• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಕ್ಯಾನ್ಸರ್ ರೋಗಿಯಾದ ತಾಯಿಯ ಕೂದಲು ಕಟ್​ ಮಾಡಿ, ನಂತರ ತನ್ನ ಕೂದಲು ತೆಗೆದುಕೊಂಡ ಮಗ, ಎಮೋಷ್ನಲ್​ ಆದ ನೆಟ್ಟಿಗರು!

Viral Video: ಕ್ಯಾನ್ಸರ್ ರೋಗಿಯಾದ ತಾಯಿಯ ಕೂದಲು ಕಟ್​ ಮಾಡಿ, ನಂತರ ತನ್ನ ಕೂದಲು ತೆಗೆದುಕೊಂಡ ಮಗ, ಎಮೋಷ್ನಲ್​ ಆದ ನೆಟ್ಟಿಗರು!

ವೈರಲ್​ ದೃಶ್ಯ

ವೈರಲ್​ ದೃಶ್ಯ

ಸಾಮಾಜಿಕ ತಾಣದಲ್ಲಿ ಕ್ಯಾನ್ಸರ್ ರೋಗಿಗೆ ಬೆಂಬಲವನ್ನು ನೀಡುವ ಹಾಗೂ ಅವರನ್ನು ಕಾಳಜಿ ಪ್ರೀತಿಯಿಂದ ಆರೈಕೆ ಮಾಡುವ ಅನೇಕ ಸ್ಫೂರ್ತಿದಾಯಕ ವಿಡಿಯೋಗಳನ್ನು ನೋಡುತ್ತಿರುತ್ತೀರಿ.

  • Share this:

ಕ್ಯಾನ್ಸರ್‌ನಂತಹ (Cancer) ಮಾರಾಣಾಂತಿಕ ಕಾಯಿಲೆಯೊಂದಿಗೆ ಹೋರಾಡುವುದು ಎಂದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ದೃಢರಾಗಿರಬೇಕು ಅಂತೆಯೇ ಪ್ರೀತಿಪಾತ್ರರ ಕಾಳಜಿ ಆರೈಕೆ ಕೂಡ ಮುಖ್ಯವಾಗಿರುತ್ತದೆ. ಇದೊಂದು ರೀತಿಯಲ್ಲಿ ಮಾನಸಿಕವಾಗಿ ಕುಗ್ಗಿಸುವ ಯಾತನೆಯನ್ನುಂಟು ಮಾಡುವ ಪ್ರಕ್ರಿಯೆಯನ್ನೊಳಗೊಂಡಿರುವುದರಿಂದ ಇತರರ ನಿರಂತರ ಪ್ರೀತಿ, ಸ್ನೇಹ, ಆರೈಕೆಯನ್ನು ರೋಗಿ ಎದುರು ನೋಡುತ್ತಾರೆ. ತಮ್ಮವರಿಗೆ ತಾವು ಭಾರವಾದೆವೇನೋ ಎಂಬ ಅಂಜಿಕೆ ಕೂಡ ಈ ಸಮಯದಲ್ಲಿ ಕಾಡುತ್ತದೆ ಅಂತೆಯೇ ತಾವು ಸಂಪೂರ್ಣರಾಗಿ ಗುಣಮುಖರಾದೆವೋ ಇಲ್ಲವೋ ಎಂಬ ಭಯ ಕೂಡ ರೋಗಿಯನ್ನು ಆಗಾಗ ಹಿಂಡಿ ಹಿಪ್ಪೆ ಮಾಡುತ್ತಿರುತ್ತದೆ. ಸಾಮಾಜಿಕ ತಾಣದಲ್ಲಿ (Social Media) ಕ್ಯಾನ್ಸರ್ ರೋಗಿಗೆ ಬೆಂಬಲವನ್ನು ನೀಡುವ ಹಾಗೂ ಅವರನ್ನು ಕಾಳಜಿ ಪ್ರೀತಿಯಿಂದ ಆರೈಕೆ ಮಾಡುವ ಅನೇಕ ಸ್ಫೂರ್ತಿದಾಯಕ ವಿಡಿಯೋಗಳನ್ನು (Video) ನೋಡುತ್ತಿರುತ್ತೀರಿ.


ಕ್ಯಾನ್ಸರ್ ತಾಯಿಯ ಕೂದಲು ಶೇವ್ ಮಾಡಿ ತನ್ನ ಕೂದಲು ಕ್ಷೌರ ಮಾಡಿದ ಬಾರ್ಬರ್


ಕ್ಯಾನ್ಸರ್ ರೋಗಿಯಾಗಿರುವ ತನ್ನ ತಾಯಿಯ ಕೂದಲನ್ನು ಶೇವ್ ಮಾಡುತ್ತಿರುವ ಬಾರ್ಬರ್ ತಾಯಿಯ ಕೂದಲನ್ನು ಸಂಪೂರ್ಣ ಶೇವ್ ಮಾಡಿದ ನಂತರ ತಮ್ಮ ಕೂದಲನ್ನು ಶೇವ್ ಮಾಡಿಕೊಳ್ಳುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದ್ದು, ಹೇರ್ ಡ್ರೆಸ್ಸರ್ ತಮ್ಮ ಸಹೋದ್ಯೋಗಿಗಳ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಲ್ಲದೆ, ನೆಟ್ಟಿಗರ ಪ್ರೀತಿಗೂ ಪಾತ್ರರಾಗಿದ್ದಾರೆ.


ನೆಟ್ಟಿಗರ ಕಣ್ಣು ಒದ್ದೆಯಾಗಿಸಿದ ಹೃದಯಸ್ಪರ್ಶಿ ವಿಡಿಯೋ


ಗಿಲ್‌ಹ್ರಮ್ ಮೆಗಾಲೀಸ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮನಕಲಕುವ ವಿಡಿಯೋವನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ಕ್ಯಾನ್ಸರ್ ರೋಗಿಯಾಗಿರುವ ತಾಯಿ ತನ್ನ ಮಗ ಕೆಲಸ ಮಾಡುತ್ತಿರುವ ಬಾರ್ಬರ್ ಶಾಪ್‌ನಲ್ಲಿ ಮಗನಿಂದಲೇ ಕೂದಲು ಶೇವ್ ಮಾಡಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಸಮಯದಲ್ಲೇ ತನ್ನ ತಾಯಿಗೆ ಜತೆ ನೀಡುವ ಸಲುವಾಗಿ ಆಕೆಯ ಮಗ ಕೂಡ ತನ್ನ ಕೂದಲನ್ನು ಬೋಳಿಸಿಕೊಂಡಿದ್ದು ಕೂಡಲೇ ಅಲ್ಲಿದ್ದ ಸಹೋದ್ಯೋಗಿಗಳು ಕೂಡ ಆತನ ಕೂದಲು ಬೋಳಿಸಲು ನೆರವಾದರು. ಮಗನ ಪ್ರೀತಿಯನ್ನು ಕಂಡು ಗದ್ಗದಿತರಾದ ಆತನ ತಾಯಿ ಕಣ್ಣೀರಾಗಿದ್ದು ನಿಜಕ್ಕೂ ಅಲ್ಲಿದ್ದವರ ಕಣ್ಣಿನಲ್ಲಿಯೂ ನೀರನ್ನು ತರಿಸಿದೆ.


ತಾಣದಲ್ಲಿ ಹೆಚ್ಚು ವೀಕ್ಷಣೆ ಹಾಗೂ ಲೈಕ್ಸ್ ಪಡೆದುಕೊಂಡ ವಿಡಿಯೋ


ಸಾಮಾಜಿಕ ತಾಣದಲ್ಲಿ ಈ ವಿಡಿಯೋ 47.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು 3.8 ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡಿದೆ ಅಂತೆಯೇ ಹೆಚ್ಚಿನ ಬಳಕೆದಾರರು ಈ ಭಾವಪೂರ್ಣ ವಿಡಿಯೋ ನೋಡಿ ಗದ್ಗದಿತರಾದೆವು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಈ ವಿಡಿಯೋ ನೋಡಿ ನನಗೆ ಅಳು ತಡೆದುಕೊಳ್ಳಲಾಗಲಿಲ್ಲ ಎಂದು ಕಾಮೆಂಟ್ ಮಾಡಿದ್ದು, ನನ್ನ ಜೀವನದ ಅತ್ಯುತ್ತಮ ವಿಡಿಯೋ ಆಶೀರ್ವಾದಗಳು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: ಭಾರತದಲ್ಲಿದೆಯಂತೆ ಬೆಸ್ಟ್​ ರೋಡ್​ ಸೈಡ್​ ಆಹಾರಗಳು, ಯಾವ ಊರಲ್ಲಿ ಗೊತ್ತಾ?


ಕಾಮೆಂಟ್ ಮಾಡಿರುವ ಬಳಕೆದಾರರು
ಬೆಂಬಲ ಎಂದರೆ ಹೀಗಿರಬೇಕು ತುಂಬಾ ಅರ್ಥಪೂರ್ಣವಾದ ಸಹಕಾರ ಇದಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು ಅವರ ನಡುವಿನ ಪ್ರೀತಿ ಹಾಗೂ ಆತ್ಮೀಯತೆಯನ್ನು ನನ್ನ ಮಕ್ಕಳೂ ಕಲಿಯಬೇಕೆಂಬ ನಿಟ್ಟಿನಲ್ಲಿ ಅವರಿಗೂ ಈ ವಿಡಿಯೋ ಪ್ರದರ್ಶಿಸಿರುವೆ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: 600 ವರ್ಷಗಳಷ್ಟು ಹಳೆಯ ಸಮಾಧಿಗೆ ಭೇಟಿ ನೀಡಿದ ಪುರಾತತ್ವಶಾಸ್ತ್ರಜ್ಞ ರಕ್ತವಾಂತಿ ಮಾಡಿಕೊಂಡಿದ್ದೇಕೆ?


ಅದ್ಭುತ ವಿಡಿಯೋ ಎಂದು ಹೊಗಳಿದ ನೆಟ್ಟಿಗರು


ನಿಮ್ಮ ಪ್ರಯಾಣಕ್ಕೆ ದೇವರು ಆಶೀರ್ವದಿಸಲು ಎಂದು ಇನ್ನೊಬ್ಬ ಬಳಕೆದಾರ ಬರೆದುಕೊಂಡಿದ್ದರೆ ಕ್ಯಾನ್ಸರ್ ರೋಗಿಗೆ ಧೈರ್ಯ ನೀಡಿದ್ದು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮೀಯತೆಯನ್ನು ಇನ್ನಿತರ ಬಳಕೆದಾರರು ತೋರಿಸಿದ್ದಾರೆ. ಆಕೆಗೆ ದೇವರು ಇನ್ನಷ್ಟು ಶಕ್ತಿ ಹಾಗೂ ಆಯುಸ್ಸು ನೀಡಲಿ ಎಂದು ಇನ್ನೊಬ್ಬ ಬಳಕೆದಾರರು ಮನದುಂಬಿ ಹಾರೈಸಿದ್ದಾರೆ.
ಇದೊಂದು ನಿಜಕ್ಕೂ ಆದರ್ಶಪ್ರಾಯವಾಗಿರುವ ವರ್ತನೆಯಾಗಿದೆ. ಇಂತಹ ಜನರು ದೊರೆಯುವುದು ತುಂಬಾ ಅಪರೂಪ ದೇವರು ಆತನ ಒಳ್ಳೆಯ ಹೃದಯವನ್ನು ಆಶೀರ್ವದಿಸಲಿ. ಈ ವಿಡಿಯೋ ನೋಡಿದಾಗ ವಿಶ್ವದಲ್ಲಿ ಇನ್ನೂ ಕರುಣೆ ಹಾಗೂ ಪ್ರೀತಿ ಜೀವಂತವಾಗಿದೆ ಎಂಬ ಅನುಭವ ಉಂಟಾಗಿದೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದು, ಜಗತ್ತಿನಲ್ಲಿ ಇನ್ನೂ ಸಹೃದಯ ವ್ಯಕ್ತಿಗಳಿದ್ದಾರೆ ಎಂದು ತಿಳಿಸಿದ್ದಾರೆ.

top videos
    First published: