ. ಪುಟ್ಟ ಮಕ್ಕಳಿಗಂತೂ ನಾಯಿ ಮರಿಗಳೆಂದರೆ ಪಂಚಪ್ರಾಣ. ಇದೇ ರೀತಿ, ಪುಟ್ಟ ಮಗುವೊಂದು ನಾಯಿ ಮರಿಗಳ ಜೊತೆ ಆಟವಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. @HopkinsBRFC ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಅನೇಕರು ಮೆಚ್ಚುಗೆ ಸೂಚಿಸಿ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 36 ಸೆಕೆಂಡುಗಳಿರುವ ಈ ವಿಡಿಯೋ ಕ್ಲಿಪ್ ಇದೀಗ ಭಾರಿ ವೈರಲ್ ಆಗುತ್ತಿದೆ.
ಇನ್ನೂ ಅಂಬೆಗಾಲಿಡುವ ಮಗುವೊಂದು ನೆಲದ ಮೇಲೆ ಕುಳಿತಿದೆ. ಎರಡು ಪುಟ್ಟ ನಾಯಿ ಮರಿಗಳು ಮಗುವಿನ ಮೈಮೇಲೆಲ್ಲ ಹತ್ತಿ, ನೆಕ್ಕಿ, ಕಚ್ಚಿದಂತೆ ಮಾಡಿ ಆಟವಾಡುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಗು ಸ್ವಲ್ಪವೂ ಹೆದರದೇ ನಾಯಿಮರಿಗಳ ಕಚಗುಳಿಗೆ ನಗು ನಗುತ್ತಾ ಅವುಗಳ ಜೊತೆ ಆಟವಾಡುತ್ತದೆ. ಮಗು ಮತ್ತು ನಾಯಿಮರಿಗಳ ಈ ಆಟದ ವಿಡಿಯೋ ನಿಮ್ಮ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತದೆ. ಕಂದನ ಮನಸ್ಸಿಗೆ ಆನಂದ ನೀಡುವ ಶ್ವಾನದ ಆಟ ಮತ್ತು ಹೃದಯ ತುಂಬಿ ನಗುವ ಮುದ್ದು ಮಗುವಿನ ಖುಷಿಯನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆಂದು ಮನಸ್ಸು ಹಾತೊರೆಯುತ್ತದೆ.
ಇದನ್ನು ಓದಿ: ಸಿಕ್ಸ್ ಪ್ಯಾಕ್ ಬಳಿಕ ವಿದ್ಯಾರ್ಥಿಗಳೊಂದಿಗೆ ಪುಶ್ ಅಪ್, ಡ್ಯಾನ್ಸ್ ; ರಾಹುಲ್ ಗಾಂಧಿ ಫಿಟ್ನೆಸ್ಗೆ ನೆಟ್ಟಿಗರು ಫಿದಾಮಗುವಿನ ಮೈ ಹತ್ತಿ, ಬೆರಳು ಚೀಪುವ ನಾಯಿಮರಿಗಳ ಜೊತೆ ಮಗು ನಸುನಗುತ್ತಾ ವ್ಯಕ್ತಪಡಿಸುವ ಮುದ್ದಾದ ಭಾವಕ್ಕೆ ನೆಟ್ಟಿಗರು ಮನಸೋತಿದ್ದಾರೆ. ‘ವಾವ್ಹ್..!, ಅದ್ಭುತ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಈ ವಿಡಿಯೋ ನನಗೆ ನಗು ತರಿಸಿತು’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಕೆಲ ವಿಡಿಯೋಗಳು ಮಾತ್ರ ನೆಟಿಜನ್ಗಳ ಮನಸ್ಸು ಗೆಲ್ಲುತ್ತವೆ. ಈ ವಿಡಿಯೋ ಕೂಡ ಅನೇಕರ ಮುಖದಲ್ಲಿ ನಗು ಮೂಡಿಸಿದೆ. ನೀವು ಕೂಡ ಈ ವಿಡಿಯೋ ನೋಡಿ ಗ್ಯಾರಂಟಿ ನಗುತ್ತೀರಿ….
Published by:
Seema R
First published:
March 1, 2021, 5:53 PM IST