Virat Kohli: ಅಬ್ಬಾ..! ಒಂದು Instagram Postನಿಂದ ಎಷ್ಟೊಂದು ಹಣ ಸಂಪಾದನೆ ಮಾಡ್ತಾರೆ ಗೊತ್ತಾ...?

Virat Instagram: ವಿರಾಟ್ ಕೊಹ್ಲಿ ಭಾರತೀಯ ಸೆಲೆಬ್ರಿಟಿಗಳ ಪೈಕಿ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದ್ದಾರೆ.. ಇಂತಹ ಆಂಗ್ರಿ ಯಂಗ್ ಮ್ಯಾನ್ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡುವ ಒಂದು ಪ್ರಮೋಷನಲ್ ಪೋಸ್ಟ್ಸ್ ಗೆ ಬರೋಬ್ಬರಿ $680,000 ಯುಎಸ್‌ ಡಾಲರ್‌ ಪಡೆದುಕೊಳ್ಳುತ್ತಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 5.05 ಕೋಟಿ ರೂ.

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್

 • Share this:
  ಸದ್ಯ ಇಂಟರ್ನೆಟ್(Internet) ಜಮಾನ.. ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಮತ್ಯಾವುದೋ ಮೂಲೆಯಲ್ಲಿ ಇರುವ ತಮ್ಮ ಆತ್ಮೀಯರನ್ನು ಸಂಪರ್ಕಿಸುವ ಕಾಲ.. ತಮ್ಮ ಸಣ್ಣ ಸಣ್ಣ ವಿಚಾರಗಳನ್ನು ಸೋಶಿಯಲ್ ಮೀಡಿಯಾ(Social Media) ಮೂಲಕ ಹಂಚಿಕೊಂಡು ಜನರಿಗೆ ಮಾಹಿತಿ ನೀಡಿ ಮನರಂಜನೆಯನ್ನು(Entertainment) ನೀಡುತ್ತಿರುವ ಇಂತಹ ಕಾಲದಲ್ಲಿ ಕೆಲವೊಂದಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದವರು ಇದ್ದಾರೆ.. ಸಿನಿಮಾ ತಾರೆಯರು(Film Stars) ಕ್ರೀಡಾಪಟುಗಳನ್ನು(Sports Personality) ಹೊರತುಪಡಿಸಿ ಕೆಲವೊಂದಷ್ಟು ಜನ ಏಕಾಏಕಿ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಫೇಮಸ್ ಆಗುತ್ತಾರೆ.. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದವರೆಲ್ಲ ಲಕ್ಷಾಂತರ, ಸಾವಿರಾರು ಜನ ಫಾಲೋವರ್ಸ್ ಗಳನ್ನು ಹೊಂದುತ್ತಾರೆ.. ಹೀಗೆ ಫಾಲೋವರ್ಸ್ ಗಳ(Followers) ಸಂಖ್ಯೆ ಹೆಚ್ಚಾದಷ್ಟು ಅವರಿಗೆ ಪೈಡ್ ಪ್ರಮೋಷನ್ ಬರಲು ಶುರುವಾಗುತ್ತದೆ.. ಸಾಮಾನ್ಯ ಜನರಿಗೆ ಹೋಲಿಕೆ ಮಾಡಿಕೊಂಡರೆ ಇದು ಸೆಲೆಬ್ರಿಟಿಗಳಿಗೆ ಹೆಚ್ಚಿನ ಆದಾಯ(Income) ನೀಡುವ ತಾಣವಾಗಿದೆ.. ಹಾಗಿದ್ರೆ ಫೇಸ್ಬುಕ್(FaceBook) ಒಡೆತನದ ಇನ್ಸ್ಟಾಗ್ರಾಂ(Instagram) ನಿಂದ ಯಾವ ಯಾವ ಕ್ರೀಡಾ ತಾರೆಯರು ಸಿನಿಮಾ ತಾರೆಯರು ಎಷ್ಟು ಹಣ ದುಡಿಯುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತೆ.. ಅದಲು ಭಾರತೀಯ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಒಂದು ಇನ್ಸ್ಟಾಗ್ರಾಂ ಪೋಸ್ಟ್ ನಿಂದ ಎಷ್ಟು ಹಣ ಮಾಡಬಹುದು ಎಂಬ ಸಹಜ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ.. ಈ ಬಗ್ಗೆ ಮಾಹಿತಿ ಇಲ್ಲಿದೆ.

  ಒಂದು ಇನ್ಸ್ಟಾಗ್ರಾಂ ಪೋಸ್ಟ್ ನಿಂದ ಕೋಟಿಕೋಟಿ ಹಣ ಸಂಪಾದನೆ ಮಾಡುವ ಕೊಹ್ಲಿ

  ಭಾರತೀಯ ಕ್ರಿಕೆಟ್ ಲೋಕದ ದಂತಕಥೆಗಳಲ್ಲಿ ಒಬ್ಬರು ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಹ ಕಾಲ.. ಫೇಸ್ಬುಕ್ ಟ್ವಿಟರ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿಯೂ ಸಹ ಸಾಕಷ್ಟು ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ..ಇನ್‌ಸ್ಟಾಗ್ರಾಮ್‌ನಲ್ಲಿ 177 ದಶಲಕ್ಷ ಹಿಂಬಾಲಕರು ವಿರಾಟ್ ಕೊಹ್ಲಿ ಅವರನ್ನ ಫಾಲೋ ಮಾಡುತ್ತಿದ್ದು ಅವರು ಮಾಡುವ ಒಂದು ಪೋಸ್ಟ್ ಗಾಗಿ ಪ್ರತಿನಿತ್ಯ ಕಾಯುತ್ತಲೇ ಇರುತ್ತಾರೆ.. ಹೀಗೆ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ನಲ್ಲಿ ಮಾಡುವ ಪೋಸ್ಟ್ ನಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಾರೆ..

  ಇದನ್ನೂ ಓದಿ:  ವಿರಾಟ್ ಕೊಹ್ಲಿಗೆ ಕಾಯಲು ಹೇಳಿದ್ದೆವು, ಕೇಳಲಿಲ್ಲ: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ

  ಬಾಲಿವುಡ್ನ ಸಿನಿಮಾ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು ಎಲ್ಲರೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಯುವಜನತೆಯನ್ನು ಹೆಚ್ಚಾಗಿ ಆಕರ್ಷಣೆ ಮಾಡುತ್ತಿರುವ ಇನ್ಸ್ಟಾಗ್ರಾಂ ನಲ್ಲಿ ಸೆಲೆಬ್ರಿಟಿಗಳು ತಮ್ಮ ಖಾತೆ ಹೊಂದಿದ್ದು ಲಕ್ಷಾಂತರ ಅಭಿಮಾನಿಗಳನ್ನ ಸಂಪಾದನೆ ಮಾಡಿರುತ್ತಾರೆ.. ಅದರಲ್ಲೂ ವಿರಾಟ್ ಕೊಹ್ಲಿ ಭಾರತೀಯ ಸೆಲೆಬ್ರಿಟಿಗಳ ಪೈಕಿ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದ್ದಾರೆ.. ಇಂತಹ ಆಂಗ್ರಿ ಯಂಗ್ ಮ್ಯಾನ್ ವಿರಾಟ್ ಕೊಹ್ಲಿ ಉತ್ತಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡುವ ಒಂದು ಪ್ರಮೋಷನಲ್ ಪೋಸ್ಟ್ಸ್ ಗೆ ಬರೋಬ್ಬರಿ $680,000 ಯುಎಸ್‌ ಡಾಲರ್‌ ಪಡೆದುಕೊಳ್ಳುತ್ತಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 5.05 ಕೋಟಿ ರೂ. ಗಳನ್ನು ವಿರಾಟ್ ಕೊಹ್ಲಿ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ.. ಇನ್ನು ಇಷ್ಟು ಮಾತ್ರವಲ್ಲದೆ ಇತರ ಸಾಮಾಜಿಕ ಜಾಲತಾಣಗಳ ಮೂಲಕವೂ ಕೋಟಿ ಕೋಟಿ ಮೌಲ್ಯದ ಹಣ ಗಳಿಸುತ್ತಾರೆ.

  Virat Kohli

  ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ರೊನಾಲ್ಡೊ

  ಇನ್ನು ಭಾರತದಲ್ಲಿ ಇನ್ಸ್ಟಾಗ್ರಾಂ ಮೂಲಕ ಹೆಚ್ಚು ಹಣ ಸಂಪಾದನೆ ಮಾಡುವ ಸೆಲೆಬ್ರಿಟಿಗಳ ಪೈಕಿ ವಿರಾಟ್ ಕೊಹ್ಲಿ 19ನೇ ಸ್ಥಾನದಲ್ಲಿದ್ರೆ, ಇಡೀ ವಿಶ್ವದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಸೆಲೆಬ್ರಿಟಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.. ಇದಕ್ಕೆ ಉತ್ತರ ಅಂದ್ರೆ ಫುಟ್ಬಾಲ್ ದಂತಕತೆ ಕ್ರಿಸ್ಟಿಯಾನೋ ರೊನಾಲ್ಡೊ.. ವಿಶ್ವದಲ್ಲಿಯೇ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 388 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದು, ಒಂದೇ ಒಂದು ಪ್ರೊಮೋಷನಲ್‌ ಪೋಸ್ಟ್‌ಗೆ $1, 604, 000 ಡಾಲರ್‌ ಸಂಭಾವನೆ ಪಡೆಯುತ್ತಾರೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 11.9 ಕೋಟಿ ರೂ ಸಂಭಾವನೆ ಪಡೆದುಕೊಳ್ಳುತ್ತಾರೆ.

  ಹೆಚ್ಚು ಸಂಭಾವನೆ ಪಡೆಯುವ ಟಾಪ್ 50 ಸೆಲೆಬ್ರಿಟಿಗಳ ಪೈಕಿ ಪಿಗ್ಗಿ

  ಇನ್ನು ವಿರಾಟ್‌ ಕೊಹ್ಲಿ ಜೊತೆಗೆ ಅಗ್ರ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್‌ ಹಾಗೂ ಹಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ 27ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕ್ ಚೋಪ್ರಾ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 72 ದಶಲಕ್ಷ ಹಿಂಬಾಲಕರಿದ್ದು, ಒಂದು ಪ್ರೊಮೋಷನಲ್‌ ಪೋಸ್ಟ್‌ಗೆ $403,000 (2.0 ಕೋಟಿ ರೂ.) ಡಾಲರ್ ಸಂಭಾವನೆ ಪಡೆಯುತ್ತಾರೆ.

  ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ ತಿಂಗಳು ಐಪಿಎಲ್ ಹರಾಜು? ದಿನಾಂಕ ಮತ್ತಿತರ ಮಾಹಿತಿ

  ಪೋರ್ಬ್ಸ್‌ ಇಂಡಿಯಾ ಪ್ರಕಾರ ಭಾರತದಿಂದ ಈ ಇಬ್ಬರು ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾದಲ್ಲಿ ಪ್ರೊಮೋಷನಲ್‌ ಪೋಸ್ಟ್‌ಗಳಿಂದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್‌ ಕೊಹ್ಲಿ, ತಮ್ಮ ಅದ್ಭುತ ಬ್ಯಾಟಿಂಗ್‌ ಕೌಶಲದಿಂದ ರನ್‌ ಮಷೀನ್‌, ಚೇಸ್‌ ಮಾಸ್ಟರ್‌, ಟೆಸ್ಟ್‌ ತಂಡದ ಯಶಸ್ವಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ನ ದಂತಕತೆ ಎಂಬಂತೆ ದೊಡ್ಡ ಹೆಸರು ಮಾಡಿದ್ದಾರೆ.
  Published by:ranjumbkgowda1 ranjumbkgowda1
  First published: