ನಿದ್ರೆ ಮಾಡಿ 10 ಲಕ್ಷ ರೂ ಬಹುಮಾನ ಗೆಲ್ಲುವ ಅವಕಾಶ; ವೇಕ್​ಫಿಟ್​ ಕಂಪನಿಯಿಂದ ಹೀಗೊಂದು ಆಫರ್

ಇದೀಗ ಈ ವರ್ಷ ಸೀಸನ್ ನೋಂದಣಿ ಆರಂಭವಾಗಿದ್ದು, ಇದಕ್ಕೆ ಆಯ್ಕೆಯಾದವರು 9 ಗಂಟೆಗಳ ನಿದ್ದೆಗಾಗಿ ಸೀಸನ್ ಮುಕ್ತಾಯದಲ್ಲಿ 1 ಲಕ್ಷ ರೂ ಸ್ಟೈಫಂಡ್ ಮತ್ತು 10 ಲಕ್ಷ ಬಹುಮಾನ ನೀಡುತ್ತದೆ.

Sleeping

Sleeping

 • Share this:
  ಕೆಲಸದ ಸಮಯದಲ್ಲಿ ನಿದ್ದೆ ಮಾಡಿದರೆ ಕೆಲಸವೇ ಕೈ ತಪ್ಪಿ ಹೋಗುವ ಸ್ಥಿತಿ ನಿರ್ಮಾಣವಾಗಬಹುದು. ಆದರೆ ನಿದ್ದೆ ಮಾಡುವುದೇ ಒಂದು ಕೆಲಸವಾದರೆ ಹೇಗೆ ?


  ಹೌದು. ಪ್ರಪಂಚ ಅಚ್ಚರಿಯ ಕೆಲಸಗಳಲ್ಲಿ ನಿದ್ದೆ ಮಾಡುವ ಕೆಲಸ ಕೂಡ ಒಂದು. ಅದರಂತೆ ಬೆಂಗಳೂರು ಮೂಲದ Wakefit.co ಸಂಸ್ಥೆ ಸ್ಲೀಪ್ ಇಂಟರ್ಶಿಪ್ ಸೀಸನ್ 2 ಪ್ರಾರಂಭಿಸಿದೆ. ಮಾತ್ರವಲ್ಲದೆ ಆಸಕ್ತರನ್ನು ಆಹ್ವಾನಿಸಿದ್ದು, ಕೈತುಂಬ ಸಂಬಳ ನೀಡುವುದಾಗಿ ತಿಳಿಸಿದೆ


  ಕಳೆದ ವರ್ಷ ಕಂಪೆನಿ 100 ರಾತ್ರಿ ಮನೆಯಲ್ಲಿ ನಿದ್ದೆ ಮಾಡುವ ಕೆಲಸಕ್ಕಾಗಿ 23 ಇಂಟರ್ನ್ಗಳನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಈ ವರ್ಷ ಸೀಸನ್ 2 ನೋಂದಣಿ ಆರಂಭವಾಗಿದೆ.


  ಇದೀಗ ಈ ವರ್ಷ ಸೀಸನ್ ನೋಂದಣಿ ಆರಂಭವಾಗಿದ್ದು, ಇದಕ್ಕೆ ಆಯ್ಕೆಯಾದವರು 9 ಗಂಟೆಗಳ ನಿದ್ದೆಗಾಗಿ ಸೀಸನ್ ಮುಕ್ತಾಯದಲ್ಲಿ 1 ಲಕ್ಷ ರೂ ಸ್ಟೈಫಂಡ್ ಮತ್ತು 10 ಲಕ್ಷ ಬಹುಮಾನ ನೀಡುತ್ತದೆ.


  ಅಂದಹಾಗೆಯೇ ಕಂಪೆನಿ ‘2021ರ ಸ್ಲೀಪ್ ಇಂಟರ್ನ್ ಬ್ಯಾಚ್’ ಅಡಿಯಲ್ಲಿ ಈ ಬಹುಮಾನವನ್ನು ನೀಡಲಿದೆ.


  Wakefit.co ಬೆಂಗಳೂರು ಮೂಲದ ಕಂಪೆನಿಯಾಗಿದೆ. ಕಂಪೆನಿ ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟವನ್ನು ತಿಳಿಯಲು  ಅದರ ಕುರಿತು ಅಧ್ಯಾಯನ ನಡೆಸಲು ಇಂಟರ್ನ್​ಗಳನ್ನು ತೆಗೆದುಕೊಳ್ಳುತ್ತಾರೆ.


  2019ರಲ್ಲಿ ಸುಮಾರು 1.7 ಲಕ್ಷ ಜನರು ನಿದ್ರೆ ಮಾಡುವ ಕೆಲಸಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23 ಜನರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ 21 ಜನರು ಉದ್ಯೋಗಿಗಳು ಭಾರತೀಯರಾದರೆ 2 ಜನರು ವಿದೇಶಿಗರಾಗಿದ್ದರು ಎಮದು ಕಂಪೆನಿ ಹೇಳಿದೆ.


  ನಿದ್ದೆ


  Man arrested after he slept while robbing in Mangalore home,
  ನಿದ್ದೆ


  ನಿದ್ದೆ


  ನಿದ್ದೆ


  ನಿದ್ದೆ


  ನಿದ್ದೆ
  Published by:Harshith AS
  First published: