ಪ್ರಕೃತಿ ನಮಗೆ ಕಲಿಸುವ ಪಾಠ ದೊಡ್ಡದು. ನಮ್ಮ ಸುತ್ತಲಿನ ಪರಿಸರ ಮತ್ತು ಪ್ರಾಣಿಗಳ (Animals) ಯಾವುದೇ ಹಾನಿಯಿಲ್ಲದ ವರ್ತನೆಗಳಿಂದ ನಾವು ಪ್ರೇರಣೆಯನ್ನು ಪಡೆಯಬಹುದು. ಅಸಲಿಗೆ, ನಮ್ಮ ಜೊತೆಗಿನ ಮನುಷ್ಯರಿಗಿಂತಲೂ, ಮುಗ್ಧ , ಮೂಕ ಪ್ರಾಣಿಗಳಿಂದ ನಾವು ಕಲಿಯಬೇಕಾದ ಸಂಗತಿಗಳು ಬಹಳಷ್ಟಿವೆ. ಜಾಣತನದ ಕಿರೀಟ ತೊಟ್ಟು ಬೀಗುತ್ತಿರುವ ಮನುಷ್ಯನಿಗಿಂತ (Man), ಹುಟ್ಟಿನಿಂದಲೇ ಪ್ರಕೃತಿಯಿಂದ ಜಾಣತನವನ್ನು ವರವಾಗಿ ಪಡೆದಿರುವ ಪ್ರಾಣಿಗಳು ಎಷ್ಟೋ ವಾಸಿ. ಅದಕ್ಕೆ ಉದಾಹರಣೆಯಂತಿರುವ ಅನೇಕ ವಿಡಿಯೋಗಳನ್ನು (Video) ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿ, ಹುಬ್ಬೇರಿಸಿರುತ್ತೇವೆ ಅಲ್ಲವೇ? ಇದೀಗ ಅಂತದ್ದೇ ಒಂದು ಸ್ಫೂರ್ತಿದಾಯಕ ವಿಡಿಯೋ ಇಂಟರ್ನೆಟ್‍ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಆಡುಗಳು (Goat), ತುಂಬಿ ಹರಿಯುತ್ತಿರುವ ನದಿಯನ್ನು ದಾಟುತ್ತಿರುವ ದೃಶ್ಯವುಳ್ಳ ವಿಡಿಯೋ ಅದು.
ಶಿಸ್ತಿನಿಂದ ನದಿ ದಾಟುತ್ತಿರುವ ಆಡುಗಳು
ಈ ವಿಡಿಯೋವನ್ನು ಯಾವಾಗ ಚಿತ್ರಿಸಲಾಗಿದೆ ಎಂಬ ಕುರಿತು ಪೋಸ್ಟಿನಲ್ಲಿ ಯಾವುದೇ ಮಾಹಿತಿ ಇಲ್ಲ. ವಿಡಿಯೋದಲ್ಲಿ, ಅತ್ಯಂತ ರಭಸದಿಂದ ತುಂಬಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಮೆಂಟ್ ಬ್ಲಾಕ್‍ಗಳ ಮೇಲೆ ನಾಲ್ಕೈದು ಆಡುಗಳು, ಒಂದರ ಹಿಂದೆ ಒಂದು, ಶಿಸ್ತಾಗಿ, ಎಚ್ಚರಿಕೆಯಿಂದ ಸರದಿ ಪ್ರಕಾರ ನೆಗೆಯುತ್ತಾ, ಆ ನದಿಯನ್ನು ದಾಟುವ ದೃಶ್ಯವಿದೆ.
ಟ್ವಿಟ್ಟರ್ ನಲ್ಲಿ ವೈರಲ್ ಆದ ವಿಡಿಯೋ
ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿರುವ ದಿಪಾಂಶು ಕಬ್ರಾ ಎಂಬವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ 15 ಸೆಕೆಂಡ್‍ಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಈ ಪೋಸ್ಟಿಗೆ “ಬೇರೆಯವರಿಗೆ ಜಾಗ ಕೊಟ್ಟೇ, ನೀವು ಮುಂದೆ ಹೋಗಬಹುದು” ಎಂದು ಅಡಿಬರಹವನ್ನು ಕೂಡ ಬರೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ ಹಾಗೂ 16,000 ಕ್ಕೂ ಅಧಿಕ ಮೆಚ್ಚುಗೆಗಳನ್ನು ಗಳಿಸಿದೆ.
ಇದನ್ನೂ ಓದಿ: Cat And Kitten: ಬೆಕ್ಕಿನ ಮರಿಗಳ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್
ಈ ವಿಡಿಯೋ ನೀಡುವ ಸಂದೇಶವನ್ನು ಬಹಳಷ್ಟು ಮಂದಿ ನೆಟ್ಟಿಗರು, ತಮ್ಮ ಆಲೋಚನೆ ಮತ್ತು ಅನುಭವಕ್ಕೆ ತಕ್ಕಂತೆ ಅರ್ಥ ಮಾಡಿಕೊಂಡು, ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ವಿಡಿಯೋ ನೋಡಿ ಟ್ವಿಟ್ಟರ್ ಬಳಕೆದಾದರು ಹೇಳಿದ್ದು ಹೀಗೆ
“ನೀವು ಎಲ್ಲಿಗಾದರೂ ತಲುಪಬೇಕೆಂದು ಬಯಸಿದರೆ, ನೀವು ಈಗಾಗಲೇ ಆವರಿಸಿಕೊಂಡಿರುವ ಜಾಗವನ್ನು ಖಾಲಿ ಮಾಡಿಕೊಳ್ಳಬೇಕು. ಭೌತಶಾಸ್ತ್ರದ ನಿಯಮಗಳು ಕೂಡ ಈ ಫಿಲಾಸಫಿಯನ್ನು ಸತ್ಯ ಎಂದು ಪರಿಗಣಿಸುತ್ತವೆ. ಅಂದರೆ, “ಒಂದು ವಸ್ತುವು ಒಂದೇ ಸಮಯದಲ್ಲಿ ಒಂದೇ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ” ಎಂದು ಅದು ಹೇಳುತ್ತದೆ” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
दूसरों को स्थान देकर ही,
आप आगे बढ़ सकते हैं pic.twitter.com/N0kybVtLrq
— Dipanshu Kabra (@ipskabra) July 11, 2022
“ವಿಶೇಷವಾಗಿ, ಕಾರ್ಪೋರೇಟ್ ಕಂಪೆನಿಗಳಲ್ಲಿ ಬೆಳವಣಿಗೆ ಹೊಂದಲು ಇದು ಅತ್ಯಂತ ಉತ್ತಮ ಮಾರ್ಗವಾಗಿದೆ. ನಿಮ್ಮ ತಂಡದ ಸದಸ್ಯರಿಗೆ ತರಬೇತಿ ನೀಡಿ ಮತ್ತು ಅವರು ಕೆಲಸವನ್ನು ಮಾಡಲಿ, ಅದೇ ಸಮಯದಲ್ಲಿ ನೀವು ನಿಮ್ಮ ನಾಯಕತ್ವದ ಗುಣವನ್ನು ಹೆಚ್ಚಿಸಿಕೊಳ್ಳುತ್ತಿರಿ” ಎಂದು ಇನ್ನೊಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Blue Lobster: ಅಪರೂಪದ ನೀಲಿ ಚೇಳೇಡಿ ಪತ್ತೆ, ಫೊಟೋ ಈಗ ವೈರಲ್
“ನಾಯಕತ್ವದ ಕುರಿತ ಸರಿಯಾದ ವಿವರಣೆ” ಎಂದು ಒಬ್ಬರು ಪ್ರಶಂಸಿಸಿದ್ದರೆ, ಇನ್ನೊಬ್ಬರು, “ನಿಜ. . .ನಾವು ಈ ಪ್ರಾಣಿಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. . ಮನುಷ್ಯರಾದ ನಾವು ನಮ್ಮನ್ನು ಭಾರೀ ಬುದ್ಧಿವಂತರು ಎಂದು ಭಾವಿಸಿಕೊಂಡಿದ್ದೇವೆ, ಆದರೆ ನಾವು ಅತ್ಯಂತ ಸ್ವಾರ್ಥಿಗಳು ಮತ್ತು ದುರಾಸೆವುಳ್ಳವರಾಗುತ್ತಿದ್ದೇವೆ. . .” ಎಂದು ಅಭಿಪ್ರಾಯ ಬರೆದಿದ್ದಾರೆ. “ನಾಯಕರನ್ನು ಸೃಷ್ಟಿಸುವವನು ನಾಯಕನಾಗಿರುತ್ತಾನೆ” ಎಂದು ಇನ್ನೊಬ್ಬ ನೆಟ್ಟಿಗ ಬರೆದಿದ್ದರೆ,
ಮತ್ತೊಬ್ಬರು “ಇವುಗಳ ಹತ್ತಿರ ಪದವಿ ಇರುವುದಿಲ್ಲ ಆದರೂ ಹೇಗೆ ಇಷ್ಟು ಜಾಣರಾಗಿರುತ್ತವೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ, “ ಮನುಷ್ಯನಾಗಲಿ, ಪ್ರಾಣಿಯಾಗಲಿ ಜೀವನದಲ್ಲಿ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಗೊತ್ತಿರಬೇಕು, ಜೀವನ ಸುಲಭವಾಗಿರುವುದಿಲ್ಲ” ಎಂದು ಉತ್ತರಿಸಿದ್ದಾರೆ. “ಈ ಸಂದೇಶ ಮತ್ತು ಆತ್ಮವಿಶ್ವಾಸ ಪುಸ್ತಕಗಳಿಂದಲ್ಲ, ಸಂಸ್ಕಾರದಿಂದ ಬರುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ