ಕ್ಯಾಲಿಫೋರ್ನಿಯಾ ಮನೆಯ ಚಿಮಣಿಯಲ್ಲಿ ಸಿಲುಕಿಕೊಂಡ ವಲಸೆ ಹಕ್ಕಿಗಳ ಹಿಂಡನ್ನು ಬಿಡುಗಡೆ ಮಾಡಿದ ಅಗ್ನಿಶಾಮಕ ದಳ

ಕೊಳವೆಯ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಚಿಮಣಿಯಿಂದ ಪಕ್ಷಿಗಳನ್ನು ಹೊರ ಹಾಕಲು ಸಾಧ್ಯವಾಯಿತು. ಮಾಂಟೆಸಿಟೊ ಮನೆಯ ಹಿಂಬಾಗಿಲಿನ ಮೂಲಕ ಈ ಪಕ್ಷಿಗಳನ್ನು ಹೊರಗೆ ಕಳುಹಿಸಲಾಯಿತು.

 ವಲಸೆ ಹಕ್ಕಿಗಳ ಬಿಡುಗಡೆ

ವಲಸೆ ಹಕ್ಕಿಗಳ ಬಿಡುಗಡೆ

 • Share this:
  ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕುಟುಂಬವೊಂದು ಆಲ್ಫ್ರೆಡ್ ಹಿಚ್ಕಾಕ್ ಸಿನಿಮಾದ ಅನುಭವವನ್ನು ನೈಜವಾಗಿ ಅನುಭವಿಸಿದ ಸನ್ನಿವೇಶವೊಂದು ವರದಿಯಾಗಿದೆ. ನೂರಾರು ವಲಸೆ ಹಕ್ಕಿಗಳು ಈ ಮನೆಯ ಚಿಮಣಿಯ ಮೂಲಕ ಮನೆಯೊಳಗೆ ಪ್ರವೇಶ ಪಡೆದಿವೆ. ಕಳೆದ ಭಾನುವಾರ ರಾತ್ರಿ 800 ಕ್ಕೂ ಹೆಚ್ಚು ಪಕ್ಷಿಗಳು ಮಾಂಟಿಸಿಟೊನ ಮನೆಯೊಂದರಲ್ಲಿ ಕಲರವ ಶುರು ಹಚ್ಚಿಕೊಂಡಿವೆ. ಮಾಂಟೆಸಿಟೊ ಅಗ್ನಿಶಾಮಕ ದಳವು ಈ ಘಟನೆಯನ್ನು ದೃಢಪಡಿಸಿದ್ದು, ಇನ್ಸ್ಟಾಗ್ರಾಂನಲ್ಲಿ ಹಕ್ಕಿಗಳನ್ನು ಸೆರೆ ಹಿಡಿದಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಈ ಸ್ವಿಫ್ಟ್ ಪಕ್ಷಿಗಳು ಪುಟ್ಟ ಗೂಡಿನೊಳಗೆ ಚಿಲಿಪಿಲಿ ಎನ್ನುತ್ತಾ, ಹಾರಲು ಪ್ರಯತ್ನಿಸುತ್ತಿವೆ. ಅಲ್ಲದೇ ಎಲ್ಲಿಗೆ ಬಂದು ತಲುಪಿರಬಹುದು ಎಂದು ಆತಂಕಗೊಂಡಿರುವಂತೆ ಕಾಣಿಸುತ್ತವೆ. ಪರದೆಯ ಕಾರಣದಿಂದಾಗಿ ಪಕ್ಷಿಗಳ ಸರಿಯಾದ ದೃಶ್ಯ ಕಾಣವುದಿಲ್ಲ.

  "ನಮ್ಮ ಈ ಸೇವೆಯಲ್ಲಿ ಪ್ರತಿದಿನವೂ ಒಂದು ವಿಭಿನ್ನ ಅನುಭವವನ್ನು ಕಾಣಬಹುದಾಗಿದೆ!" ಎಂದು ಮಾಂಟೆಸಿಟೊ ಅಗ್ನಿಶಾಮಕ ಇಲಾಖೆ ಪೋಸ್ಟ್ ಶೀರ್ಷಿಕೆಯಲ್ಲಿ ಹೇಳಿದೆ. ಇದು ಖಂಡಿತವಾಗಿಯೂ ಅಗ್ನಿಶಾಮಕ ಇಲಾಖೆಗೆ ಅನಿರೀಕ್ಷಿತ ಅನುಭವವಾಗಿದೆ. ಮಾಂಟೆಸಿಟೊ ಅಗ್ನಿ ಶಾಮಕ ಇಲಾಖೆಯ ಪೋಸ್ಟ್‌ನಲ್ಲಿ ಭಾನುವಾರ ರಾತ್ರಿ ಮನೆಯ ಚಿಮಣಿಯಲ್ಲಿ ಸಿಲುಕಿರುವ ಸುಮಾರು 1,000 ಸಣ್ಣ ಪಕ್ಷಿಗಳನ್ನು ಕಾಣಬಹುದು. ಇನ್ನು ಈ ಪಕ್ಷಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಿಕೆಗೆ ಸಾಂಟಾ ಬಾರ್ಬರಾ ಕೌಂಟಿ ಅನಿಮಲ್ಸ್ ಸರ್ವೀಸಸ್ ಸಹಾಯದ ಅಗತ್ಯವಿತ್ತು. ಪಕ್ಷಿಗಳು ರಾತ್ರಿಯಿಡೀ ಮೇಲೆ ಮೇಲೆ ಹಾರಲು ಪ್ರಯತ್ನಿಸುತ್ತಿದ್ದವು ಎಂದು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ತಿಳಿಸಿದರು. ಮರುದಿನ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪಕ್ಷಿಯ ಬಿಡುಗಡೆಗೆ ಶ್ರಮಿಸಿದ್ದಾರೆ.


  ಮಾಂಟೆಸಿಟೊ ಅಗ್ನಿಶಾಮಕ ದಳ ಮತ್ತು ಕೌಂಟಿ ಅನಿಮಲ್ ಸರ್ವೀಸಸ್ ಮುಂದಿನ ದಿನ ಮನೆಗೆ ಭೇಟಿ ನೀಡಿ ಸಿಕ್ಕಿಬಿದ್ದ ಪಕ್ಷಿಗಳನ್ನು ಹೊರ ಹಾಕಲು ಪ್ರಯತ್ನ ನಡೆಸಿದ್ದಾರೆ. ಕೊಳವೆಯ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಚಿಮಣಿಯಿಂದ ಪಕ್ಷಿಗಳನ್ನು ಹೊರ ಹಾಕಲು ಸಾಧ್ಯವಾಯಿತು. ಮಾಂಟೆಸಿಟೊ ಮನೆಯ ಹಿಂಬಾಗಿಲಿನ ಮೂಲಕ ಈ ಪಕ್ಷಿಗಳನ್ನು ಹೊರಗೆ ಕಳುಹಿಸಲಾಯಿತು.

  Davanagere: ಟ್ರ್ಯಾಕ್ಟರ್ ಖರೀದಿಸಿದ ರೈತನ ಮೇಲೆ FIR ಹಾಕಿದ ಶೋರೂಂ ಮಾಲೀಕರು

  ಕೆಎಸ್‌ಬಿವೈ ವರದಿಯ ಪ್ರಕಾರ ಪಕ್ಷಿಗಳನ್ನು ಸ್ವಿಫ್ಟ್‌ ಎಂದು ಗುರುತಿಸಲಾಗಿದೆ. ಪಕ್ಷಿಗಳು ಪ್ರಸ್ತುತ ದಕ್ಷಿಣ ಕ್ಯಾಲಿಫೋರ್ನಿಯಾದ ಮೂಲಕ ಉತ್ತರದತ್ತ ವಲಸೆ ಹೋಗಿ ಹೊಸ ನಿವಾಸ ಹುಡುಕುತ್ತಿದ್ದವು ಎಂದು ಕೆಎಸ್‌ಬಿವೈ ವರದಿ ಮಾಡಿದೆ. ಸ್ಥಳೀಯ ಪಕ್ಷಿ ನಿಯಂತ್ರಣ ತಜ್ಞ ಜಾನ್ ಹೊಂಜಿಯೊ ಅವರನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ನಿವಾಸಿಗಳು ತಮ್ಮ ಚಿಮಣಿ ಪರೀಕ್ಷಿಸಿ ಅದನ್ನು ಮುಚ್ಚಲು ಸೂಚನೆಯನ್ನೂ ನೀಡಲಾಗಿದೆ.

  ಪಕ್ಷಿಗಳನ್ನು ಹೊರಕಳುಹಿಸಲು ಸಾಂಟಾ ಬಾರ್ಬರಾ ಕೌಂಟಿ ಅನಿಮಲ್ ಸೇವೆ ಅವರೊಟ್ಟಿಗೆ ಶ್ರಮಿಸಿದ್ದು, ಈ ರೀತಿಯಾದ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಂಟಾ ಬಾರ್ಬರಾ ಕೌಂಟಿ ಅನಿಮಲ್ ಸರ್ವಿಸಸ್‌ನಲ್ಲಿ ನಮಗೂ ಅವಕಾಶ ನೀಡಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅಗ್ನಿಶಾಮಕ ಇಲಾಖೆಯವರು ತಿಳಿಸಿದ್ದಾರೆ.

  ಈ ಬಗ್ಗೆ ನೆಟ್ಟಿಗರು ಕಮೆಂಟ್ಸ್ ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪಕ್ಷಿಗಳ ಗುಂಪಿನ ಬಗ್ಗೆ ಕುತೂಹಲ ಪ್ರದರ್ಶಿಸುವುದರ ಜೊತೆಗೆ ಪಕ್ಷಿಗಳನ್ನು ರಕ್ಷಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಇಂತಹ ಶ್ಲಾಘನೀಯ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
  Published by:Latha CG
  First published: