ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli) ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಕೊನೆಯ ಟೆಸ್ಟ್(Test) ಪಂದ್ಯದಲ್ಲಿ ಭರ್ಜರಿ ಅರ್ಧಶತಕ (Off Century)ಬಾರಿಸಿದ್ರು. ಆರಂಭದಿಂದಲೇ ಸತತ ಒಂದರ ಮೇಲೊಂದು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಆಸರೆಯಾದ ಕೊಹ್ಲಿ ತಾಳ್ಮೆಯ ಆಟವಾಡಿದರು. ಇತ್ತ ಮೈದಾನದಲ್ಲಿ 100ನೇ ಕ್ಯಾಚ್ ಪಡೆದು ದ್ರಾವಿಡ್(Dravid), ಲಕ್ಷ್ಮಣ್(Lakshman) ಸೇರಿದಂತೆ ದಿಗ್ಗಜರಿರುವ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಫುಲ್ ಖುಷಿಯಾಗಿರುವ ಅಭಿಮಾನಿಗಳು(Virat Fans) ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಾರೆ ಎಂದು ಟ್ವಿಟ್ಟರ್ನಲ್ಲಿ ಬೆಟ್ ಕಟ್ಟಿ ಈಗ ಎಲ್ಲರಿಗೂ ಲಕ್ಷ ಲಕ್ಷ ಹಣ ಗಳನ್ನು ನೀಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಲೈಕ್ ಹಾಗೂ ರೀಟ್ವೀಟ್ ಮಾಡಿದವರಿಗೆ 100 ಪೇಟಿಎಂ ಮಾಡುವುದಾಗಿ ಹೇಳಿದ್ದ ಅಭಿಮಾನಿ
ಟ್ವಿಟರ್ನಲ್ಲಿ ಚಿಕು ಎಂದು ಖಾತೆ ಹೊಂದಿರುವ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ದಕ್ಷಿಣ ಆಫ್ರಿಕಾ ವಿರುದ್ಧದ ಏನಾದರೂ ವಿರಾಟ್ ಕೊಹ್ಲಿ ಶತಕ ಅಥವಾ ಅರ್ಧ ಶತಕ ಗಳಿಸುತ್ತಾರೆ.. ನನ್ನ ಈ ಟ್ವೀಟ್ ನ್ನು ಲೈಕ್ ರೀಟ್ವೀಟ್ ಮಾಡಿದ ಪ್ರತಿಯೊಬ್ಬರಿಗೂ ಪೇಟಿಎಂ ಮೂಲಕ ನೂರು ರೂಪಾಯಿ ಕೊಡುತ್ತೇನೆ ಎಂದು ಬರೆದುಕೊಂಡಿದ್ದ.. ಹೀಗಾಗಿ ಎಂಟು ಸಾವಿರಕ್ಕೂ ಅಧಿಕ ಜನ ಚಿಕು ಖಾತೆ ಹೆಸರಿನಲ್ಲಿ ಬಂದಿದ್ದ ಟ್ವೀಟ್ ನ್ನು ರೀಟ್ವೀಟ್ ಮಾಡಿದ್ದು, 20 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.. ಹೀಗಾಗಿ ಈ ಎಲ್ಲರಿಗೂ ವಿರಾಟ್ ಕೊಹ್ಲಿ ಅಭಿಮಾನಿ ಹಣ ಕೊಡಬೇಕಾದ ಪರಿಸ್ಥಿತಿ ಉಂಟಾಗಿದೆ..
If Virat Kohli scores half century tomorrow, I'll Paytm 100 rupees to everyone who Retweet + likes this tweet. pic.twitter.com/YiasJ5jpUh
ಇನ್ನು ವಿರಾಟ್ ಕೊಹ್ಲಿ ಶತಕದ ಬಗ್ಗೆ ಬೆಟ್ ಕಟ್ಟಿದ್ದ ಜನರಿಗೆ ವಿರಾಟ್ ಕೊಹ್ಲಿ ಅಭಿಮಾನಿ ಬರೋಬ್ಬರಿ ಎಂಟು ಲಕ್ಷ ರೂಪಾಯಿಗಳ ಮೌಲ್ಯದ ಹಣವನ್ನು ನೀಡಬೇಕಾಗಿದೆ.. ಸದ್ಯ ಸೌತ್ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ.. ಹೀಗಾಗಿ ಇತರ ಅಭಿಮಾನಿಗಳು ಚೀಕು ಹೆಸರಿನ ಖಾತೆಯಲ್ಲಿ ಟ್ವೀಟ್ ಮಾಡಿದ್ದ ವ್ಯಕ್ತಿಗೆ ಹಣ ಪಾವತಿ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.
5 ರಾಷ್ಟ್ರಗಳಲ್ಲಿ ಸಾವಿರ ರನ್ ಪೂರೈಸಿದ ಭಾರತದ ಮೊದಲ ನಾಯಕ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಶತಕದ ಹಾದಿಯಲ್ಲಿ ಎಡವಿದರೂ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ವಿರಾಟ್ ಕೊಹ್ಲಿ 5 ರಾಷ್ಟ್ರಗಳಲ್ಲಿ ಸಾವಿರ ರನ್ ಪೂರೈಸಿದ ಭಾರತದ ಮೊದಲ ನಾಯಕ ಎನಿಸಿಕೊಂಡರು. ಇನ್ನು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನೆಲಗಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಸಾವಿರ ರನ್ ಪೂರೈಸಿದ ಭಾರತದ ಮೊದಲ ನಾಯಕ ಎನಿಸಿದ್ದಾರೆ. ಎಂಎಸ್ ಧೋನಿ 4 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದ್ದಾರೆ
ಕೊಹ್ಲಿಯ ಈ ಆಟಕ್ಕೆ ವಿಶ್ವದ ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಅದರಲ್ಲೂ ಸದಾ ವಿಚಾರ ಯಾವುದೇ ಇರಲಿ ಕೊಹ್ಲಿಯನ್ನು ಟೀಕಿಸುವ ಗೌತಮ್ ಗಂಭೀರ್, ಇದೇ ಮೊದಲ ಬಾರಿಗೆ ವಿರಾಟ್ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಅಹಂಕಾರವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡಿದ್ರು. ಇದರಿಂದಾಗಿಯೇ ನಿರ್ಣಾಯಕ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು ಎಂದು ಗೌತಮ್ ಅಭಿಪ್ರಾಯಪಟ್ಟಿದ್ದಾರೆ. ವಿದೇಶ ಪ್ರವಾಸಕ್ಕೆ ಹೋಗುವಾಗ ಅಹಂಕಾರವನ್ನು ಬದಿಗಿರಿಸುವಂತೆ ಕೊಹ್ಲಿ ಸಹ ಆಟಗಾರರಿಗೆ ಸೂಚನೆ ನೀಡುತ್ತಿದ್ದು, ಈ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಆ ಸೂತ್ರವನ್ನು ಸರಿಯಾಗಿ ಅಳವಡಿಸಿಕೊಂಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ..
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ