Viral Video| ನೀರಿನ ಮಹತ್ವ ಹೇಳಿಕೊಟ್ಟ ಗಜರಾಜ; ವಿಡಿಯೋ ವೈರಲ್

ಈ ವಿಡಿಯೋ ನೋಡಿದರೆ ಪ್ರಾಣಿಗಳು ನೀರಿನ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ ಎಂದು ತೋರುತ್ತದೆ. ಇದು ಟ್ವಿಟರ್​ನಲ್ಲಿ ಆನೆಯೊಂದು ಬೋರೆವೆಲ್ ಹೊಡೆದು ಒಂದು ಹನಿ ನೀರನ್ನು ವ್ಯರ್ಥ ಮಾಡದೇ ಕುಡಿಯುತ್ತಿರುವ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಜನರಿಗೆ ಮಾದರಿಯಾದ ಆನೆ.

ಜನರಿಗೆ ಮಾದರಿಯಾದ ಆನೆ.

 • Share this:

  ನೀರು ಇದು ಜೀವಾಮೃತ. ನೀರಿಲ್ಲದೇ ಮನುಷ್ಯ ಬದುಕಲಾರ. ಬದುಕಿನ ಮೂಲಭೂತ ಅಂಶವಾದ ನೀರಿಗೆ ತತ್ವಾರ ಉಂಟಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಇವೆರಡು ಮನುಷ್ಯರ ಬದುಕನ್ನು ಹಿಂಸಿಸುತ್ತಿದೆ. ಇದಕ್ಕೆಲ್ಲಾ ನೇರ ಹೊಣೆ ಮನುಷ್ಯರೇ. ಕುಡಿಯುವ ನೀರಿನ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಜನರು ನೀರಿಲ್ಲದೇ ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೇ ನಡೆದುಹೋಗುವ ಪರಿಪಾಠವಿನ್ನೂ ತಪ್ಪಿಲ್ಲ. ಇನ್ನು ಕೆಲವೆಡೆ ಜನರು ಮನಬಂದಂತೆ ನೀರನ್ನು ವ್ಯರ್ಥ ಮಾಡುತ್ತಿದ್ದಾರೆ. ಹನಿ ಹನಿಗೂಡಿದರೆ ಹಳ್ಳ ಎಂಬುದನ್ನು ಮರೆತು ಹಳ್ಳಕೊಳ್ಳಗಳನ್ನೇ ಮಾಲಿನ್ಯ ಮಾಡುತ್ತಿದ್ದಾರೆ.


  ಇಂತಹ ವಿಚಾರಗಳು ಬಂದಾಗ ನಮ್ಮ ಹಿರಿಯರು ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ. ಪ್ರಾಣಿಗಳಿಗೆ ಇರುವ ಬುದ್ಧಿ ಮನುಷ್ಯರಿಗಿಲ್ಲ ಎಂದು. ಈ ಮಾತಿಗೆ ಸರಿಹೊಂದುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ನೀರಿನ ಸಂರಕ್ಷಣೆ ಎಂದು ಬಂದರೆ ಮನುಷ್ಯರು ಮೂಖರು ಮತ್ತು ಕಿವುಡರ ರೀತಿಯಲ್ಲಿ ವರ್ತಿಸುತ್ತಾರೆ.

  ನೀರಿನ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ. ಜಾಗತಿಕ ತಾಪಮಾನ ಏರಿಕೆ ಮನುಷ್ಯರ ಬದುಕನ್ನು ಹೈರಾಣ ಮಾಡಿದೆ. ಆದರೂ ಯಾರೊಬ್ಬರು ನೀರಿನ ಸಂರಕ್ಷಣೆ, ಬಳಕೆ ಕುರಿತು ಎಚ್ಚೆತ್ತುಕೊಂಡಿಲ್ಲ ಎಂದು ಎದುರಾಗುತ್ತಿರುವ ನೀರಿನ ಅಭಾವವನ್ನು ನೋಡಿದರೆ ತಿಳಿಯುತ್ತದೆ.


  ಆದರೆ ಈ ವಿಡಿಯೋ ನೋಡಿದರೆ ಪ್ರಾಣಿಗಳು ನೀರಿನ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ ಎಂದು ತೋರುತ್ತದೆ. ಇದು ಟ್ವಿಟರ್​ನಲ್ಲಿ ಆನೆಯೊಂದು ಬೋರೆವೆಲ್ ಹೊಡೆದು ಒಂದು ಹನಿ ನೀರನ್ನು ವ್ಯರ್ಥ ಮಾಡದೇ ಕುಡಿಯುತ್ತಿರುವ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ.


  ಇದನ್ನು ಟ್ವಿಟರ್‍ನಲ್ಲಿ ಜಲ್ ಸಚಿವಾಲಯ ಹಂಚಿಕೊಂಡಿದ್ದು, ಆನೆ ಕೂಡ ಪ್ರತಿಯೊಂದು ಹನಿ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತದೆ. ಹಾಗಾದರೆ ನಾವು ಮಾನವರು ಈ ಅಮೂಲ್ಯ ರತ್ನವಾದ ನೀರಿನ ಮಹತ್ವವನ್ನು ಏಕೆ ಅರ್ಥಮಾಡಿಕೊಂಡಿಲ್ಲ? ಬನ್ನಿ, ಇಂದು ಈ ಪ್ರಾಣಿಯಿಂದ ಕಲಿಯೋಣ ಮತ್ತು ನೀರನ್ನು ಸಂರಕ್ಷಿಸೋಣ ಎಂಬ ಬರಹದಡಿ ಆನೆ ಬೋರೆವೆಲ್ ಹೊಡೆಯುತ್ತಾ ತನ್ನ ದಾಹ ತೀರಿಸಿಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.


  ಇದನ್ನೂ ಓದಿ: Viral Video: ಅಟ್ಟಿಸಿಕೊಂಡು ಬಂದು ಕುರಿ ಜೊತೆ ಹಿಮಪರ್ವತದಿಂದ ಉರುಳಿದ ಚಿರತೆ.. ಭಯಾನಕ ದೃಶ್ಯ ಸೆರೆ!

  ಈ ವಿಡಿಯೋ ನೋಡಿದ ನೆಟ್ಟಿಗರು, ಆನೆಗಳಿಗೂ ಬೋರೆವೆಲ್ ಬಳಕೆಯ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಜನರಿಗೆ ನೀರಿನ ಸಂರಕ್ಷಣೆಯ ಮಹತ್ವ ತಿಳಿದಿದೆ. ಅವರು ನೀರನ್ನು ಸಂರಕ್ಷಿಸಬೇಕು. ಆದರೆ ಸರ್ಕಾರದ ನೀತಿಗಳ ನಿರ್ಧಾರ ತೆಗೆದುಕೊಳ್ಳುವಲ್ಲಿ ಜನರ ಭಾಗವಹಿಸುವಿಕೆ ಇರುವುದಿಲ್ಲ. ಜನರ ಭಾಗವಹಿಸುವಿಕೆ, ನಿರ್ಧಾರ ತೆಗೆದುಕೊಳ್ಳುವುದು ಗ್ರಾಮ ಸಭೆಯಂತಹ ಕೆಳಮಟ್ಟದಿಂದ ಆರಂಭವಾಗಬೇಕು ಎಂದು ಸಲಹೆ ನೀಡಿದ್ದಾರೆ.


  ಮತ್ತೊಬ್ಬರು, ನೀರು ಮತ್ತು ಪ್ರಾಣಿಗಳು ಅತ್ಯಮೂಲ್ಯ ಸಂಪತ್ತು. ಇವುಗಳನ್ನು ಸಂರಕ್ಷಿಸಬೇಕಾಗಿದೆ ಎಂದಿದ್ದಾರೆ. ಆನೆ ಬಹಳ ಬುದ್ಧಿವಂತ. ನನಗೆ ಅದರ ಅರ್ಧದಷ್ಟು ಬುದ್ಧಿವಂತಿಕೆ ಇದ್ದಿದ್ದರೆ? ಎಂದು ಬಳಕೆದಾರರು ಹೇಳಿದರು. ಇನ್ನೊಬ್ಬರು ಪ್ರತಿಕ್ರಿಯಿಸಿ, “ಆನೆಗಳು ತುಂಬಾ ಬುದ್ಧಿವಂತವಾಗಿವೆ. ಅವುಗಳನ್ನು ಪಡೆದಿರುವುದು ನಮ್ಮ ಅದೃಷ್ಟ ಎಂದು ಹೇಳಿದ್ದಾರೆ. 26 ಸೆಕೆಂಡ್ ಇರುವ ಈವಿಡಿಯೋವನ್ನು 28 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.


  ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ತಂದೆ ಆಡುತ್ತಿದ್ದಾರೆಯೇ ಎಂದು ದೂರದರ್ಶಕದಲ್ಲಿ ವೀಕ್ಷಿಸಿದ ಸ್ಪಿನ್ ಬೌಲರ್ ಅಶ್ವಿನ್ ಪುತ್ರಿ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: