• Home
  • »
  • News
  • »
  • trend
  • »
  • Cute Baby Video: ಮಲಗಿದ್ದ ಅಮ್ಮನಿಗೆ ಕಾಟ ಕೊಟ್ಟು ಎಬ್ಬಿಸಿದ ಪುಟಾಣಿ, ಫುಲ್ ವೈರಲ್ ಆಗ್ತಿದೆ ವಿಡಿಯೋ

Cute Baby Video: ಮಲಗಿದ್ದ ಅಮ್ಮನಿಗೆ ಕಾಟ ಕೊಟ್ಟು ಎಬ್ಬಿಸಿದ ಪುಟಾಣಿ, ಫುಲ್ ವೈರಲ್ ಆಗ್ತಿದೆ ವಿಡಿಯೋ

ವೈರಲ್ ವೀಡಿಯೋ

ವೈರಲ್ ವೀಡಿಯೋ

Viral Video Of The Day: ಈ ವಿಡಿಯೋವನ್ನು ತನ್ಸು ಯೆಯೆನ್ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಇದು 25 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ಬಾಕ್ಸ್ ಸಹ ನೆಟ್ಟಿಗರ  ಕಾಮೆಂಟ್ ಗಳಿಂದ ತುಂಬಿಹೋಗಿದೆ

  • Share this:

ನಿಮಗೇನಾದರೂ ಮಹಿಳೆಯರು ತಾಯಿಯಾಗುವುದು (Mother), ಮಗುವನ್ನು (Child)  ನಿಭಾಯಿಸುವುದು, ಮನೆಯಲ್ಲಿ ಮಗುವನ್ನು ನೋಡಿಕೊಳ್ಳುತ್ತಾ ಕೆಲಸ ಮಾಡುವುದೇನು ದೊಡ್ಡ ಕೆಲಸ ಅಲ್ಲವೇ ಅಲ್ಲ ಅಂತ ಅನ್ನಿಸಿದರೆ, ನಿಮ್ಮ ಅನಿಸಿಕೆ ದೊಡ್ಡ ತಪ್ಪು ಅಂತಾನೆ ಹೇಳಬಹುದು. ಏಕೆಂದರೆ ತಾಯಿಯ ಕೆಲಸ ಅಷ್ಟೊಂದು ಸುಲಭದ ಕೆಲಸವಲ್ಲ, ಮನೆಯ ಕೆಲಸ ಮಾಡಿಕೊಂಡು ಮಗುವನ್ನು ನೋಡಿಕೊಳ್ಳುತ್ತಾ, ತನ್ನ ನಿದ್ರೆ (Sleep), ಆಹಾರ (Food) ಮತ್ತು ಆರೋಗ್ಯದ (Health Care) ಕಡೆಗೆ ಗಮನ ಹರಿಸುವುದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಮಕ್ಕಳು ತಾಯಿಯ ಹೊಟ್ಟೆಯಲ್ಲಿದ್ದಾಗಿನಿಂದ ಹಿಡಿದು ಬೆಳೆದು ಶಾಲೆಗೆ ಹೋಗುವ ತನಕ ಎಷ್ಟೋ ತಾಯಂದಿರಿಗೆ ಚೆನ್ನಾಗಿ ಕೂತು ಊಟ ಮಾಡಲು ಮತ್ತು ಚೆನ್ನಾಗಿ ರಾತ್ರಿ ಹೊತ್ತು ನಿದ್ರಿಸಲು ಆಗಿರುವುದಿಲ್ಲ.


ಒಂದು ಮಗುವನ್ನು ನಿಭಾಯಿಸುವ ಆ ತಾಯಿಯ ಆ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಬೇಕೆಂದರೆ ಇಲ್ಲಿರುವ ಒಂದು ವಿಡಿಯೋವನ್ನು ನೋಡಲೇಬೇಕು. ಮಕ್ಕಳು ತಾಯಿಗೆ ನೀಡಿದಷ್ಟು ಕಾಟ ತಂದೆಗೆ ನೀಡಿರುವುದಿಲ್ಲ ಅಂತಾನೆ ಹೇಳಬಹುದು. ನಿಸ್ಸಂದೇಹವಾಗಿಯೂ ಮಹಿಳೆ ದೇವರ ಅತ್ಯಂತ ಅನನ್ಯ ಮತ್ತು ಅತ್ಯುತ್ತಮ ಸೃಷ್ಟಿ ಅಂತಾನೆ ಹೇಳಬಹುದು.


ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಸದೃಢರು..


ಮಹಿಳೆಯರು ಬರೀ ಮಾನಸಿಕವಾಗಿ ಸದೃಢರಾಗಿರುವುದಲ್ಲದೆ, ದೈಹಿಕವಾಗಿಯೂ ಸಹ ತುಂಬಾನೇ ಬಲಶಾಲಿಗಳು ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಗಾಧವಾದ ಶಕ್ತಿಯನ್ನು ಹೊಂದಿರುತ್ತಾರೆ.


ಅವರು ಮಲ್ಟಿಟಾಸ್ಕಿಂಗ್ ಮತ್ತು ತಮ್ಮ ಜೀವನದುದ್ದಕ್ಕೂ ಬಹು ಪಾತ್ರಗಳನ್ನು ಸುಲಭವಾಗಿ ನಿರ್ವಹಿಸುತ್ತಾರೆ ಅಂತಾನೆ ಹೇಳಬಹುದು. ಅವರು ತಮ್ಮ ಇಡೀ ಜೀವನವನ್ನು ಇತರರ ಅಗತ್ಯಗಳನ್ನು ಪೂರೈಸಲು ಪ್ರೀತಿ, ಕಾಳಜಿ ಮತ್ತು ಆತ್ಮೀಯತೆಯನ್ನು ನೀಡಲು ಮುಡಿಪಾಗಿಟ್ಟಿರುತ್ತಾರೆ.


ಮಹಿಳೆಯರು ತಮ್ಮ ಜೀವನದುದ್ದಕ್ಕೂ ಹಲವಾರು ಹಂತಗಳನ್ನು ಹೊಂದಿರುತ್ತಾರೆ, ಮತ್ತು ಅತ್ಯಂತ ಕಠಿಣವಾದ ಮತ್ತು ಅತ್ಯಂತ ಆಶೀರ್ವಾದದ ಹಂತವೆಂದರೆ ಅದು ಒಬ್ಬ ಮಹಿಳೆ ತಾಯಿಯಾದಾಗ ಅಂತ ಹೇಳಬಹುದು. ಜೀವನದ ಅತ್ಯಂತ ಕಠಿಣವಾದ ಸಮಯವನ್ನು  ತೋರಿಸುವ ವಿಡಿಯೋ ಇಲ್ಲಿದೆ, ಇದನ್ನು ಮಿಸ್ ಮಾಡದೆ ನೋಡಿ.


ತಾಯಿ ಮತ್ತು ಮಗುವಿನ ವಿಡಿಯೋದಲ್ಲಿ ಏನಿದೆ?


ಈ 32 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಕಾಣುವಂತೆ, ಮಹಿಳೆಯೊಬ್ಬಳು ತನ್ನ ಹಾಸಿಗೆಯ ಮೇಲೆ ನಿದ್ರೆ ಮಾಡುತ್ತಿರುವಾಗ ಅವಳ ಮಗುವು ಅವಳ ಪಕ್ಕದಲ್ಲಿ ಮಲಗಿರುವುದು ಕಂಡು ಬರುತ್ತದೆ. ಆದಾಗ್ಯೂ, ಅಂಬೆಗಾಲಿಡುವ ಮಗುವು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬರುತ್ತದೆ.


ಕೆಲವೊಮ್ಮೆ ತನ್ನ ತಾಯಿಯ ಮೇಲೆ ಅಥವಾ ಅವಳ ಪಕ್ಕದಲ್ಲಿ ನಿಶ್ಚಲವಾಗಿ ಮಲಗಿರುವಾಗ, ಇತರ ಸಮಯಗಳಲ್ಲಿ, ಮಗುವು ತನ್ನ ತಾಯಿಯ ಮುಖದ ಮೇಲೆ ಕುಳಿತು, ಅವಳ ಕೂದಲನ್ನು ಎಳೆಯುವುದನ್ನು ಮತ್ತು ಅವಳು ಮುಖವನ್ನು ಕೆರೆದುಕೊಳ್ಳುವುದನ್ನು ನಾವು ನೋಡಬಹುದು.


ಇದನ್ನೂ ಓದಿ: ಜೀವನದ ನಿಜವಾದ ಸಕ್ಸಸ್ ಯಾವುದು? ಈ ವಿಡಿಯೋ ನೋಡಿ ಗೊತ್ತಾಗುತ್ತೆಈ ವಿಡಿಯೋದುದ್ದಕ್ಕೂ, ಶಕ್ತಿಯುತ ಅಂಬೆಗಾಲಿಡುವ ಮಗು ಮುದ್ದಾದ ಆದರೆ ಕಿರಿಕಿರಿಗೊಳಿಸುವ ಚಟುವಟಿಕೆಗಳನ್ನು ಮಾಡುವ ಮೂಲಕ ತನ್ನ ತಾಯಿಯ ನಿದ್ರೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು.


ಅಲ್ಲಿ ತಾಯಿಯ ಬದಲಿಗೆ ತಂದೆಯಾಗಿದ್ದಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಆದರೆ, ಅಲ್ಲಿ ಮಲಗಿರುವುದು ತಾಯಿಯಾಗಿರುವುದರಿಂದ, ಅವಳು ತನ್ನ ಮಗುವಿನ ತುಂಟಾಟಗಳನ್ನು ಸಹಿಸಿಕೊಂಡು ನಿದ್ರೆ ಮಾಡಲು ಪ್ರಯತ್ನಪಡುತ್ತಿರುವುದನ್ನು ನಾವು ಇಲ್ಲಿ ನೋಡಬಹುದು.


ವಿಡಿಯೋ ನೋಡಿದ ಮೇಲೆ ಆಲೋಚನೆ ಬದಲಾಗುತ್ತೆ!


ಮಹಿಳೆಯರ ಮತ್ತು ವಿಶೇಷವಾಗಿ ತಾಯಂದಿರ ಜೀವನವು ಸುಲಭವಾಗಿದೆ ಎಂಬ ಆಲೋಚನೆಗಳನ್ನು ಹೊಂದಿರುವ ಜನರು ಈ ವಿಡಿಯೋವನ್ನು ನೋಡಿದ ನಂತರ ಖಂಡಿತವಾಗಿಯೂ ಸತ್ಯವನ್ನು ಅರಿತುಕೊಳ್ಳಬಹುದು.


ಇದನ್ನೂ ಓದಿ: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ


ಯಾವುದೇ ಮಹಿಳೆಯನ್ನು ಅಗೌರವಿಸುವ ಮೊದಲು ಅಥವಾ ಅಗೌರವದ ಪದಗಳನ್ನು ಬಳಸುವ ಮೊದಲು ಅಂತಹುದೇ ಸನ್ನಿವೇಶಗಳ ಬಗ್ಗೆ ಯೋಚಿಸಬೇಕು ಮತ್ತು ಮಹಿಳೆಯರ ಜೀವನವು ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.


ಈ ವಿಡಿಯೋವನ್ನು ತನ್ಸು ಯೆಯೆನ್ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಇದು 25 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ಬಾಕ್ಸ್ ಸಹ ನೆಟ್ಟಿಗರ  ಕಾಮೆಂಟ್ ಗಳಿಂದ ತುಂಬಿಹೋಗಿದೆ.

Published by:Sandhya M
First published: