• Home
 • »
 • News
 • »
 • trend
 • »
 • Ayodhya ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಹೇಗೆ ಕಾಣಲಿದೆ.. 3D Video ಇಲ್ಲಿದೆ ನೋಡಿ

Ayodhya ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಹೇಗೆ ಕಾಣಲಿದೆ.. 3D Video ಇಲ್ಲಿದೆ ನೋಡಿ

ರಾಮಮಂದಿರದ ತ್ರಿಡಿ ನೋಟ

ರಾಮಮಂದಿರದ ತ್ರಿಡಿ ನೋಟ

ವಿಡಿಯೋದಲ್ಲಿ ಮುಖ್ಯ ದೇವಾಲಯದ ನಾಲ್ಕು ದಿಕ್ಕಿನ ಸುತ್ತ ಹಲವಾರು ಸಣ್ಣ ದೇವಾಲಯಗಳು ಹಸಿರುಚ್ಛಾದಿತ ನೆಲಹಾಸಿನೊಂದಿಗೆ ಆವೃತವಾಗಿರುವುದನ್ನು ನಾವು ನೋಡಬಹುದಾಗಿದೆ. ಇದಾದ ನಂತರ ವಿಡಿಯೋವು ವಿನ್ಯಾಸಗೊಂಡಿರುವ ದೇವಾಲಯ ಸ್ಥಳದ ಸುತ್ತ ಒಂದು ಪಯಣವನ್ನು ಮಾಡಿಸುತ್ತದೆ.

 • Share this:

  ಅಯೋಧ್ಯೆಯಲ್ಲಿನ (Ayodhya) ರಾಮ ಮಂದಿರ ( Ram Mandir)ನಿರ್ಮಾಣ ಕಾರ್ಯ ತೀವ್ರ ಬಿರುಸಿನಿಂದ ನಡೆಯುತ್ತಿದ್ದು, 2023ರ ವೇಳೆಗೆ ಈ ಪವಿತ್ರ ಮಂದಿರದಲ್ಲಿ ಶ್ರೀರಾಮನ ಮೂರ್ತಿಯನ್ನು ( idol of Lord Ram) ಪ್ರತಿಷ್ಠಾಪಿಸಿ, ಭಕ್ತರು ಪ್ರಾರ್ಥನೆ ಸಲ್ಲಿಸುವಂತೆ ಮಾಡುವ ಗುರಿಯನ್ನು ತಲುಪುವ ನಿರೀಕ್ಷೆ ಇದೆ. ಆದರೆ, ದೇವಾಲಯದ ನಿರ್ಮಾಣ ಪೂರ್ಣಗೊಂಡ ನಂತರ ರಾಮ ಮಂದಿರವು ಹೇಗೆ ಕಾಣಿಸುತ್ತದೆ ಎಂಬ ಕುತೂಹಲ ಹೊಂದಿರುವ ಭಕ್ತರಿಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ‘ಪವಿತ್ರ ಯೋಜನೆ’ಯ ಕುರಿತು 3ಡಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ಪೂರ್ವನೋಟದ ವಿಡಿಯೋ ಭಾರತದ ಭೂಪಟದಲ್ಲಿ ರಾಮ ಮಂದಿರದ ಸ್ಥಳವನ್ನು ತೋರಿಸುವುದರೊಂದಿಗೆ ಶುರುವಾಗುತ್ತದೆ. ನಂತರ 67 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ರಾಮಮಂದಿರ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ರಾಮಜನ್ಮ ಭೂಮಿಯ ಸ್ಥಳದ ಪಕ್ಷಿನೋಟವನ್ನು ನೀಡುತ್ತದೆ. ವಿಡಿಯೋದಲ್ಲಿ ಮುಖ್ಯ ದೇವಾಲಯದ ನಾಲ್ಕು ದಿಕ್ಕಿನ ಸುತ್ತ ಹಲವಾರು ಸಣ್ಣ ದೇವಾಲಯಗಳು ಹಸಿರುಚ್ಛಾದಿತ ನೆಲಹಾಸಿನೊಂದಿಗೆ ಆವೃತವಾಗಿರುವುದನ್ನು ನಾವು ನೋಡಬಹುದಾಗಿದೆ. ಇದಾದ ನಂತರ ವಿಡಿಯೋವು ಅನುರೂಪಿತವಾಗಿ ವಿನ್ಯಾಸಗೊಂಡಿರುವ ದೇವಾಲಯ ಸ್ಥಳದ ಸುತ್ತ ಒಂದು ಪಯಣವನ್ನು ಮಾಡಿಸುತ್ತದೆ. ಮುಖ್ಯ ದೇವಾಲಯದ ಗೋಡೆಗಳನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ನೆಲಕ್ಕೆ ಅಮೃತಶಿಲೆಯನ್ನು ಹಾಸಲಾಗುತ್ತದೆ. ದೇವಾಲಯದ ಕಂಬಗಳಲ್ಲಿ ದೇವರು ಮತ್ತು ದೇವತೆಗಳ ವಿನ್ಯಾಸವನ್ನು ಮಾಡಲಾಗಿರುತ್ತದೆ.  ಮೂರು ಅಂತಸ್ತಿನ ಕಟ್ಟಡ, ಐದು ಮಂಟಪಗಳು 


  ಕಳೆದ ವರ್ಷ ಬಿಡುಗಡೆಯಾದ ದೇವಾಲಯ ನಿರ್ಮಾಣದ ನೀಲನಕ್ಷೆಯ ಪ್ರಕಾರ, ರಾಮಜನ್ಮಭೂಮಿ ಜಾಗದಲ್ಲಿ ಆರು ವಿವಿಧ ದೇವತೆಗಳ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಈ ದೇವತೆಗಳ ಪೈಕಿ ಸೂರ್ಯ ದೇವ, ಗಣೇಶ, ಶಿವ, ದುರ್ಗಾ, ವಿಷ್ಣು ಹಾಗೂ ಬ್ರಹ್ಮ ಸೇರಿದ್ದಾರೆ. ಇದಕ್ಕೂ ಮುನ್ನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ದೇವಾಲಯ ನಿರ್ಮಾಣದಲ್ಲಿ ಯಾವುದೇ ಇಟ್ಟಿಗೆ ಅಥವಾ ಉಕ್ಕನ್ನು ಬಳಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ದೇವಾಲಯದ ನಿರ್ಮಾಣದಲ್ಲಿ ನೆಲ ಅಂತಸ್ತಿನಲ್ಲಿ 160 ಕಂಬಗಳು, ಮೊದಲನೆ ಅಂತಸ್ತಿನಲ್ಲಿ 132 ಕಂಬಗಳು ಹಾಗೂ ಎರಡನೇ ಅಂತಸ್ತಿನಲ್ಲಿ 74 ಕಂಬಗಳನ್ನು ನಿರ್ಮಿಸಲಾಗುತ್ತದೆ. ಈ ಮೂರು ಅಂತಸ್ತಿನ ಕಟ್ಟಡವು ಐದು ಮಂಟಪಗಳನ್ನು ಹೊಂದಿರಲಿದೆ.


  ಇದನ್ನೂ ಓದಿ: Viral Video: 12ನೇ ಫ್ಲೋರ್​ನಲ್ಲಿ ನೇತಾಡುತ್ತಾ ವ್ಯಾಯಾಮ, ವಿಡಿಯೋ ನೋಡಿ ಬೆಚ್ಚಿಬಿದ್ರು ನೆಟ್ಟಿಗರು


  110 ಎಕರೆಗೆ ವಿಸ್ತರಣೆ


  ದೇವಾಲಯ ಸಮುಚ್ಚಯವು ಯಾತ್ರಾರ್ಥಿಗಳ ತಂಗುದಾಣ ಕೇಂದ್ರಗಳು, ಸಂಶೋಧನಾ ಕೇಂದ್ರಗಳು, ಸಭಾಂಗಣ, ಸಂಗ್ರಹಾಲಯ, ಪುರಾತನ ಸಂಗ್ರಹ, ದನದ ಕೊಟ್ಟಿಗೆ, ವಿಧಿವಿಧಾನಗಳ ಸ್ಥಳ, ಪುರೋಹಿತರಿಗೆ ಕೊಠಡಿಗಳು ಮತ್ತು ಆಡಳಿತ ಭವನವನ್ನು ಹೊಂದಿರಲಿದೆ. ಮುಖ್ಯ ದೇವಾಲಯವನ್ನು ನಿರ್ಮಿಸಲು ರಾಜಸ್ಥಾನದಿಂದ ತರಿಸಲಾಗುತ್ತಿರುವ ಸುಮಾರು 4 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಮತ್ತು ಅಮೃತ ಶಿಲೆಯನ್ನು ಬಳಸಲಾಗುತ್ತಿದೆ. ಟ್ರಸ್ಟ್ ಮೂಲಗಳ ಪ್ರಕಾರ, ರಾಮ ಮಂದಿರ ಸಮುಚ್ಚಯದ ವಿಸ್ತಾರ ಟ್ರಸ್ಟ್ ವಶಪಡಿಸಿಕೊಂಡಿದ್ದ ಮೂಲ 67 ಎಕರೆಯಿಂದ 110 ಎಕರೆಗೆ ವಿಸ್ತರಣೆಗೊಳ್ಳಲಿದೆ. ಈ ವಿಸ್ತರಣೆಯನ್ನು ಹಲವಾರು ಧಾರ್ಮಿಕ ಹಾಗೂ ವಾಸ್ತು ವಿಚಾರಗಳನ್ನು ಸೇರ್ಪಡೆ ಮಾಡಲು ಮಾಡಲಾಗುತ್ತಿದೆ.


   2023ರ ಅಂತ್ಯದ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣ 


  ಡಿಸೆಂಬರ್‌ 2023ರ ವೇಳೆಗೆ ಮರ್ಯಾದಾ ಪುರುಷೋತ್ತಮ ವಿಮಾನ ನಿಲ್ದಾಣವನ್ನು ಪ್ರಾರಂಭಿಸಲು ಟ್ರಸ್ಟ್ ಉದ್ದೇಶಿಸಿದ್ದು, ಇದರಿಂದ ದೇಶದ ನಾನಾ ಭಾಗಗಳಿಂದ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಇದಕ್ಕೂ ಮುನ್ನ ಆಗಸ್ಟ್ 5, 2020ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದರು. ನವೆಂಬರ್‌ 9, 2019ರಂದು ಸುಪ್ರೀಂಕೋರ್ಟ್‌ ಹಲವಾರು ದಶಕಗಳಷ್ಟು ಹಳೆಯದಾದ ರಾಮ ಮಂದಿರ-ಬಾಬ್ರಿ ಮಸೀದಿ ವಿವಾದದಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಐದು ಮಂದಿ ನ್ಯಾಯಾಧೀಶರನ್ನೊಳಗೊಂಡಿದ್ದ ಸುಪ್ರೀಂಕೋರ್ಟ್‌ ಪೀಠವು ಸರ್ವಾನುಮತದೊಂದಿಗೆ ರಾಮ ಲಲ್ಲಾ ಪರ ತೀರ್ಪು ನೀಡಿ, ವಿವಾದಿತ ಸ್ಥಳವನ್ನು ಸರ್ಕಾರ ರಚಿಸಲಿರುವ ಟ್ರಸ್ಟ್ ವಶಕ್ಕೆ ಒಪ್ಪಿಸಿತ್ತು.


  2023ರ ಅಂತ್ಯದ ವೇಳೆಗೆ ಭಾಗಶಃ ನಿರ್ಮಾಣಗೊಂಡಿರುವ ರಾಮ ಮಂದಿರವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಕಾಕತಾಳೀಯವೆಂಬಂತೆ ಇದರ ಬೆನ್ನಿಗೇ 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿಯು ತನ್ನ ಚುನಾವಣಾ ಪ್ರಚಾರದಲ್ಲಿ ರಾಮ ಮಂದಿರ ನಿರ್ಮಾಣದ ಶ್ರೇಯಸ್ಸನ್ನು ಸೇರ್ಪಡೆ ಮಾಡಿಕೊಳ್ಳುವ ಸಂಭವವಿದೆ.

  Published by:Kavya V
  First published: