• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Models: ವೋಗ್ ಸಿಂಗಾಪುರ್ ಕವರ್ ಶೂಟ್‌ನಲ್ಲಿ ಮಿಂಚಿದ AI ಮಾಡೆಲ್‌ಗಳು- ಇನ್ಮುಂದೆ ರೂಪದರ್ಶಿಗಳ ಪಾಡೇನು?

Models: ವೋಗ್ ಸಿಂಗಾಪುರ್ ಕವರ್ ಶೂಟ್‌ನಲ್ಲಿ ಮಿಂಚಿದ AI ಮಾಡೆಲ್‌ಗಳು- ಇನ್ಮುಂದೆ ರೂಪದರ್ಶಿಗಳ ಪಾಡೇನು?

 AI ಮಾಡೆಲ್‌ಗಳು

AI ಮಾಡೆಲ್‌ಗಳು

ಆದರೆ ಮಾಡೆಲಿಂಗ್ ಜಗತ್ತಿನಲ್ಲಿ ಮನುಷ್ಯರ ಬದಲಿಗೆ ಎಐ ರೂಪಾಂತರ ಎಷ್ಟು ಹೊಂದಿಕೆಯಾಗಬಹುದು ಎಂಬುದೇ ಚರ್ಚನೀಯ ವಿಷಯವಾಗಿದೆ.

 • Trending Desk
 • 3-MIN READ
 • Last Updated :
 • New Delhi, India
 • Share this:

ಈಗ ಎಲ್ಲಿ ನೋಡಿದರಲ್ಲೂ ಕೃತಕ ಬುದ್ಧಿಮತ್ತೆ ಕುರಿತಾದ ಸುದ್ದಿಗಳೇ (News) ಹರಿದಾಡುತ್ತಿವೆ. ಶಿಕ್ಷಣ (Education), ಉದ್ಯಮ (Business), ಕೈಗಾರಿಕೆ, ವೈದ್ಯಕೀಯ (Medical) ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ ಅಥವಾ ಎಐ ವಿವಿಧ ಪ್ರಯೋಗಗಳಿಗೆ ಒಳಪಡುತ್ತಿವೆ. ಇದೀಗ ಮಾಡೆಲಿಂಗ್ (Modeling) ಜಗತ್ತಿಗೂ ಎಐ ಕಾಲಿಟ್ಟಿದ್ದು ರೂಪದರ್ಶಿಗಳ ಬದಲಿಗೆ ಎಐ ರಚಿತ ಮಾಡೆಲ್‌ಗಳು ಕವರ್ ಸ್ಟೋರಿಗಾಗಿ ಹೆಜ್ಜೆಹಾಕಿವೆ.


ವೋಗ್ ಸಿಂಗಾಪುರ್ ಕವರ್ ಪೇಜ್‌ನಲ್ಲಿ ಎಐ ರಚಿತ ಮಾಡೆಲ್‌ಗಳು


ವೋಗ್ ಸಿಂಗಾಪುರ್ ಇತ್ತೀಚೆಗೆ ತನ್ನ ಕವರ್ ಸ್ಟೋರಿಗಾಗಿ ಎಐ (AI) ರಚಿತ ಮಾಡೆಲ್‌ಗಳನ್ನು ಬಳಸಿಕೊಂಡಿದ್ದು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ರೂಪದರ್ಶಿಯನ್ನು ನೇಮಿಸಿಕೊಳ್ಳುವುದು, ನಂತರ ಅವರೊಂದಿಗೆ ಫೋಟೋಗೆ ಬೇಕಾದ ಭಂಗಿಗಳೊಂದಿಗೆ ತೊಡಗುವುದು, ಥೀಮ್ ತಯಾರಿ ಮೊದಲಾದ ತಲೆನೋವಿನ ಪ್ರಕ್ರಿಯೆಗಳನ್ನೆಲ್ಲಾ ಬದಿಗೊತ್ತಿ ಸರಳವಾಗಿ ಹೊಸ ಯುಗದ ತಂತ್ರಜ್ಞಾನವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ರೂಪದರ್ಶಿಗಳನ್ನು ಬಳಸಿಕೊಂಡಿದೆ.


ಆದರೆ ಮಾಡೆಲಿಂಗ್ ಜಗತ್ತಿನಲ್ಲಿ ಮನುಷ್ಯರ ಬದಲಿಗೆ ಎಐ ರೂಪಾಂತರ ಎಷ್ಟು ಹೊಂದಿಕೆಯಾಗಬಹುದು ಎಂಬುದೇ ಚರ್ಚನೀಯ ವಿಷಯವಾಗಿದೆ.


ಇದನ್ನೂ ಓದಿ: Viral Video: ಪಂಜಾಬಿ ಹಾಡು, ಡೋಲ್ ಸದ್ದಿಗೆ ಕೊರಿಯನ್ ವರನ ಸಖತ್ ಡ್ಯಾನ್ಸ್! ವೈರಲ್ ಆಯ್ತು ವಿಡಿಯೋ


ಮಾನವ ರೂಪದರ್ಶಿಗಳ ಬೇಡಿಕೆ ತಗ್ಗಬಹುದೇ?


ಎಲ್ಲಿಯಾದರೂ ಇದೇ ಪ್ರಯತ್ನವನ್ನು ಇನ್ನಿತರ ಸಂಸ್ಥೆಗಳು ಮಾಡಿ ಅವುಗಳು ಯಶಸ್ವಿಯಾದವು ಎಂದೆನಿಸಿದರೆ ಇದುವೇ ಹೊಸ ಯುಗದ ಅಭ್ಯಾಸವಾಗಿ ಮಾರ್ಪಡಬಹುದು.


ಅಂತೆಯೇ ಮಾನವ ರೂಪದರ್ಶಿಗಳಿಗೆ ಬೇಡಿಕೆ ತಗ್ಗಬಹುದು ಅವರ ನೌಕರಿಗೆ ಮುಳುವಾಗಬಹುದು ಅಂತಿಮವಾಗಿ ಉದ್ಯಮದ ಆರ್ಥಿಕತೆಯ ಮೇಲೂ ಇದು ಕೆಟ್ಟ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.


ಮೊತ್ತ ಮೊದಲ ಬಾರಿಗೆ ವೋಗ್ ಪ್ರಯತ್ನ


ವೋಗ್ ಸಿಂಗಾಪುರದ ಮಾರ್ಚ್ ಸಂಚಿಕೆ ಕವರ್ ಶೂಟ್ ಅನ್ನು ಸಂಪೂರ್ಣವಾಗಿ AI-ರಚಿತ ಅವತಾರಗಳಿಂದ ರೂಪಿಸಲಾಗಿದೆ. ಮ್ಯಾಗಜೀನ್‌ನ ಹೊಸ ಸಂಪಾದಕ-ಮುಖ್ಯಸ್ಥರಾದ ಡೆಸ್ಮಂಡ್ ಲಿಮ್ ಅವರ ನೇತೃತ್ವದಲ್ಲಿ ಹೊರ ಬರುತ್ತಿರುವ ಮೊದಲ ಕವರ್ ಕೂಡ ಇದಾಗಿದೆ. ಮೊತ್ತ ಮೊದಲ ಬಾರಿಗೆ AI ಮಾಡೆಲ್‌ಗಳು ಪ್ರಸಿದ್ಧ ಫ್ಯಾಷನ್ ನಿಯತಕಾಲಿಕೆಯ ಮುಖಪುಟವನ್ನು ಅಲಂಕರಿಸಿವೆ.


ನವೀನತೆ ಹಾಗೂ ಸಂಪ್ರದಾಯಕ್ಕೆ ಗೌರವ


ಫ್ಯಾಶನ್ ಜಗತ್ತಿನಲ್ಲಿಯೇ ಹೊಸ ಸಂಚಲನವನ್ನುಂಟು ಮಾಡಿದ ಈ ಹೊಸ ಪ್ರಯತ್ನ ಅದ್ಭುತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ರೂಪದರ್ಶಿಗಳ ಪಾಡೇನು ಎಂಬ ಯೋಚನೆಯನ್ನು ಮುಂದಿರಿಸುತ್ತದೆ.


ವಿ ಕ್ರಿಯೇಟ್ ಫಿಲ್ಮ್ಸ್‌ನ ಭಾರತೀಯ ಕಂಟೆಂಟ್ ಏಜೆನ್ಸಿಯ ಸೃಜನಶೀಲ ನಿರ್ದೇಶಕ ವರುಣ್ ಗುಪ್ತಾ ನಿರ್ದೇಶನದಲ್ಲಿ ಈ ಎಐ ಮಾಡೆಲ್‌ಗಳು ರೂಪುಗೊಂಡಿವೆ ಎಂಬುದನ್ನು ಲಿಮ್ ವಿವರಿಸಿದ್ದಾರೆ.


ವರದಿಯ ಪ್ರಕಾರ ಈ ಎಐ ರೂಪದರ್ಶಿಗಳನ್ನು ಹೊಸ ಬಗೆಯ ನವೀನತೆ ಹಾಗೂ ಸಂಪ್ರದಾಯಕ್ಕೆ ಗೌರವ ಸಲ್ಲಿಸುವ ಬಗೆಯಲ್ಲಿ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.


ಎಐ ರೂಪದರ್ಶಿಗಳ ಹಣೆಯನ್ನಲಂಕರಿಸಿದ ನೆತ್ತಿ ಬೈತಲೆ


ರೂಪದರ್ಶಿಗಳಾದ ಎಐ ಮಹಿಳಾ ಅವತಾರ್‌ಗಳು ದಕ್ಷಿಣ ಏಷ್ಯಾದ ವಿಶೇಷತೆಗಳೊಂದಿಗೆ ಪ್ರದರ್ಶಿತಗೊಂಡಿದ್ದು ಪ್ರದೇಶದ ವಿಶಿಷ್ಟ ಜನಾಂಗೀಯತೆ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಲಾಗಿದೆ.


ಚಿತ್ರವೊಂದರಲ್ಲಿ ಎಐ ಮಾದರಿಯು ಮುಂದಲೆ (ಮಾಂಗ್ ಟಿಕಾ)ವನ್ನು ಧರಿಸಿದೆ. ಈ ಆಭರಣವನ್ನು ಸಾಮಾನ್ಯವಾಗಿ ಭಾರತೀಯ ಮಹಿಳೆಯರು ತಮ್ಮ ಬೈತಲೆಯ ನಡುವೆ ಇರಿಸುತ್ತಾರೆ ಅಂತೆಯೇ ಹಣೆಗೆ ಸಿಂಗಾರಪ್ರಾಯವಾಗಿರುವ ಆಭರಣ ಕೂಡ ಹೌದು.ವೋಗ್‌ನ ಇನ್ನಿತರ ನಿಯತಕಾಲಿಕೆಗಳಲ್ಲಿ ಎಐ ಮಾಡೆಲ್‌ಗಳ ಪ್ರಯೋಗ


ಮಿಡ್‌ಜರ್ನಿ ಮತ್ತು ಡಾಲ್-ಇ ಸೇರಿದಂತೆ ಎಐ ಇಮೇಜಿಂಗ್ ಉಪಕರಣಗಳೊಂದಿಗೆ ಕವರ್‌ಗಳನ್ನು ತಯಾರಿಸಲಾಗಿದೆ. ಡಾಲ್-ಇ ಕಾಸ್ಮೋಪಾಲಿಟನ್‌ಗಾಗಿ ವಿಶ್ವದ ಮೊದಲ AI-ವಿನ್ಯಾಸಗೊಳಿಸಿದ ಮ್ಯಾಗಜೀನ್ ಕವರ್ ಅನ್ನು ಸಹ ರಚಿಸಿದ್ದು, ಮೂನ್‌ಸ್ಕೇಪ್‌ನಲ್ಲಿ ಗಗನಯಾತ್ರಿಯನ್ನು ಒಳಗೊಂಡಿದೆ.


ಈ ತಿಂಗಳು ಎಐ ಅನ್ನು ಬಳಸಿಕೊಂಡು ಪ್ರಯೋಗ ನಡೆಸಿದ ಮ್ಯಾಗಜೀನ್ ವೋಗ್ ಸಿಂಗಾಪೂರ್ ಮಾತ್ರವಲ್ಲ. ವೋಗ್ ಬ್ರೆಸಿಲ್‌ನ ಮಾರ್ಚ್ ಸಂಚಿಕೆಯು AI ಅನ್ನು ಬಳಸಿಕೊಂಡು ಛಾಯಾಗ್ರಾಹಕ ಜೀ ನೂನಸ್ ಸಹಯೋಗದೊಂದಿಗೆ ಒಂದಲ್ಲ ಒಟ್ಟು ಆರು ಕವರ್‌ಗಳನ್ನು ನಿರ್ಮಿಸಿದೆ.

top videos
  First published: