Kitchen Hacks: ಅಡುಗೆಗಳಲ್ಲಿ ತೇಲುವ ಅನಗತ್ಯ ಎಣ್ಣೆಯನ್ನು ತೆಗೆಯಬೇಕೆ? ಇಲ್ಲಿದೆ ಸೂಪರ್​ ಉಪಾಯ

ಭಾರತೀಯರು ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುವುದರಲ್ಲಿ ಒಂದು ಕೈ ಮುಂದು ಎಂದರೆ ತಪ್ಪಿಲ್ಲ. ಆದರೆ ಅತಿಯಾದ ಎಣ್ಣೆ ಒಳ್ಳೆಯದಲ್ಲ. ಹಾಗಾದರೆ ಆಹಾರದಲ್ಲಿರುವ ಅನಗತ್ಯ ಎಣ್ಣೆಯನ್ನು ತೆಗೆಯುವುದಾದರೂ ಹೇಗೆ? ಇಲ್ಲಿದೆ ಸ್ಮಾರ್ಟ್​​ ವಿಧಾನ..

ಅಡುಗೆಗಳಲ್ಲಿ ತೇಲುವ ಎಣ್ಣೆ

ಅಡುಗೆಗಳಲ್ಲಿ ತೇಲುವ ಎಣ್ಣೆ

 • Share this:
  ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಒಂದರಲ್ಲಿ , ಆಹಾರದಿಂದ ಅನಗತ್ಯ ಎಣ್ಣೆ ತೆಗೆಯುವ ಉಪಾಯವನ್ನು ತಿಳಿಸಲಾಗಿದೆ. ಭಾರತೀಯರು ಆಹಾರದಲ್ಲಿ ಎಣ್ಣೆ ಹೆಚ್ಚಾಗಿ ಬಳಸುವುದರಲ್ಲಿ ಒಂದು ಕೈ ಮುಂದು ಎಂದರೆ ತಪ್ಪಿಲ್ಲ. ಎಣ್ಣೆಯಲ್ಲಿ ಕರಿದ ಖಾದ್ಯಗಳ ರುಚಿಯನ್ನು ತಿಂದವರೇ ಬಲ್ಲರು. ಆದರೆ, ರೆಸ್ಟೋರೆಂಟ್‌ಗಳಲ್ಲಿ ಆಹಾರದ ರುಚಿಯನ್ನು ಹೆಚ್ಚಿಸಲು ತುಸು ಹೆಚ್ಚೇ ಎಣ್ಣೆಯನ್ನು ಹಾಕಿರುತ್ತಾರೆ. ಒಮ್ಮೊಮ್ಮೆ ಮನೆಯಲ್ಲಿ ಕೂಡ ನಾವು ಗೊತ್ತಿಲ್ಲದೆಯೇ ಅನಗತ್ಯವಾಗಿ ಎಣ್ಣೆ ಹಾಕಿ ಬಿಡುತ್ತೇವೆ. ಅಂತಹ ಸಂದರ್ಭಗಳಲ್ಲಿ ಆಹಾರದಲ್ಲಿರುವ ಅನಗತ್ಯ ಎಣ್ಣೆಯನ್ನು ತೆಗೆಯುವುದಾದರೂ ಹೇಗೆ? ಒಮ್ಮೆ ಸಾಮಾಜಿಕ ಜಾಲತಾಣವನ್ನು ಜಾಲಾಡಿ ಬಂದರೆ ಇಂತಹ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಸುಲಭ ಪರಿಹಾರ ಸಿಕ್ಕೇ ಸಿಗುತ್ತದೆ.

  ಅದೇ ರೀತಿ, ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಒಂದರಲ್ಲಿ , ಆಹಾರದಿಂದ ಅನಗತ್ಯ ಎಣ್ಣೆ ತೆಗೆಯುವ ಉಪಾಯವನ್ನು ತಿಳಿಸಲಾಗಿದೆ. ವೈರಲ್ ಆಗಿರುವ ಈ ಹ್ಯಾಕ್ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ @24hrknowledge ಎಂಬ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಅದು ಮಾಹಿತಿ ಮತ್ತು ಮನರಂಜನೆಯುಕ್ತ ವಿಷಯಗಳನ್ನು ಹಂಚಿಕೊಳ್ಳುವ ಒಂದು ಟ್ವಿಟ್ಟರ್ ಪೇಜ್. 18 ಸೆಕೆಂಡುಗಳ ಈ ವಿಡಿಯೋ ಪೋಸ್ಟ್ ಮಾಡಿದ ಕ್ಷಣದಿಂದ ಈ ವರೆಗೆ ಸುಮಾರು 1,10,000 ವೀಕ್ಷಣೆಗಳನ್ನು ಕಂಡಿದ್ದು, 4000 ಮೆಚ್ಚುಗೆಗಳನ್ನು ಪಡೆದಿದೆ.

  ಈ ವಿಡಿಯೋದಲ್ಲಿನ ಹ್ಯಾಕ್ ಅತ್ಯಂತ ಸರಳ. ಈ ವಿಡಿಯೋದಲ್ಲಿನ ದೃಶ್ಯ ಹೀಗಿದೆ: ಸಮುದ್ರಾಹಾರವಿರುವ ತಿನಿಸು ತುಂಬಿಕೊಂಡಿರುವ ಪಾತ್ರೆ. ಆ ಪಾತ್ರೆಯಲ್ಲಿ ತಿನಿಸಿನ ಮೇಲೆ ಸಂಗ್ರಹವಾಗಿದ್ದ ಅತ್ಯಧಿಕ ಎಣ್ಣೆ ಪಾತ್ರೆಯ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ.ದೊಡ್ಡ ಮಂಜುಗಡ್ಡೆ ತುಂಡಿನ ಸಹಾಯದಿಂದ ಆ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೋಳಾಕಾರದ ಮಂಜುಗಡ್ಡೆಯನ್ನು ತಿನಿಸಿನಲ್ಲಿ ಮುಳುಗಿಸಿದಾಗ, ತಿನಿಸಿನಲ್ಲಿದ್ದ ಹೆಚ್ಚುವರಿ ಎಣ್ಣೆ ಕ್ಷಣ ಮಾತ್ರದಲ್ಲಿ ಅದಕ್ಕೆ ಅಂಟಿಕೊಳ್ಳುತ್ತದೆ. ಬಳಿಕ ಆ ಜಿಡ್ಡಿನ ಪದರವುಳ್ಳ ಮಂಜುಗಡ್ಡೆಯ ಗೋಳವನ್ನು ಸಾಂಬಾರಿನಿಂದ ಬೇರ್ಪಡಿಸಿ, ಜಿಡ್ಡನ್ನು ತೆಗೆಯಲಾಗುತ್ತದೆ.

  ಎಷ್ಟು ಬುದ್ಧಿವಂತಿಕೆಯ ಹೊಸ ಉಪಾಯ ಅಲ್ಲವೇ? ಮಂಜುಗಡ್ಡೆಯ ಕಾರಣದಿಂದ ಕೊಬ್ಬಿನ ಕಣಗಳು ತಣ್ಣಗಾಗುತ್ತವೆ ಮತ್ತು ಅದಕ್ಕೆ ಅಂಟಿಕೊಳ್ಳುತ್ತವೆ ಎಂಬುವುದು ಈ ಉಪಾಯದ ಹಿಂದಿರುವ ವಿಜ್ಞಾನ. ಈ ಉಪಾಯ, ಯಾವುದೇ ತಿನಿಸು ಎಣ್ಣೆ ಪದಾರ್ಥ ಅಥವಾ ಪಲ್ಯಗಳಿಂದ ಅನಗತ್ಯ ಎಣ್ಣೆಯನ್ನು ತೆಗೆಯಲು ಪರಿಣಾಮಕಾರಿ ಉಪಾಯ. ಬಹಳಷ್ಟು ಮಂದಿ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋದಲ್ಲಿನ ಉಪಾಯವನ್ನು ಪ್ರಶಂಸಿದ್ದು,  ವಿಡಿಯೋ ವೈರಲ್ ಆಗಿದೆ.

  ಇದನ್ನೂ ಓದಿ: Oily Skin Problem: ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ ಯಾವುದೇ ಕಾರಣಕ್ಕೂ ಈ 4 ಆಹಾರಗಳನ್ನು ತಿನ್ನಬೇಡಿ..

  “ಒಳ್ಳೆಯ ಉಪಾಯ” ಎಂದು ಒಬ್ಬ ನೆಟ್ಟಿಗ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೊಬ್ಬರು ಕೂಡ “ಇದೊಂದು ಅದ್ಭುತವಾದ ಹೊಸತನ”ಎಂದು ಹೊಗಳಿದ್ದಾರೆ. “ಅನಗತ್ಯ ಎಣ್ಣೆ ಹೃದಯಕ್ಕೆ ಅಪಾಯಕಾರಿ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಟ್ವೀಟ್ ಮಾಡಿದ್ದರೆ, ಬಾಣಸಿಗರೊಬ್ಬರು “ನವನವೀನ. ಸ್ಟ್ಯೂ ಮತ್ತು ಸೂಪ್‍ಗಳಲ್ಲಿ ಅನಗತ್ಯ ಎಣ್ಣೆಗಳನ್ನು ತೆಗೆಯಲು ಬಾಣಸಿಗರು ಮೊಟ್ಟೆಯ ಬಿಳಿ ಭಾಗವನ್ನು ಬಳಸುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಇದು ಜಾಣತನ” ಎಂದು ಹೇಳಿದ್ದರೆ, ಇನ್ನೊಬ್ಬರು “ವಾವ್ , ಅದ್ಭುತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ನಿಮ್ಮ ಆಹಾರ ಪದಾರ್ಥಗಳಲ್ಲಿ ಅತ್ಯಧಿಕ ಎಣ್ಣೆ ತೇಲುತ್ತಿದ್ದರೆ, ಏನು ಮಾಡಬೇಕೆಂದು ಈಗ ತಿಳಿಯಿತಲ್ಲವೆ?

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: