T20 World Cup; ಸೋಲಿನ ನಂತರ ಸುದ್ದಿಗೋಷ್ಠಿಯಲ್ಲಿ ಪಾಕ್ ಪತ್ರಕರ್ತನ ವಿರುದ್ಧ ಕೊಹ್ಲಿ ಕೆಂಡಾಮಂಡಲ

ಪಾಕಿಸ್ತಾನದ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆಂಡಮಂಡಲರಾಗಿ ಮರು ಪ್ರಶ್ನೆ ಮಾಡಿದರು. ಪಾಕ್ ಪತ್ರಕರ್ತ ಸುದ್ದಿಗೋಷ್ಠಿಯಲ್ಲಿ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ (Rohit Sharma) ಕುರಿತಾಗಿ ಪ್ರಶ್ನೆ ಕೇಳಿದ್ದರು

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ದುಬೈ: ಪಾಕಿಸ್ತಾನ(Pakistan)ದ ವಿರುದ್ಧ ಆಡಿದ ವಿಶ್ವಕಪ್ (T20 World Cup) ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ (Team India)ನಾಯಕ ವಿರಾಟ್ ಕೊಹ್ಲಿ (Virat Kohli) ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಾಕಿಸ್ತಾನದ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆಂಡಮಂಡಲರಾಗಿ ಮರು ಪ್ರಶ್ನೆ ಮಾಡಿದರು. ಪಾಕ್ ಪತ್ರಕರ್ತ ಸುದ್ದಿಗೋಷ್ಠಿಯಲ್ಲಿ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ (Rohit Sharma) ಕುರಿತಾಗಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕೋಪಗೊಂಡು ವಿರಾಟ್ ಕೊಹ್ಲಿ, ಮರು ಪ್ರಶ್ನೆ ಹಾಕಿದರು. ವಿಶ್ವಕಪ್ ಮೊದಲ ವಾರ್ಮ್ ಅಪ್ ಪಂದ್ಯ ಮತ್ತು ಐಪಿಎಲ್(IPL)ನಲ್ಲಿ ಇಶಾನ್ ಕಿಶಾನ್ (Ishan Kishan) ಅತ್ಯಾಕರ್ಷಕ ಬ್ಯಾಟಿಂಗ್ ಹೆಚ್ಚು ರನ್ ಕಲೆ ಹಾಕಿದ್ದರು. ಪತ್ರಕರ್ತ ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ನೀಡಿದ ಉತ್ತರ ಇಲ್ಲಿದೆ

ಪ್ರಶ್ನೆ: ಮುಂದಿನ ಮ್ಯಾಚ್ ನಲ್ಲಿ ರೋಹಿತ್ ಶರ್ಮಾ ಬದಲಾಗಿ ಇಶಾನ್ ಕಿಶಾನ್ ಆಡ್ತಾರಾ?

ವಿರಾಟ್ ಕೊಹ್ಲಿ: ಟಿ20 ಟೀಂನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಬೇಕೆಂದು ನೀವು ಇಷ್ಟಪಡ್ತೀರಾ? ನಿಮಗೆ ವಿವಾದದ ಮಾತುಗಳು ಬೇಕಿದ್ರೆ ನನನ್ನು ಕೇಳಬಹುದು. ನಾನು ನಿಮಗೆ ಅದೇ ರೀತಿಯಲ್ಲಿ ಉತ್ತರ ನೀಡುತ್ತೇನೆ. (ಈ ವೇಳೆ ತಮ್ಮ ತಲೆ ಮೇಲೆ ಕೈ ಇಟ್ಟು ಕೊಹ್ಲಿ  ವ್ಯಂಗ್ಯವಾಗಿ ನಗಲಾರಂಭಿಸಿದರು)

ಪ್ರಶ್ನೆ: ಇವತ್ತು ಪಾಕಿಸ್ತಾನ ಎಲ್ಲ ವಿಷಯಗಳಲ್ಲಿಯೂ ಚೆನ್ನಾಗಿ ಅಡಿದೆ ಎಂದು ನಿಮಗೆ ಅನ್ನಿಸುತ್ತದೆಯೇ?

ವಿರಾಟ್ ಕೊಹ್ಲಿ: ನಮ್ಮ ತಂಡ ಪ್ರತಿಯೊಂದು ತಂಡವನ್ನು ಗೌರವದಿಂದ ಕಾಣುತ್ತದೆ. ಪಾಕಿಸ್ತಾನ ತಂಡ ನಮಗಿಂತ ಚೆನ್ನಾಗಿ ಆಡಿದರಲ್ಲಿ ಯಾವುದೇ ಅನುಮಾನ ಇಲ್ಲ. ಯಾವುದೇ ತಂಡಗಳು ಸುಲಭವಾಗಿ 10 ವಿಕೆಟ್ ಅಂತರದಲ್ಲಿ ಗೆಲ್ಲೋದು ಸುಲಭದ ಮಾತಲ್ಲ. ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.

ಇದನ್ನೂ ಓದಿ:  T20 World Cup: ಭಾರತದ ಸೋಲಿಗೆ ಐದು ಕಾರಣಗಳು

ನಾವು ಆರಂಭದಿಂದಲೂ ಪಾಕಿಸ್ತಾನ ತಂಡದ ಮೇಳೆ ಒತ್ತಡ ಹಾಕಲು ಪ್ರಯತ್ನಿಸಲಾಗಿತ್ತು. ಆದ್ರೂ ಪಾಕ್ ತಂಡ ಉತ್ತಮವಾಗಿ ಆಟವನ್ನ ಆಡಿತು.  ನಮಗೆ ಪ್ರತಿ ಪಂದ್ಯದಲ್ಲಿಯೂ ಗೆಲುವು ಸಿಗುತ್ತೆ ಎಂಬುದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ನಮ್ಮ ಪರಿಸ್ಥಿತಿಗೆ ತಕ್ಕಂತೆ ಒಳ್ಳೆಯ ಸ್ಕೋರ್ ಕಲೆ ಹಾಕಿದ್ದೇವು. ಈ ಪಂದ್ಯಕ್ಕೆ ಅದ್ಭುತ ಅಂತ್ಯ ನೀಡಿದ ಕೀರ್ತಿ ಪಾಕ್ ಆಟಗಾರರಿಗೆ ಸಲ್ಲಬೇಕು ಎಂದರು.

ಪ್ರಶ್ನೆ:  ಮೊದಲ ಎರಡು ವಿಕೆಟ್ ಬೇಗ ಕಳೆದುಕೊಂಡಿದ್ದು ತಂಡಕ್ಕೆ ದುಬಾರಿ ಆಯ್ತಾ?

ವಿರಾಟ್ ಕೊಹ್ಲಿ: ಪಾಕಿಸ್ತಾನ ಬ್ಯಾಟಿಂಗ್ ಸಮಯದಲ್ಲಿ ಇಬ್ಬನಿಗ ಬೀಳಲು ಆರಂಭವಾಯ್ತು. ಇದು ಪಾಕ್ ತಂಡಕ್ಕೆ ಲಾಭವಾಗಿ ಬದಲಾಯ್ತು. ನಾವು 20-25ರಷ್ಟು ಹೆಚ್ಚು ರನ್ ಗಳಿಸಿದ್ರೆ ಬಹುಶಃ ನಾವೇ ಪಂದ್ಯ ಗೆಲ್ಲಬಹುದಿತ್ತು ಮತ್ತು ಎದುರಾಳಿ ತಂಡವನ್ನು ಕಟ್ಟಿ ಹಾಕಬಹುದಿತ್ತು. ಪಾಕಿಸ್ತಾನ ಬೌಲರ್ ಗಳು ಒಳ್ಳೆಯ ಬೌಲಿಂಗ್ ಮಾಡುವ ಮೂಲಕ ಹೆಚ್ಚು ರನ್ ಕಲೆ ಹಾಕದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಟಾಸ್ ಸಹ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಶ್ನೆ: ಮುಂದಿನ ಪಂದ್ಯಕ್ಕೆ ಇನ್ನು ಹೆಚ್ಚು ಸಮಯ  ಇದೆ. ಇದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಅನ್ನೋ ಅನುಮಾನ ಇದೆಯಾ?

ವಿರಾಟ್ ಕೊಹ್ಲಿ: ನಾವು ಸಕರಾತ್ಮಕವಾಗಿ ಟೂರ್ನಾಮೆಂಟ್ ನಲ್ಲಿ ಮುಂದುವರಿಯುತ್ತೇವೆ. ನಮಗೆ ಸೋಲಿನ ಬಗ್ಗೆ ವಿಮರ್ಶೆ ಮಾಡಿಕೊಳ್ಳಲು ಸಮಯ ಸಿಕ್ಕಿದೆ. ಎರಡು ಪಂದ್ಯಗಳ ನಡುವಿನ ಅಂತರ ತಂಡದ ಮೇಲೆ ಪರಿಣಾಮ ಬೀರುತ್ತೆ ಎಂದು ನನಗೆ ಅನ್ನಿಸಲ್ಲ.

ಇದನ್ನೂ ಓದಿ: Fans Depression- ಟೀಮ್ ಇಂಡಿಯಾ ಸೋಲಿಂದ ಖಿನ್ನರಾದ ಫ್ಯಾನ್ಸ್; ಮನಃಶಾಸ್ತ್ರಜ್ಞರಿಂದ ಈ ಸಲಹೆ

ಪಾಕಿಸ್ತಾನಕ್ಕೆ ಮೊದಲ ಗೆಲುವು

ಕಳೆದ 29 ವರ್ಷಗಳಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದೆ. 1992 ರಿಂದ ನಿರಂತರವಾಗಿ 12 ಗೆಲುವುಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ ನಿನ್ನೆ ಸೋಲಿನ ರುಚಿ ಕಂಡಿದೆ. ಇತ್ತ 12 ಸೋಲುಗಳ ಬಳಿಕ ಪಾಕಿಸ್ತಾನ ಮೊದ ವಿಶ್ವಕಪ್ ಪಂದ್ಯಗಳಲ್ಲಿ ಗೆದ್ದು ಬೀಗಿದೆ
Published by:Mahmadrafik K
First published: