Vulture Bees: ಈ ಜೇನುನೊಣಗಳು ಹಸಿ ಮಾಂಸ ತಿನ್ನುತ್ತವೆ, ಇವುಗಳಿಗೆ ಇಟ್ಟಿರುವ ಹೆಸರೇನು ಗೊತ್ತಾ?

ರಣಹದ್ದು ಜೇನು ನೊಣಗಳನ್ನು ಆಕರ್ಷಿಸಲು ಕೊಸ್ಟಾರಿಕಾಗೆ ಹೋದರು ಮತ್ತು ಹಸಿ ಕೋಳಿ ಮಾಂಸದ ತುಂಡುಗಳನ್ನು ಮರದ ಕೊಂಬೆಗಳಿಗೆ ಕಟ್ಟಿದ್ದರು. ರಣಹದ್ದು ಜೇನು ನೊಣಗಳು ಬರುವ ಮುನ್ನವೇ ಇರುವೆಗಳು ಮುತ್ತಿಕೊಳ್ಳಬಾರದು ಎಂಬ ಕಾರಣಕ್ಕೆ ಆ ಮಾಂಸದ ತುಂಡುಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿದ್ದರು.

ಜೇನುನೊಣ

ಜೇನುನೊಣ

  • Share this:
ತಾಜಾ ಮಾಂಸ ಮಾತ್ರವಲ್ಲ ಕೊಳೆತ ಮಾಂಸ(Meat)ವನ್ನು ಕೂಡ ತಿನ್ನುವ ಮತ್ತು ಅದನ್ನು ಜೀರ್ಣಿಸಿಕೊಳ್ಳಬಲ್ಲ ರೀತಿಯಲ್ಲಿ ವಿಕಸನಗೊಂಡಿರುವ ಜೇನು ನೋಣಗಳನ್ನು ವಿಜ್ಞಾನಿಗಳು(Scientists) ಕಂಡು ಹಿಡಿದಿದ್ದಾರೆ ಹಾಗೂ ಆ ನೊಣಗಳಿಗೆ “ರಣಹದ್ದು ಜೇನುನೊಣಗಳು(Vulture Bees)” ಎಂಬ ಹೆಸರನ್ನು ನೀಡಲಾಗಿದೆ. ಕಾರ್ನೆಲ್ ವಿಶ್ವವಿದ್ಯಾನಿಲಯ, ಕ್ಯಾಲಿಫೋರ್ನಿಯಾ ರಿವರ್‌ಸೈಡ್‌ ವಿಶ್ವವಿದ್ಯಾನಿಲಯ ಮತ್ತು ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ(American Museum of Natural History ) ವಿಜ್ಞಾನಿಗಳ ಪ್ರಕಾರ, ಈ ಜೇನು ನೊಣ(Bees)ಗಳು ತಮ್ಮ ಕರುಳಿನಲ್ಲಿ ಆಮ್ಲ - ಪ್ರಿಯ ಬ್ಯಾಕ್ಟೀರಿಯಾಗಳನ್ನು ಅಭಿವೃದ್ಧಿಸಿಕೊಂಡಿವೆ. ಅಂತಹ ಬ್ಯಾಕ್ಟೀರಿಯಾಗಳು(Bacteria) ರಣಹದ್ದುಗಳು ಮತ್ತು ಕತ್ತೆ ಕಿರುಬಗಳ ಹೊಟ್ಟೆಯಲ್ಲಿ ಕಂಡು ಬರುತ್ತವೆ. ಈ ಹೊಸ ಸಂಶೋಧನೆಯು ನಿಜಕ್ಕೂ ಆಸಕ್ತಿದಾಯಕವಾಗಿದೆ. ಏಕೆಂದರೆ ಜೇನುನೊಣಗಳು ಸಾಮಾನ್ಯವಾಗಿ ಸಸ್ಯಾಹಾರಿಗಳು ಎಂದು ನಂಬಲಾಗಿತ್ತು ಮತ್ತು ಅವುಗಳ ಮಕರಂದದಲ್ಲಿರುವ ಸೂಕ್ಷ್ಮ ಜೀವಿಗಳನ್ನು ಪರಿಗಣಿಸಿ ಅವುಗಳು ಸರ್ವಭಕ್ಷಕವೆಂದು ಇತ್ತೀಚೆಗೆ ಕಂಡು ಹಿಡಿಯಲಾಯಿತು. ಇದೀಗ, ‘ರಣಹದ್ದು ಜೇನುನೊಣಗಳು’ ಕೋಳಿ ಮಾಂಸದ ಹಸಿ ತುಂಡುಗಳನ್ನು ತಿನ್ನುವುದನ್ನು ನೋಡಿದ್ದಾರೆ. ಮಕರಂದಕ್ಕಾಗಿ ಇರುವ ತೀವ್ರ ಪೈಪೋಟಿಯೇ ಈ ವಿಕಸನಕ್ಕೆ ಕಾರಣ ಎಂಬುವುದು ವಿಜ್ಞಾನಿಗಳ ನಂಬಿಕೆ.

ಮಾಂಸ ತಿನ್ನುವ ರಣಹದ್ದು ಜೇನುನೊಣಗಳು

ವಿಜ್ಞಾನಿಗಳು , ರಣಹದ್ದು ಜೇನು ನೊಣಗಳನ್ನು ಆಕರ್ಷಿಸಲು ಕೊಸ್ಟಾರಿಕಾಗೆ ಹೋದರು ಮತ್ತು ಹಸಿ ಕೋಳಿ ಮಾಂಸದ ತುಂಡುಗಳನ್ನು ಮರದ ಕೊಂಬೆಗಳಿಗೆ ಕಟ್ಟಿದ್ದರು. ರಣಹದ್ದು ಜೇನು ನೊಣಗಳು ಬರುವ ಮುನ್ನವೇ ಇರುವೆಗಳು ಮುತ್ತಿಕೊಳ್ಳಬಾರದು ಎಂಬ ಕಾರಣಕ್ಕೆ ಆ ಮಾಂಸದ ತುಂಡುಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿದ್ದರು.

 ಮಾಂಸ ನೋಡಿ ಆಕರ್ಷಿತವಾದ ಜೇನುನೊಣಗಳು

ಆ ಮಾಂಸದ ತುಂಡುಗಳಿಂದ ಜೇನು ನೊಣಗಳು ಆಕರ್ಷಿತವಾದವು ಮತ್ತು ಅವು ಹಸಿ ಕೋಳಿ ಮಾಂಸವನ್ನು ತಿಂದದ್ದು ಮಾತ್ರವಲ್ಲ, ತಮ್ಮ ಹಿಂಗಾಲುಗಳಲ್ಲಿ ಇರುವ ಬುಟ್ಟಿಗಳಲ್ಲಿ ಸಂಗ್ರಹಿಸಿಕೊಂಡವು ಕೂಡ. ಹಾಗೆ ಆಕರ್ಷಿತವಾದ ನೊಣಗಳಲ್ಲಿ ಕೇವಲ ಮಾಂಸ ಮಾತ್ರ ತಿನ್ನುವ ರಣಹದ್ದು ನೊಣಗಳು ಮತ್ತು ಅವಕಾಶ ಸಿಕ್ಕಾಗ ಪ್ರೋಟೀನ್‍ಗಾಗಿ ಮಾಂಸ ತಿನ್ನುವ ನೊಣಗಳು ಸೇರಿದ್ದವು. ವಿಜ್ಞಾನಿಗಳು ರಣಹದ್ದು ನೊಣಗಳು ಮತ್ತು ಅವುಗಳ ಸಸ್ಯಾಹಾರಿ ಹಾಗೂ ಸರ್ವಭಕ್ಷಕ ಸಂಬಂಧಿಗಳನ್ನು ಸೆರೆ ಹಿಡಿದರು. ವಿಜ್ಞಾನಿಗಳು ತಾವು ಸೆರೆ ಹಿಡಿದ ಜೇನು ನೊಣಗಳನ್ನು ವಿಶ್ಲೇಷಿಸಿದಾಗ ಅವುಗಳು ಅತ್ಯಂತ ತೀವ್ರವಾದ ಬದಲಾವಣೆಗೆ ಒಳಗಾಗಿರುವುದನ್ನು ಕಂಡುಕೊಂಡರು.

ಬ್ಯಾಕ್ಟೀರಿಯಾಗಳಿಂದ ರಕ್ಷಣೆ

“ರಣಹದ್ದು ಜೇನುನೊಣ ಸೂಕ್ಷ್ಮ ಜೀವಿಯು ಆಮ್ಲಪ್ರಿಯ ಬ್ಯಾಕ್ಟೀರಿಯಾದಿಂದ ಸಮೃದ್ಧವಾಗಿದೆ. ಅವು ಹೊಸ ರೀತಿಯ ಬ್ಯಾಕ್ಟೀರಿಯಾಗಳಾಗಿದ್ದು, ಅವುಗಳ ಸಂಬಂಧಿಗಳು ಇದನ್ನು ಹೊಂದಿಲ್ಲ”, ಎಂದು ಈ ಅಧ್ಯಯನದಲ್ಲಿ ಕೆಲಸ ಮಾಡಿರುವ ವಿಜ್ಞಾನಿಗಳಲ್ಲಿ ಒಬ್ಬರಾಗಿರುವ ಕ್ವಿನ್ ಎಸ್ ಮ್ಯಾಕ್‍ಫೆಡ್ರಿಕ್ ಹೇಳಿದ್ದಾರೆ. ರಣಹದ್ದು ಜೇನುನೊಣಗಳ ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು , ಕೊಳೆತ ಮಾಂಸದಲ್ಲಿರುವ ರೋಗಾಣುಗಳಿಂದ ಅವುಗಳನ್ನು ರಕ್ಷಿಸುತ್ತವೆ.

ಮಾಂಸ ತಿಂದರೂ ಸಿಹಿಯಾದ ಜೇನುತುಪ್ಪ ಸಂಗ್ರಹ

ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಆ ಜೇನು ನೊಣಗಳು ಹಸಿ ಮಾಂಸದ ಕುರಿತ ಹಸಿವನ್ನು ಬೆಳೆಸಿಕೊಂಡಿದ್ದರೂ ಕೂಡ ಈಗಲೂ ಸಿಹಿಯಾದ ಮತ್ತು ಸೇವಿಸಲು ಅರ್ಹವಾದ ಜೇನುತುಪ್ಪವನ್ನು ಉತ್ಪತ್ತಿ ಮಾಡಬಲ್ಲವು. ವಿಜ್ಞಾನಿಗಳ ಪ್ರಕಾರ, ಜೇನು ನೊಣಗಳು, ಜೇನು ತುಪ್ಪ ಸಂಗ್ರಹಿಸುವ ಕೋಣೆಗಳಿಂದ ಪ್ರತ್ಯೇಕವಾಗಿ, ಪ್ರವೇಶಿಸುವ ಮೊದಲು ಎರಡು ವಾರಗಳವರೆಗೆ ವಿಶೇಷವಾದ ಮತ್ತು ಬಂದ್ ಮಾಡಲ್ಪಟ್ಟಿರುವ ಕೋಣೆಗಳಲ್ಲಿ ಮಾಂಸವನ್ನು ಸಂಗ್ರಹಿಸುತ್ತವೆ. ಈ ಅಧ್ಯಯನವನ್ನು ನವೆಂಬರ್ 23ರಂದು ಅಮೆರಿಕನ್ ಸೊಸೈಟಿ ಆಫ್ ಮೈಕ್ರೋಬಯಾಲಜಿಸ್ಟ್ ಜರ್ನಲ್ ಎಂಬಯೋನಲ್ಲಿ ಪ್ರಕಟಿಸಲಾಗಿದೆ.
Published by:Latha CG
First published: