• Home
 • »
 • News
 • »
 • trend
 • »
 • Viral Video: ನಾಯಿ ಕೂಡ ಎಷ್ಟು ಚಂದ ಯೋಗ ಮಾಡುತ್ತೆ ಗೊತ್ತಾ...! ಇಲ್ಲಿದೆ ವೈರಲ್ ವಿಡಿಯೋ

Viral Video: ನಾಯಿ ಕೂಡ ಎಷ್ಟು ಚಂದ ಯೋಗ ಮಾಡುತ್ತೆ ಗೊತ್ತಾ...! ಇಲ್ಲಿದೆ ವೈರಲ್ ವಿಡಿಯೋ

ನಾಯಿ ಯೋಗ ಮಾಡುತ್ತಿರುವ ದೃಶ್ಯ

ನಾಯಿ ಯೋಗ ಮಾಡುತ್ತಿರುವ ದೃಶ್ಯ

ಈ ವೈರಲ್ ವಿಡಿಯೋದಲ್ಲಿ, ಸೀಕ್ರೆಟ್ ಎಂಬ ಹೆಸರಿನ ಆಸ್ಟ್ರೇಲಿಯನ್ ಶೆಪರ್ಡ್ ನಾಯಿ ತನ್ನ ಮಾಲೀಕಳಾದ ಮೇರಿಯನ್ನು ಅನುಕರಿಸುವ ದೃಶ್ಯವಿದೆ. ಸೀಕ್ರೆಟ್ ಯೋಗ ಮ್ಯಾಟನ್ನು ಹಾಸುವ ಮೂಲಕ ಆರಂಭವಾಗುವ ಈ ವಿಡಿಯೋದಲ್ಲಿ, ಬಳಿಕ ಅದು ತನ್ನ ಮಾಲೀಕಳು ಮಾಡುವ ಎಲ್ಲಾ ಯೋಗ ಭಂಗಿಗಳನ್ನು ಯಥಾವತ್ತಾಗಿ ಅನುಕರಿಸುತ್ತದೆ.

ಮುಂದೆ ಓದಿ ...
 • Share this:

  ಸಾಮಾಜಿಕ ಮಾಧ್ಯಮದಲ್ಲಿ ನಾಯಿಗಳ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ. ನಿತ್ಯವೂ ಅಪ್‍ಲೋಡ್ ಆಗುವ, ನಾಯಿಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರಬಿಂದುವಾಗಿ, ಶ್ವಾನಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಈಗ, ತನ್ನ ಮಾಲೀಕಳೊಂದಿಗೆ ಯೋಗ ಮಾಡುತ್ತಿರುವ ನಾಯಿಯ ವಿಡಿಯೋವೊಂದು ಅಂತಹ ಆಕರ್ಷಕ ಶ್ವಾನ ವಿಡಿಯೋಗಳ ಪಟ್ಟಿಗೆ ಸೇರಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ, ನೆಟ್ಟಿಗರ ಹೃದಯವನ್ನು ಗೆದ್ದಿದ್ದು, ನಾಯಿಯ ದೇಹ ಅಷ್ಟೊಂದು ಸಲೀಸಾಗಿ ಬಾಗುವುದನ್ನು ನೋಡಿ ಪ್ರತಿಯೊಬ್ಬರೂ ದಂಗಾಗಿದ್ದಾರೆ.. ಈಗಾಗಲೇ ಟ್ವಿಟ್ಟರ್‌ನಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ ಹಿಟ್ ಆಗಿರುವ ಈ ವಿಡಿಯೋವನ್ನು ಅಮೆರಿಕದ ಮಾಜಿ ವೃತ್ತಿಪರ ಬಾಸ್ಕೆಟ್‍ಬಾಲ್ ಆಟಗಾರ ರೆಕ್ಸ್ ಚ್ಯಾಪ್‍ಮನ್ ಹಂಚಿಕೊಂಡಿದ್ದಾರೆ.


  ಈ ವೈರಲ್ ವಿಡಿಯೋದಲ್ಲಿ, ಸೀಕ್ರೆಟ್ ಎಂಬ ಹೆಸರಿನ ಆಸ್ಟ್ರೇಲಿಯನ್ ಶೆಪರ್ಡ್ ನಾಯಿ ತನ್ನ ಮಾಲೀಕಳಾದ ಮೇರಿಯನ್ನು ಅನುಕರಿಸುವ ದೃಶ್ಯವಿದೆ. ಸೀಕ್ರೆಟ್ ಯೋಗ ಮ್ಯಾಟನ್ನು ಹಾಸುವ ಮೂಲಕ ಆರಂಭವಾಗುವ ಈ ವಿಡಿಯೋದಲ್ಲಿ, ಬಳಿಕ ಅದು ತನ್ನ ಮಾಲೀಕಳು ಮಾಡುವ ಎಲ್ಲಾ ಯೋಗ ಭಂಗಿಗಳನ್ನು ಯಥಾವತ್ತಾಗಿ ಅನುಕರಿಸುತ್ತದೆ.  ಸೀಕ್ರೆಟ್ ಮತ್ತು ಮೇರಿಯ ಈ ಯೋಗ ವಿಡಿಯೋವನ್ನು ನೋಡಿ ಟ್ವಿಟ್ಟರ್ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮನ್ನು ನಾಯಿಯೊಂದಿಗೆ ಹೋಲಿಸಿಕೊಂಡಿದ್ದು, ಈ ನಾಯಿಯ ದೇಹ ತಮ್ಮ ದೇಹಕ್ಕಿಂತ ಹೆಚ್ಚು ಸಲೀಸಾಗಿ ಬಾಗುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ತಮ್ಮದೇ ನಾಯಿಗಳಿಂದ ಕಚ್ಚಿಸಿಕೊಳ್ಳುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. “ನಾನು ಅವರ ವಿಡಿಯೋಗಳಿಂದ ಬೆರಗಾಗಿದ್ದೇನೆ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಬರೆದಿದ್ದರೆ, ಇನ್ನು ಕೆಲವರು ಜಿಫ್‍ಗಳನ್ನು ಪೋಸ್ಟ್ ಮಾಡುವ ಮೂಲಕ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.


  ಬೆಂಗಳೂರಿನಲ್ಲಿ ಜನರ ನೆರವಿಗೆ ನಿಂತಿದೆ ಈ ಯುವಕರ ತಂಡ; ಕೋವಿಡ್ ವಿರುದ್ಧ ಸಮರ ಸಾರಿದ್ದಾರೆ ಕೊರೋನಾ ಕಲಿಗಳು


  ಈ ಆಸ್ಟ್ರೇಲಿಯನ್ ಶೇಪರ್ಡ್ ತನ್ನ ಸ್ವಂತ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಆರು ಲಕ್ಷ ಹಿಂಬಾಲಕರನ್ನು ಹೊಂದಿದೆ. ಅದರ ಮಾಲೀಕಳು ನಿರ್ವಹಿಸುತ್ತಿರುವ , ‘ಮೈ ಆಸ್ಸಿ ಗಲ್’ ಎಂಬ ಹೆಸರುಳ್ಳ ಈ ಖಾತೆಯು ನಾಯಿಯ ಸಾಹಸಗಳ ವಿಡಿಯೋಗಳನ್ನು ಒಳಗೊಂಡಿದೆ.


  ಮೇರಿ ಇದೇ ಇನ್ಸ್ಟಾಗ್ರಾಂ ಖಾತೆಯಲ್ಲಿ ಯೋಗ ವಿಡಿಯೋವನ್ನು ಹಂಚಿಕೊಂಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ. ತಾನು ಮತ್ತು ತನ್ನ ನಾಯಿ, ಬಾಲ್ ವ್ಯಾಯಾಮ ಮಾಡುವ ಮತ್ತು ಹೊಸ ವ್ಯಾಯಾಮದ ಭಂಗಿಗಳನ್ನು ಪ್ರಯತ್ನಿಸುವ ವಿಡಿಯೋಗಳನ್ನು ಮೇರಿ ಹಂಚಿಕೊಂಡಿದ್ದಾರೆ. ಈ ನಾಯಿಗೆ ಯೋಗ ಮಾತ್ರವಲ್ಲ, ಡ್ರಮ್ಸ್ ಮತ್ತು ಗಿಟಾರ್‌ನಂತಹ ಸಂಗೀತ ಸಾಧನಗಳನ್ನು ನುಡಿಸುವುದು ಕೂಡ ತಿಳಿದಿದೆಯಂತೆ.


  ಸೀಕ್ರೆಟ್‍ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ, ಯೋಗ ಮಾಡುವ ವಿಡಿಯೋ ಮಾತ್ರವಲ್ಲ, ಹಬ್ಬ ಆಚರಿಸಿಕೊಳ್ಳುವುದು, ನೆಲ ಒರೆಸುವುದು ಇತ್ಯಾದಿ ತರಾವರಿ ವಿಡಿಯೋಗಳಿದ್ದು, ನೋಡುಗರ ಕಣ್ಮನ ತಣಿಸುತ್ತದೆ. ಕೆಲವು ವಿಡಿಯೋಗಳಂತೂ ನೋಡುಗರನ್ನು ದಂಗಾಗಿಸುತ್ತವೆ. ವಿಡಿಯೋಗಳು ಮಾತ್ರವಲ್ಲದೆ, ಸೀಕ್ರೆಟ್‍ನ ಸುಂದರವಾದ ಚಿತ್ರಗಳನ್ನು ಕೂಡ ಪೋಸ್ಟ್ ಮಾಡಲಾಗಿದ್ದು, ಅವು ಸಾಮಾಜಿಕ ಮಾಧ್ಯಮ ಬಳಕೆದಾರರ ಅಪಾರ ಮೆಚ್ಚುಗೆ ಗಳಿಸಿದೆ.

  Published by:Latha CG
  First published: