ಕೆಲವೊಮ್ಮೆ ನಾವು ರಾತ್ರಿ ಹೊತ್ತಿನಲ್ಲಿ ಮನೆಯ ದಾರಿಯಲ್ಲಿ ಒಬ್ಬರೇ ನಡೆದುಕೊಂಡು ಬರುವಾಗ ಅಲ್ಲಿಯೇ ರಸ್ತೆಯ ಬದಿಯಲ್ಲಿರುವ ಕಸದ ದೊಡ್ಡ ಕಂಟೆನರ್ ನಲ್ಲಿರುವ ಕಸದಲ್ಲಿ ಆಹಾರ (Food) ಹುಡುಕಿಕೊಂಡು ತಿನ್ನುತ್ತಿರುವ ನಾಯಿಯೊಂದು ನಾವು ಬರುವ ಹೆಜ್ಜೆ ಶಬ್ದ ಕೇಳಿ ಚಂಗನೆ ಆ ಕಂಟೆನರ್ ನಿಂದ ಹೊರಕ್ಕೆ ಹಾರಿದಾಗ ನಾವು ಒಂದು ಕ್ಷಣ ಬೆಚ್ಚಿ ಬಿದ್ದಿರುವುದು ಇರುತ್ತದೆ. ಹೀಗೆ ನಾವು ನಿರೀಕ್ಷಿಸದ ಸಮಯದಲ್ಲಿ ಪ್ರಾಣಿಗಳು (Animals) ನಮ್ಮ ಮುಂದೆ ಬಂದರೆ ಅಥವಾ ನಮ್ಮ ಮೈ ಮೇಲೆ ಹಾರಿದರೆ, ನಮಗೆ ಭಯವಾಗುವುದಂತೂ ನಿಜ. ಇದರ ಬಗ್ಗೆ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಒಂದು ಕ್ಷಣ ಅನ್ನಿಸಬಹುದು. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ಹರಿದಾಡುತ್ತಿದೆ ನೋಡಿ.
ಅನಿರೀಕ್ಷಿತವಾಗಿ ಕರಡಿಯನ್ನು ನೋಡಿ ಓಡಿ ಹೋದ ಶಾಲೆಯ ಪ್ರಾಂಶುಪಾಲರು
ಪಶ್ಚಿಮ ವರ್ಜೀನಿಯಾದ ಜೆಲಾ ಎಲಿಮೆಂಟರಿ ಶಾಲೆಯ ಪ್ರಾಂಶುಪಾಲರು 'ಡಂಪ್ಸ್ಟರ್ ಡೈವಿಂಗ್' ಕರಡಿಯೊಂದಿಗೆ ಮುಖಾಮುಖಿಯಾದರು. ಪ್ರಿನ್ಸಿಪಾಲ್ ಜೇಮ್ಸ್ ಮಾರ್ಷ್ ಸೋಮವಾರ ಬೆಳಗ್ಗೆ ಶಾಲೆಯ ಹೊರಗೆ ಇರುವಂತಹ ಒಂದು ಕಸದ ರಾಶಿಯಿರುವ ಕಂಟೆನರ್ ಮುಚ್ಚಳವನ್ನು ತೆರೆದು ನೋಡಿದಾಗ ಅಲ್ಲಿ ಅನಿರೀಕ್ಷಿತವಾಗಿ ಕರಡಿಯನ್ನು ಕಂಡರು.
ಈ ಭಯ ಬೀಳಿಸುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನಿಕೋಲಸ್ ಕೌಂಟಿ ಬೋರ್ಡ್ ಆಫ್ ಎಜುಕೇಶನ್ ತನ್ನ ಫೇಸ್‌ಬುಕ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Bengaluruನಲ್ಲಿ ಫ್ರೀಯಾಗಿ ವೈಫೈ ಸಿಗುವ ಅದ್ಭುತ ಸ್ಥಳಗಳು ಇವೇ ನೋಡಿ!
ಮಾರ್ಷ್ ಅವರು ಕಸದ ಕಂಟೆನರ್ ನ ಲಾಕ್ ಅನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದ್ದರು, ಆಗ ಕರಡಿಯೊಂದು ಅದರೊಳಗಿಂದ ಅವರನ್ನು ನೋಡಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಾರ್ಷ್ ಕರಡಿಯನ್ನು ನೋಡಿ ಭಯದಿಂದ ಅಲ್ಲಿಂದ ಓಡಿ ಹೋಗುವುದನ್ನು ತೋರಿಸುತ್ತದೆ.
ಅದೃಷ್ಟವಶಾತ್ ಆ ಕರಡಿ ಮಾರ್ಷ್ ಮೈ ಮೇಲೆ ಹಾರದೆ, ವಿರುದ್ಧ ದಿಕ್ಕಿನಲ್ಲಿ ಕೆಳಕ್ಕೆ ಹಾರಿ ಬೇಗನೆ ಓಡಿ ಹೋಯಿತು. ನಂತರ ಪ್ರಾಂಶುಪಾಲರು ಸಹ ಅತ್ತ ಇತ್ತ ನೋಡಿ ಮನೆಯೊಳಗೆ ಹೋದರು.
ವಿಡಿಯೋಗೆ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ ನೋಡಿ..
ಈ ವಿಡಿಯೋದ ಶೀರ್ಷಿಕೆಯಲ್ಲಿ "ಪ್ರಾಂಶುಪಾಲರಿಗೆ ಅಪಾಯ ಎದುರಾಗುವುದಿಲ್ಲ ಅಂತ ಯಾರು ಹೇಳುತ್ತಾರೆ?" ಅಂತ ಬರೆದಿದ್ದಾರೆ. ಕಂಟೇನರ್ ಒಳಗೆ ಹೋಗಲು ಬಹುಶಃ ಆ ಕರಡಿ ಕಂಟೆನರ್ ಹಿಂದೆ ಇರುವಂತಹ ದಾರಿಯನ್ನು ಬಳಸಿರಬಹುದು, ನಂತರ ಆ ದಾರಿಯನ್ನು ಮುಚ್ಚಳದಿಂದ ಮುಚ್ಚಿದಾಗ ಅದು ಅಲ್ಲಿಯೇ ಅಡಗಿ ಕುಳಿತಿರಬಹುದು ಅಂತ ಮಾರ್ಷ್ ಅವರು ಹೇಳಿದ್ದಾರೆ ಎಂದು ಯುಪಿಐ ವರದಿ ಮಾಡಿದೆ.
ವೀಡಿಯೋಗೆ ಅನೇಕ ಕಾಮೆಂಟ್ ಗಳು ಸಹ ಬಂದಿವೆ..
ಈ 1 ನಿಮಿಷ 11 ಸೆಕೆಂಡಿನ ವಿಡಿಯೋವನ್ನು 15 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಉಲ್ಲಾಸಕರ ಕಾಮೆಂಟ್ ಗಳನ್ನು ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಕೇವಲ 5,000 ಇದ್ರೆ ಸಾಕು, ಇಷ್ಟೆಲ್ಲಾ ಪ್ಲೇಸ್ಗಳಿಗೆ ಓಡಾಡ್ಬೋದು ಗೊತ್ತಾ? ಮಿಸ್ ಮಾಡ್ಲೇಬೇಡಿ
ವಿಡಿಯೋಗೆ ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು "ಕರಡಿ ಅವರಿಗಿಂತ ವೇಗವಾಗಿ ಓಡಿದ್ದರಿಂದ ಅವರು ಪರಸ್ಪರ ಹೆದರಿದರು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಅಯ್ಯೋ ಪಾಪ.. ಮನುಷ್ಯನಿಗೆ ತಕ್ಷಣವೇ ಹೊಸ ಡ್ರಾಯರ್ ಗಳ ಅಗತ್ಯವಿದೆ ಎಂದು ನನಗೆ ಅನ್ನಿಸುತ್ತಿದೆ" ಅಂತ ತಮಾಷೆಯಾಗಿ ಹೇಳಿದ್ದಾರೆ.
"ಯಾರೋ ಕರಡಿಯನ್ನು ನೋಡುವವರೆಗೆ ಈ ಕಂಟೆನರ್ ನಲ್ಲಿ ಆರಾಮಾಗಿ ಕುಳಿತ್ತಿತ್ತು. ಆದರೆ ಈಗ ಅದು ಹೊರಗೆ ಬಂದು ಇನ್ನಷ್ಟು ಸ್ವತಂತ್ರವಾಗಿದೆ" ಎಂದು ಮೂರನೆಯವರು ತಮ್ಮ ಕಾಮೆಂಟ್ ನಲ್ಲಿ ಹೇಳಿದ್ದಾರೆ.
ನಾಲ್ಕನೆಯವರು ಈ ವಿಡಿಯೋವನ್ನು ನೋಡಿ "ಶಾಲಾ ಪ್ರಾಂಶುಪಾಲರು ಈ ಆಘಾತವನ್ನು ಸಹಿಸಿಕೊಳ್ಳುವರೆ?” ಅಂತ ಕಾಮೆಂಟ್ ಮಾಡಿದರೆ, ಐದನೆಯ ಬಳಕೆದಾರರು “ನಾನು ಈ ವೀಡಿಯೋವನ್ನು ಮತ್ತೆ ಮತ್ತೆ ನೋಡಿದ್ದೇನೆ ಮತ್ತು ಅದನ್ನು ಇಷ್ಟಪಟ್ಟಿದ್ದೇವೆ" ಅಂತ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ