ಮಗುವನ್ನು ಅಟ್ಟಿಸಿಕೊಂಡು ಮನೆಗೆ ನುಗ್ಗಿದ ಕೋಬ್ರಾ; ವಿಡಿಯೋ ನೋಡಿದ್ರೆ ಮೈ ಜುಂ ಅನಿಸುತ್ತೆ...!

ನಿಜಕ್ಕೂ ತುಂಬಾ ಭಯ ಹುಟ್ಟಿಸುವಂತಹ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದೆ.

ಕೋಬ್ರಾ

ಕೋಬ್ರಾ

  • Share this:
ಕೆಲವೊಮ್ಮೆ ಕೆಲವು ವಿಚಿತ್ರ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತವೆ. ಆದರೆ, ತಕ್ಷಣಕ್ಕೆ ಏನು ಮಾಡಬೇಕು ಎಂದು ಯೋಚಿಸುವ ಮೊದಲೇ ಘಟನೆಗಳು ನಡೆದು ಹೋಗಿರುತ್ತವೆ.ಅದೇ ರೀತಿ ಹಾವಿನ ವಿಷಯದಲ್ಲಿ ಸಹ ಎಲ್ಲಿ ಅಡಗಿ ಕುಳಿತಿರುತ್ತದೆ ಮತ್ತು ಯಾವಾಗ ಅಟ್ಟಿಸಿಕೊಂಡು ಬರುತ್ತದೆ ಎಂದು ಹೇಳೋದಕ್ಕೆ ಆಗಲ್ಲ. ಇಂತಹದೇ ಒಂದು ಘಟನೆಯು ವಿಯೆಟ್ನಾಮ್ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ.

ಒಂದು ಚಿಕ್ಕ ಮಗುವು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಒಂದು ಉದ್ದನೆಯ ಕಿಂಗ್ ಕೋಬ್ರಾ ಮಗುವನ್ನು ನೋಡಿ ತಕ್ಷಣವೇ ಸರಸರನೆ ಮಗುವನ್ನು ಹಿಂಬಾಲಿಸಿಕೊಂಡು ಮನೆಯೊಳಗೆ ಹೋಗಲು ಪ್ರಯತ್ನಿಸಿ ವಿಫಲವಾಗಿ ಹಿಂದಿರುಗಿದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿದೆ.

ಈ ವೈರಲ್ ವಿಡಿಯೋ ನೋಡಿದ ಜನರು ಒಂದು ಕ್ಷಣಕ್ಕೆ ಬೆಚ್ಚಿಬಿದ್ದದ್ದು, ವಿಡಿಯೋದಲ್ಲಿ ಹಾವು ಸರಸರನೆ ಬಂದ ವೇಗ ನೋಡಿದ ಜನರು ಘಟನೆಯಲ್ಲಿ ಏನಾಗಬಹುದು ಎಂದು ಕುತೂಹಲ ಕೆರಳಿಸುವಂತೆ ಇದ್ದು, ಭಯ ಬರುವಂತೆಯೂ ಇದೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಮಗುವು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 2 ಮೀಟರ್ ಉದ್ದದ ಕಿಂಗ್ ಕೋಬ್ರಾ ಸರಸರನೆ ಮನೆಯ ಅಂಗಳಕ್ಕೆ ಬರುತ್ತದೆ. ಹಾವು ಬರುತ್ತಿರುವ ವೇಗ ನೋಡಿ ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡ ಮತ್ತು ಮಗುವಿನ ಹತ್ತಿರ ನಿಂತಿರುವ ಅಜ್ಜ ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಇದ್ದರೂ ಹಾವು ಹಾವು.. ಕಾಪಾಡಿ ಎಂದು ಕೂಗಿಕೊಂಡಾಗ ತಕ್ಷಣವೇ ಅಲ್ಲೇ ದೂರದಲ್ಲಿ ಕುರ್ಚಿಯ ಮೇಲೆ ಕುಳಿತಿರುವಂತಹ ಮಗುವಿನ ತಂದೆ ಕೂಡಲೇ ಬಂದು ಮಗುವನ್ನು ಎತ್ತಿಕೊಂಡು ಎಲ್ಲರೂ ಮನೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ.ನಂತರ ಬಾಗಿಲವರೆಗೂ ತುಂಬಾ ವೇಗದಿಂದ ಹೋದ ಹಾವು ಅದೇ ವೇಗದಲ್ಲಿ ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತದೆ. ಬಾಗಿಲು ಕೆಳಗೆ ಜಾಗವನ್ನು ಹುಡುಕುತ್ತದೆ. ಆದರೆ ಮನೆಯೊಳಗೆ ಹೋಗಲು ಎಲ್ಲಾ ಪ್ರಯತ್ನಗಳು ವಿಫಲ ಎನಿಸಿದಾಗ ಹಾವು ಬಂದ ದಾರಿಗೆ ಸುಂಕವಿಲ್ಲ ಎಂದು ಅದೇ ವೇಗದಿಂದ ಹಿಂದಿರುಗಿ ಮನೆಯ ಅಂಗಳದ ಇನ್ನೊಂದು ಬದಿಯಿಂದ ಹೊರಗೆ ಹೋಗುತ್ತದೆ.

ಇದನ್ನೂ ಓದಿ:ತೂಕನೂ ಇಳಿಸ್ಬೇಕು, ಸಿಹಿನೂ ತಿನ್ನಬೇಕು ಎನ್ನುವವರು ಈ ಪರ್ಯಾಯ ಮಾರ್ಗ ಅನುಸರಿಸಿ...!

ನಿಜಕ್ಕೂ ತುಂಬಾ ಭಯ ಹುಟ್ಟಿಸುವಂತಹ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ತಂದೆಯು ಚಿಕ್ಕ ಮಗುವನ್ನು ಮನೆಯಲ್ಲಿ ಬಿಟ್ಟು ಬಾಗಿಲಿನ ಹತ್ತಿರ ಬಂದು ನಿಂತು ಹಾವನ್ನು ನೋಡುತ್ತಿದ್ದರೆ ಮಗುವಿನ ಅಜ್ಜನು ಒಂದು ದೊಡ್ಡ ಕೋಲನ್ನು ತೆಗೆದುಕೊಂಡು ನಿಂತಿರುತ್ತಾರೆ. ಹಾವು ಬಾಗಿಲಿನಿಂದ ಒಳಬಂದರೆ ಹೊಡೆಯುವುದಕ್ಕೆ ಸಜ್ಜಾಗಿರುವುದನ್ನು ಕಾಣಬಹುದಾಗಿದೆ.

ಆದರೆ ಹಾವು ಒಳಗೆ ಹೋಗಲು ಆಗದೆ ಇರುವುದರಿಂದ ಹಿಂದಿರುಗಿತು. ಮಗುವಿನ ಅದೃಷ್ಟ ಚೆನ್ನಾಗಿತ್ತು ಆದ್ದರಿಂದಲೇ ಹಾವು ಬರುವುದು ಕಣ್ಣಿಗೆ ಬಿದ್ದಿದೆ ಮತ್ತು ತಕ್ಷಣವೇ ಮಗುವಿನ ತಂದೆ ಮಗುವನ್ನು ಎತ್ತಿಕೊಂಡು ಮನೆಯೊಳಗೇ ಓಡಿಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: