ಬುಷ್​ ಹಾಗೂ ಒಬಾಮ ಪತ್ನಿ ವಿಡಿಯೋ ವೈರಲ್​


Updated:September 3, 2018, 1:32 PM IST
ಬುಷ್​ ಹಾಗೂ ಒಬಾಮ ಪತ್ನಿ ವಿಡಿಯೋ ವೈರಲ್​

Updated: September 3, 2018, 1:32 PM IST
ಕ್ಯಾಮೆರಾ ಕಣ್ಣಲ್ಲಿ ಏನನ್ನೂ ಮರೆಮಾಚಲು ಸಾಧ್ಯವಿಲ್ಲ ಎಂಬುದು ಸಾಕಷ್ಟು ಬಾರೀ ಸಾಭೀತಾಗಿದೆ, ಇದಕ್ಕೆ ಪೂರಕ ಎಂಬಂತೆ ಅಮೆರಿಕ ಮಾಜೀ ಅಧ್ಯಕ್ಷ ಜಾರ್ಜ್​ ವಾಲ್ಕರ್​ ಬುಷ್​ ಅಮೆರಿಕದ ಮತ್ತೋರ್ವ ಮಾಜಿ ಅಧ್ಯಕ್ಷ ಬರಾಕ್​ ಒಬಾಮರ ಮಡದಿಗೆ ಚಾಕಲೇಟು ನೀಡುವ ವಿಡಿಯೋ ವೈರಲ್​ ಆಗಿದೆ.

ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಅಮೆರಿಕದ ಸಂಸದ ಜಾನ್​ ಮೆಕ್​ಹಿನ್​ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಅಧ್ಯಕ್ಷರಾದ ಬರಾಕ್​, ಜಾರ್ಜ್​ ಬುಷ್​ ಹಾಗು ಅಮೆರಿಕದ ಮಾಜಿ ಮೊದಲ ಮಹಿಳೆ ಮೀಶೆಲ್​ ಒಬಾಮ ಜತೆಜತೆಯಲ್ಲೇ ಕುಳಿತುಕೊಂಡಿದ್ದರು. ಈ ವೇಳೆ ಬುಷ್​ ತನ್ನ ಪತ್ನಿ ಲಾರಾ ಬುಷ್​ರಿಂದ ಚಾಕಲೇಟನ್ನು ತೆಗೆದುಕೊಂಡು ಮಿಶೆಲ್​ ಒಬಾಮ ಕೈಗಿತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.



ಸಂತಾಪ ಕಾರ್ಯಕ್ರಮದಲ್ಲಿ ಒಬಾಮ ಹಾಗು ಬುಷ್​ ದಂಪತಿ ಸಿಹಿ ಹಂಚಿಕೊಂಡಿರುವ ದೃಶ್ಯ ಸಾಕಷ್ಟು ಶೇರ್​ ಕೂಡಾ ಆಗಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ