Lovely Wake up: ಮಲಗಿದ್ದ ಮಹಿಳೆಯನ್ನು ಎಬ್ಬಿಸಿದ ಆನೆ, ಎಲ್ಲೆಡೆ ವಿಡಿಯೋ ವೈರಲ್

ಥೈಲ್ಯಾಂಡ್‍ನಲ್ಲಿ ಹೋಟೆಲ್ ಕೋಣೆಯಲ್ಲಿ ಮಲಗಿದ್ದ ಮಹಿಳೆಯನ್ನು ಆನೆ ತನ್ನ ಸೊಂಡಿಲಿನಿಂದ ಎಬ್ಬಿಸಿದೆ. ಆ ವಿಡಿಯೋವನ್ನು ಮಹಿಳೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನಗೆ ಖುಷಿಯಾಯ್ತು ಎಂದು ಹೇಳಿಕೊಂಡಿದ್ದಾರೆ.

ಕೃಪೆ: ಸಾಕ್ಷಿ ಜೈನ್ ಟ್ವಿಟರ್

ಕೃಪೆ: ಸಾಕ್ಷಿ ಜೈನ್ ಟ್ವಿಟರ್

  • Share this:
    ಪ್ರಾಣಿಗಳನ್ನು (Animals) ಸಾಕೋದು ಅಂದ್ರೆ ಕೆಲವರಿಗೆ ತುಂಬಾ ಇಷ್ಟ. ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಮನೆಯಲ್ಲಿ ಸಾಕುತ್ತಾರೆ. ಆ ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಅವು ಕಣ್ಮರೆಯಾದ್ರೆ, ತಾವು ಏನನ್ನೋ ಕಳೆದುಕೊಂಡವರ ರೀತಿ ಆಡ್ತಾರೆ. ಅವರು ಸಾಕಿದ ಪ್ರಾಣಿಗಳು, ಅವರ ಮಾಲೀಕರನ್ನು ಪ್ರೀತಿಯಿಂದ ಎಬ್ಬಿಸುತ್ತಾರೆ. ಅವರು ಎದ್ದೇಳೋವರೆಗೂ ಬಿಡುವುದಿಲ್ಲ. ಆದ್ರೆ ಇಲ್ಲೊಂದ ಆನೆ ಮಹಿಳೆಯನ್ನು ಎಬ್ಬಿಸಿದೆ. ಹೌದು ಥೈಲ್ಯಾಂಡ್‍ (Thailand)ನಲ್ಲಿ ಹೋಟೆಲ್ (Hotel) ಕೋಣೆಯಲ್ಲಿ ಮಲಗಿದ್ದ ಮಹಿಳೆಯನ್ನು ಆನೆ (Elephant) ತನ್ನ ಸೊಂಡಿಲಿನಿಂದ ಎಬ್ಬಿಸಿದೆ. ಆ ವಿಡಿಯೋವನ್ನು ಮಹಿಳೆ (Women) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನಗೆ ಖುಷಿಯಾಯ್ತು ಎಂದು ಹೇಳಿಕೊಂಡಿದ್ದಾರೆ.

    ಅಲಾರಂ ಬದಲಿಗೆ ಆನೆಗಳು ಎಬ್ಬಿಸುತ್ತವೆ

    ಥೈಲ್ಯಾಂಡ್‍ನ ಚಿಯಾಂಗ್ ಮಾಯ್‍ನಲ್ಲಿರುವ ರೆಸಾರ್ಟ್‍ನಲ್ಲಿ ಒಂದರಲ್ಲಿ ಸಾಕ್ಷಿ ಜೈನ್ ಎಂಬ ಮಹಿಳೆ ಮಲಗಿರುತ್ತಾರೆ. ಆಗ ಆನೆಯೊಂದು ಕಿಟಕಿಯ ಮೂಲಕ ತನ್ನ ಸೊಂಡಿಲಿನಿಂದ ಆ ಮಹಿಳೆಯನ್ನು ಎಬ್ಬಿಸುತ್ತದೆ. ಆಕೆ ಮೊದಲು ಗಾಬರಿಗೊಂಡಳಾದ್ರೂ, ನಂತರ ಎದ್ದು ನೋಡುತ್ತಾಳೆ. ಆಗ ಆಕೆ ತುಂಬ ಖುಷಿ ಪಡುತ್ತಾಳೆ. ಈ ಕ್ಯೂಟಿಯಿಂದ ಎಚ್ಚರಗೊಂಡೇ ಇವತ್ತು. ಇಲ್ಲಿ ಎದ್ದೇಳೆಲು ಅಲರಾಂ ಬೇಡ. ಆನೆಗಳಿವೆ ಎಂದಿದ್ದಾರೆ.

    ನೀವು ಚಿಯಾಂಗ್‍ಮೈ ಪ್ರವಾಸ ಮಾಡಿ

    ಥೈಲ್ಯಾಂಡ್‍ನ ಚಿಯಾಂಗ್ ಮಾಯ್‍ನಲ್ಲಿರುವ ಈ ರೆಸಾರ್ಟ್‍ನಲ್ಲಿ ಅಲಾರಂಗಳ ಬದಲಿಗೆ ಆನೆಗಳು ನಿಮ್ಮನ್ನು ಎಬ್ಬಿಸುತ್ತವೆ. ನೀವು ಆನೆಯ ಹತ್ತಿರ ನಡೆಯ ಬಹುದು. ಆಹಾರ ನೀಡಬಹುದು. ಆನೆಗಳ ಜೋತೆ ಸ್ನಾನ ಮಾಡುವುದು ಮತ್ತು ಆಟವಾಡುವುದು ಇನ್ನೂ ಉತ್ತಮವಾಗಿದೆ.

    ಈ ಅನುಭವ ಬೇರೆಯೇ ಆಗಿತ್ತು. ಆದ್ದರಿಂದ ನೀವು ಮುಂದಿನ ಬಾರಿ ಥೈಲ್ಯಾಂಡ್ ಪ್ರವಾಸಕ್ಕೆ ಯೋಹಿಸಿದ್ರೆ, ಪರ್ವತಗಳು, ನದಿಗಳು ಮತ್ತು ಆನೆಗಳಿಂದ ಆವೃತವಾಗಿರುವ ಚಿಯಾಂಗ್‍ಮೈ ನಗರವನ್ನು ಸೇರಿಸಲು ಮರೆಯಬೇಡಿ ಎಂದು ಸಾಕ್ಷಿ ಜೈನ್ ಹೇಳಿದ್ದಾರೆ.

    ಇದನ್ನೂ ಓದಿ: Elephant: ನದಿಯಲ್ಲಿ ಮುಳುಗುತ್ತಿದ್ದ ಮಾವುತನ ಪಾಲಿಗೆ ಹೀರೋ ಆದ ಆನೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ

    ಮೋಹನಾಂಗಿಯಿಂದ ಎಚ್ಚರಗೊಳ್ಳುವ ಕರೆ

    ಆನೆ ಎಬ್ಬಿಸಿದ ಮಹಿಳೆ, ಅಂದ್ರೆ ಸಾಕ್ಷಿ ಜೈನ್ ಆ ವಿಡಿಯೋವನ್ನು ತನ್ನ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಆನೆಯು ತನ್ನ ಕೋಣೆಯ ಕಿಟಕಿಯ ಮೂಲಕ ಸೊಂಡಿಲನ್ನು ಚುಚ್ಚಿದಾಗ ನಾನು ಎಚ್ಚರಗೊಂಡೆ. 'ಈ ಮೋಹನಾಂಗಿಯಿಂದ ಎಚ್ಚರಗೊಳ್ಳುವ ಕರೆ', ಎಂದು ತಮ್ಮ ಟ್ವಿಟರ್‍ನಲ್ಲಿ ಶೀರ್ಷಿಕೆ ಹಾಕಿಕೊಂಡಿದ್ದಾರೆ.








    View this post on Instagram






    A post shared by Sakshi Jain (@saakshijaain)






    54.5 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ

    ಸಾಕ್ಷಿ ಜೈನ್ ಹಾಕಿದ ಆನೆ ವಿಡಿಯೋ ತುಂಬಾ ಜನರಿಗೆ ಇಷ್ಟವಾಗಿದೆ. ಟ್ರೆಂಡಿಂಗ್ ವಿಡಿಯೋವನ್ನು 2.4 ಮಿಲಿಯನ್ ಲೈಕ್ ಪಡೆದಿದೆ.ಸುಮಾರು 54.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದೆ.

    'ಇದು ಎದ್ದೇಳು ರಾಜಕುಮಾರಿಯಂತೆ'

    ಇನ್ನು ಆನೆ ವಿಡಿಯೋಗೆ ಹಲವು ಕಾಮೆಂಟ್‍ಗಳು ಬಂದಿವೆ. ಲವ್ಲಿ, ನೀವು ತುಂಬಾ ಅದೃಷ್ಟವಂತರು. ಅವಳು ಅರಿತುಕೊಳ್ಳುವ ಮೊದಲು ಅವಳ ಹೃದಯವು ಒಂದು ಸೆಕೆಂಡ್ ನಿಂತುಹೋಯಿತು ಎಂದು ನಾನು ಭಾವಿಸುತ್ತೇನೆ. ಅಯ್ಯೋ! ಇದು ಎದ್ದೇಳು ರಾಜಕುಮಾರಿಯಂತೆ. ಎಂದು ಇನ್ನೂ ಹಲವಾರು ಕಾಮೆಂಟ್‍ಗಳನ್ನು ಹಾಕಿದ್ದಾರೆ.

    ಇದನ್ನೂ ಓದಿ: Elephant: ಆನೆಗೆ ಚಡ್ಡಿ ಅಲ್ಲ ಕಣ್ರೀ, ಚಪ್ಪಲಿ ಹಾಕಿಸಿದ್ದಾರೆ! 12 ಸಾವಿರ ರೂಪಾಯಿ ಪಾದರಕ್ಷೆ ಧರಿಸಿ ಗಜ ನಡಿಗೆ

    ಮಾವುತನನ್ನು ರಕ್ಷಿಸಿದ್ದ ಆನೆ

    ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮಾವುತನ ಪ್ರಾಣವನ್ನು ಆನೆ ರಕ್ಷಿಸಿತ್ತು. ತಾನು ಈಜಿ ದಡಕ್ಕೆ ಸೇರಿದರೂ ಆನೆ ತನ್ನ ಮಾವುತನಿಗಾಗಿ ಹುಡುಕಾಡಿದೆ.

    ಆತ ಕೊಚ್ಚಿಕೊಂಡು ಹೋಗುತ್ತಿದ್ದಂತೆ ತಾನೂ ನೀರಿನಲ್ಲಿ ಪುನಃ ಧುಮುಕಿದೆ. ಸುಮಾರು 3 ಕಿಲೋ ಮೀಟರ್‍ವರೆಗೂ ಈಜಿಕೊಂಡು ಹೋಗಿ ಆತನನ್ನು ರಕ್ಷಿಸಿದೆ. ನದಿಯಲ್ಲಿ ನೀರಿನ ಬಲವಾದ ಪ್ರವಾಹವನ್ನು ನೋಡಿದಾಗ, ಆನೆ ನದಿಯಲ್ಲಿ ಮುಳುಗುತ್ತದೆ ಅಂತ ಮೊದಲಿಗೆ ತೋರುತ್ತದೆ,.

    ಆದರೆ ನಂತರ ಅದು ನೀರಿನಲ್ಲಿ ಈಜುತ್ತಾ, ನೀರಿನ ಮಟ್ಟದಿಂದ ಮೇಲಕ್ಕೆ ತಲುಪುತ್ತದೆ. ಆನೆ ಹತ್ತಿರಕ್ಕೆ ಬರುತ್ತಿದ್ದಂತೆ ಆದರ ಮೇಲೆ ಏರಿ ಕುಳಿತ ಮಾವುತ, ಸುರಕ್ಷಿತವಾಗಿ ದಡ ಸೇರಿದ್ದಾನೆ
    Published by:Savitha Savitha
    First published: