• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Reality Show: ಮಾಸ್ಟರ್ ಶೆಫ್​ ಸ್ಪರ್ಧೆಯಲ್ಲಿ ಯುವತಿಯ ಎಡವಟ್ಟು, ಕಥೆ ಕೇಳಿ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!

Reality Show: ಮಾಸ್ಟರ್ ಶೆಫ್​ ಸ್ಪರ್ಧೆಯಲ್ಲಿ ಯುವತಿಯ ಎಡವಟ್ಟು, ಕಥೆ ಕೇಳಿ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!

ವೈರಲ್​ ಲೇಡಿ

ವೈರಲ್​ ಲೇಡಿ

ಓರ್ವ ಯುವತಿ ಮಾತ್ರ ಎಲ್ಲರಿಗಿಂತ ಸಖತ್​ ಸ್ಪೆಷಲ್​ ರೆಸಿಪಿ ತೀರ್ಪುಗಾರರ ಮುಂದಿಟ್ಟರು. ಇದೇ ವಿಷಯ ವೈರಲ್​ ಆಗಲು ಕಾರಣ.

  • Share this:

ರಿಯಾಲಿಟಿ ಶೋಗಳು (Reality Show) ಇತ್ತೀಚಿಗಿನ ಕಾಲದಲ್ಲಿ ಕಾಂಪಿಟೇಶನ್​ ಆಗಿಬಿಟ್ಟಿದೆ ಬಿಡಿ. ಜನರ ಪ್ರತಿಭೆಯನ್ನು ಗುರುತಿಸಲೆಂದು ಆರಂಭವಾದ ಈ ಶೋಗಳು ಇದೀಗ ಟಿಆರ್​ಪಿ ಸಲುವಾಗಿ ನಿಜವಾದ ಪ್ರತಿಭೆಗಳು ಸಾಯುತ್ತಾ ಇದ್ದಾರೆ. ಅದೆಷ್ಟೋ ಬಾರಿ ಈ ರಿಯಾಲಿಟಿ ಶೋಗಳು ನಿಜವಾಗಿಯೂ ಪ್ರತಿಭೆಗಳನ್ನು ಗುರುತಿಸ್ತಾ ಇದ್ಯಾ ಅನ್ನೋದೇ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಇದೀಗ ಇಂತದ್ದೇ ಒಂದು ವಿಷಯಕ್ಕೆ ಸಂಬಂಧ ಪಟ್ಟಂತೆ ಒಂದು ವಿಷಯ ವೈರಲ್​ (Viral) ಆಗ್ತಾ ಇದೆ. ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಮನೆಯ ಅಡುಗೆಯವರು ಭಾಗವಹಿಸಿ ತಮ್ಮ ಪಾಕಶಾಲೆಯ ಕೌಶಲ್ಯವನ್ನು ತೋರಿಸಬೇಕೆಂದು ಒಂದು ಟಾಸ್ಕನ್ನು  ಮಾಡಲಾಗಿತ್ತು. ಭಾಗವಹಿಸಿದ ಸ್ಪರ್ಧಿಗಳು ನಾನಾರೀತಿಯ ತಿಂಡಿ ತಿನುಸುಗಳನ್ನು ಮಾಡಿದರು. ಆದರೆ ಓರ್ವ ಯುವತಿ ಮಾತ್ರ ಎಲ್ಲರಿಗಿಂತ ಸಖತ್​ ಸ್ಪೆಷಲ್​ ರೆಸಿಪಿ ತೀರ್ಪುಗಾರರ ಮುಂದಿಟ್ಟರು. ಇದೇ ವಿಷಯ ವೈರಲ್​ (Viral) ಆಗಲು ಕಾರಣ.


ಪಾಕಿಸ್ತಾನದ ಮಾಸ್ಟರ್‌ ಚೆಫ್ ಮಾಸ್ಟರ್‌ಪೀಸ್ ಮೂಲಕ ಹಂಚಿಕೊಳ್ಳಲಾದ ವಿಡಿಯೋ, ತೀರ್ಪುಗಾರರಿಗೆ ಮಾಡಿದ ತಿಂಡಿಯನ್ನು ಒಪ್ಪಿಸಲು ಬರುವ ಓರ್ವ ಮಹಿಳೆಯೊಬ್ಬರು ಬಿರಿಯಾನಿ ಬಾಕ್ಸ್‌ನೊಂದಿಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಪ್ಲೇಟ್​ ಮೂಲಕ ಖಾದ್ಯವನ್ನು ಮುಚ್ಚಿಟ್ಟಿದ್ರು, ಅದನ್ನು ತೆಗೆಯಿರಿ ಎಂದು ತೀರ್ಪುಗಾರರು ಹೇಳಿದಾಗ ಸಾಕಷ್ಟು ಇದರ ಬಗ್ಗೆ ಚರ್ಚೆಗಳಾಗುತ್ತದೆ. ಆ ಯುವತಿ ಒಂದು ಬಿಗ್​ ಶಾಕ್ಅ​ನ್ನು ವೇದಿಕೆಯ ಮೇಲೆಯೇ ಹೇಳುತ್ತಾಳೆ. ತನಗೆ ತಿಳಿಸಿದಂತೆ ಆಡಿಷನ್‌ನಲ್ಲಿ ತೀರ್ಪುಗಾರರಿಗೆ ಆಹಾರವನ್ನು ಪಾರ್ಸೆಲ್​ ಆಗಿ ತಂದಿದ್ದೀನಿ ಎಂದು ಒಪ್ಪಿಕೊಳ್ಳುತ್ತಾಳೆ.


ಇದನ್ನೂ ಓದಿ: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು, ಕುಳ್ಳಿಯರ ಗೋಳಿಗೆ ಇಲ್ವಾ ಮುಲಾಮು?


ಬಿರಿಯಾನಿ ಮಾಡಲು ಬಲು ಕಷ್ಟ ಅಂತ ಹೋಟೆಲ್​ನಿಂದ ನಾನು ಪಾಸೆರ್ಲ್​  ತಂದಿದ್ದೀನಿ ಎಂದು ವೇದಿಕೆಯ ಮೇಲೆಯೇ ಬಹಿರಂಗ ಪಡಿಸಿದ್ದಾಳೆ ಈಕೆ. ತೀರ್ಪುಗಾರರು ಮೊದಲು ಆರಾಮಾಗಿ ಮತ್ತು ಕಾಮಿಡಿಯಾಗಿ ಇರ್ತಾರೆ. ನಂತರ ಪರಿಸ್ಥಿತಿಯ ಗಂಭೀರವಾಗಿ ಸ್ವೀಕರಿಸುತ್ತಾರೆ ಮತ್ತು ಸೀರಿಯಸ್​ ಆಗಿ ಮಾತನಾಡುತ್ತಾರೆ. ನೀವು ಮಾಡಿದ ಬಿರಿಯಾನಿಯ ಟೇಸ್ಟ್​ ನೋಡಬೇಕೆಂದು ಹೇಳಿದಾಗ ಈಕೆ ಸತ್ಯವನ್ನು ಒಪ್ಪಿಕೊಳ್ಳುತ್ತಾಳೆ. ಇದರ ಸಲುವಾಗಿ ಹಲವಾರು ವಾದ ವಿವಾದಗಳು ನಡೆಯುತ್ತದೆ. ಓರ್ವ ತೀರ್ಪುಗಾರರು ಅಲ್ಲಿಂದ ಎದ್ದು ಹೋಗುತ್ತಾರೆ.



ಹಾಗಾದ್ರೆ  ಆ ಯುವತಿಗೆ ನಿಜಕ್ಕೂ ಗೊತ್ತಿರ್ಲಿಲ್ವಾ? ಒಂದು ರಿಯಾಲಿಟಿ ಶೋಗೆ ಬರುವಾಗ ಯಾರಾದ್ರೂ ಪಾರ್ಸೆಲ್​ ತರ್ತಾರಾ? ಪಾಪಾ ಆಕೆ ಮೊದಲನೇ ಬಾರಿ ಬಂದಿದ್ದು ಅನಿಸುತ್ತೆ. ಹೀಗಾಗಿ ಈ ರೀತಿಯ ಸನ್ನಿವೇಶವನ್ನು ಆಕೆ ಎದುರಿಸಿದ್ದಾಳೆ. ವಿನ್​ ಆಗಲು  ಈ ಮಟ್ಟಕ್ಕೆ ಇಳಿತಾರ ಅಂತ ಹಲವರ ಕಮೆಂಟ್ ಬಂದಿದೆ.


ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡದ ಕಾಮುಕ, ದೆಹಲಿಯಲ್ಲಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ


ಈ ವಿಡಿಯೋವನ್ನು ಟ್ವಿಟರ್‌ನಲ್ಲಿ 9.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದು ತೀರ್ಪುಗಾರರು ಎದುರಿಸಿದ ನಿಜವಾದ ಸನ್ನಿವೇಶವೇ ಅಥವಾ ದೃಶ್ಯವನ್ನು ಸ್ಕ್ರಿಪ್ಟ್ ಮಾಡಲಾಗಿದೆಯೇ ಎಂದು ಜನರು ಕಾಮೆಂಟ್‌ಗಳಲ್ಲಿ ಚರ್ಚಿಸಿದ್ದಾರೆ.




ಏನೇ ಆಗಲಿ ಈ ರಿಯಾಲಿಟಿ ಶೋ ಇಂದ ಮಾತ್ರ  ಎಲ್ಲಾ ಸಖತ್​ ವೈರಲ್​ ಆಗ್ತಾ ಇದೆ. ಕುಕ್ಕಿಂಗ್​ ರಿಯಾಲಿಟಿ ಶೋನಲ್ಲಿ ಹೀಗೆಲ್ಲಾ ಆಗುತ್ತಾ ಅಂತ ಹಲವಾರು ಜನರು ನಿಬ್ಬೆರಗಾಗುದ್ದಂತೂ ಸತ್ಯವೇ  ಬಿಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು