ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ-ಧವನ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

news18
Updated:July 28, 2018, 4:50 PM IST
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ-ಧವನ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್
news18
Updated: July 28, 2018, 4:50 PM IST
ನ್ಯೂಸ್ 18 ಕನ್ನಡ

ನಿನ್ನೆಯಷ್ಟೆ ಮುಕ್ತಾಯಗೊಂಡ ಭಾರತ ಹಾಗೂ ಎಸೆಕ್ಸ್ ನಡುವಣ ಮೂರು ದಿನದ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಕೊನೆಯ ದಿನವಾದ ನಿನ್ನೆ ಭಾರತೀಯ ಆಟಗಾರರು ಫುಲ್ ಜೋಷ್​​​ನಲ್ಲಿ ಮೈದಾನಕ್ಕಿಳಿದರು. ಈ ಸಂದರ್ಭ ಸಂಗೀತಗಾರರು ನುಡಿಸಿದ ಸಂಗೀತಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಹಾಕಿದ ಸ್ಟೆಪ್ಸ್ ವೈರಲ್ ಆಗುತ್ತಿದೆ.

ಪಂದ್ಯ ಆರಂಭವಾಗುವ ವೇಳೆ ಭಾರತೀಯ ಆಟಗಾರರು ಮೈದಾನಕ್ಕಿಳಿಯುವಾಗ ಸಂಗೀತಗಾರರು ವಾದ್ಯ ನುಡಿಸುವ ಜೊತೆಗೆ ಡೋಲು ಹೊಡೆದು ಸ್ವಾಗತಿಸಿದರು. ಈ ವೇಳೆ ಕೊಹ್ಲಿ ಹಾಗೂ ಧವನ್ ಬಾಂಗ್ರಾ ಮ್ಯೂಸಿಕ್​​​ಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಎಸೆಕ್ಸ್​​ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ 'ಚೆಲ್ಮಸ್​​​​​​​ಫೋರ್ಡ್​​ ಕ್ರೀಡಾಂಗಣದಲ್ಲಿ ಉತ್ತಮ ಆಟವಾಡಿದ ಬಿಸಿಸಿಐ, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಸಂಭ್ರಮಿಸಿದ ಪರಿ' ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದೆ.

 
ಮೂರು ದಿನಗಳ ಕಾಲ ನಡೆದ ಎಸೆಕ್ಸ್​​ ಕೌಂಟಿ ತಂಡದ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 395 ರನ್​ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಎಸೆಕ್ಸ್​ ತಂಡ 8 ವಿಕೆಟ್ ಕಳೆದುಕೊಂಡು 359 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು. 36 ರನ್​ಗಳ ಮುನ್ನಡೆ ಕಾಯ್ಸುಕೊಂಡು ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಕೊನೆಯ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 89 ರನ್ ಪೇರಿಸಿ 125 ರನ್​ಗಳ ಮುನ್ನಡೆ ಪಡೆಯಿತು. ಈ ಸಂದರ್ಭ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಕೊನೆಯ ಸೆಶನ್ ಬಾಕಿ ಇದ್ದರು, ಮಳೆಯಿಂದಾಗಿ ಪಂದ್ಯ ಡ್ರಾ ಮಾಡಲಾಯಿತು. ಟೀ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದ್ದು, ಆಗಸ್ಟ್ 1 ರಿಂದ ಮೊದಲ ಟೆಸ್ಟ್​ ಪ್ರಾರಂಭವಾಗಲಿದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ