Love Letter: ಕುಸುಮಾ ನಿನ್ನನ್ನು ಕರೆಯಲು ಬರ್ತೀನಿ; ಬಂತು ವಿಶಾಲ್ ಸಂದೇಶ; ಇಬ್ಬರ ಮದ್ವೆ ನಡೆಯುತ್ತಾ?

ಕೆಲ ದಿನಗಳ ಹಿಂದೆ ಕುಸುಮ ಗೆಳೆಯನಿಗಾಗಿ ಸಂದೇಶವನ್ನು 10 ರೂ. ನೋಟಿನ (10 Rupee Note) ಮೇಲೆ ಬರೆದಿದ್ದಳು.  10 ರೂ. ಮೇಲಿನ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿತ್ತು. ಇದೀಗ ಈ ಸಂದೇಶಕ್ಕೆ ಉತ್ತರ ಬಂದಿದೆ. ವಿಶಾಲ್ ಸಹ 10 ರೂ. ನೋಟ್ ಮೂಲಕವೇ ಉತ್ತರ ನೀಡಿದ್ದಾನೆ.

ಕುಸಮಾ ಸಂದೇಶ

ಕುಸಮಾ ಸಂದೇಶ

  • Share this:
ಬಾಲಿವುಡ್ ತಾರೆಗಳಾದ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ (Alia Bhatt And Ranbir Kapoor Wedding) ಜತೆಯಲ್ಲಿ ವಿಶಾಲ್ ಮತ್ತು ಕುಸುಮ (Vishal And Kusuma) ಕಲ್ಯಾಣದ ಬಗ್ಗೆ  ನೆಟ್ಟಿಗರು ಹೆಚ್ಚು ಆಕರ್ಷಿತರಾಗಿದ್ದಾರೆ. ಆಲಿಯಾ ಮತ್ತು ರಣ್ಬೀರ್ ಮದುವೆ ಏನೋ ನಡೆದಿದೆ. ನಾಳೆ ಅಂದ್ರೆ ಏಪ್ರಿಲ್ 26ಕ್ಕೆ ಕುಸುಮಾ ಮದುವೆ (Marriage) ನಡೆಯಲಿದೆ. ದಿಲ್ ವಾಲ್ ದುಲ್ಹನಿಯಾ ಲೇ ಜಾಯೇಂಗಾ ರೀತಿಯಲ್ಲಿ ವಿಶಾಲ್ ಎಂಟ್ರಿ ಕೊಡ್ತಾನಾ ಎಂದು ನೆಟ್ಟಿಗರು ಕಾತುರದಿಂದ ಕಾಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕುಸುಮ ಗೆಳೆಯನಿಗಾಗಿ ಸಂದೇಶವನ್ನು 10 ರೂ. ನೋಟಿನ (10 Rupee Note) ಮೇಲೆ ಬರೆದಿದ್ದಳು.  10 ರೂ. ಮೇಲಿನ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿತ್ತು. ಇದೀಗ ಈ ಸಂದೇಶಕ್ಕೆ ಉತ್ತರ ಬಂದಿದೆ. ವಿಶಾಲ್ ಸಹ 10 ರೂ. ನೋಟ್ ಮೂಲಕವೇ ಉತ್ತರ ನೀಡಿದ್ದಾನೆ.

ಒಮ್ಮೆ ಬಾರೋ ಅಂತ ಮನವಿ ಮಾಡಿದ ಹುಡುಗಿ

"ವಿಶಾಲ್, ನನ್ನ ಮದುವೆ ಏಪ್ರಿಲ್ 26ಕ್ಕೆ ಫಿಕ್ಸ್ ಆಗಿದೆ. ನನ್ನನ್ನು ಇಲ್ಲಿಂದ ಬೇಗನೆ ಬಂದು ಕರೆದುಕೊಂಡು ಹೋಗಿ. ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ. ನಿಮ್ಮ ಕುಸುಮ್" ಎಂದು 10 ರೂಪಾಯಿ ನೋಟಿನ ಮೇಲೆ ಬರೆಯಲಾಗಿದೆ. ಈ ನೋಟನ್ನು ಪಡೆದುಕೊಂಡ ಟ್ವಿಟ್ಟರ್‌ ಬಳಕೆದಾರರೊಬ್ಬರು ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡರು, ವಿಶಾಲ್‌ಗೆ ಈ ಸಂದೇಶ ಸಿಗುತ್ತದೆ ಎಂದು ಆಶಿಸಿದ್ದರು.

ಕುಸಮಾ ನಾನು ಬರುತ್ತೇನೆ!

ಇದೀಗ ಈ ಸಂದೇಶ ವಿಶಾಲ್ ಗೆ ತಲುಪಿದೆ. ಅವನು 10 ರೂ. ನೋಟ್ ಮೂಲಕ ತನ್ನ ಸಂದೇಶವನ್ನು ಕಳುಹಿಸಿದ್ದಾನೆ. ಕುಸುಮಾ ನನಗೆ ನಿನ್ನ ಸಂದೇಶ ಸಿಕ್ಕಿದೆ. ನಾನು ನಿನ್ನ ಕರೆದುಕೊಂಡು ಹೋಗಲು ಬರುತ್ತಿದ್ದೇನೆ. ಐ ಲವ್ ಯು, ಇಂತಿ ನಿನ್ನವ ವಿಶಾಲ್ ಎಂದು ಬರೆಯಲಾಗಿದೆ.

ಇದನ್ನೂ ಓದಿ:  AC ban: ಇದೆಂಥಾ ನಿರ್ಧಾರ! ಈ ದೇಶದ ಸರ್ಕಾರಿ ಕಟ್ಟಡದಲ್ಲಿ ಎಸಿ ಬಳಸೋಕೆ ಇಷ್ಟೆಲ್ಲಾ ನಿಯಮವಿದೆಯಾ!

ಇದೀಗ ನೆಟ್ಟಿಗರು ಎರಡೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಸಂದೇಶ ನಿಜವಾಗಿಯೂ ವಿಶಾಲ್ ಬರೆದಿದ್ದಾನೆ  ಅನ್ನೋದರ ಬಗ್ಗೆ ಖಾತ್ರಿ ಸಿಕ್ಕಿಲ್ಲ. ಕೆಲ ನೆಟ್ಟಿಗರು ಕಿಡಿಗೇಡಿಗಳು ಈ ರೀತಿ ಸಂದೇಶ ಬರೆದು ಫೋಟೋ ಹರಿಬಿಟ್ಟಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಯಾರು ಈ ಕುಸುಮಾ ಮತ್ತು ವಿಶಾಲ್?

ಇವರಿಬ್ಬರು ಯಾರು ಮತ್ತು ಎಲ್ಲಿಯವರು  ಎಂಬುವುದ ಮಾತ್ರ ತಿಳಿದು ಬಂದಿಲ್ಲ.  ಏಪ್ರಿಲ್ 26ಕ್ಕೆ ಕುಸುಮಾ ಮದುವೆ ನಡೆಯಲಿದ್ದು, ಅದು ಆಕೆಯ ವಿರೋಧದ ನಡುವೆ. ಹಾಗಾಗಿ ಕುಸುಮಾ ತನ್ನ ಗೆಳೆಯನನ್ನು ಸಂಪರ್ಕಿಸಲು ನೋಟಿನ ಮೇಲೆ ತನ್ನನ್ನು ಕರೆದುಕೊಂಡು ಹೋಗುವ ಮನವಿ ಮಾಡಿಕೊಂಡಿದ್ದಳು.

Vishal Replies to Kusums Message on Rs 10 Note mrq
ವಿಶಾಲ್ ಪ್ರತಿಕ್ರಿಯೆ


ಕಣ್ಮುಂದೆ ಬನ್ನಿ ಎಂದ ನೆಟ್ಟಿಗರು

ಕುಸುಮಾ ಸಂದೇಶ ನೋಡಿದ ನೆಟ್ಟಿಗರು ಜೋಡಿಯ ಮದುವೆ ಆಗಲಿ ಅಂತ ಆಶಿಸಿದ್ದಾರೆ. ಮದುವೆ ಬಳಿಕ ನೀವು ಕಾಣಿಸಿಕೊಳ್ಳಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆ ನಿಮ್ಮಿಬ್ಬರನ್ನು ಕಾಣುವ ಕುತೂಹಲ ಹೆಚ್ಚಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಶಾಲ್ ಹುಡುಕಾಟ!

ತನ್ನ ಗೆಳೆಯನನ್ನು ಹೇಗಾದರೂ ಮಾಡಿ ತಲುಪಬೇಕೆಂಬ ಆ ವಧುವಿನ ಪ್ರಯತ್ನವು ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆಯಿತು, ಅನೇಕರು ಟ್ವಿಟ್ಟರ್‌ ಬಳಕೆದಾರರನ್ನು ಅವರು ಸೆನ್ಸಾರ್ ಮಾಡಿದ ವ್ಯಕ್ತಿಯ ಉಪನಾಮವನ್ನು ಬಹಿರಂಗಪಡಿಸುವಂತೆ ವಿನಂತಿಸಿದರು. ಈಗ, ಜನರು ಪ್ಲಾಟ್‌ಫಾರ್ಮ್ ‌ನಲ್ಲಿರುವ ಎಲ್ಲಾ ವಿಶಾಲ್ ಎಂಬ ಹೆಸರಿನ ವ್ಯಕ್ತಿಗಳನ್ನು ಟ್ಯಾಗ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು.

ಇದನ್ನೂ ಓದಿ:  Expensive Chocolates: ಭಾರತದ ಅತಿ ದುಬಾರಿ ಚಾಕೊಲೇಟ್​ಗಳು ಇವಂತೆ - ನಿಮಗೆ ಯಾವ್ದು ಇಷ್ಟ?

ಕೆಲವರು ತಮಾಷೆಯ ಮೀಮ್‌ಗಳೊಂದಿಗೆ ಪ್ರತಿಕ್ರಿಯಿಸಿದರೆ, ಇತರರು ಈ ರೀತಿಯ ಸಂದೇಶಗಳನ್ನು ಈ ನೋಟಿನ ಮೇಲೆ ಬರೆಯಲಾದ ಎಷ್ಟೋ ಪ್ರೇಮ ಸಂದೇಶಗಳಲ್ಲಿ ಇದು ತುಂಬಾನೇ ಕಡಿಮೆ ಪ್ರೀತಿ ಇರುವ ಸಂದೇಶವಾಗಿದೆ ಎಂದು ವ್ಯಂಗ್ಯವಾಡಿದರು. ಈ ವರ್ಷದ ಪ್ರೇಮಿಗಳ ದಿನದಂದು, ಹೆಚ್ಚಿನವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರೆ, 20 ರೂಪಾಯಿ ನೋಟಿನ ಮೇಲೆ ಯಾರೋ ಬರೆದ "ರಾಶಿ ವಿಶ್ವಾಸದ್ರೋಹಿ" ಎಂಬ ಸಂದೇಶ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
Published by:Mahmadrafik K
First published: