Viral Video: ಊಟಕ್ಕೆ ಬಂದಿದ್ದ ಗ್ರಾಹಕನ ಜೀವ ಉಳಿಸಿದ ಮಹಿಳಾ ಸಿಬ್ಬಂದಿ; ವಿಡಿಯೋ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರಿಗೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ತೋಚುವುದೇ ಇಲ್ಲ.ಇಂತಹ ಸಮಯದಲ್ಲಿ ಕೆಲವೋಮ್ಮೆ ದೇವರಾಗಿ ಕೆಲ ವ್ಯಕ್ತಿಗಳು ಬರುತ್ತರೆ.

  • Share this:

ಬಹಳಷ್ಟು ಜನರಿಗೆ ಕ್ಲಿಷ್ಟಕರ ( Difficult) ಸನ್ನಿವೇಶದಲ್ಲಿ ಏನು ಮಾಡಬೇಕೆಂದು ತೋಚುವುದೇ ಇಲ್ಲ. ಮೆದುಳು ನಿಷ್ಕ್ರಿಯವಾದಂತಾಗಿ ಬಿಟ್ಟಿರುತ್ತದೆ. (The Brain Inactive) ಆದರೆ ಕೆಲವೊಬ್ಬರು ಅದೆಂತಹುದೇ ಸನ್ನಿವೇಶವಿರಲಿ ಥಟ್ಟನೆ ಅಲರ್ಟ್‌ (Alert) ಆಗಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಇಲ್ಲೊಬ್ಬ ವೇಯ್ಟ್ರೆಸ್‌ (waitress) ಸಮಯ ಪ್ರಜ್ಞೆಯಿಂದಾಗಿ ಗ್ರಾಹಕನ (Customer) ಜೀವ ಉಳಿದಿದೆ. ಹೌದು ಹೋಟೆಲ್‌ (Hotel waitress) ಪರಿಚಾರಿಕೆಯೊಬ್ಬಳು ಗ್ರಾಹಕನ ಜೀವ ಉಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.




ಇದನ್ನೂ ಓದಿ: Student Death: ಮೈಸೂರಿನ ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ


ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂ ನಲ್ಲಿ ಗುಡ್ ನ್ಯೂಸ್ ಮೂವ್‌ಮೆಂಟ್ ಈ ವಿಡಿಯೋ ಕ್ಲಿಪ್‌ ಅನ್ನು ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ಒಂದು ಕುಟುಂಬವು ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದೆ ಎಂದು ತೋರಿಸುತ್ತದೆ.


ಅಲ್ಲಿ ಊಟ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಅಚಾನಕ್ಕಾಗಿ ಉಸಿರು ಕಟ್ಟಿಕೊಳ್ಳುತ್ತದೆ. ಆತನ ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ಆತನ ಬೆನ್ನು ತಟ್ಟುತ್ತಿರುತ್ತಾನೆ. ವೇಯ್ಟ್ರೆಸ್‌ ಆ ಕುಟುಂಬದ ಬಳಿಗೆ ಬರುತ್ತಿದ್ದಂತೆ, ಆ ವ್ಯಕ್ತಿಗೆ ಉಸಿರುಗಟ್ಟಿರುವುದನ್ನು ಅವಳು ಗಮನಿಸುತ್ತಾಳೆ. ತಕ್ಷಣವೇ ಕಾರ್ಯ ಪ್ರವೃತ್ತಳಾದ ಆಕೆ ಎರಡೂ ಕೈಗಳಿಂದ ಆ ವ್ಯಕ್ತಿಯ ಎದೆಗೆ ಪ್ರೆಶರ್‌ ನೀಡುತ್ತಾಳೆ.


ಕೊನೆಗೆ ಆ ವ್ಯಕ್ತಿ ಸುಧಾರಿಸಿಕೊಳ್ಳುತ್ತಾನೆ ಅನ್ನೋದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಮೂಲತಃ ಆಕೆ ಆ ವ್ಯಕ್ತಿಗೆ ಹೈಮ್ಲಿಚ್ ಚಿಕಿತ್ಸೆ ನೀಡುತ್ತಿರುವುದನ್ನು ಕಾಣಬಹುದು.


ಹೈಮ್ಲಿಚ್ ಕುಶಲತೆಯು ಒಂದು ಪ್ರಥಮ ಚಿಕಿತ್ಸಾ ಚಿಕಿತ್ಸೆಯಾಗಿದ್ದು, ಇದು ಒಂದು ಆಹಾರವು ಶರೀರದ ಮೇಲ್ಭಾಗದ ವಾಯುಮಾರ್ಗಗಳನ್ನು ಅಡ್ಡಿಪಡಿಸಿದಾಗ ಮಾಡಲಾಗುತ್ತದೆ. ಈ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಅನೇಕ ಜನರು ಮಹಿಳೆಯ ತ್ವರಿತ ಆಲೋಚನೆಯನ್ನು ಶ್ಲಾಘಿಸಿದ್ದಾರೆ. ಹಾಗೂ ಆಕೆಯ್ನು "ಹೀರೋ" ಎಂದು ಕರೆದಿದ್ದಾರೆ.


ವೀಡಿಯೋದ ಶೀರ್ಷಿಕೆಯಲ್ಲಿ, ಗ್ರಾಹಕರ ಜೀವವನ್ನು ಉಳಿಸಿದ ಮಹಿಳೆ ಲ್ಯಾಸಿ ಗಪ್ಟಿಲ್ ಎಂದು ಗುಡ್ ನ್ಯೂಸ್ ಮೂವ್ಮೆಂಟ್ ತಿಳಿಸಿದೆ. ತುರ್ತು ವೈದ್ಯಕೀಯ ತಂತ್ರಜ್ಞರಾಗಿ (EMT) ತರಬೇತಿ ಪಡೆದಾಗ ಗುಪ್ಟಿಲ್ ಅವರು ಹೈಮ್ಲಿಚ್ ಕುಶಲತೆ, ಪ್ರಥಮ ಚಿಕಿತ್ಸೆ ಮತ್ತು CPR ಬಗ್ಗೆ ಮೊದಲೇ ಕಲಿತಿದ್ದರು ಎನ್ನಲಾಗಿದೆ.


ಇದನ್ನೂ ಓದಿ: Viral News: ಮದುವೆ ಅಂದ್ರೇನು? ಪುಟ್ಟ ಬಾಲಕನ 'ಅಸಲಿ' ಉತ್ತರಕ್ಕೆ ಶಿಕ್ಷಕಿ ಗರಂ, ನೆಟ್ಟಿಗರಿಂದ ಫುಲ್​ ಮಾರ್ಕ್ಸ್​!


ಈ ವೀಡಿಯೊವನ್ನು ಹಂಚಿಕೊಂಡ ನಂತರ  1.6 ಲಕ್ಷ ವೀಕ್ಷಣೆ ಕಂಡಿದೆ.


ಅಲ್ಲದೇ ಹಲವಾರು ಜನರು ಕಾಮೆಂಟ್ ಮಾಡಿ ಈಕೆಯ ಕೆಲಸವನ್ನು ಶ್ಲಾಘಿಸಿದ್ದಾರೆ. ಒಬ್ಬ ವ್ಯಕ್ತಿ ಬರೆದಿದ್ದಾರೆ, "ಅವಳು ತುಂಬಾ ಶಾಂತವಾಗಿದ್ದಾಳೆ ಮತ್ತು ಎಲ್ಲರನ್ನೂ ಹಾಗೆ ಇರಿಸುತ್ತಾಳೆ. ನಂಬಲಾಗದಷ್ಟು ವೃತ್ತಿಪರರು" ಎಂದು.


ಮತ್ತೊಬ್ಬರು, "ನಾನು ಒಮ್ಮೆ ಚಿಪ್ ಅನ್ನು ತಿಂದಾಗ ಉಸಿರುಗಟ್ಟಿತ್ತು. ಇದು ನನಗೆ ಸಂಭವಿಸಿದ ಅತ್ಯಂತ ಭಯಾನಕ ವಿಷಯವಾಗಿತ್ತು, ನನ್ನ ಗೆಳೆಯರು ಹತ್ತಿರದಲ್ಲೇ ಇದ್ದರು. ಆ ದೇವರಿಗೆ ಧನ್ಯವಾದಗಳು. ಈ ಮಹಿಳೆ ಆ ವ್ಯಕ್ತಿಗೆ ಸಹಾಯ ಮಾಡಲು ಮುಂದಾದದ್ದು ಸಂತೋಷವಾಗಿದೆ “ ಎಂದಿದ್ದಾರೆ.


ಮತ್ತೊಬ್ಬರು, "ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ನಡೆದುಕೊಳ್ಳಲು ಕೆಲವೇ ನಿಮಿಷಗಳಿರುತ್ತವೆ. ಆ ಮಹಿಳೆಗಾಗಿ ದೇವರಿಗೆ ಧನ್ಯವಾದಗಳು" ಎಂಬುದಾಗಿ ಹೇಳಿದ್ದಾರೆ.




ಒಟ್ಟಾರೆ, ಸಮಯಪ್ರಜ್ಞೆ ಅನ್ನೋದು ಬಹುತೇಕ ಸಂದರ್ಭಗಳಲ್ಲಿ ಮುಖ್ಯವಾಗುತ್ತೆ. ಅದರಲ್ಲೂ ಆರೋಗ್ಯದ ವಿಚಾರಗಳಲ್ಲಿ ಸಾಮಾನ್ಯ ಜ್ಞಾನ ಹಾಗೂ ತಕ್ಷಣಕ್ಕೆ ನೀಡಬಹುದಾದ ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಅರಿವಿರೋದು ಕೂಡ ಅತ್ಯಗತ್ಯ.


ಇಂಥ ಸಾಮಾನ್ಯ ಜ್ಞಾನದಿಂದ ಬೇರೆಯವರ ಹಾಗೂ ನಮಗೆ ಅತ್ಯಂತ ಆಪ್ತರಾದವರ ಜೀವ ಉಳಿಸಬಹುದು. ಕೆಲವೇ ಸೆಕೆಂಡುಗಳ ಈ ಕಾರ್ಯದಿಂದ ವ್ಯಕ್ತಿಯ ಜೀವವೇ ಉಳಿಯಬಹುದು ಎಂದಾದರೆ ಅದಕ್ಕಿಂತ ಸಂತೋಷದ ವಿಚಾರ ಬೇರೆ ಏನಿಲ್ಲ.


ಹಾಗಾಗಿ ಈ ಮಹಿಳೆ ಕಾರ್ಯ ಪ್ರವೃತ್ತಳಾಗುವುದು ಸ್ವಲ್ಪ ತಡವಾದಲ್ಲಿ ಏನು ಬೇಕಾದರೂ ಆಗಬಹುದಿತ್ತೇನೋ.. ಆ ವ್ಯಕ್ತಿಯ ಜೀವಕ್ಕೂ ಅಪಾಯವಿತ್ತು ಅನ್ನೋದನ್ನು ತಳ್ಳಿಹಾಕಲಾಗದು. ಹಾಗಾಗಿ ಆರೋಗ್ಯದ ವಿಚಾರದಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಚಿಕ್ಕ ಅರಿವಿರೋದು ಎಲ್ಲರಿಗೂ ಉತ್ತಮ.

Published by:Mahmadrafik K
First published: