• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • ವರ್ಕ್ ಫ್ರಮ್ ಹೋಂ ಮಾಡುವ ಮಗಳಿಗೆ ಪ್ರತಿದಿನ ತಿಂಡಿ ಮಾಡಿಕೊಡುವ ಅಪ್ಪ; ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು...!

ವರ್ಕ್ ಫ್ರಮ್ ಹೋಂ ಮಾಡುವ ಮಗಳಿಗೆ ಪ್ರತಿದಿನ ತಿಂಡಿ ಮಾಡಿಕೊಡುವ ಅಪ್ಪ; ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು...!

ಮಗಳಿರುವ ರೂಮ್​ಗೆ ತಿಂಡಿ ರೆಡಿ ಮಾಡಿಕೊಂಡು ಬಂದು ಕೊಡುತ್ತಿರುವ ಅಪ್ಪ

ಮಗಳಿರುವ ರೂಮ್​ಗೆ ತಿಂಡಿ ರೆಡಿ ಮಾಡಿಕೊಂಡು ಬಂದು ಕೊಡುತ್ತಿರುವ ಅಪ್ಪ

ಮನೆಯಿಂದ ಕೆಲಸ ಮಾಡುತ್ತಿರುವ ಮಗಳಿಗೆ ತನ್ನ ತಂದೆ ಪ್ರತಿದಿನ ಆತನೇ ಬೆಳಗಿನ ಉಪಾಹಾರವನ್ನು ಸಿದ್ಧಪಡಿಸಿ ಆಕೆಯ ಕೊಠಡಿಗೆ ತೆರಳಿ, ಬ್ರೇಕ್ಫಾಸ್ಟ್ ನೀಡುವ ಮೂಲಕ ಶುಭೋದಯ ಹೇಳುವ ವಿಡಿಯೋವನ್ನು ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದ್ದು, 2.1 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಮುಂದೆ ಓದಿ ...
 • Share this:

  ಕೊರೋನಾ ಸೋಂಕು ರಣಕೇಕೆ ಆರ್ಭಟಕ್ಕೆ ಸಾವಿರಾರು ಕಂಪನಿಗಳು ಮುಚ್ಚಿದವು. ಇದೇ ವೇಳೆ ಅನೇಕ ಕಂಪನಿಗಳು ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕದೇ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದರು. ಯಾವಾಗಲೂ ಆಫೀಸ್ ಕೆಲಸದ ಒತ್ತಡದ ನಡುವೆ ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಸಿಕ್ಕಿರುವುದರಿಂದ ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುತ್ತಾ ಆಫೀಸ್ ಕೆಲಸ ಮಾಡುವ ಸಂದರ್ಭ ಬಂದಿದೆ. ಇನ್ನು, ಮನೆಯಿಂದ ಆಫೀಸ್ ಕೆಲಸ ಮಾಡುತ್ತಿದ್ದ ಮಗಳಿಗೆ ಆಕೆಯ ತಂದೆ ಪ್ರತಿನಿತ್ಯ ತಿಂಡಿಯನ್ನು ತಾನೇ ಆಕೆಯ ರೂಮ್ಗೆ ಬಂದು ಕೊಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.


  ಹೌದು, ಮನೆಯಿಂದ ಕೆಲಸ ಮಾಡುತ್ತಿರುವ ಮಗಳು ಆಫೀಸ್ ಕೆಲಸದಲ್ಲಿ ಬ್ಯುಸಿ ಆಗಿದ್ದಾಳೆ. ಆಕೆಗೆ ಪ್ರತಿನಿತ್ಯ ಆಕೆಯ ತಂದೆಯೇ ಬೆಳಗಿನ ತಿಂಡಿಯನ್ನು ಆತನೇ ತಯಾರಿಸಿ ಕೊಡುವ ಮೂಲಕ ಮಗಳಿಗೆ ಶುಭೋಧಯ ಹೇಳುತ್ತಾನೆ. ಈ ವಿಡಿಯೋವನ್ನು ಆತ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ನೋಡಿರುವ ನೆಟ್ಟಿಗರು ಫಿದಾ ಆಗಿದ್ದಾರೆ. ತಂದೆ-ಮಗಳ ನಡುವಿನ ಪ್ರೀತಿಗೆ ಸಾವಿರಾರು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಕೆಲಸದಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ಆಗಿರುವ ನಾಟಕವಾಡಿದ ಯುವಕನ ಬಂಧನ..!


  ಫೆಬ್ರವರಿ 21ರಂದು ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕೆಲಸದ ಒತ್ತಡದಲ್ಲಿರುವ ಮಗಳಿಗೆ ಆಕೆಯ ತಂದೆ ಬೆಳಗಿನ ಉಪಾಹಾರ ತೆಗೆದುಕೊಂಡು ಬರುವ ದೃಶ್ಯವಿದೆ. 18 ಸೆಕೆಂಡ್ಗಳ ವಿಡಿಯೋದಲ್ಲಿ ಆಕೆಯ ತಂದೆ ಮನೆಯಲ್ಲಿ ಆಫೀಸ್ ಕೆಲಸ ಮಾಡುವ ಮಗಳ ಕೋಣೆಯ ಬಾಗಿಲು ತೆರೆದು ಪ್ರತಿದಿನ ವಿವಿಧ ರೀತಿಯ ಖಾದ್ಯಗಳನ್ನು ಮಾಡಿಕೊಂಡು ಬಂದು ಮಗಳಿಗೆ ನೀಡುವ ಮೂಲಕ ಶುಭೋದಯ ಹೇಳುವ ದೃಶ್ಯ ಪ್ರತಿಯೊಬ್ಬರಿಗೆ ಮನಕಲಕುತ್ತದೆ. ಈ ವಿಡಿಯೋವನ್ನು ಈತ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ತಂದೆ-ಮಗಳ ಪ್ರೀತಿಯನ್ನು ಹೊಗಳಿ ಕಾಮೆಂಟ್ಸ್, ರೀಟ್ವೀಟ್ ಮಾಡುತ್ತಿದ್ದಾರೆ.


  ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?


  ಮನೆಯಿಂದ ಕೆಲಸ ಮಾಡುತ್ತಿರುವ ಮಗಳಿಗೆ ತನ್ನ ತಂದೆ ಪ್ರತಿದಿನ ಆತನೇ ಬೆಳಗಿನ ಉಪಾಹಾರವನ್ನು ಸಿದ್ಧಪಡಿಸಿ ಆಕೆಯ ಕೊಠಡಿಗೆ ತೆರಳಿ, ಬ್ರೇಕ್ಫಾಸ್ಟ್ ನೀಡುವ ಮೂಲಕ ಶುಭೋದಯ ಹೇಳುವ ವಿಡಿಯೋವನ್ನು ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದ್ದು, 2.1 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಈ ವಿಡಿಯೋ 16,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.


  ಕಾಮೆಂಟ್ಸ್​​​ಗಳ ಸುರಿಮಳೆ


  ಇಂತಹ ತಂದೆ ಸಿಕ್ಕಿರುವುದು ಮಗಳಿಗೆ ದೊಡ್ಡ ಅದೃಷ್ಟ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಅನೇಕ ಟ್ವಿಟ್ಟರ್ ಬಳಕೆದಾರರು ನನ್ನನ್ನು ದತ್ತು ತೆಗೆದುಕೊಂಡು ನಿಮ್ಮ ಸ್ವಂತ ಮಗಳಂತೆ ನನ್ನನ್ನು ಕಾಣುವೀರಾ ಎಂದು ಕೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರೊಬ್ಬರಿಗೆ ಆಕೆಯ ತೀರಿ ಹೋದ ತಂದೆ ನೆನಪಾಗಿದ್ದಾರೆ. ಆಕೆಯ ತಂದೆಯೂ ಇದೇ ರೀತಿ ಮಗಳಿಗೆ ತಿಂಡಿಯನ್ನು ತಂದು ಕೊಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು