HOME » NEWS » Trend » WATCH TURK MOTHER THROWS HER CHILDREN FROM BURNING BUILDING STG LG

ಅಗ್ನಿ ಅವಘಡದಿಂದ ರಕ್ಷಿಸಲು ತನ್ನ 4 ಮಕ್ಕಳನ್ನು ಕಟ್ಟಡದಿಂದ ಎಸೆದ ತಾಯಿ; ವಿಡಿಯೋ ವೈರಲ್

ದಟ್ಟ ಹೊಗೆ ಇದ್ದರೂ ಕೂಡ ಧೈರ್ಯ ಕಳೆದುಕೊಳ್ಳದ ತಾಯಿ ತನ್ನ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಕೆಳಗೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮಹಿಳೆ ತನ್ನ ಮಕ್ಕಳನ್ನು ಒಂದರ ನಂತರ ಒಂದರಂತೆ ಬಾಲ್ಕನಿ ಕಿಟಕಿಯಿಂದ ಕೆಳಗೆ ಎಸೆದಿದ್ದಾಳೆ.

news18-kannada
Updated:March 3, 2021, 8:34 AM IST
ಅಗ್ನಿ ಅವಘಡದಿಂದ ರಕ್ಷಿಸಲು ತನ್ನ 4 ಮಕ್ಕಳನ್ನು ಕಟ್ಟಡದಿಂದ ಎಸೆದ ತಾಯಿ; ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ
  • Share this:
ಅಗ್ನಿ ಅವಘಡದಲ್ಲಿ ಸಿಲುಕಿದ್ದ ತನ್ನ ನಾಲ್ವರು ಮಕ್ಕಳನ್ನು ತಾಯಿಯೊಬ್ಬಳು ಒಬ್ಬರ ಹಿಂದೆ ಒಬ್ಬರಂತೆ ಕೆಳಕ್ಕೆ ಎಸೆದು ರಕ್ಷಿಸಿರುವ ಘಟನೆ ಇಸ್ತಾನ್ಬುಲ್ ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮಕ್ಕಳನ್ನು ರಕ್ಷಿಸಿರುವ ತಾಯಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಹುಮಹಡಿ ಕಟ್ಟಡದ 3ನೇ ಅಂತಸ್ತಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಟ್ಟಡದ ತುಂಬಾ ಆವರಿಸಿ ದಟ್ಟ ಹೊಗೆ ಆವರಿಸಿತ್ತು. ಈ ವೇಳೆ ಕಟ್ಟಡದಲ್ಲಿದ್ದ ಮಕ್ಕಳು ಚೀರಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಏನು ಮಾಡಬೇಕೆಂದು ದಿಕ್ಕೇ ತೋಚದ ತಾಯಿ ಒಂದು ಕ್ಷಣವೂ ಯೋಚಿಸಿದೆ 4 ಮಕ್ಕಳನ್ನು ಒಬ್ಬರ ಹಿಂದೊಬ್ಬರಂತೆ ಕಳಕ್ಕೆ ಎಸೆದು ರಕ್ಷಿಸಿದ್ದಾಳೆ.

Ramesh Jarkiholi: ನೀರಾವರಿ ಸಚಿವರ ರಾಸಲೀಲೆ ಆರೋಪ ಪ್ರಕರಣ: ರಮೇಶ್ ಜಾರಕಿಹೊಳಿ ಹೇಳುವುದೇನು? ಸಚಿವರ ತಲೆದಂಡ ಸಾಧ್ಯತೆ?

ದಟ್ಟ ಹೊಗೆ ಇದ್ದರೂ ಕೂಡ ಧೈರ್ಯ ಕಳೆದುಕೊಳ್ಳದ ತಾಯಿ ತನ್ನ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಕೆಳಗೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮಹಿಳೆ ತನ್ನ ಮಕ್ಕಳನ್ನು ಒಂದರ ನಂತರ ಒಂದರಂತೆ ಬಾಲ್ಕನಿ ಕಿಟಕಿಯಿಂದ ಕೆಳಗೆ ಎಸೆದಿದ್ದಾಳೆ. ಆಗ ಜನರು ಬ್ಲಾಂಕೆಟ್ ಮೂಲಕ ಮಕ್ಕಳನ್ನು ಹಿಡಿದು ರಕ್ಷಿಸಿರುವ ದೃಶ್ಯವನ್ನು ವಿಡಿಯೋ ಕ್ಲಿಪ್ ನಲ್ಲಿ ಕಾಣಬಹುದಾಗಿದೆ.

5 ಅಂತಸ್ತಿನ ಕಟ್ಟಡದ 3ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಆವರಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತನ್ನ ಮಕ್ಕಳನ್ನು ರಕ್ಷಿಸಲು ತಾಯಿ ಅವರನ್ನು ಕೆಳಕ್ಕೆ ಎಸೆದಿದ್ದಾಳೆ. ಕಟ್ಟಡದ ಕೆಳಗಿದ್ದ ಜನರು ಸಮಯಪ್ರಜ್ಞೆ ಮೆರೆದು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಟರ್ಕಿಯ ಸುದ್ದಿ ಮೂಲಗಳನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.

ಘಟನೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಅಲ್ಲದೇ ಅದೇ ಕಟ್ಟಡದಲ್ಲಿದ್ದ ಇನ್ನಿಬ್ಬರು ಅಪ್ರಾಪ್ತ ಮಕ್ಕಳು ಮತ್ತು ಇಬ್ಬರು ವೃದ್ಧರನ್ನೂ ಸಹ ರಕ್ಷಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Published by: Latha CG
First published: March 3, 2021, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories