Kitchen Tips: ಪ್ರೆಶರ್ ಕುಕ್ಕರ್‌ನಲ್ಲಿ ಚಪಾತಿ ಮಾಡುವುದು ಹೇಗೆ ಗೊತ್ತಾ..?: ವಿಡಿಯೋ ವೈರಲ್

ಚಪಾತಿ ಮಾಡುವುದು ಅಂತಹ ಕಷ್ಟದ ಕೆಲಸವೇನಲ್ಲ, ಆದರೆ ಚಪಾತಿ ಹಿಟ್ಟು ಲಟ್ಟಿಸಿ, ಕಾಯಿಸಲು, ಲಟ್ಟಟಿಗೆ, ಚಪಾತಿ ಮಣೆ ಮತ್ತು ಕಾವಲಿ ಬೇಕೇ ಬೇಕು. ಛೇ. . .ಛೇ. . . ಹಾಗೇನಿಲ್ಲಪ್ಪ, ಕಾವಲಿ ಇಲ್ಲದೆಯೂ ಚಪಾತಿ ಮಾಡಬಹುದು ಎನ್ನುತ್ತಾರೆ ಇಲ್ಲೊಬ್ಬ ಮಹಿಳೆ.

ಕುಕ್ಕರ್​​ನಲ್ಲಿಚಪಾತಿ ಮಾಡುತ್ತಿರುವ ದೃಶ್ಯ

ಕುಕ್ಕರ್​​ನಲ್ಲಿಚಪಾತಿ ಮಾಡುತ್ತಿರುವ ದೃಶ್ಯ

  • Share this:

    ನಮ್ಮ ದೇಶದ ಹೆಚ್ಚಿನ ಅಡುಗೆ ಮನೆಗಳಲ್ಲಿ ಚಪಾತಿಗೊಂದು ಖಾಯಂ ಸ್ಥಾನ ಇದ್ದೇ ಇದೆ. ಉತ್ತರ ಭಾರತ ಮಾತ್ರವಲ್ಲ, ದಕ್ಷಿಣ ಭಾರತದ ಹಲವಾರು ಮನೆಗಳಲ್ಲಿ, ಹೋಟೆಲ್‍ಗಳಲ್ಲಿ, ಹಾಸ್ಟೆಲ್ ಮೆಸ್‍ಗಳಲ್ಲಿ ಮತ್ತು ಖಾನಾವಳಿಗಳಲ್ಲಿ ಚಪಾತಿ ಇಲ್ಲದಿದ್ದರೆ ಊಟ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ದುಂಡನೆಯ, ಮೆತ್ತನೆಯ, ದಪ್ಪನೆಯ, ತೆಳ್ಳನೆಯ, ಗರಿಗರಿ, ಎಣ್ಣೆ ಹಾಕಿದ್ದು, ಎಣ್ಣೆ ಹಾಕದ್ದು... ಹೀಗೆ ತನ್ನ ಹಲವಾರು ಗುಣಲಕ್ಷಣಗಳ ಮೂಲಕ ಭೋಜನ ಪ್ರಿಯರ ಮನಗೆದ್ದಿರುವ ಚಪಾತಿಗೆ ಚಪಾತಿಯೇ ಸಾಟಿ.


    ಚಪಾತಿ ಮಾಡುವುದು ಅಂತಹ ಕಷ್ಟದ ಕೆಲಸವೇನಲ್ಲ, ಆದರೆ ಚಪಾತಿ ಹಿಟ್ಟು ಲಟ್ಟಿಸಿ, ಕಾಯಿಸಲು, ಲಟ್ಟಟಿಗೆ, ಚಪಾತಿ ಮಣೆ ಮತ್ತು ಕಾವಲಿ ಬೇಕೇ ಬೇಕು. ಛೇ. . .ಛೇ. . . ಹಾಗೇನಿಲ್ಲಪ್ಪ, ಕಾವಲಿ ಇಲ್ಲದೆಯೂ ಚಪಾತಿ ಮಾಡಬಹುದು ಎನ್ನುತ್ತಾರೆ ಇಲ್ಲೊಬ್ಬ ಮಹಿಳೆ. ಹೌದು, ಆ ಮಹಿಳೆ ಇತ್ತಿಚೆಗೆ, ತಾನು ಪ್ರೆಶರ್ ಕುಕ್ಕರ್ ಬಳಸಿ ಚಪಾತಿ ಮಾಡುವ ವಿಧಾನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರ ಕುತೂಹಲ ಕೆರಳಿಸಿದೆ.


    ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆ ಮೊದಲು ಅಡುಗೆ ಮನೆಯಲ್ಲಿ ಒಲೆ ಹಚ್ಚುತ್ತಾರೆ. ಅದರ ಮೇಲೆ ಖಾಲಿ ಪ್ರೆಶರ್ ಕುಕ್ಕರನ್ನು ಇಡುತ್ತಾರೆ. ಬಳಿಕ ಒಲೆಯ ಉರಿಯನ್ನು ಹೆಚ್ಚಿಸುತ್ತಾರೆ. ಆ ನಂತರ ಮಹಿಳೆ, ಚಪಾತಿಯ ಮಣೆಯ ಮೇಲೆ ಲಟ್ಟಣಿಗೆಯಿಂದ ಒಂದರ ನಂತರ ಒಂದು ಮೂರು ಚಪಾತಿಗಳನ್ನು ಲಟ್ಟಿಸುತ್ತಾರೆ. ಬಳಿಕ ಆ ಎಲ್ಲಾ ಚಪಾತಿಗಳನ್ನು ಪ್ರೆಶರ್ ಕುಕ್ಕರ್ ಒಳಗೆ ಒಂದರ ಮೇಲೊಂದು ಇಟ್ಟು, ಕುಕ್ಕರ್ನ‌ ಮುಚ್ಚಳವನ್ನು ಗ್ಯಾಸ್ಕೆಟ್‌ ಸೀಲಿಂಗ್ ರಿಂಗ್ ಸಮೇತ ಮುಚ್ಚಿ ವೇಯ್ಟ್ ವಾಲ್ವ್‌ ಅನ್ನು ಹಾಕುತ್ತಾರೆ. ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿದ ಬಳಿಕ ಆ ಮಹಿಳೆ, ವೀಕ್ಷಕರಿಗೆ ಮೂರು ನಿಮಿಷ ಕಾಯುವಂತೆ ಹೇಳುತ್ತಾರೆ.


    ಇದನ್ನೂ ಓದಿ: Gautam Adani: ಗೌತಮ್ ಅದಾನಿ ಪ್ರಪಂಚದಲ್ಲೇ ಎರಡನೇ ಶ್ರೀಮಂತ ಏಷ್ಯಾದ ವ್ಯಕ್ತಿ..!

    ಸ್ವಲ್ಪ ಸಮಯದ ಬಳಿಕ, ಮಹಿಳೆ ಪ್ರೆಶರ್ ಕುಕ್ಕರ್‌ನ ಮುಚ್ಚಳವನ್ನು ತೆಗೆಯುತ್ತಾರೆ. ಸ್ಕಿಮ್ಮರ್ನ‌ನ ಸಹಾಯದಿಂದ ಪ್ರೆಶರ್ ಕುಕ್ಕರೊಳಗಿಂದ ಒಂದೊಂದೇ ಚಪಾತಿಯನ್ನು ತೆಗೆದು , ಸ್ವಚ್ಛವಾದ ತಟ್ಟೆಯ ಮೇಲೆ ಇಡುತ್ತಾರೆ. ನಂತರ ತಟ್ಟೆಯನ್ನು ಎತ್ತಿಕೊಂಡು , ಚೆನ್ನಾಗಿ ಬೆಂದಿರುವ ಆ ಚಪಾತಿಗಳನ್ನು ವೀಕ್ಷಕರಿಗೆ ತೋರಿಸುತ್ತಾರೆ.


    ವಿಡಿಯೋವನ್ನು ನೋಡಿದಾಗ, ಆ ಮಹಿಳೆ ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿರುವ ಚಪಾತಿ ಮತ್ತು ನಾವು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕಾವಲಿಯಲ್ಲಿ ಮಾಡುವ ಚಪಾತಿಗಳ ಮಧ್ಯೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಆಗಾಗ ವಾಸ್ತವ್ಯ ಬದಲಿಸುವ ಕಾರಣ, ಹೆಚ್ಚು ಪಾತ್ರೆಗಳನ್ನು ಇಟ್ಟುಕೊಳ್ಳಲು ಬಯಸದ ಅವಿವಾಹಿತರು, ಈ ವಿಡಿಯೋ ನೋಡಿದಾಗ, ಕಾವಲಿ ಇಲ್ಲದಿದ್ದರೂ ಬೇಕೆನಿಸಿದಾಗ ಸುಲಭವಾಗಿ ಚಪಾತಿ ಮಾಡಿಕೊಂಡು ತಿನ್ನಬಹುದು ಎಂದು ಖುಷಿ ಪಡುವುದರಲ್ಲಿ ಸಂಶಯವಿಲ್ಲ.




    ಪ್ರೆಶರ್ ಕುಕ್ಕರ್‌ನಲ್ಲಿ ಚಪಾತಿ ಮಾಡುವ ಈ ಸುಲಭ ವಿಧಾನದ ವಿಡಿಯೋವನ್ನು ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚಿಕೊಂಡಿದ್ದು, ತಮ್ಮ ತಮ್ಮ ಮನೆಗಳಲ್ಲಿ ಈ ಪ್ರಯೋಗವನ್ನು ಮಾಡಿ ನೋಡುವುದಂತು ಖಚಿತವೆಂದು ಕಾಣುತ್ತದೆ.

    Published by:Latha CG
    First published: