ಪ್ರಧಾನಿಗೆ ಚಾಲೆಂಜ್​ ಹಾಕಿದ ವಿರಾಟ್​ ಕೊಹ್ಲಿ; ಶೀಘ್ರದಲ್ಲೇ ಉತ್ತರಿಸುವೆ ಎಂದ ಮೋದಿ

news18
Updated:May 24, 2018, 10:53 AM IST
ಪ್ರಧಾನಿಗೆ ಚಾಲೆಂಜ್​ ಹಾಕಿದ ವಿರಾಟ್​ ಕೊಹ್ಲಿ; ಶೀಘ್ರದಲ್ಲೇ ಉತ್ತರಿಸುವೆ ಎಂದ ಮೋದಿ
news18
Updated: May 24, 2018, 10:53 AM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಮೇ.24): ಬೆಂಗಳೂರು ರಾಯಲ್​ ಚಾಲೆಂಜರ್ಸ್​ ನಾಯಕ ವಿರಾಟ್​ ಕೊಹ್ಲಿ ಪ್ರಧಾನಿ ಮೋದಿಗೆ ಫಿಟನೆಸ್​​ ಸವಾಲು ಎಸೆದಿದ್ದಾರೆ. ಈ ಸವಾಲನ್ನು ಪ್ರಧಾನಿ ಸ್ವೀಕರಿಸಿದ್ದು ಶೀಘ್ರದಲ್ಲಿಯೇ ಇದಕ್ಕೆ ಉತ್ತರಿಸುವುದಾಗಿ ತಿಳಿಸಿದ್ದಾರೆ.

ಸಚಿವ ರಾಜವರ್ಧನ್​ ರಾಥೋಡ್​ ಆರಂಭಿಸಿದ "ಹಮ್​ಫಿಟ್​ತೋಇಂಡಿಯಾಫಿಟ್​" ಕ್ಯಾಂಪೆನ್​ನ ಅಡಿ ವಿರಾಟ್​ ತಮ್ಮ ಫಿಟ್ನೆಸ್​ ವಿಡಿಯೋ ಶೇರ್​ ಮಾಡಿದ್ದಾರೆ. ಅಲ್ಲದೇ ತಮ್ಮ ಪತ್ನಿ ಅನುಷ್ಕಾ ಶರ್ಮ, ಪ್ರಧಾನಿ ಮೋದಿ ಹಾಗೂ ಮಹೇಂದ್ರ ಸಿಂಗ್​ ದೋನಿಗೆ ಚಾಲೆಂಜ್​ ಮಾಡಿದ್ಧಾರೆ.

ಈ ಸವಾಲು ಸ್ವೀಕರಿಸಿರುವ ಮೋದಿ ಶೀಘ್ರದಲ್ಲಿಯೇ ತಮ್ಮ ಫಿಟ್ನೆಸ್​ ಗುಟ್ಟು ರಟ್ಟು ಮಾಡುವುದಾಗಿ ಹೇಳಿ ಟ್ವೀಟ್​ ಮಾಡಿದ್ದಾರೆ.

 

First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...