ಈಗ ಬಹುತೇಕ ಎಲ್ಲರ ಬಳಿಯಲ್ಲೂ ಮೊಬೈಲ್ ಇರುತ್ತದೆ. ಅಲ್ಲದೆ, ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಈ ಹಿನ್ನೆಲೆ ಪ್ರತಿದಿನ ಕೆಲ ವಿಡಿಯೋಗಳು ಇಂಟರ್‌ನೆಟ್‌ಲ್ಲಿ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಪ್ರಾಣಿ - ಪಕ್ಷಿಗಳ ವಿಡಿಯೋಗಳಂತೂ ಸಾಕಷ್ಟು ವೈರಲ್ ಆಗುತ್ತಿರುತ್ತದೆ. ಕಾಡು, ಮನೆ, ಝೂ - ಹೀಗೆ ಪ್ರಾಣಿಗಳ ಕ್ಯೂಟ್ ವಿಡಿಯೋಗಳು ಸಾಕಷ್ಟು ಸೆರೆಯಾಗುತ್ತಿರುತ್ತದೆ, ಅದೇ ರೀತಿ, ಇತ್ತೀಚೆಗೆ ಸಿಂಹ ಹಾಗೂ ಸಿಂಹದ ಮರಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಂಹದ ಮರಿಯೊಂದು ತನ್ನ ತಾಯಿಯೊಂದಿಗೆ ಆಟವಾಡುತ್ತಿರುವ ಒಂದು ಮುದ್ದಾದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ, ಇತ್ತೀಚೆಗೆ ನೋಡಿದ ಅತ್ಯಂತ ಮುದ್ದಾದ ವನ್ಯಜೀವಿಯ ಕ್ಲಿಪ್ ಎಂದು ನಾವು ಹೇಳಬಹುದು. ಈ 30 ಸೆಕೆಂಡುಗಳ ವಿಡಿಯೋ ಕ್ಲಿಪ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುರೇಂದರ್ ಮೆಹ್ರಾ ತಮ್ಮ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ.
ಸಿಂಹಿಣಿ ತನ್ನ ಮಗುವನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವುದನ್ನು ನಾವು ನೋಡಬಹುದು. ಕೆಲವು ಕ್ಷಣಗಳ ನಂತರ, ಸಿಂಹದ ಮರಿ ತನ್ನ ಸ್ಥಳದಿಂದ ಎದ್ದು ತನ್ನ ಘರ್ಜನೆಯನ್ನು ಅಭ್ಯಾಸ ಮಾಡುವಾಗ ನಡೆಯಲು ಆರಂಭಿಸಿತು. ಅದು ತುಂಬಾ ಮುದ್ದಾಗಿದೆ ಎಂಬುದನ್ನು ನಾವು ನಿಮಗೆ ಹೇಳಲೇಬೇಕು. ನಂತರ ತಾಯಿ ಸಿಂಹ ಸಹ ಮರಿ ಸಿಂಹವನ್ನು ಹಿಂಬಾಲಿಸಿಕೊಂಡು ಬಂದು ನಂತರ ತಾಯಿ ಹಾಗೂ ಮಗು
ಇಬ್ಬರೂ ಅಪ್ಪಿಕೊಳ್ಳುವುದು ಹಾಗೂ ಮುದ್ದಾಡುವುದನ್ನು ಆರಂಭಿಸಿದರು.
It’s not just the number of a particular wild species that is important..!
More important is how we keep this population healthy and secure their natural habitat at landscape level..#WorldLionDay 🦁@GujForestDept @moefcc @CentralIfs pic.twitter.com/YJYxRh3c2C
— Surender Mehra IFS (@surenmehra) August 10, 2021
"ಇದು ಕೇವಲ ಒಂದು ನಿರ್ದಿಷ್ಟ ಕಾಡು ಜಾತಿಗಳ ಸಂಖ್ಯೆ ಮಾತ್ರವಲ್ಲ. ಈ ಜನಸಂಖ್ಯೆಯನ್ನು ನಾವು ಹೇಗೆ ಆರೋಗ್ಯಕರವಾಗಿ ಇರಿಸಿಕೊಳ್ಳುತ್ತೇವೆ ಮತ್ತು ಅವರ ನೈಸರ್ಗಿಕ ಆವಾಸಸ್ಥಾನವನ್ನು ಭೂದೃಶ್ಯ ಮಟ್ಟದಲ್ಲಿ ಹೇಗೆ ಸುರಕ್ಷಿತವಾಗಿರಿಸಿಕೊಳ್ಳುತ್ತೇವೆ ಎಂಬುದು ಹೆಚ್ಚು ಮುಖ್ಯವಾಗಿದೆ'' ಎಂದು ಐಎಫ್‌ಎಸ್ ಅಧಿಕಾರಿ ಸುರೇಂದರ್ ಮೆಹ್ರಾ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿದ್ದಾರೆ.
ಈ ಚಿಕ್ಕ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು 20,000 ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದರೆ, 1,500 ಲೈಕ್‌ಗಳನ್ನು ಗಳಿಸಿದೆ. ಇನ್ನು, ಈವರೆಗೆ 35 ಮಂದಿ ಕಮೆಂಟ್ ಮಾಡಿದ್ದರೆ, 350ಕ್ಕೂ ಹೆಚ್ಚು ಜನ ಐಎಫ್‌ಎಸ್ ಅಧಿಕಾರಿ ಶೇರ್ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ರೀಟ್ವೀಟ್ ಮಾಡಿದ್ದಾರೆ. ಮತ್ತು ನೆಟ್ಟಿಗರು ಈ ಕ್ಲಿಪ್ ಅನ್ನು ನೋಡಿ ಆನಂದಿಸುತ್ತಿದ್ದಾರೆ.
ವಿಶ್ವ ಸಿಂಹಗಳ ದಿನವಾದ ಆಗಸ್ಟ್ 10 ರಂದು ಈ ವಿಡಿಯೋವನ್ನು ಸುರೇಂದ್ರ ಮೆಹ್ರಾ ಶೇರ್ ಮಾಡಿಕೊಂಡಿದ್ದು, ಈ ಕ್ಲಿಪ್‌ಗೆ ಕೆಲವರು ಸಿಂಹಗಳ ಇತರೆ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಇನ್ನು, ಇದು ಸಖತ್ ಕ್ಯೂಟ್ ಆಗಿದೆ, ಎಷ್ಟು ಸುಂದರವಾಗಿದೆ, ಎಷ್ಟು ಪ್ರೀತಿಯಿಂದ ಕೂಡಿದೆ.. - ಹೀಗೆ ಸಿಂಹ ಹಾಗೂ ಮರಿ ಸಿಂಹದ ಮುದ್ದಾದ ವಿಡಿಯೋಗೆ ನೆಟ್ಟಿಗರು ನಾನಾ ವಿಧದ ಕಮೆಂಟ್‌ಗಳನ್ನು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ