HOME » NEWS » Trend » WATCH VIDEO OF GROOM LOVINGLY FEED HIS BRIDE STG HG

Viral Video: ಮದುವೆಯ ದಿನನೂ ಗೋಲ್​ಗಪ್ಪ ತಿನ್ನುವ ಆಸೆ ಬಿಡಲಿಲ್ಲ ಈ ವಧು!

Golgappa lover: ಮದುವೆಯ ಧಿರಿಸಿನಲ್ಲಿದ್ದ ವಧುವಿಗೆ ವರ ಗೋಲ್‍ಗಪ್ಪ ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್‍ಗಪ್ಪ ಅಂಗಡಿಯ ಮುಂದೆ ನಿಂತ ವರ ವಧುವಿಗೆ ತಿನ್ನಿಸುವುದು ಲಕ್ಷಾಂತರ ನೆಟ್ಟಿಗರಿಗೆ ಖುಷಿ ನೀಡಿದೆ.

Trending Desk
Updated:June 18, 2021, 4:50 PM IST
Viral Video: ಮದುವೆಯ ದಿನನೂ ಗೋಲ್​ಗಪ್ಪ ತಿನ್ನುವ ಆಸೆ ಬಿಡಲಿಲ್ಲ ಈ ವಧು!
ಫೋಟೋ; ಇನ್​ಸ್ಟಾಗ್ರಾಂ
  • Share this:

ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎಂಬ ವಿಚಾರವೇ ಒಂದು ವಿಶೇಷ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕೊನೆಗೆ ಮದುವೆ ಎಂಬ ಮೂರಕ್ಷರದಲ್ಲಿ ಜೊತೆಗೂಡುವ ಬಂಧವೇ ಒಂದು ಅದ್ಭುತ. ಅಲ್ಲಿ ಪ್ರೀತಿ, ಆರೈಕೆ, ಕಾಳಜಿ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಸಂಭ್ರಮದ ಜೊತೆಗೆ ಹತ್ತು ಹಲವು ಭಾವನೆಗಳು ಒಂದುಗೂಡುತ್ತವೆ. ವಧು ವರರು ಕೇಂದ್ರಬಿಂದುವಾಗಿ, ಬಂಧುಬಳಗ, ಸ್ನೇಹಿತರು ಜೊತೆಗೂಡಿ ಖುಷಿ ಪಡೆಯುವ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ.


ಅಲ್ಲದೇ ಮದುವೆ ವೇಳೆ ಹುಡುಗ-ಹುಡುಗಿಯ ನಡುವೆ ಸಂವಹನಗೊಳ್ಳುವ ಭಾವನೆಗಳು, ತೋರುವ ಕಾಳಜಿಗಳ ಮೇಲೆ ಬಂದವರ ಕಣ್ಣಿರುತ್ತದೆ. ಇದರ ನಡುವೆ ಆತ, ಆಕೆಯ ಕಾಳಜಿಯ ಪರಿಯೇ ಚಂದ, ಇದು ಮದುವೆ ಸಮಯದಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಹೌದು ಇದೇ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದಿದೆ.



ಮದುವೆಯ ಧಿರಿಸಿನಲ್ಲಿದ್ದ ವಧುವಿಗೆ ವರ ಗೋಲ್‍ಗಪ್ಪ ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್‍ಗಪ್ಪ ಅಂಗಡಿಯ ಮುಂದೆ ನಿಂತ ವರ ವಧುವಿಗೆ ತಿನ್ನಿಸುವುದು ಲಕ್ಷಾಂತರ ನೆಟ್ಟಿಗರಿಗೆ ಖುಷಿ ನೀಡಿದೆ. ಈ ವಿಡಿಯೋವು ಆರುಷಿ ರಜಪೂತ್ ಅವರ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಆಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಮದುವೆಯೂ ನನ್ನ ಜಾಗದಲ್ಲೇ, ಗೋಲ್‍ಗಪ್ಪನೂ ನನ್ನ ಜಾಗದಲ್ಲೇ ಎಂಬ ಅಡಿ ಬರಹದಡಿ ಈ ವಿಡಿಯೋ ಹಂಚಿಕೆಯಾಗಿದೆ. ಇನ್‍ಸ್ಟಾಗ್ರಾಮ್ ಹೊರತಾಗಿಯೂ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಶೇರ್ ಆಗಿದೆ.


ಮದುವೆಗೆ ಸಂಬಂಧಪಟ್ಟಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಲೇ ಇರುತ್ತದೆ. ಕೆಲವು ವಿಡಿಯೋಗಳು ತಮಾಷೆಯಾಗಿರುತ್ತದೆ. ಇನ್ನು ಕೆಲವು ಭಾವನಾತ್ಮಕವಾಗಿರುತ್ತವೆ. ಈ ವಿಡಿಯೋ ಮಾತ್ರ ತುಂಬಾ ಹೃದಯ ಸ್ಪರ್ಶಿ, ಮನೋಹರ ಮತ್ತು ಅತ್ಯದ್ಭುತವಾಗಿದೆ.


ಇದನ್ನು ನೋಡಿದ ನೆಟ್ಟಿಗರು ತುಂಬಾ ಉತ್ತಮ ಜೋಡಿ ಎಂದು ಹೇಳಿದರೆ, ಇನ್ನು ಕೆಲವರು ಹಾರ್ಟ್ ಇಮೋಜಿ ಹಾಕಿ ಆ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಇದು ನಿಜವಾಗಿಯೂ ಬಹಳ ಖುಷಿ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ದೇವರ ಕೃಪಕಟಾಕ್ಷದಿಂದ ಇಂತಹ ಉತ್ತಮ ಜೋಡಿಯನ್ನು ಪಡೆದಿದ್ದೀರಿ ಎಂದು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ತಮ್ಮ ಮದುವೆಯಾದ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ. ಜತೆಗೆ ಮದುವೆಯ ಶುಭಾಶಯಗಳು, ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. ಇದು ಉತ್ತರ ಭಾರತದಲ್ಲಿ ನಡೆದ ಘಟನೆ ಎಂದು ಮೇಲ್ನೋಟಕ್ಕೆ ಕಂಡರೂ ಎಲ್ಲಿ ನಡೆದಿದೆ ಎಂಬ ವಿವರ ಇಲ್ಲ.






ಇನ್ನು ಇದೇ ರೀತಿಯ ಮದುವೆಯ ವಿಡಿಯೋ ವೈರಲ್ ಆಗಿತ್ತು. ವಧು ವರರು ಕುಟುಂಬಸ್ಥರ ನಡುವೆ ಊಟಕ್ಕೆ ಕುಳಿತಿರುತ್ತಾರೆ. ಆಗ ವಧುವಿನ ಬಾಯಿಂದ ಸಿಗರೇಟ್ ರೀತಿಯ ಹೊಗೆ ಬಾಯಿಂದ ಹೊರಬರುತ್ತದೆ. ಇದನ್ನು ಗಮನಿಸಿದ ಕೆಲವರು ವಧು ಸಿಗರೇಟ್ ಸೇದುತ್ತಿದ್ದಾಳೆಯೇ ಎಂಬ ಅನುಮಾನದ ಮೇಲೆ ಆಕೆಯ ಬಳಿ ಬಂದು ಪರೀಕ್ಷಿಸುತ್ತಾರೆ. ಆದರೆ ಆಕೆ ಯಾವುದೋ ಬಿಸಿ ಆಹಾರ ತಿಂದ ಪರಿಣಾಮ ಆ ರೀತಿಯಾಗಿ ಹೊಗೆ ಬರುತ್ತಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.


First published: June 18, 2021, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories